ನಾಗಪಂಚಮಿಯ ಈ ದಿನ ನಿಮ್ಮ ಪಾಲಿಗೆ ಶುಭವೇ..?

ಮೇಷ
ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಪಡೆದದ್ದು
ಈಗ ಫಲಿಸಿದೆ. ಎಲ್ಲರಿಗೂ ನಿಮ್ಮ ಬಗ್ಗೆ ಹೆಚ್ಚಿನ
ಪ್ರೀತಿ ಉಕ್ಕಿದ. ಖುಷಿಯ ದಿನ ಇದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ
ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು.
ಖರ್ಚಿಗೆ ಕಡಿವಾಣ ಹಾಕಬೇಕು. ಆರೋಗ್ಯ
ತಪಾಸಣೆಯನ್ನೂ ಮಾಡಿಸಲೇ ಬೇಕು.

ಮಿಥುನ
ಮಡದಿಯ ಆರೋಗ್ಯದ ಸಮಸ್ಯೆಯು ಈಗ
ನಿವಾರಣೆಯಾಗಲಿದೆ. ಸ್ಥಳ ಬದಲಾವಣೆಯೂ
ಆಗಲಿದೆ. ಅನಗತ್ಯ ಚಿಂತೆಗಳಿಗೆ ಜಾಗವಿಲ್ಲ.

ಕಟಕ
ಗುರಿ ಸಾಧನೆಯತ್ತ ಹೆಚ್ಚಿನ ಆಸಕ್ತಿ ವಹಿಸುವ
ದಿನವಿದು. ಕ್ರಯ-ವಿಕ್ರಯದ ಮಾತುಕತೆ
ನಡೆಯಲಿದೆ. ಆಯವ್ಯಯದಲ್ಲಿ ಏರುಪೇರು.

ಸಿಂಹ
ನಿಮ್ಮ ನೆರೆಯವರ ಬಗ್ಗೆ ಅನುಕಂಪವಿರಲಿ.
ಒಬ್ಬರು ಮತ್ತೊಬ್ಬರಿಗೆ ಸಹಾಯ ನೀಡುವುದು
ಮಾನವ ಧರ್ಮ ಅಲ್ಲವೇ. ಅದರಂತೆ ಇರಿ.

ಕನ್ಯಾ
ಕಡತಗಳ ತಪಾಸಣೆಯಲ್ಲಿ ತುಂಬ ಹಳೆಯ
ಸಂಗಾತಿಯ ಪತ್ರವು ಸಿಗಲಿದೆ. ಅದರಿಂದ
ನಿಮಗೆ ಒಳ್ಳೆಯದೇ ಆಗುತ್ತದೆ. ಶುಭವಿದೆ.

ತುಲಾ 
ಮಹಿಳಾ ಸಂಘದ ಕೆಲಸದಲ್ಲಿ ಪ್ರತಿಷ್ಠೆ, ಗೌರವ
ಗಳು ಹೆಚ್ಚು ಸಿಗುತ್ತವೆ. ನಿಮ್ಮ ಹೊಗಳುವವರು
ಹಿಂದೆ-ಮುಂದೆ ಇರ‌್ತಾರೆ. ಅದೇ ಜೀವನವಲ್ಲ.

ವೃಶ್ಚಿಕ
ಇಂದು ಹೆಚ್ಚು ಮೌನವಾಗಿದ್ದರೆ ಕ್ಷೇಮ.
ನಿಮಗಾಗದವರು ನಿಮ್ಮಲ್ಲಿಗೇ ಬರಲಿದ್ದಾರೆ.
ಯಾವುದೇ ತೊಂದರೆಗಳಿಲ್ಲ. ಒಳಿತಾಗಲಿದೆ.

 ಧನುಸ್ಸು
ಬಹು ದೊಡ್ಡ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ.
ನೀವು ಬದಲಾವಣೆಯ ನಿರೀಕ್ಷೆಯಲ್ಲಿದ್ದರೆ
ಆತುರಪಡದಿದ್ದರೆ ಒಳಿತಾಗುವುದು ಖಚಿತ.

ಮಕರ
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು
ಪ್ರಯತ್ನಿಸಿ. ಸಾಧ್ಯವಾದಷ್ಟು ತಾಳ್ಮೆಯಿರಲಿ.

ಕುಂಭ
ವೈಯಕ್ತಿಕ ಸಮಸ್ಯೆಗಳ ಕುರಿತು ಹೇಳುವವರ
ಮಾತಿಗೆ ಕಿವಿಯಾಗುವುದಕ್ಕಿಂತ ತಜ್ಞರ ಸಲಹೆ
ಪಡೆಯಿರಿ. ನಿರ್ಲಕ್ಷ್ಯ ಎಂದೂ ಒಳ್ಳೆಯದಲ್ಲ.

ಮೀನ 
ಮರೆಗುಳಿತನವು ಈ ದಿನ ಭಾರಿ ಹೊಡೆತ
ಕೊಡಲಿದೆ. ನಿಮ್ಮದಲ್ಲದ ತಪ್ಪಿಗೂ ಬೆಲೆ
ತೆರಬೇಕಾದ ಪರಿಸ್ಥಿತಿ ಬರಲಿದೆ. ಜೋಪಾನ.