ಧನುರ್ಮಾಸದ ಪಂಚಗ್ರಹಯೋಗದೊಂದಿಗೆ ಆದಿತ್ಯನು ಜನವರಿ 2020ರಲ್ಲಿ ಬಹುಫಲಗಳನ್ನು ಲೋಕಕ್ಕೆ ತರುತ್ತಿದ್ದಾನೆ. ಧನುರ್ಲಗ್ನದ ಕುಂಭ ಪೂರ್ವಾಷಾಢದ ಚಂದ್ರಫಲಿತ ದಿನ 1/1/2020ರಂದು ಶುಭಾರಂಭ ಆಗುತ್ತಿದೆ. ಈ ಗೋಚಾರದ ರೀತ್ಯಾ ಮಾರ್ಚ್ರ 25r ಯುಗಾದಿ ಪರ್ವದವರೆಗೂ ವಿಕಾರೀ ಸಂವತ್ಸರದ ಫಲವೇ ಇರುತ್ತದೆ. ಶನಿ ಧನುಸ್‌ನಿಂದ ಮಕರ ಪ್ರವೇಶ ಪ್ರಭಾವದಿಂದ ದೇಶದಲ್ಲಿ ರಾಜಕೀಯವು ಶಾಂತಿ ಸಮಾಧಾನತ್ತ ತಿರುಗುವುದು. ಧಾರ್ಮಿಕ ಮನೋಶ್ರದ್ಧೆ ವೃದ್ಧಿ, ಅವಿರತ ತೀರ್ಥಯಾತ್ರೆಗಳು ನಡೆವವು. ಕೆಲ ವೃದ್ಧ ರಾಜಕೀಯ, ಧಾರ್ಮಿಕ ನೇತಾರರನ್ನು ಕಳೆದುಕೊಳ್ಳುವೆವು. ಆಗ್ನೇಯದ ಯುದ್ಧಕೋರ ದುರುಳರು ಕಳ್ಳತನ ಮೋಸದಿಂದ ಜನರ ಸುಲಿವರು. ತಕ್ಕ ಶಾಸ್ತಿಯನ್ನು ಭಾರತ ಸರ್ಕಾರದಿಂದ ಪಡೆಯುವರು ಸಹ! ಚಂದ್ರನ ಲಾಭದಲ್ಲಿ ಲಗ್ನ ಪಂಚಗ್ರಹ ಯೋಗವು ಭಾರತಕ್ಕೆ ಆರ್ಥಿಕ ಲಾಭ, ಅನಂತ ಅವಕಾಶಗಳನ್ನು ತೆರೆವವು. ವಿದ್ಯಾ, ವೈದ್ಯಕೀಯ ಕ್ಷೇತ್ರ ಗರಿಗೆದರುವವು. ಸಿನೆಮಾ ಮನರಂಜನಾ ಕ್ಷೇತ್ರಕ್ಕೆ ಲಾಭಕರ ಅಭಿವೃದ್ಧಿ. ಮಾರ್ಚ್ ಕೊನೆಯವರೆಗೂ ಈ ದಿಕ್ಸೂಚಿಗಳನ್ನು ಹಿಡಿದು ನಂತರದ ಶ್ರೀ ಶಾರ್ವರೀನಾಮ ಸಂವತ್ಸವರದ ಫಲ ಆರಂಭವಾಗುವುದು.

ಕುಂಭ, ಮೀನ, ಮೇಷ, ಮಿಥುನ ರಾಶಿಯವರಿಗೆ ವಿಶೇಷ ಫಲ. ವೃಷಭ, ಕರ್ಕ, ಸಿಂಹ, ಕನ್ಯಾ ರಾಶಿಗಳಿಗೆ ಸಾಧಾರಣ ಫಲ. ತುಲಾ, ವೃಶ್ಚಿಕ ರಾಶಿಗಳಿಗೆ ಭಾಗ್ಯ ವೃದ್ಧಿ. ಧನು, ಮಕರಗಳಿಗೆ ಅಲ್ಪ ಫಲ.

ಮೇಷ: ಯಾವ ಗ್ರಹ ಬಾಧೆಯೂ ಇಲ್ಲ

ಸಾಹಸ ಪ್ರವೃತ್ತಿಯ ಜ್ಞಾನಿಗಳಾದ ನಿಮಗೆ ಉತ್ತಮದಲ್ಲಿ ಉತ್ತಮ ಗುರುಫಲ ವರ್ಷ ೨೦೨೦. ಬೋಧಕ, ಬರವಣಿಗೆ, ನಟನೆ, ಮನರಂಜನೆ, ವೈದ್ಯಕೀಯ, ಔಷಧ ಕ್ಷೇತ್ರದ ಜನರಿಗೆ ಅತ್ಯುತ್ತಮ ವರ್ಷ. ಇದು ಅನುಭವಕ್ಕೆ ವರ್ಷದ ಮಧ್ಯ ಭಾಗಕ್ಕೆ ಬರುವುದು. ಅಪರೂಪಕ್ಕೆ ಯಾವ ಗ್ರಹ ಬಾಧೆಯೂ ಇಲ್ಲದ ಜನವರಿ ಮೇಷ ರಾಶಿ. ಇಷ್ಟ ದೇವರಿಗೆ, ಪ್ರತ್ಯಕ್ಷ ಸದ್ಗುರುಗಳಿಗೆ ಯಥೇಚ್ಚ ಸೇವೆಗಳ ಮಾಡಿ ಮಾಡಿಸಿ.| ಮಂಗಳ, ಗುರುವಾರ ಶುಭ]

ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

ವೃಷಭ: ದಿಢೀರ್ ಏಳಿಗೆ - ಕುಸಿತ

ಕಲ್ಪನಾಸಕ್ತರೂ, ತುಸು ಹೆಚ್ಚೇ ಮೊಂಡರಾದ ಈ ರಾಶಿಯವರಿಗೆ ಶನಿ- ರಾಹುಗಳ ಪೂರ್ವಗ್ರಹದಿಂದ ದಿಢೀರ್ ಏಳಿಗೆಯೂ ದಿಢೀರ್ ಕುಸಿತವೂ ಉಂಟಾದೀತು. ಜಾಗೃತೆಯಿಂದ, ನಿಧಾನಿಸಿ ವಿಚಾರ ಮಾಡಿ ಪರರಿಗೆ ಗೌರವ, ಆದರ ಕೊಟ್ಟು ಮುನ್ನಡೆದರೆ ಯಶ ಪಡೆಯುವಿರಿ. ಮಾತಾಪಿತೃಗಳಿಂದ ವಿಶೇಷ ಅನುಕೂಲವಾಗುವುದು. ಶ್ರೀರುದ್ರ ಹೋಮ, ನಾಗಪೂಜೆಗಳು ನಡೆಯಲಿ| ಸೋಮ, ಶುಕ್ರವಾರ ಶುಭ.

ಮಿಥುನ: ಮಾತು, ಹೂಡಿಕೆ ಬಗ್ಗೆ ಜಾಗ್ರತೆ

ಸಮಾಧಾನಿಗಳಾದ ನಿಮಗೆ ಸವಾಲಾಗಿ ತೋರುವುದು ಹೊಸವರ್ಷ. ಗುರುಬಲವಿದೆ. ತಾಳ್ಮೆ, ಧೈರ್ಯದಿಂದ ಮುನ್ನಡೆಯಿರಿ. ಸ್ತ್ರೀಯರು ತಮ್ಮ ಮಾತು, ಹೂಡಿಕೆ ಸಂಬಂಧಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕುಟುಂಬದಿಂದ ಕಾರ್ಯ ನಿಮಿತ್ತ ದೂರಾಗಬೇಕಾದಿತು. ಶ್ರೀ ಚಂಡಿಕಾ ಪರಾಯಣೆ, ನಾಗ ಪೂಜೆಗಳನ್ನು ಮಾಡಿ.| ಸೋಮ, ಬುಧವಾರ ಶುಭ

ಕರ್ಕಾಟಕ: ಸಪ್ತಮ ಶನಿಯಿಂದ ಸಮಸ್ಯೆ

ಬಹು ಸಾಮರ್ಥ್ಯದ ಜನರು ನೀವು. ಸ್ವಜನರಿಂದ ದುಃಖ ದುಮ್ಮಾನದಲ್ಲಿ ಇದ್ದೀರಿ. ವರ್ಷದ ಮಧ್ಯದ ಕಾಲಕ್ಕೆ ಸರಿಯಾಗುವುದು. ತಾಳ್ಮೆ ಇರಲಿ. ಗುರುಬಲವಿಲ್ಲ. ಸಪ್ತಮದ ಶನಿ ಬಹುತ್ರಾಸ ತಂದಾನು. ಸಕಾರಾತ್ಮಕವಾಗಿ ಪ್ರತಿಹೆಜ್ಜೆಯಲ್ಲೂ ಆಪ್ತ ಹಿತೈಷಿಗಳ ಹತ್ತಿರವಿರಿ. ಅನ್ಯರ ಕಷ್ಟಸುಖಗಳಲ್ಲಿ ಪಾಲ್ಗೊಳ್ಳಿ. ಶ್ರೀ ಸೀತಾರಾಮ ದರ್ಶನ ಪೂಜೆಗಳನ್ನು ಮಾಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.| ಶುಕ್ರವಾರ ಶುಭ.

ಸಿಂಹ: ಕಾರ್ಯಗಳಿಗೆ ವೇಗ

ಹೊಸ ವರ್ಷವು ಗುರುಬಲ ತರುತ್ತದೆ. ಶನಿಯ ಪಂಚಮ ದೋಷ ಬಿಡುತ್ತದೆ. ಕಾರ್ಯಗತಿ ಜರೂರುಗೊಂಡಾವು. ಭೂಮಿ, ಸರ್ಕಾರಿ ಸಂಬಂಧಿ ಜನರಿಗೆ ಅನುಕೂಲವಾಗುವುದು. ಮನೆಯ ಹಿರಿಯರಿಗೆ ಬಾಧೆ. ಮಾತಿನಿಂದ ಕೆಲಸ ಕೆಟ್ಟಾವು ಜೋಕೆ. ತಲೆ, ಉದರ ಶೂಲೆಯಾದೀತು, ಮುನ್ನೆಚ್ಚರಿಕೆಯಿರಲಿ. ಗೋವಿನ ಆಶ್ರಮಗಳಿಗೆ ಸೇವೆ ಸಲ್ಲಿಸಿ. ಸಿಂಹ ಭಾನು, ಗುರುವಾರ ಶುಭ

ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

ಕನ್ಯಾ: ಯೋಚಿಸಿ ಮುಂದಡಿಯಿಡಿ

ಸೂಕ್ಷ್ಮ ಮತಿಗಳಿಂದ ನಿಮಗೆ ಈ ವರ್ಷ ಭಾವನಾತ್ಮಕವಾಗುವುದು. ಸಂಬಂಧಗಳ ಬಗ್ಗೆ ಹೆಚ್ಚು ತಿಳಿವಿರಿ. ಉದ್ಯೋಗ ವ್ಯವಹಾರಗಳಲ್ಲಿ ನಿಧಾನ ಪ್ರಗತಿ ಹೊಂದುವುದು. ಕೇಂದ್ರ ರಾಹು, ಚತುರ್ಥ ಗುರು ಮನೋವಿಭ್ರಮ ಗೊಂದಲ ತರುವುವು. ನಿಂತು ಯೋಚಿಸಿ ಆರಾಮ ಮುನ್ನಡೆಯಿರಿ. ಪಂಚಮ ಶನಿಯ ಪ್ರಭಾವ ಶುರು. ಶಿವ ಪಂಚಾಕ್ಷರ ಜಪ, ರುದ್ರ ಹೋಮ ಮಾಡುತ್ತಿರಿ.| ಶುಕ್ರವಾರ ಶುಭ

ತುಲಾ: ಹೃದಯ ಬೇನೆ ಬಗ್ಗೆ ಎಚ್ಚರ

ಒತ್ತಡ, ಆತಂಕಗಳನ್ನು ತಡೆಯಬಲ್ಲ ಸ್ವಭಾವ ನಿಮ್ಮದು. ಇತರರಿಗೂ ಅನುವಾಗುವಿರಿ. ಸದ್ಯ ಕುಜ- ರಾಹುಗಳ ಅನುಕೂಲ ಸ್ಥಿತಿಯಿಂದ ಸರ್ಕಾರ, ಸೇನೆ, ರಾಜಕೀಯವಾಗಿ ಉತ್ತಮಫಲ. ರಕ್ತದೋಷ, ಹೃದಯ ಬೇನೆಗಳು ಬಂದಾವು. ಜಾಗೃತ ಹೊಸ ಉದ್ದಿಮೆ, ಹೂಡಿಕೆ ಮುಂದೆ ಹೋದಾವು. ಬಂಧುಮಿತ್ರರ ಆಪ್ತತೆ ಬೆಳೆವುದು.| ಮಂಗಳ, ಶುಕ್ರವಾರ ಶುಭ.

ವೃಶ್ಚಿಕ: ರಾಜಕೀಯದವರಿಗೆ ಅದೃಷ್ಟ

ಬಹು ಸಾಮರ್ಥ್ಯ, ಶಕ್ತಿ ಸಾಹಸಗಳ ನೀವು ಈ ವರ್ಷ ಅದಕ್ಕೆ ತಕ್ಕಂತೆ ಇರುವಿರಿ! ಜನ್ಮ ಸ್ವಗತ ಕುಜ, ಗುರು ಬಲ, ತೃತೀಯ ಶನಿ ಅನಿರೀಕ್ಷಿತ ವೃದ್ಧಿ ಕೊಡುವರು. ನಿಂತ ಕಾರ್ಯಗಳು ಚುರುಕುಗೊಳ್ಳುವವು. ಶತ್ರುಗಳು ಹಿಮ್ಮೆಟ್ಟುವರು. ಮಿತ್ರರೂ ಆದಾರೂ! ರಾಜಕೀಯದವರಿಗೆ ಅಮೋಘ ವರ್ಷವಿದು. ಭೂ ಉದ್ದಿಮೆ ಬೆಳೆಯುವುದು. ರಾಹು-ಕೇತುಗಳ ಬಾಧೆಯಿದೆ. ಶ್ರೀ ಸುಬ್ರಮಣ್ಯ, ಗಣಪತಿ ದೇವರ ಸೇವೆ ಮಾಡಿ. ಮಂಗಳ, ಗುರುವಾರ ಶುಭ.

ಧನುಸ್ಸು: ಮೊಂಡುತನ ಪರಿಹರಿಸಿಕೊಳ್ಳಿ

ಗೌರವಾನ್ವಿತ ವ್ಯಕ್ತಿತ್ವ ನಿಮ್ಮದು. ಮೊಂಡುತನವೂ ಅಷ್ಟೇ ಇರುವುದು. ಎರಡನ್ನೂ ಬೆಳೆಸುವ ವರ್ಷವಿದು. ಗಳಿಸಿದ ಒಳಿತಿಂದ ಮೊಂಡುತನವನ್ನು ಪರಿಹರಿಸಿಕೊಂಡರೆ ಬಹುಕಾಲ ಕೀರ್ತಿ ಪಡೆಯುವಿರಿ. ಶುಭಕಾರ್ಯ, ತೀರ್ಥಯಾತ್ರೆಗಳಾಗುವುದು. ವೃದ್ಧರು ಹಾಗೂ ಧಾರ್ಮಿಕ ಜನರಿಗೆ ಬಾಧೆ. ವಿದ್ಯಾರ್ಥಿಗಳಿಗೆ ಏಳಿಗೆ. ವೆಂಕಟೇಶ ದರ್ಶನ ಸೇವೆ, ಅನ್ನದಾನ ನಡೆಯಲಿ.| ಗುರು, ಶುಕ್ರವಾರ ಶುಭ.

ಮಕರ: ಸಿನಿಮಾದವರಿಗೆ ನಿಧಾನಗತಿ

ತಾಳ್ಮೆ, ಛಲವಂತರು ನೀವು. ನಿಮ್ಮ ಯೋಚನೆ ನೀವೇ ಬಲ್ಲಿರಿ, ಅನ್ಯರಲ್ಲ. ಅದಕ್ಕೇ ನಿಮಗೆ ಯಶ ತರುವ ವರ್ಷವಿದು. ವ್ಯಯದ ಗುರು, ಜನ್ಮ ಶನಿ ಧಾರ್ಮಿಕ ಜ್ಞಾನ ಕೊಡುವರು, ಕರ್ಮ ಮಾಡಿಸುವರು. ರಾಜಕೀಯ, ಸಿನಿಮಾದವರಿಗೆ ನಿಧಾನಗತಿ. ವರ್ಷ ಮಧ್ಯದ ನಂತರ ಸ್ಥಳ, ಕೆಲಸ ಬದಲಾವಣೆ. ಗ್ರಹಶಾಂತಿ ಸಹಿತ ದುರ್ಗಾಹೋಮ ಮಾಡಿಸಿದರೆ ಉತ್ತಮ ರಕ್ಷೆ.| ಸೋಮ, ಶುಕ್ರವಾರ ಶುಭ.

ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

ಕುಂಭ: ಬಹಳ ನಿರೀಕ್ಷೆ ಬೇಡ

ಏಕಾದಶದ ಅತಿಗ್ರಹ ಯೋಗದ ಆರಂಭ ವರ್ಷ. ನೀವೇನೋ ಯೋಜಿಸುವಿರಿ ಅದೇನೋ ಆಗುವುದು. ಹಾಗಾಗಿ ಆತಂಕ, ನಿರೀಕ್ಷೆ ಬಹಳ ಬೇಡ. ವಿವಾಹಾದಿ ಶುಭಕಾರ್ಯ ನಡೆವುದು. ದೇವಳ ಧರ್ಮ ಸ್ಥಾನಗಳ ನಿರ್ಮಿಸುವಿರಿ, ಸಹಾಯ ಮಾಡುವಿರಿ. ಜನ್ಮ ಶನಿ ಆರಂಭವೀಗ. ಪಂಚಮ ರಾಹು ಸೇರಿ ವೃದ್ಧರಿಗೆ ನಾನಾ ಬಾಧೆ ತರುವುದು. ಪಿತೃಸೇವೆ ಮಾಡಿ| ಗುರುವಾರ ಶುಭ.

ಮೀನ: ಈ ವರ್ಷ ವ್ಯಾಜ್ಯ ಪರಿಹಾರ

ಅನೇಕ ಸಾಧ್ಯತೆಗಳ ವ್ಯಕ್ತಿತ್ವ ನಿಮ್ಮದು. ಅದರಂತೆಯೇ ವರ್ಷಾರಂಭವೂ. ಕೇಂದ್ರಗತ ಪಂಚಗ್ರಹಯೋಗ, ಗುರುಬಲ. ಏಕಾದಶ ಶನಿ ಬಹುಯೋಗಗಳ ಹೊತ್ತು ತರುವರು. ಆಯಾ ದಶೆ, ಚದ್ರ, ಗುರು ಬಲವಿರುವರಿಗೆ ಹೆಚ್ಚು ಪ್ರಾಪ್ತಿ. ಭೂವ್ಯವಹಾರ, ವ್ಯಾಜ್ಯಗಳ ಪರಿಹಾರ. ಖರೀದಿ. ವಿದ್ಯಾಸಂಸ್ಥೆಗಳು ಪ್ರಗತಿ ಹೊಂದುವವು. ಶ್ರೀ ನರಸಿಂಹ ದೇವರ ಸೇವಾದಿಗಳು ಆಗಲಿ.| ಮಂಗಳ, ಗುರುವಾರ ಶುಭ.