ಚೀನಾ ಬೇಜವಾಬ್ದಾರಿ ನಡೆಗೆ ಪ್ರಜಾಪ್ರಭುತ್ವ ರಾಷ್ಟ್ರಗಳು ಪಾಠ ಕಲಿಸಲು ಅವಕಾಶ!

By Suvarna NewsFirst Published Jun 8, 2021, 4:03 PM IST
Highlights

* ಇಡೀ ಜಗತ್ತಿಗೆಡ ಕೊರೋನಾ ಹಬ್ಬಿದ ಚೀನಾ ಬೇಜಹವಾಬ್ದಾರಿ ನಡೆಗೆ ಪಾಠ ಕಲಿಸಲು ಸೂಕ್ತ ಸಮಯ

* ಬೈಡೆನ್ ನೇತೃತ್ವದಲ್ಲಿ ಒಕ್ಕೂಟ ರಚಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಅವಕಾಶ

* ಈಗ ಬೇಡ ಮುಂದೆ ಎಂದರೆ, ಬಹಳ ತಡವಾಗುತ್ತದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ

ಹಡ್ಸನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಲೂಯಿಸ್ ಲಿಬ್ಬಿ ಮತ್ತು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬರೆದಿರುವ ಲೇಖನದ ಮುಖ್ಯಾಂಶ

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಸದ್ಯ ರಾಜತಾಂತ್ರಿಕ ಸವಾಲೊಂದು ಎದುರಾಗಿದೆ. ಸದ್ಯ ಚೀನೀ ಕಮ್ಯುನಿಸ್ಟ್ ಪಕ್ಷದ ದುರುದ್ದೇಶದಿಂದಾಗಿ, ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡಿದೆ. ಈವರೆಗೆ ಈ ಅಪಾಯಕಾರಿ ವೈರಸ್‌ಗೆ 37 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ ಜಾಗತಿಕ ಮಟ್ಟದಲ್ಲಿ ಇದು ಬಹಳಷ್ಟು ಹಾನಿಯುಂಟು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ಬೈಡೆನ್‌ಗೆ ನ್ಯಾಯಯುತ, ಪರಿಣಾಮಕಾರಿ ಅಂತರಾಷ್ಟ್ರೀಯ ಮಟ್ಟದ ಪ್ರತಿಕ್ರಿಯೆಯನ್ನು ಮುನ್ನಡೆಸುವ ಅವಕಾಶ ಮತ್ತು ಜವಾಬ್ದಾರಿ ಇದೆ.

ಬೈಡೆನ್ ಅಧಿಕಾರಕ್ಕೇರಿ ಈಗಾಗಲೇ ನಾಲ್ಕು ತಿಂಗಳುಗಳಾಗಿವೆ. ಅಲ್ಲದೇ ಈ ನಿಟ್ಟಿನಲ್ಲಿ ಹೆಜ್ಜೆ ಇರುಸುವ ಸಂಕೇತವನ್ನೂ ಅವರು ನೀಡಿದ್ದಾರೆ. ಮೇ 26ರಂದು ಅವರು ಅಮೆರಿಕದ ಗುಪ್ತಚರ ಏಜೆನ್ಸಿಗೆ ತೊಂಭತ್ತು ದಿನಗಳ ಗಡುವು ನೀಡಿದ್ದು, ಅಷ್ಟರಲ್ಲಿ ಅಮೆರಿಕದ ವಿಜ್ಞಾನಿಗಳೊಂದಿಗೆ ಸೇರಿ ಚೀನಾದ ಕೊರೋನಾ ವೈರಸ್‌ ಹುಟ್ಟಿದ್ದು ಹೇಗೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಇದು ಪ್ರಾಣಿಗಳಿಂದ ಹರಡಿದ್ದಾ ಅಥವಾ ಲ್ಯಾಬ್‌ನಲ್ಲಿ ಸೃಷ್ಟಿಸಿದ ವೈರಸ್ಸಾ ಎಂಬುವುದನ್ನೂ ಪತ್ತೆ ಹಚ್ಚಲು ಹೇಳಿದ್ದಾರೆ. 

ಕೊರೋನಾ ಮೂಲ ಚೀನಾ ಗಣಿ, ವುಹಾನ್‌ ಲ್ಯಾಬ್‌: ಪುಣೆಯ ವಿಜ್ಞಾನಿ ದಂಪತಿಯ ಸಂಶೋಧನೆ!

ಈ ತನಿಖೆ ಹೆಗೇ ಇರಲಿ, ಯಾಕೆಂದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಡಳಿತಾವಧಿಯಲ್ಲಿ ಇದಕ್ಕೂ ಮೊದಲು ಇಂತಹ ಡವಟಟ್ಟುಗಳು ಹಲವಾರು ಬಾರಿ ಸಂಭವಿಸಿದ್ದು, ಪ್ರಜಾಪ್ರಭುತ್ವ ರಾಷ್ಟ್ರಗಳು ಈ ಬಗ್ಗೆ ಕಠಿಣ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಹೀಗಿರುವಾಗ ವಿಶ್ವ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಬೈಡೆನ್ ಇಂತಹ ನಾಯಕರನ್ನು ಒಗ್ಗೂಡಿಸುವ ಯತ್ನ ನಡೆಸಬೇಕು.

ಮಾಹಿತಿ ಮುಚ್ಚಿಟ್ಟ ಚೀನಾ

 2019ರ ಕೊನೆ ಹಾಗೂ 2020ರ ಆರಂಭದಲ್ಲಿ ಚೀನಾದಲ್ಲಿ ಕೊರೋನಾ ವೈರಸ್‌ ಅತ್ಯಂತ ವೇಗವಾಗಿ ಹಬ್ಬುತ್ತಿದ್ದರೂ, ಜನರು ಸೋಂಕಿತರಾಗುತ್ತಿದ್ದರೂ ಚೀನಾ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕದೇ ಮೌನ ವಹಿಸಿತ್ತು. ಈ ಬಗ್ಗೆ ವಿಶ್ವವನ್ನು ಎಚ್ಚರಿಸುವ ಪಪ್ರಯತ್ನವನ್ನೂ ಮಾಡಿರಲಿಲ್ಲ. ಆಗಿನಿಂದಲೇ ಈ ನಾಯಕರು ಚೀನಾ ವಿರುದ್ಧ ಪ್ರತಿಕ್ರಿಯೆ ನೀಡಲಾರಂಭಿಸಿದ್ದರು. ಚೀನಾ ಈ ಮೂಲಕ ತನಗೆದುರಾದ ಅಪಾಯವನ್ನು ನಿವಾರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವೈರಸ್‌ ಹರಡುವಂತೆ ಮಾಡಿತು. ಇನ್ನು ಜಿನ್‌ಪಿಂಗ್‌ ನಡೆ ಅದಕ್ಕೂ ಅಪಾಯಕಾರಿಯಾಗಿತ್ತು. ಕೊರೋನಾ ತಡೆಯಲು ಚೀನಾದಲ್ಲಿ ಕೆಲ ನಿಯಮಗಳನ್ನು ಜಾರಿಗೊಳಿಸಲಾಯಿತಾದರೂ ಬೇರೆ ರಾಷ್ಟ್ರದವರಿಗೆ ತನ್ನ ದೇಶದ ಸೋಂಕಿತ ಪ್ರದೇಶಕ್ಕೆ ತೆರಳುವ ಅನುಮತಿ ನೀಡಿತು. ಚೀನಾಗೆ ಭೇಟಿ ನೀಡಿದ ಅನೇಕರು ತಮ್ಮ ತವರು ನಾಡಿಗೆ ಸೋಂಕಿತರಾಗಿ ಮರಳಿದರು. ಇದರಿಂದ ಸಾವಿನ ನರ್ತನ ಜಾಗತಿಕ ಮಟ್ಟದಲ್ಲಿ ಆರಂಭವಾಯಿತು.

ಈ ಮೂಲಕ ಸ್ವಾಭಾವಿಕವಾಗಿ ಅಪಾಯಕಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಚೀನಾ ತನ್ನ ಅಜಾಗರೂಕ ವಿಧಾನ ಮುಂದುವರೆಸಿತು. ಉದಾ: ವುಹಾನ್‌ನಲ್ಲಿ ವೈರಸ್‌ ಹರಡಿದೆ ಎನ್ನಲಾದ ಪ್ರಾಣಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆ ಮುಚ್ಚಲಿಲ್ಲ, ವೈರಸ್‌ ತಯಾರಾಗಿದೆ, ಹರಡುತ್ತಿದೆ ಎನ್ನಲಾದ ಲ್ಯಾಬ್‌ಗಳನ್ನೂ ಮುಚ್ಚಲಿಲ್ಲ. ವಿಶ್ವದ ಯಾವುದೇ ರಾಷ್ಟ್ರ ಹೀಗೆ ನಡೆದುಕೊಂಡಿರಲಿಕ್ಕಿಲ್ಲ.

ವುಹಾನ್‌ನಿಂದಲೇ ಕೊರೋನಾ ಸೃಷ್ಟಿ ಆರೋಪಕ್ಕೆ ಮತ್ತಷ್ಟು ಪುಷ್ಟಿ!

ಮೊದಲ ಅಲೆ ದಾಳಿ ಇಟ್ಟ ಸಂದರ್ಭದಲ್ಲಿ ಕರೋನಾದ ಮೂಲದ ಬಗ್ಗೆ ಸ್ವತಂತ್ರ ತನಿಖೆಗಾಗಿ ಆಸ್ಟ್ರೇಲಿಯಾ ಸರ್ಕಾರ ಮನವಿ ಮಾಡಿದಾಗ ಕೂಡಲೇ ಚೀನಾ ಕೂಡಲೇ ತನ್ನ ವ್ಯಾಪಾರ ಸಂಬಂಧಗಳನ್ನು ನಿಲ್ಲಿಸಿತ್ತು. ಈ ನಡೆ ಕ್ಸಿ ಜಿನ್‌ಪಿಂಗ್ ಚೀನಾದ ಚಕ್ರವರ್ತಿಗಳ ಸಂಪ್ರದಾಯವನ್ನು ಮರುಕಳಿಸುತ್ತಿರುವಂತೆ ಭಾಸವಾಗುತ್ತಿತ್ತು.

ಹಾಗಾದ್ರೆ ಚೀನಾದ ದುರಹಂಕಾರ ಜಾಸ್ತಿಯಾಗುತ್ತಾ?

ವಿಶ್ವಾದ್ಯಂತ ಬೇರೆ ರಾಷ್ಟ್ರಗಳಿಗೆ ಪರೋಕ್ಷವಾಗಿ ನುಗ್ಗಿ ಅಪಾರ ಜೀವ ಹಾನಿಗೊಳಿಸಿ, ಬಳಿಕ ಈ ಆರೋಪದಿಂದ ತಪ್ಪಿಸಿಕೊಂಡರೆ ಅದರ ದುರಹಂಕಾರ ಜಾಸ್ತಿಯಾಗುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಿರುವಾಗ ಈ ರಾಷ್ಟ್ರಕ್ಕೆ ಕೆಲ ನಿರ್ದಿಷ್ಟ ಗಡಿ, ಮಿತಿ ಹೇರಬೇಕಾಗುತ್ತದೆ.

ಬೈಡೆನ್‌ ಬಳಿ ಅವಕಾಶ

ಆದರೀಗ ಬೈಡೆನ್‌ ಬಳಿ ಅವಕಾಶವಿದೆ. ಪ್ರತಿಯೊಂದು ರಾಷ್ಟ್ರಕ್ಕೆ ಕೊರೋನಾ ದಾಳಿ ಇಟ್ಟಿದೆ. ಹೀಗಿರುವಾಗ ಮೈತ್ರಿ ರೂಪಿಸಲು ಇಂತಹ ಅವಕಾಶ ಸಿಗುವುದು ಬಹಳ ಅಪರೂಪ. ಹೀಗಿರುವಾಗ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಿ ಕಾರ್ಯ ನಿರ್ವಹಿಸಬೇಕು. ಈ ದೇಶಗಳ ಆರ್ಥಿಕ ಶಕ್ತಿಯು ಚೀನಾದ ಪ್ರಯೋಗಾಲಯದಲ್ಲಿ ನಡೆಯುವ ಅಪಾಯಕಾರಿ ಚಟುವಟಿಕೆ, ಕೊರೋನವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಮತ್ತು ಇತರ ದೇಶಗಳಲ್ಲಿನ ಕರೋನಾ ಸಾಂಕ್ರಾಮಿಕದಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ಬಳಸಬಹುದು.

ಇಂತಹ ಒಗ್ಗಟ್ಟಿನಿಂದ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾದ ಕಮ್ಯುನಿಸ್ಟ್‌ ಪಕ್ಷ ಬೀಳುವುದರಲ್ಲಿ ಅನುಮಾನವಿಲ್ಲ. ಅಂತರಾಷಟ್‌ರೀಯ ಮಟ್ಟದ ಮೈತ್ರಿಯಿಂದ ಚೀನಾದ ಆರ್ಥಿಕ ಚಟುವಟಿಕೆ  ಹಾಗೂ ನಾಯಕರು ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.

WHO ಕಣ್ಣಾಮುಚ್ಚಾಲೆ ಆಟದ ಹಿಂದೆ ಚೀನಾ ಕೈವಾಡ; ಅಮೆರಿಕ NSA ಅಧಿಕಾರಿ!

ಚೀನಾ ವಿರುದ್ಧ ಈ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ

ಬೈಡೆನ್‌ ನೇತೃತ್ವದಲ್ಲಿ ರೂಪುಗೊಳ್ಳುವ ಒಕ್ಕೂಟವು ಚೀನಾದ ನಾಯಕತ್ವ ಮತ್ತು ಚೀನಾದ ಘಟಕಗಳ ವಿರುದ್ಧ ಏಕಪಕ್ಷೀಯ ಮತ್ತು ಬಹುಪಕ್ಷೀಯ ಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಚೀನಾದ ಆಡಳಿತ ಪಕ್ಷ ವಿಶ್ವದ ಕಡೆಗೆ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ, ಈ ನಾಯಕರ ವಿದೇಶದಲ್ಲಿ ಅಡಗಿರುವ ಸಂಪತ್ತನ್ನು ಜಗತ್ತು ರಕ್ಷಿಸಬಾರದು. ಜಗತ್ತು ಚೀನಾದ ಒಡೆತನದ ಉದ್ಯಮಗಳು ಮತ್ತು ಅನ್ಯಾಯದ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಚೀನಾದ ಘಟಕಗಳಿಗೆ ಕಡಿಮೆ ಆದ್ಯತೆ ನೀಡಬೇಕು. ಸಮಯವನ್ನು ರಾಜತಾಂತ್ರಿಕವಾಗಿ ಅನುಮತಿಸಲು ಇಂತಹ ಕ್ರಮಗಳನ್ನು ಹಂತಹಂತವಾಗಿ ಮಾಡಬಹುದು. ಹೊಸ ನೀತಿಗಳು, ಹೊಸ ಒಪ್ಪಂದಗಳು ಅಥವಾ ಹೊಸ ಕಾನೂನುಗಳು ಸಹ ಅಗತ್ಯವಾಗಬಹುದು.

ಅಂತಹ ಕ್ರಮಗಳು ಸೂಕ್ತವೆ? ಅಮೆರಿಕದಲ್ಲಿ, ನಾವು ಸಾಕ್ಷ್ಯಗಳ ನಾಶವನ್ನು ಶಿಕ್ಷಿಸುತ್ತೇವೆ ಮತ್ತು ಮರೆಮಾಚುವಿಕೆಯನ್ನು ಅಪರಾಧದ ಸಂಕೇತವೆಂದು ಪರಿಗಣಿಸುತ್ತೇವೆ. ನಾವು ಸ್ವಾಭಾವಿಕವಾಗಿ ಅಪಾಯಕಾರಿ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಹೊಣೆಗಾರಿಕೆಯನ್ನು ಇಡುತ್ತೇವೆ. ಈ ಪ್ರಕರಣಗಳಲ್ಲಿ ಚೀನಾ ಈಗಾಗಲೇ ಸ್ಪಷ್ಟವಾಗಿ ತಪ್ಪಿತಸ್ಥವಾಗಿದೆ.

ಚೀನಾದಿಂದಲೂ ತಿರುಗೇಟು

ಚೀನಾ ಖಂಡಿತವಾಗಿಯೂ ಬಲವಾಗಿ ಪ್ರತೀಕಾರ ತೀರಿಸಲಿದೆ. ಇದು ಪೂರೈಕೆಗೆ ಅಡ್ಡಿಪಡಿಸುತ್ತದೆ ಮತ್ತು ಪ್ರಜಾಪ್ರಭುತ್ವ ಮೈತ್ರಿಆರಂಭಿಸಿದ್ದಕ್ಕೆ ಜನರು ಮತ್ತು ಕಂಪನಿಗಳಿಗೆ ಕಿರುಕುಳ ನೀಡುತ್ತದೆ. ಚೀನಾದಂತೆ, ನಮ್ಮದೇ ಆದ ಪೂರೈಕೆ ಸೇರಿ ನಮ್ಮಲ್ಲಿ ದೋಷಗಳಿವೆ. ಇವುಗಳಲ್ಲಿ ಕೆಲವು ನಾವು ತಕ್ಷಣ ಸರಿಪಡಿಸಬೇಕಾಗಿದೆ. ಚೀನಾದ ಪ್ರತಿಕ್ರಿಯೆಯಿಂದ ಹಾನಿಯನ್ನು ತಪ್ಪಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವುದು ಬೈಡೆನ್ ಅವರ ರಾಜತಾಂತ್ರಿಕ ಸವಾಲುಗಳಲ್ಲಿ ಒಂದಾಗಿದೆ.

ಕೊರೋನಾ ಮೂಲ ಪತ್ತೆಗೆ ಭಾರತದಿಂದ ತನಿಖೆ ಸಾಧ್ಯತೆ

ಕ್ರಮಬದ್ಧ ಜಗತ್ತಿಗೆ ಪ್ರವೇಶಿಸುವುದರಿಂದ ಚೀನಾ ಬಹಳ ಲಾಭ ಗಳಿಸಿದೆ. ತನ್ನ ದುಷ್ಟ ನಡೆಗಳ ಮೂಲಕ ಜಗತ್ತಿಗೆ ಅಪಾರ ಹಾನಿಯನ್ನುಂಟು ಮಾಡಿದರೂ, ಚೀನಾ ಎಲ್ಲವನ್ನೂ ಬಹಿರಂಗಪಡಿಸಿ, ಏನು ತಪ್ಪಾಗಿದೆ ಎಂಬುದರ ಕುರಿತು ಅಂತರರಾಷ್ಟ್ರೀಯ ತನಿಖೆಯನ್ನು ಅಳವಡಿಸಿಕೊಳ್ಳುವ ಮೂಲಕ ವಿಷಯಗಳನ್ನು ಸರಿಯಾಗಿ ಹೊಂದಿಸಲು ಪ್ರಯತ್ನಿಸಬಹುದಿತ್ತು. ಆದರೆ ಹೀಗೆ ಮಾಡದ ಬದಲಾಗಿ, ಯುಎಸ್ ಗುಪ್ತಚರ ತನಿಖೆಗೆ ಬೈಡನ್ ಆದೇಶಿಸಿದಾಗ ಚೀನಾ ದ್ವೇಷದಿಂದ ಪ್ರತಿಕ್ರಿಯಿಸಿತು.

ಪ್ರಮುಖ ಪ್ರಜಾಪ್ರಭುತ್ವಗಳು ಮುಖಾಮುಖಿಯಾಗುವುದನ್ನು ತಪ್ಪಿಸಲು ತಮ್ಮ ನಷ್ಟದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಆಯ್ಕೆ ಮಾಡಬಹುದು. ಬೈಡೆನ್ ಮುಂದಿನ ಬಾರಿ ಕಠಿಣ ಕ್ರಮ ತೆಗೆದುಕೊಳ್ಳುವ ಮಾತನಾಡಬಹುದು. ಆದರೆ ಮುಂದಿನ ಬಾರಿ ಎಂದರೆ ಬಹಳ ತಡವಾಗುತ್ತದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.

click me!