ಕರ್ನಾಟಕದಲ್ಲಿ ಹಾಲಿ ಸಂಸದರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದರೆ, ಕಝಕ್‌ನಲ್ಲಿ ಮಾಜಿ ಸಚಿವರೊಬ್ಬರ ಕ್ರೌರ್ಯ ಭಾರಿ ಕೋಲಾಹಲ ಸೃಷ್ಟಿಸಿದೆ. ಒದೆ, ಮುಖಕ್ಕೆ ಪಂಚ್.., ಹೀಗೆ ಸತತ ದಾಳಿ ಮೂಲಕ ಪತ್ನಿಯನ್ನೇ ಮಾಜಿ ಸಚಿವ ಹತ್ಯೆ ಮಾಡಿದ್ದಾನೆ. ಈ ಹಲ್ಲೆ ಘಟನೆ ಸಿಸಿಟಿವಿಯಲ್ಲಿ ಬಯಲಾಗಿದೆ.
ಕಝಕಿಸ್ತಾನ್(ಮೇ.03) ಕರ್ನಾಟಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಿದ್ದು, ಸಾವಿರಾರು ಹೆಣ್ಣುಮಕ್ಕಳ ಬಾಳು ಕತ್ತಲ್ಲಿ ಮುಳುಗಿದೆ. ಇತ್ತ ಕಜಕಿಸ್ತಾನದಲ್ಲಿ ಮಾಜಿ ಸಚಿವರೊಬ್ಬರು ತಮ್ಮ ಪತ್ನಿಯನ್ನೇ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಮುಖಕ್ಕೆ ಪಂಚ್, ಎದೆ ಸೇರಿದಂತೆ ತಲೆಗೆ ಕಾಲಿನಿಂದ ಒದ್ದು ಪತ್ನಿಯನ್ನು ಹತ್ಯೆ ಮಾಡಿದ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಝಕಿಸ್ತಾನ ಮಾಜಿ ಸಚಿವ ಕೌಂಡ್ಯಕ್ ಬಿಶಿಂಬಯೆವ್ ಕೌರ್ಯಕ್ಕೆ ವಿಶ್ವವೇ ಬೆಚ್ಚಿ ಬಿದ್ದಿದೆ. ಈತನ ಭೀಕರ ದಾಳಿಗೆ 31 ವರ್ಷದ ಪತ್ನಿ ಸಾಲ್ತನಾಟ್ ನುಕೆನೋವಾ ದಾರುಣವಾಗಿ ಅಂತ್ಯಕಂಡಿದ್ದಾಳೆ. ಈ ಕುರಿತು ಕಝಕಿಸ್ತಾನ ಕೋರ್ಟ್ ತ್ವರಿತ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಬರೋಬ್ಬರಿ 8 ಗಂಟೆಗಳ ಕಾಲ ಪತ್ನಿ ಮೇಲೆ ಕೌಂಡ್ಯಕ್ ಬಿಶಿಂಬಯೆವ್ ಹಲ್ಲೆ ನಡೆಸಿದ ಮಾಹಿತಿ ಬಯಲಾಗಿದೆ.
ಐಸ್‌ಕ್ರೀಮ್‌ಗಾಗಿ ಕಾಯುತ್ತಿದ್ದ 31 ಶಾಲಾ ಮಕ್ಕಳ ಮೇಲೆ ಹರಿದ ಲಾರಿ, ಮೈಜುಮ್ಮೆನಿಸುವ ವಿಡಿಯೋ !
ಕೌಂಡ್ಯಕ್ ಬಿಶಿಂಬಯೆವ್ ಅವರ ಕುಟುಂಬಸ್ಥರ ರೆಸ್ಟೋರೆಂಟ್‌ನಲ್ಲಿ ತಂಗಿದ್ದ ಇಬ್ಬರು ತಡ ರಾತ್ರಿ ಜಗಳವಾಡಿದ್ದಾರೆ. ಕೌಂಡ್ಯಕ್ ಬಿಶಿಂಬಯೆವ್ ಆಕ್ರೋಶದ ಮಾತುಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದರೂ ಕೇಳಲಿಲ್ಲ. ಏಕಾಏಕಿ ದಾಳಿ ಆರಂಭಿಸಿದ್ದಾನೆ. ಪತ್ನಿಯನ್ನು ಹಿಡಿದೆಳದು ಮುಖಕ್ಕೆ ಪಂಚ್ ನೀಡಿದ್ದಾನೆ. ಕುಸಿದ ಬಿದ್ದ ಪತ್ನಿ ಮೇಲೆ ಕಾಲಿನಿಂದ ಒದ್ದು ಕೌರ್ಯ ಮೆರೆದಿದ್ದಾನೆ.
ಸಿಸಿಟಿವಿ ಇರುವುದನ್ನು ಗಮನಿಸಿದ ಕೌಂಡ್ಯಕ್ ಬಿಶಿಂಬಯೆವ್ ಆಕೆಯ ಕೂದಲು ಹಿಡಿದು ಕೋಣೆಗೆ ಎಳೆದುಕೊಂಡು ಹೋಗಿದ್ದಾನೆ. ಕೋಣೆಯ ಬಾಗಿಲು ಹಾಕುವಷ್ಟರಲ್ಲೇ ಕಷ್ಟಪಟ್ಟು ಎದ್ದು ಕೋಣೆಯ ಶೌಚಾಲಯದಲ್ಲಿ ಅಡಗಿಕುಳಿತು ಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕ್ರೋಶಗೊಂಡಿದ್ದ ಕೌಂಡ್ಯಕ್ ಬಿಶಿಂಬಯೆವ್, ಶೌಚಾಲಯದ ಬಾಗಿಲು ಒಡೆದಿದ್ದಾನೆ. ಬಳಿಕ ಆಕೆಯನ್ನು ಎಳೆದುಕೊಂಡು ಬಂದು ಮತ್ತೆ ಹಲ್ಲೆ ಮಾಡಿದ್ದಾನೆ.
Final moments of Kazakhstan's former economy minister's astrologer wife, Saltanat Nukenova, 31, dragged by her hair, kicked & beaten by her husband, Kuandyk Bischimbayev, 43, before dying from brain trauma shock Kazakhstan as first trial to be streamed online grips the nation pic.twitter.com/Ph0BsGsNN0
— True Crime Updates (@TrueCrimeUpdat)
ಮಾರಣಾಂತಿಕ ಹಲ್ಲೆಯಿಂದ ಸಾಲ್ತನಾಟ್ ನುಕೆನೋವಾ ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿದೆ. ಆದರೂ ಈತನ ಹಲ್ಲೆ ಮುಂದುವಿರಿದೆ. ಸತತ 8 ಗಂಟೆ ಕಾಲ ಹಲ್ಲೆ ನಡೆಸಿದ್ದಾನೆ. ಸಾಲ್ತನಾಟ್ ನುಕೆನೋವಾ ಮೇಲೆ ಸೂಕ್ತ ಚಿಕಿತ್ಸೆ ಸಿಗದೆ 12 ಗಂಟೆ ಕೋಣೆಯ ನೆಲದ ಮೇಲೆ ಬಿದ್ದಿದ್ದಳು. 12 ಗಂಟೆ ಬಳಿಕ ಮಾಹಿತಿ ಬಯಲಾಗುತ್ತಿದ್ದಂತೆ ಆ್ಯಂಬುಲೆನ್ಸ್ ಆಗಮಿಸಿದೆ. ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಅದಕ್ಕೂ ಮೊದಲೇ ಈಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಕೃಷಿ ಹೊಂಡದಲ್ಲಿ ಅಣ್ಣ ಮುಳುಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ತಂಗಿ!
ಸತತ 8 ಗಂಟೆಗಳ ಸಿಸಿಟಿವಿ ವಿಡಿಯೋವನ್ನು ಕೋರ್ಟ್‌ನಲ್ಲಿ ನ್ಯಾಯಾಧೀಶರು ವೀಕ್ಷಿಸಿದ್ದಾರೆ. ಬಳಿಕ ಸಾಕ್ಷ್ಯಗಳ ಆಧಾರದಲ್ಲಿ ಕೌಂಡ್ಯಕ್ ಬಿಶಿಂಬಯೆವ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ .