ಖಲಿಸ್ತಾನಿ ಉಗ್ರ ನಿಜ್ಜರ್‌ಹತ್ಯೆ ಮಾಡಿದ್ದ ಸುಪಾರಿ ಹಂತಕರನ್ನ ಬಂಧಿಸಿದ ಕೆನಡಾ

By Ravi Janekal  |  First Published May 4, 2024, 9:50 AM IST

ಕಳೆದ ವರ್ಷ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್‌ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಒಟ್ಟಾವಾ (ಮೇ.4): ಕಳೆದ ವರ್ಷ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್‌ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ನಿಜ್ಜರ್‌ ಹತ್ಯೆಗೆ ಸುಪಾರಿ ಹಂತಕರನ್ನು ಭಾರತ ಸರ್ಕಾರ ನಿಯೋಜಿಸಿತ್ತು. ಈ ಕುರಿತು ಖಚಿತ ಸುಳಿವು ಹೊಂದಿದ್ದ ಕೆನಡಾ ಪೊಲೀಸರು ಇದೀಗ ಹಿಟ್‌ ಸ್ಕ್ವಾಡ್‌ಗೆ ಸೇರಿದ ವಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲ ತಿಂಗಳ ಹಿಂದೆ ನಿಜ್ಜರ್‌ ಹತ್ಯೆಯಲ್ಲಿ ಭಾರತ ಶಾಮೀಲಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಭಾರತ ಈ ಆರೋಪವನ್ನು ಸಾರಾ ಸಗಟಾಗಿ ತಿರಸ್ಕರಿಸಿತ್ತು. ಜೊತೆಗೆ ಈ ಆರೋಪ ಉಭಯ ದೇಶಗಳ ಸಂಬಂಧ ಹದಗೆಡಲು ಕಾರಣವಾಗಿತ್ತು

Latest Videos

undefined

'ಘರ್‌ ಮೆ ಗುಸ್‌ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?

ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ಹತ್ಯೆಗೈದ ಹಿಟ್ ಸ್ಕ್ವಾಡ್‌ನ ಭಾಗವಾಗಿದ್ದವರು ಎಂದು ಶಂಕಿಸಲಾಗಿರುವ ಮೂವರು ಭಾರತೀಯರನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ

ಬಂಧಿತ ಮೂವರು ಭಾರತೀಯರಾದ ಕರಣ್ ಬ್ರಾರ್ 22, ಕಮಲ್‌ಪ್ರೀತ್ ಸಿಂಗ್ 22, ಕರಣ್‌ಪ್ರೀತ್ ಸಿಂಗ್, 28  ಎಂದು ಗುರುತಿಸಲಾಗಿದೆ. ಆಲ್ಬರ್ಟಾದಲ್ಲಿ ಕಳೆದ ಐದು ವರ್ಷಗಳಿಂದ ಖಾಯಂ ನಿವಾಸಿಗಳಾಗಿ ವಾಸಿಸುತ್ತಿದ್ದಾರೆ ಎಂದು ಸಮಗ್ರ ಹತ್ಯೆ ಘಟನೆಯ ತನಿಖಾ ತಂಡದ ನೇತೃತ್ವದ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ. ಅವರ ಫೋಟೋಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.

click me!