ಕೆಲವು ಫುಡ್ ಮೇಕಿಂಗ್ ವೀಡಿಯೋಗಳು ಅಯ್ಯೋ ಹೀಗೋ ಆಹಾರ ರೆಡಿ ಮಾಡ್ತಾರಾ ಅಂತ ಜನರ ಹುಬ್ಬೇರಿಸುವಂತೆ ಮಾಡ್ತವೆ. ಅಂಥಾ ಆಹಾರಗಳಲ್ಲಿ ಒಂದು ಜಪಾನ್‌ನಲ್ಲಿ ತಯಾರಾಗೋ ಓಣಿಗಿರಿ. ಇದನ್ನು ತಯಾರಿಸೋ ರೀತಿ ಕೇಳಿದ್ರೆ ನೀವು ಛೀ, ಥೂ ಅಂತ ಅಲವತ್ತುಕೊಳ್ಳೋದು ಗ್ಯಾರಂಟಿ.
ಆಹಾರ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿಯೇ ಫುಡ್ ತಯಾರಿಕೆಯಲ್ಲಿ ಆಗಾಗ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಹೊಸ ಹೊಸ ರೀತಿ ಆಹಾರವನ್ನು ತಯಾರಿಸಲು ಜನರು ಯತ್ನಿಸುತ್ತಲೇ ಇರುತ್ತವೆ. ಇದರಲ್ಲಿ ಕೆಲವು ಹಿಟ್ ಆದರೆ, ಇನ್ನು ಕೆಲವು ಛೀ, ಥೂ ಅಂತ ಜನರಿಂದಲೇ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಳ್ಳುತ್ತವೆ. ಇನ್ನು ಕೆಲವು ಫುಡ್ ಮೇಕಿಂಗ್ ವೀಡಿಯೋಗಳು ಅಯ್ಯೋ ಹೀಗೋ ಆಹಾರ ರೆಡಿ ಮಾಡ್ತಾರಾ ಅಂತ ಜನರ ಹುಬ್ಬೇರಿಸುವಂತೆ ಮಾಡ್ತವೆ. ಅಂಥಾ ಆಹಾರಗಳಲ್ಲಿ ಒಂದು ಜಪಾನ್‌ನಲ್ಲಿ ತಯಾರಾಗೋ ಓಣಿಗಿರಿ. ಇದನ್ನು ತಯಾರಿಸೋ ರೀತಿ ಕೇಳಿದ್ರೆ ನೀವು ಛೀ, ಥೂ ಅಂತ ಅಲವತ್ತುಕೊಳ್ಳೋದು ಗ್ಯಾರಂಟಿ.
ನ್ಯೂಸ್‌ಡೈಲಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ನಲ್ಲಿನ ಲೇಖನವೊಂದರ ಪ್ರಕಾರ, ಜಪಾನಿನ ಜನಪ್ರಿಯ ತಿಂಡಿ ಓಣಿಗಿರಿಯನ್ನು ಈಗ ಇಲ್ಲಿನ ಯುವತಿಯರು ತಯಾರಿಸುತ್ತಿದ್ದಾರೆ. ಅವರು ಈ ರೈಸ್‌ಬಾಲ್‌ನ್ನು ರೂಪಿಸಲು ತಮ್ಮ ಕಂಕುಳನ್ನು ಬಳಸುತ್ತಿದ್ದಾರೆ. ಈ ವಿಶಿಷ್ಟವಾದ ಪಾಕಶಾಲೆಯ ವಿಧಾನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
undefined
ಜಪಾನಿ ಸಾಂಪ್ರದಾಯಿಕ ಆಹಾರ ನ್ಯಾಟ್ಟೊ ತಿಂದ್ರೆ ಚಿರಯೌವನ ನಿಮ್ದು
ವ್ಯಾಯಾಮ ಮಾಡಿ ಬೆವರು ಬಂದ ನಂತರ ಕಂಕುಳ ಕೆಳಗಿಟ್ಟು ಅಕ್ಕಿ ಉಂಡೆ ಮಾಡ್ತಾರೆ
ಓಣಿಗಿರಿ (ಜಪಾನೀಸ್ ಅಕ್ಕಿ ಚೆಂಡುಗಳು) ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ಪದಾರ್ಥಗಳು ಮತ್ತು ದೇಹದ ಭಾಗಗಳನ್ನು ಸೋಂಕು ರಹಿತಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಂತರ ಹುಡುಗಿಯರು ಬೆವರು ಉತ್ಪಾದಿಸಲು ವ್ಯಾಯಾಮ ಮಾಡುತ್ತಾರೆ ಮತ್ತು ನಂತರ ತಮ್ಮ ಅಂಗೈಗಳ ಬದಲಿಗೆ ತಮ್ಮ ಕಂಕುಳನ್ನು ಬಳಸಿ, ಅಕ್ಕಿ ಉಂಡೆಗಳಿಗೆ ಆಕಾರ ನೀಡುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಆಹಾರ ಪದಾರ್ಥಗಳನ್ನು ಈಗ ಕೆಲವು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ - ಸಾಮಾನ್ಯ ರೈಸ್ ಬಾಲ್‌ಗಳಿಗಿಂತ ಇದಕ್ಕೆ 10 ಪಟ್ಟು ಹೆಚ್ಚು ಬೆಲೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೆಲವು ರೆಸ್ಟೊರೆಂಟ್‌ಗಳು ಈ ಬೆವರು ತುಂಬಿದ ಓಣಿಗಿರಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿವೆ, ಗ್ರಾಹಕರಿಗೆ ಅಡುಗೆ ಮನೆಗಳಿಗೂ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಆಹಾರ ತಯಾರಿಸುವ ಪ್ರಕ್ರಿಯೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಕೆಲವರು ಮಾನವನ ಕಂಕುಳನ್ನು ಬಳಸಿ ಓಣಿಗಿರಿಯನ್ನು ತಯಾರಿಸುವ ಕಲ್ಪನೆಯನ್ನು ಬೆಂಬಲಿಸಿದರೆ, ಕೆಲವರು ಅದನ್ನು ಬಲವಾಗಿ ನಿರಾಕರಿಸಿದರು.
ಜಗತ್ತಿನಲ್ಲಿ 152 ಕೋಟಿ ಮಂದಿ ಚಾಪ್‌ಸ್ಟಿಕ್ ಬಳಸುತ್ತಾರೆ, ಯಾಕೆ ಗೊತ್ತೇ?
ವರದಿಯ ಪ್ರಕಾರ, ಸಂಶೋಧಕರು ಹೊಸ ಪಾಕಶಾಲೆಯ ಪ್ರವೃತ್ತಿಯಲ್ಲಿ ಹಲವು ಪ್ರಯೋಜನವಿದೆ ಎಂದು ಸಹ ಹೇಳಿದ್ದಾರೆ. ಕಂಕುಳಿನ ಬೆವರು ಫೆರೋಮೋನ್‌ಳನ್ನು ಹೊಂದಿರುತ್ತದೆ ಎಂದು 2013ರ ಅಧ್ಯಯನವು ಹೇಳಿದೆ. ಇದು ಗ್ರಹಿಸಿದಾಗ ಮಾನವ ಭಾವನೆಗಳ ಮೇಲೆ ಪರಿಣಾಮ ಬೀರುವ ಹಾರ್ಮೋನ್ ಆಗಿದೆ.