ಉದ್ಯೋಗಕ್ಕಾಗಿ ಇಮೇಲ್ ಮೂಲಕ ರೆಸ್ಯೂಮ್ ಕಳುಹಿಸುವುದು ಸಾಮಾನ್ಯ. ಆದರೆ ಇದೀಗ ಭಿನ್ನ ರೀತಿಯಲ್ಲಿ ರೆಸ್ಯೂಮ್ ಕಳುಹಿಸಿ ಜಾಬ್ ಗಿಟ್ಟಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಅಭ್ಯರ್ಥಿಯೊಬ್ಬ, ಕಂಪನಿಗೆ ತನ್ನ ರೆಸ್ಯೂಮ್ ಜೊತೆ ಫಿಜ್ಜಾ ಕೂಡ ಕಳುಹಿಸಿದ್ದಾನೆ. ಈತನ ಪ್ರಯತ್ನಕ್ಕೆ ಬಾಸ್ ಇಂಪ್ರೆಸ್ ಆಗಿದ್ದಾರೆ.
ಪೈಪೋಟಿ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಮಾತವಲ್ಲ. ಹಲವು ಕಂಪನಿಗಳಿಗೆ ರೆಸ್ಯೂಮ್ ಫಾರ್ವರ್ಡ್ ಮಾಡಿ ಸಂದರ್ಶನಕ್ಕಾಗಿ ಕಾಯುವುದು, ಸಂದರ್ಶನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, ಉತ್ತಮ ವೇತನದೊಂದಿಗೆ ಕೆಲಸ ಗಿಟ್ಟಿಸಿಕೊಳ್ಳಲು ಪಡಬಾರದ ಕಷ್ಟ ಪಡುತ್ತಾರೆ. ಆದರೆ ಇತ್ತೀಚೆಗೆ ಟ್ರೆಂಡ್ ಕೊಂಚ ಬದಲಾಗುತ್ತಿದೆ. ಇಮೇಲ್ ಮೂಲಕ ರೆಸ್ಯೂಮ್ ಫಾರ್ವಡ್ ಮಾಡುವ ಬದಲು ಕಚೇರಿಗೆ ವಿಭಿನ್ನ ರೀತಿಯಲ್ಲಿ ರೆಸ್ಯೂಮ್ ಕಳುಹಿಸಿ ಕಂಪನಿ ಹಾಗೂ ಬಾಸ್ ಮೆಚ್ಚುಗೆ ಪಡೆಯುವ ಪ್ರಯತ್ನಗಳು ನಡೆಯುತ್ತಿದೆ. ಇಲ್ಲೊಬ್ಬ ಇಮೇಲ್ ಮೂಲಕ ರೆಸ್ಯೂಮ್ ಫಾರ್ವಡ್ ಮಾಡದೆ, ಕಚೇರಿಗೆ ತನ್ನ ರೆಸ್ಯೂಮ್ ಜೊತೆ ಫಿಜ್ಜಾ ಕೂಡ ಡೆಲಿವರಿ ಮಾಡಿಸಿದ್ದಾನೆ. ಜೊತೆ ಒಂದು ಕವರ್ ಲೆಟರ್ ಕೂಡ ಬರೆದಿದ್ದಾನೆ. ಈತನ ವಿನೂತನ ಪ್ರಯತ್ನಕ್ಕೆ ಬಾಸ್ ಇಂಪ್ರೆಸ್ ಆಗಿದ್ದಾರೆ.
ಅಮೆರಿಕದ ಆ್ಯಂಟಿಮೆಟಲ್ಲ್ ಕಂಪನಿ ಸಿಇಒ ಮ್ಯಾಥ್ಯೂ ಫರ್ಕರ್ಸ್ ಈ ಕುರಿತು ವಿಶೇಷ ಘಟನೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮ್ಯಾಥ್ಯೂ ಉದ್ಯೋಕ್ಕಾಗಿ ಕಳುಹಿಸಿದ ರೆಸ್ಯೂಮ್ ಸ್ವೀಕರಿಸಿದ್ದಾರೆ. ಈ ಅರ್ಜಿ ಅಚ್ಚರಿಯನ್ನುನೀಡಿದೆ ಎಂದು ಮ್ಯಾಥ್ಯೂ ಹೇಳಿಕೊಂಡಿದ್ದಾರೆ. ಆ್ಯಂಟಿಮೆಟಲ್ಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ಗಾಗಿ ಅಭ್ಯರ್ಥಿಯೊಬ್ಬ ತನ್ನ ರೆಸ್ಯೂಮ್ ಕಳುಹಿಸಿದ್ದಾನೆ. ಆದರೆ ರೆಸ್ಯೂಮ್ ಜೊತೆ ಒಂದು ಬಾಕ್ಸ್ ಫಿಜ್ಜಾ ಕೂಡ ಕಳುಹಿಸಿದ್ದಾನೆ. ಇಷ್ಟೇ ಅಲ್ಲ ಫಿಜ್ಜಾ ಬಾಕ್ಸ್ ಮೇಲೆ ಕವರ್ ಲೆಟರ್ ಬರೆದು ಲಗತ್ತಿಸಿದ್ದಾನೆ.
ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!
ಈ ಕವರ್ ಲೆಟರ್‌ನಲ್ಲಿ ದಯವಿಟ್ಟು ಈ ಫಿಜ್ಜಾ ಸವಿಯಿರಿ. ಇದರ ಜೊತೆಗೆ ನನ್ನ ರೆಸ್ಯೂಮ್ ಲಗತ್ತಿಸಲಾಗಿದೆ. ಎಂಜಿಯನೀಯರಿಂಗ್ ಇಂಟರ್ನ್‌ಗಾಗಿ ನಾನು ರೆಸ್ಯೂಮ್ ಕಳುಹಿಸುತ್ತಿದ್ದೇನೆ. ನಿಮ್ಮ ಕಂಪನಿಯಲ್ಲಿ ನನಗೆ ಅವಕಾಶ ನೀಡಿದರೆ ಅದಕ್ಕಿಂತ ಸಂತಸ ಕ್ಷಣ ಮತ್ತೊಂದಿಲ್ಲ ಎಂದು ಬರೆದುಕೊಂಡಿದ್ದಾನೆ. ಇದೇ ಕವರ್ ಲೆಟರ್‌ನಲ್ಲಿ ಬರೆದಿರುವ ಮತ್ತೊಂದು ಸಾಲು ಕಂಪನಿ ಬಾಸ್ ಗಮನಸೆಳೆದಿದೆ. ಈ ಪಿಝಾ ಕಂಪನಿಯ ನೇಮಕಾತಿ ತಂಡಕ್ಕೆ ನೀಡಿರುವ ಲಂಚ. ಈ ಲಂಚ ಸ್ವೀಕರಿಸಿ ನನ್ನ ವೆಬ್‌ಸೈಟ್ ಕ್ಲಿಕ್ ಮಾಡಬೇಕಾಗಿ ವಿನಂತಿ ಎಂದಿದ್ದಾನೆ.
ಈ ಅಭ್ಯರ್ಥಿಯ ವಿಭಿನ್ನ ಪ್ರಯತ್ನಕ್ಕೆ ಕಂಪನಿ ಬಾಸ್ ಇಂಪ್ರೆಸ್ ಆಗಿದ್ದಾರೆ. ಇಷ್ಟೇ ಅಲ್ಲ ಶೇಕಡಾಾ 100 ರಷ್ಟು ಈ ಅಭ್ಯರ್ಥಿಯನ್ನು ಸಂದರ್ಶನಕ್ಕೆ ಕರೆಯುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭ್ಯರ್ಥಿಯ ಭಿನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಫ್ರೀ ಆಹಾರ ಸೇವಿಸ್ತಿರೊ ಗುಟ್ಟು ಬಿಚ್ಚಿಟ್ಟು, 81 ಲಕ್ಷದ ಕೆಲಸ ಕಳ್ಕೊಂಡ ವ್ಯಕ್ತಿ!
ಇತ್ತೀಚೆಗೆ ಈ ಟ್ರೆಂಡ್ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿ ಭಾರಿ ಸಂಚಲನ ಸೃಷ್ಟಿಸಿದ್ದ. ಕಾರಣ ಬ್ಲಿಂಕಿಂಟ್ ಡೆಲಿವರಿ ಆ್ಯಪ್ ಮೂಲಕ ಪ್ರಿಂಟ್ ಮಾಡಿದ ರೆಸ್ಯೂಮ್ ಇಟ್ಟು ಕಳುಹಿಸಿದ್ದ.