
ಮಗು ಹೆರುವುದು ಮಹಿಳೆಯ ಜೀವನದ ಬಹುದೊಡ್ಡ ಘಟ್ಟ ನಿಜ. ಪ್ರತಿಯೊಬ್ಬ ಮಹಿಳೆ ಕೂಡ ಕೈನಲ್ಲೊಂದು ಕೂಸು ಆಡ್ಬೇಕೆಂದು ಕನಸು ಕಾಣುತ್ತದೆ. ಕೆಲವು ಬಾರಿ ಅನಗತ್ಯ ಗರ್ಭಧಾರಣೆಗೆ ಮಹಿಳೆ ಒಳಗಾಗ್ತಾಳೆ. ಗರ್ಭಧಾರಣೆ ಮುಂದುವರೆಸಿ ಮಗು ಹೆರುವ ಸ್ಥಿತಿಯಲ್ಲಿ ಆಕೆ ಇರೋದಿಲ್ಲ. ಹಾಗಂತ ಗರ್ಭಪಾತಕ್ಕೆ ಆಕೆ ಮನಸ್ಸು ಒಪ್ಪುವುದಿಲ್ಲ. ಮನಸ್ಸು ಗಟ್ಟಿ ಮಾಡಿ ಗರ್ಭಪಾತಕ್ಕೆ ಒಳಗಾದ್ರೆ ನಂತ್ರ ಕೂಡ ಆಕೆ ಮನಸ್ಸು ಸ್ಥಿರತೆಗೆ ಬರಲು ಬಹಳ ದಿನಬೇಕು. ನಾನಾ ಕಾರಣಕ್ಕೆ ಆಕಸ್ಮಿಕವಾಗಿ ಗರ್ಭಪಾತಕ್ಕೊಳಗಾಗುವ ಮಹಿಳೆ ಅನುಭವಿಸುವ ಮಾನಸಿಕ ಹಿಂಸೆಯನ್ನು ಈಕೆಯೂ ಅನುಭವಿಸುತ್ತಾಳೆ. ಉದ್ದೇಶ ಪೂರ್ವಕವಾಗಿ ಗರ್ಭಪಾತ ಮಾಡಿಕೊಂಡ ಮಹಿಳೆ ನೋವು ಸ್ವಲ್ಪ ಭಿನ್ನವಾಗಿರುತ್ತದೆ. ಮಹಿಳೆ ಈ ಸಂದರ್ಭದಲ್ಲಿ ಏನೆಲ್ಲ ಕಷ್ಟ ಅನುಭವಿಸ್ತಾಳೆ ಎನ್ನುವುದು ಆಕೆ ಮನಸ್ಥಿತಿಗೆ ಬಿಟ್ಟಿದ್ದು. ಕೆಲ ಮಹಿಳೆಯರು ಕೆಲವೇ ದಿನಗಳಲ್ಲಿ ಚೇತರಿಕೆ ಕಾಣುತ್ತಾರೆ. ಮತ್ತೆ ಕೆಲವರು ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ನಾವಿಂದು ಗರ್ಭಪಾತಕ್ಕೊಳಗಾದ ಮಹಿಳೆಗೆ ಕಾಡುವ ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳ್ತೇವೆ.
ಮೊದಲೇ ಹೇಳಿದಂತೆ ಮಹಿಳೆಯರ ಮನಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಆದ್ರೆ ನಕಾರಾತ್ಮಕ (Negative) ಭಾವನೆ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆ ಹಾರ್ಮೋನು (Hormone) ಗಳ ಬದಲಾವಣೆ ಕೂಡ ಒಂದು ಕಾರಣವಾಗಿರುತ್ತದೆ.
ಗರ್ಭಪಾತ (Miscarriage) ದ ನಂತ್ರ ಕಾಡುವ ನಕಾರಾತ್ಮಕ ಭಾವನೆಗಳು :
1. ತಪ್ಪಿತಸ್ಥ ಭಾವನೆ (Guilty Feeling)
2. ಕೋಪ (Anger)
3. ಅವಮಾನ
4. ಪಶ್ಚಾತ್ತಾಪ
5. ಕುಗ್ಗುವ ಸ್ವಾಭಿಮಾನ ಅಥವಾ ಆತ್ಮವಿಶ್ವಾಸ (Confidence)
6. ಒಂಟಿತನದ ಭಾವನೆ (Loneliness)
7. ನಿದ್ರೆ ಸಮಸ್ಯೆ ಮತ್ತು ಕಾಡುವ ದುಃಸ್ವಪ್ನ
8. ಸಂಬಂಧದ ಸಮಸ್ಯೆಗಳು (Relationship Issues)
9. ಆತ್ಮಹತ್ಯೆ ಆಲೋಚನೆ
10. ಕಳೆದುಕೊಂಡ ಭಾವನೆ
11. ವಾಸ್ತವ ಜೀವನಕ್ಕೆ ಹೊಂದಿಕೊಳ್ಳಲು ಸಮಸ್ಯೆ
Women Health: ಬಾಣಂತಿಯರಿಗೆ ಹೇರುವ ಈ ನಿಯಮದಲ್ಲಿ ಎಷ್ಟು ಸತ್ಯವಿದೆ?
ನಮ್ಮ ಸಮಾಜದಲ್ಲಿರುವ ಕೆಲ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳು ಅನೇಕ ಬಾರಿ ಮಹಿಳೆಯರ ನೋವನ್ನು ಹೆಚ್ಚು ಮಾಡುತ್ತವೆ. ಸಮಯ ಕಳೆದಂತೆ ಹಿಂದಿನ ಕಹಿ ಘಟನೆಯನ್ನು ಮಹಿಳೆಯರು ಮರೆಯುತ್ತಾರೆ. ಗರ್ಭಪಾತ ದೈಹಿಕ ನೋವಿಗಿಂತ ಮಾನಸಿಕ ನೋವನ್ನು ಹೆಚ್ಚಾಗಿ ನೀಡುತ್ತದೆ. ಇದನ್ನು ಮರೆಯಲು ಸಾಧ್ಯವಾಗದೆ ಪ್ರತಿ ದಿನ ಕೊರಗುವ ಮಹಿಳೆಯರು ಖಿನ್ನತೆಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥವರು ಮನೋವೈದ್ಯರನ್ನು ಭೇಟಿಯಾಗುವುದು ಸೂಕ್ತ.
ಗರ್ಭಪಾತದ ನಂತರ ಇವರನ್ನು ಹೆಚ್ಚು ಕಾಡುತ್ತೆ ಖಿನ್ನತೆ (Depression) :
1. ನಕಾರಾತ್ಮಕ ವಿಷ್ಯಗಳ ಬಗ್ಗೆ ಹೆಚ್ಚು ಆಲೋಚನೆ ಮಾಡುವ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವ ಮಹಿಳೆಯರು ಖಿನ್ನತೆಗೆ ಒಳಗಾಗುವ ಅಪಾಯವಿರುತ್ತದೆ.
2. ಈ ಹಿಂದೆ ಮಾನಸಿಕ ರೋಗಕ್ಕೆ ಒಳಗಾದ ಮಹಿಳೆಯರಿಗೆ ಇದು ಕಾಡುತ್ತದೆ.
3. ಬಲವಂತವಾಗಿ ಗರ್ಭಪಾತಕ್ಕೆ ಒಳಗಾಗಿರುವ ಮಹಿಳೆಯರನ್ನು ಕೂಡ ಖಿನ್ನತೆ ಕಾಡುವ ಅಪಾಯವಿದೆ.
4. ಧಾರ್ಮಿಕ ನಂಬಿಕೆಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವ, ಗರ್ಭಪಾತ ತಪ್ಪು ಎಂದು ಬಲವಾಗಿ ನಂಬಿರುವ ಮಹಿಳೆಯರು ಖಿನ್ನತೆಗೆ ಒಳಗಾಗ್ತಾರೆ.
5. ಗರ್ಭಪಾತದ ವಿರುದ್ಧ ನೈತಿಕ ದೃಷ್ಟಿಕೋನ ಹೊಂದಿರುವ ಮಹಿಳೆಯರು ಕೂಡ ಒತ್ತಡ, ಖಿನ್ನತೆಗೆ ಗುರಿಯಾಗ್ತಾರೆ.
6. ಸಂಗಾತಿಯ ಆಸರೆಯಿಲ್ಲದೆ ಗರ್ಭಪಾತಕ್ಕೆ ಒಳಗಾದ ಮಹಿಳೆಯರಿಗೆ ಕೂಡ ಖಿನ್ನತೆ ಕಾಡುತ್ತದೆ.
7. ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಗರ್ಭಪಾತಕ್ಕೊಳಗಾದ ಮಹಿಳೆಯರಿಗೂ ಆಘಾತವಾಗುವುದು ಹೆಚ್ಚು.
8. ಪಾಲುದಾರರು ಗರ್ಭಪಾತಕ್ಕೆ ಸಹಕಾರ ನೀಡದೆ ಹೋದಾಗ ಕೂಡ ಮಹಿಳೆಯರು ಖಿನ್ನತೆ ಅನುಭವಿಸುತ್ತಾರೆ.
ಸ್ಯಾನಿಟರಿ ಪ್ಯಾಡ್‌ಗಳಿಂದ ರಾಶಸ್ ಸಮಸ್ಯೆ; ಕಡಿಮೆಯಾಗಲು ಏನು ಮಾಡ್ಬೋದು ?
9. ಖಿನ್ನತೆ ಆನುವಂಶಿಕವಾಗಿದ್ದರೆ ಅಂಥ ಮಹಿಳೆಯರಿಗೆ ಅಪಾಯ ಹೆಚ್ಚು.
10. ಈಗಾಗಲೇ ಒತ್ತಡಕ್ಕೆ ಒಳಗಾಗಿರುವ ಮಹಿಳೆಯರು ಗರ್ಭಪಾತ ಮಾಡಿಸಿಕೊಂಡಾಗ ಕೂಡ ಅವರನ್ನು ಖಿನ್ನತೆ ಕಾಡುವ ಸಾಧ್ಯತೆಯಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.