ಬೆಂಗ್ಳೂರಿನ MTR ಕಂಪನಿ ಫ್ಯಾಕ್ಟರಿ ಸೀಲ್‌ಡೌನ್..!

Jul 15, 2020, 5:55 PM IST

ಬೆಂಗಳೂರು(ಜು.15): ಪ್ರತಿಷ್ಠಿತ ಆಹಾರ ತಯಾರಿಕಾ ಕಂಪನಿಗೆ ಕೊರೋನಾ ಶಾಕ್ ನೀಡಿದೆ. ಆಹಾರ ಹಾಗೂ ಮಸಾಯ ತಯಾರಿಕಾ ಸಂಸ್ಥೆಯ 34ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಫ್ಯಾಕ್ಟರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಹೌದು, ಪ್ರಸಿದ್ಧ MTR ಕಂಪನಿಯಲ್ಲಿ ಕೊರೋನಾ ಸ್ಫೋಟಗೊಂಡಿದೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 34 ಮಂದಿಗೆ ಸೋಂಕು ವಕ್ಕರಿಸಿದೆ. ಹೀಗಾಗಿ ಬೊಮ್ಮಸಂದ್ರದಲ್ಲಿರುವ ಕಂಪನಿಯನ್ನು ಸೀಲ್‌ಡೌನ್ ಮಾಡಲಾಗಿದೆ. 

ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಸೋಂಕು? ಟಾಸ್ಕ್‌ ಫೋರ್ಸ್‌ ಸದಸ್ಯರ ವಿವರಣೆ ಇದು

MTR ಆಹಾರ ಪದಾರ್ಥ ಇಡೀ ಬೆಂಗಳೂರಿಗೆ ಪೂರೈಕೆಯಾಗುತ್ತಿತ್ತು. ಈಗ ಕಂಪನಿಯ ಸಿಬ್ಬಂದಿಗೆ ಸೋಂಕು ತಗುಲಿರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.