ನಟಿ ಆಕಾಂಕ್ಷಾ ಪುರಿಗೆ ಮದುವೆಗೆ ಸೂಕ್ತ ಹುಡುಗನೇ ಸಿಕ್ತಿಲ್ಲ ಎನ್ನುವ ಕೊರಗು. ಆದ್ದರಿಂದ ಒಂದೇ ಒಂದು ಕ್ವಾಲಿಟಿ ಇದ್ರೆ ಸಾಕು ಎಂದಿರೋ ನಟಿ ಹೇಳಿದ್ದೇನು?
ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ನಟಿ ಆಕಾಂಕ್ಷಾ ಪುರಿ ಸದ್ಯ ಸೂಕ್ತ ಹುಡುಗನ ಹುಡುಕಾಟದಲ್ಲಿ ಇದ್ದಾರೆ. ಹಾಟ್ ದೃಶ್ಯಗಳಿಂದ ಹಾಗೂ ವಿವಾದಗಳಿಂದಲೇ ಫೇಮಸ್ ಆಗಿರೋ ನಟಿ ಈಕೆ. ಇತ್ತೀಚೆಗಷ್ಟೇ ಹೋಳಿಯಂದು ದೇಹಕ್ಕೆ ಬಣ್ಣ ಮೆತ್ತಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು, ದೇಹದ ಮೇಲ್ಭಾಗವನ್ನು ತನ್ನ ಕೈಯಿಂದಲೇ ಮುಚ್ಚಿಕೊಂಡು ಬಿಸಿ ಹೆಚ್ಚಿಸಿರೋ ನಟಿಗೆ ಸೂಕ್ತ ಹುಡುಗನೇ ಸಿಕ್ತಿಲ್ಲವಂತೆ. ಈ ಹಿಂದೆ ಹಿಂದಿ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಷೋನಲ್ಲಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ನಂತರ ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು. ಇದೀಗ ನಟಿಗೆ ಅವರ ಆಯ್ಕೆಯ ಹುಡುಗ ಬೇಕಂತೆ!
ಎಲ್ಲರ ಮದುವೆ ಆಗ್ತಿದೆ. ನನ್ನದು ಮಾತ್ರ ಆಗ್ತಿಲ್ಲ ಎಂದು ಪತ್ರಕರ್ತರೊಬ್ಬರಿಗೆ ಹೇಳಿದ ನಟಿ, ಸೂಕ್ತ ವರನನ್ನು ಹುಡುಕಿ ಕೊಡಿ ಎಂದು ಕೇಳಿದ್ದಾರೆ. ಹುಡುಗನನ್ನು ಹುಡುಕುತ್ತಾ ಭಾರತದಿಂದ ಹೊರಗೇ ಹೋಗಬೇಕಾಗುತ್ತದೆಯೋ ಏನೋ, ಇಲ್ಲಿ ಒಬ್ಬರೂ ಸಿಗ್ತಿಲ್ಲ ಎಂದು ಆಕಾಂಕ್ಷಾ ಹೇಳಿದ್ದಾರೆ. ಯಾವುದಾದರೂ ಒಳ್ಳೆಯ ಹುಡುಗ ಇದ್ದರೆ ಪ್ಲೀಸ್ ಬನ್ನಿ ಎಂದಿದ್ದಾರೆ. ಇದೇ ವೇಳೆ ಮದುವೆಗಾಗಿ ಕರೆಯುತ್ತಿದ್ದೇನೆ, ಬೇರೆ ವಿಷಯಕ್ಕೆ ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಹುಡುಗ ಒಳ್ಳೆಯವನು ಇದ್ರೆ ಸಾಕು, ಮತ್ತಿನ್ನೇನೂ ಬೇಡ. ಉಳಿದವುಗಳಿಗೆ ಆಕಾಂಕ್ಷಾ ಕೆಪೇಬಲ್ ಇದ್ದಾಳೆ. ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಹುಡುಗ ಒಳ್ಳೆಯವನು ಇದ್ರೆ ಸಾಕು ಅಂತಿದ್ದಾರೆ.
ಶಾರುಖ್ ಖಾನ್ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್ ವಿಡಿಯೋ ವೈರಲ್
ಅಷ್ಟಕ್ಕೂ ಆಕಾಂಕ್ಷಾ ಪುರಿ, ಈ ಹಿಂದೆ ವಿಘ್ನಹರ್ತ ಗಣೇಶ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ ಮಿಂಚಿದ್ದರು. ಅದಾದ ಬಳಿಕ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಇವರ ಬೋಲ್ಡ್ ಅವತಾರ ನೋಡಿದ್ರೆ, ಇವರೇನಾ ಪಾರ್ವತಿ ದೇವಿಯಾಗಿದ್ದು ಎಂದೆನಿಸುತ್ತೆ ಎಂದೆಲ್ಲಾ ಕಮೆಂಟ್ ಮಾಡಲಾಗಿತ್ತು. ಬರೀ ಎದೆ ಸೀಳಲ್ಲ, ಅರ್ಧಕ್ಕರ್ಧ ಎದೆಯನ್ನೇ ತೋರಿಸೋ ಉಡುಗೆ ತೊಟ್ಟಿದ್ದಂತೂ ಸಕತ್ ಸದ್ದು ಮಾಡಿತ್ತು.
ನಟಿ ಇದೊಂದೇ ವಿಷಯದಲ್ಲಿ ಇಲ್ಲ. ಈ ಹಿಂದೆ ಬಿಗ್ಬಾಸ್ನಲ್ಲಿ ಲಿಪ್ ಲಾಕ್ ವಿಡಿಯೋ ಹಲ್ಚಲ್ ಸೃಷ್ಟಿಸಿದ್ದ ಬೆನ್ನಲ್ಲೇ ಬಿಗ್ ಬಾಸ್ (Bigg Boss) ಮನೆಯಿಂದ ಅವರು ಹೊರ ಬಂದಿದ್ದರು. ಲಿಪ್ ಲಾಕ್ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದಾಗ ಅದಕ್ಕೂ ಬೋಲ್ಡ್ ಆಗಿಯೇ ಉತ್ತರಿಸಿದ್ದರು ಆಕಾಂಕ್ಷಾ. ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದು ಅಚ್ಚರಿ ಮೂಡಿಸಿದ್ದರು. ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿಕೊಂಡಿದ್ದರು.
ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್ ಹೇಳಿದ ರಣವೀರ್ ಸಿಂಗ್