ನೂರಾರು ಕೋಟಿ ಆಸ್ತಿ ಇದ್ದರೂ ಕಾರಿಲ್ಲದ ರಾಜಕಾರಣಿಗಳಿವರು!

By Kannadaprabha News  |  First Published May 17, 2024, 2:11 PM IST

ದೇಶದಲ್ಲಿ ಈಗಾಗಲೇ ನಾಲ್ಕು ಹಂತದ ಮತದಾನ ನಡೆದಿದ್ದು, ಸಾವಿರಾರು ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಶೇಷ ಮತ್ತು ವಿಚಿತ್ರವೆಂದರೆ ಹೀಗೆ ಕಣಕ್ಕೆ ಇಳಿದವರ ಪೈಕಿ ನೂರಾರು ಕೋಟಿ ರು. ಆಸ್ತಿ ಹೊಂದಿದ್ದರೂ ತಮ್ಮ ಬಳಿ ಒಂದೂ ಕಾರಿಲ್ಲ ಎಂದು ರಾಜಕೀಯ ನಾಯಕರು ಘೋಷಿಸಿಕೊಂಡಿದ್ದಾರೆ.


 ನವದೆಹಲಿ (ಮೇ.17): ದೇಶದಲ್ಲಿ ಈಗಾಗಲೇ ನಾಲ್ಕು ಹಂತದ ಮತದಾನ ನಡೆದಿದ್ದು, ಸಾವಿರಾರು ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಶೇಷ ಮತ್ತು ವಿಚಿತ್ರವೆಂದರೆ ಹೀಗೆ ಕಣಕ್ಕೆ ಇಳಿದವರ ಪೈಕಿ ನೂರಾರು ಕೋಟಿ ರು. ಆಸ್ತಿ ಹೊಂದಿದ್ದರೂ ತಮ್ಮ ಬಳಿ ಒಂದೂ ಕಾರಿಲ್ಲ ಎಂದು ರಾಜಕೀಯ ನಾಯಕರು ಘೋಷಿಸಿಕೊಂಡಿದ್ದಾರೆ.

ಇನ್ನು ಪ್ರಧಾನಿ ಮೋದಿಯಾಗಿ ಹಲವರು ತಮ್ಮ ಬಳಿ ಮನೆ ಕೂಡಾ ಇಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

Latest Videos

undefined

ಕಾರಿಲ್ಲದವರ ಕಾರಬಾರು:  ಪ್ರಧಾನಿ ನರೇಂದ್ರ ಮೋದಿ 3 ಕೋಟಿ ರು. ಆಸ್ತಿ ಹೊಂದಿದ್ದರೂ, ಭೂಮಿ, ಮನೆ ಹಾಗೂ ಕಾರು ಇಲ್ಲ. ಇನ್ನು ಮೋದಿ ಅವರ ಸಹವರ್ತಿ ಕೇಂದ್ರ ಸಚಿವ ಅಮಿತ್‌ ಶಾ ಸಹ 70 ಕೋಟಿ ಒಡೆಯರಾಗಿದ್ದರೂ ಕಾರಿಲ್ಲ. ರಾಜನಾಥ್‌ ಸಿಂಗ್‌ ಅವರ ಬಳಿ 6.36 ಕೋಟಿ ಆಸ್ತಿ ಇದ್ದು, ಇವರು ಕಾರು ಹೊಂದಿಲ್ಲ. ಆದರೆ ಡಬಲ್‌ ಬ್ಯಾರೆಲ್‌ ಗನ್‌ ಹೊಂದಿದ್ದಾರೆ. 

ನಾನು ವಂಚನೆ ಮಾಡಿದ್ದರೆ ನೇಣಿಗೇರಿಸಿ: ಕಾಂಗ್ರೆಸ್ ಆರೋಪಕ್ಕೆ ಮೋದಿ ತಿರುಗೇಟು!

ಇನ್ನು ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಸಹ 20 ಕೋಟಿ ರು. ಆಸ್ತಿ ಹೊಂದಿದ್ದರೂ, ಕಾರು ಹೊಂದಿಲ್ಲ. ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್ ಹಾಗೂ ಅವರ ಪತ್ನಿ ಸಂಸದೆ ಡಿಂಪಲ್‌ ಯಾದವ್‌ ಇಬ್ಬರೂ 41.34 ಕೋಟಿ ರು ಆಸ್ತಿ ಒಡೆಯರಾಗಿದ್ದರೂ, ಇಬ್ಬರ ಬಳಿಯೂ ಕಾರಿಲ್ಲ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರಸ್ವಾಮಿ, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಹರ್ಯಾಣ ಮಾಜಿ ಸಿಎಂ ಮನೋಹರ್‌ ಲಾಲ್‌ ಕಟ್ಟರ್‌ ಬಳಿಯೂ ಕಾರು ಇಲ್ಲ. ಇನ್ನು ಹೈದರಾಬಾದ್‌ನಲ್ಲಿ ಭಾರಿ ಸುದ್ದಿಯಲ್ಲಿರುವ ಸಂಸದ ಅಸಾದುದ್ದೀನ್ ಓವೈಸಿ ಹಾಗೂ ಇವರ ಎದುರಾಳಿ 220 ಕೋಟಿ ಆಸ್ತಿ ಒಡತಿ ಮಾಧವಿ ಲತಾ ಬಳಿಯೂ ಕಾರುಗಳಿಲ್ಲ. ಎನ್‌ಸಿಪಿ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ 166.6 ಕೋಟಿ ಆಸ್ತಿ ಹೊಂದಿದ್ದರೂ, ಕಾರು ಮಾಲೀಕರಲ್ಲ.

ದೇಶ ನಡೆಸೋದು ಮಕ್ಕಳಾಟ ಅಲ್ಲ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಕಾರಿಲ್ಲದ ಪ್ರಮಖರು

ಮೋದಿ, ರಾಹುಲ್‌, ಅಮಿತ್‌ ಶಾ, ರಾಜ್‌ನಾಥ್‌, ಒವೈಸಿ, ಮಾಧವಿ ಲತಾ, ಅಖಿಲೇಶ್‌ ಯಾದವ್‌, ಶಿವರಾಜ್‌ ಸಿಂಗ್‌ ಚೌಹಾಣ್‌, ಮನೋಹರ್‌ ಲಾಲ್‌ ಖಟ್ಟರ್‌, ಸುಪ್ರಿಯಾ ಸುಳೆ 

click me!