
ಅನಾರೋಗ್ಯಕ್ಕೆ ಒಳಗಾದಾಗ ಸಾಮಾನ್ಯವಾಗಿ ಎಲ್ಲರೂ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೇವೆ. ಗಂಭೀರ ಪರಿಸ್ಥಿತಿಗಳ ಸಂದರ್ಭದಲ್ಲಿ, ವೈದ್ಯರು ನೀಡುವ ಎಲ್ಲಾ ಸಲಹೆಗಳನ್ನು ನಾವು ಯಾವಾಗಲೂ ಅನುಸರಿಸಲು ಪ್ರಯತ್ನಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ, ಕೆಲವರು ವೈದ್ಯರಿಗಿಂತ ಸಾಮಾಜಿಕ ಗೂಗಲ್ ಸಜೆಶನ್ಸ್‌ನ್ನು ಹೆಚ್ಚು ನಂಬುತ್ತಾರೆ. ಕಾಯಿಲೆಯ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಲಭ್ಯವಿದ್ದರೂ ಇದು ಎಷ್ಟರಮಟ್ಟಿಗೆ ನಂಬಲರ್ಹವಾಗಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿಯೇ ಗೂಗಲ್ ಮಾತನ್ನು ನಿಜವೆಂದು ನಂಬಿ ಚಿಕಿತ್ಸೆ ಪಡೆದುಕೊಂಡ ಅದೆಷ್ಟೋ ಮಂದಿ ತೊಂದರೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ಅಂಥಹದ್ದೇ ಒಂದು ಘಟನೆ ಲಂಡನ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಯುನೈಟೆಡ್ ಕಿಂಗ್‌ಡಮ್‌ನ ಐರಿನಾ ಸ್ಟೊಯ್ನೋವಾ ಎಂಬ ಮಹಿಳೆ ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 39 ವರ್ಷದ ಮಹಿಳೆಗೆ 2021ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅಂತರ್ಜಾಲದಲ್ಲಿ ವೈರಲ್ ವೀಡಿಯೊದಲ್ಲಿ, ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಅವರು ನೋಡಿದ್ದಾರೆ.
ಎಚ್ಚರ..ದೇಹದಲ್ಲಿ ವಿಟಮಿನ್ ಡಿ ಕೊರತೆಯಾದ್ರೆ ಕ್ಯಾನ್ಸರ್ ಅಪಾಯ ಹೆಚ್ಚು
ಹೀಗಾಗಿ ಐರಿನಾ ಕ್ಯಾರೆಟ್ ಜ್ಯೂಸ್ ಡಯಟ್‌ನ್ನು ಪ್ರಾರಂಭಿಸಿದರು. ವಿವಿಧ ತರಕಾರಿಗಳು ಮತ್ತು ಹಣ್ಣುಗಳ ರಸವನ್ನು ಸೇವಿಸುತ್ತಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದು ಅನಾಹುತಕ್ಕೆ ಕಾರಣವಾಗಿದೆ. ಮಹಿಳೆ ವೀಡಿಯೋದಲ್ಲಿ ನೋಡಿದ ಬಳಿಕ ಪ್ರತಿ ದಿನ ಸುಮಾರು 13 ಕಪ್‌ಗಳಷ್ಟು ಕ್ಯಾರೆಟ್ ಜ್ಯೂಸ್ ಕುಡಿದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದರಿಂದ ಕ್ಯಾನ್ಸರ್ ಗುಣವಾಗುವ ಬದಲು ಆಕೆಯ ಆರೋಗ್ಯ ಹದಗೆಟ್ಟಿದೆ.
ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್‌ನ್ನು ಗುಣಪಡಿಸುತ್ತದೆ ಎಂದು ನಂಬಿದ ಮಹಿಳೆ ಆಹಾರವನ್ನು ತ್ಯಜಿಸಿ ಬರೀ ಕ್ಯಾರೆಟ್ ಜ್ಯೂಸ್ ಅಷ್ಟೇ ಕುಡಿಯುತ್ತಿದ್ದರು. ಕೀಮೋಥೆರಪಿಯನ್ನು ಸಹ ನಿರ್ಲಕ್ಷಿಸಿದರು.. ಆದರೆ ಕೊನೆಗೆ ಆಕೆ ಬಲಹೀನಳಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಷ್ಟೊತ್ತಿಗಾಗಲೇ ಆಕೆಯ ಹೊಟ್ಟೆಯ ಕೆಳಭಾಗ, ಕಾಲುಗಳು ಮತ್ತು ಶ್ವಾಸಕೋಶಗಳು ದ್ರವದಿಂದ ತುಂಬಿದ್ದವು.ಆಕೆಯ ದೇಹದಾದ್ಯಂತ ಗಡ್ಡೆಗಳಿದ್ದವು.
ಭಾರತ ಸದ್ಯದಲ್ಲೇ ಆಗಲಿದೆ 'ಕ್ಯಾನ್ಸರ್ ರಾಜಧಾನಿ': ಇಲ್ಲಿದೆ ಕಾರಣ!
ತನ್ನ ಅನುಭವದ ಬಗ್ಗೆ ಮಾತನಾಡುತ್ತಾ ಐರಿನಾ, 'ನನ್ನ ಶ್ವಾಸಕೋಶದಲ್ಲಿ ದ್ರವವಿದ್ದ ಕಾರಣ ನಾನು ಉಸಿರಾಡಲು ಸಾಧ್ಯವಾಗಲಿಲ್ಲ, ಈ ಆಹಾರಕ್ರಮದಿಂದಾಗಿ ನಾನು ಸುಮಾರು 20 ಕಿಲೋಗ್ರಾಂಗಳಷ್ಟು ಕಳೆದುಕೊಂಡೆ' ಎಂದು ಹೇಳಿದರು. ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ, ಫ್ರಿಮ್ಲಿ ಹೆಲ್ತ್ ಎನ್‌ಎಚ್‌ಎಸ್ ಫೌಂಡೇಶನ್‌ನ ಸಲಹೆಗಾರ ಹೆಮಟಾಲಜಿಸ್ಟ್ ಡಾ ಕ್ಲೇರ್ ರೀಸ್ ತಕ್ಷಣವೇ ಅವರ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಮಹಿಳೆಯ ಆರೋಗ್ಯ ಈಗ ಚೇತರಿಕೆಯ ಹಂತದಲ್ಲಿದೆ ಎಂದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.