ಅಚ್ಚರಿ ಎಂಬಂತೆ, ನಟ ಉಪೇಂದ್ರ ನಟನೆಯ 'ಎ' ಚಿತ್ರದ ಕ್ರೇಜ್ ಅನಿರೀಕ್ಷಿತ ಸಂದರ್ಭ ಸೃಷ್ಟಿಮಾಡಿತ್ತು. ಬಿಡುಗಡೆಯಾಗಿದ್ದ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಚಿತ್ರವು ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಮಾತ್ರವಲ್ಲ..
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಎ' ಚಿತ್ರವು ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳು ಕಳೆದಿವೆ. ಅಂದು ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದ ಎ (A) ಚಿತ್ರವು ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಷ್ಟರವರೆಗೂ ನಿರ್ದೇಶಕರಾಗಿದ್ದ ಉಪೇಂದ್ರ ಅವರು ಮೊದಲ ಬಾರಿಗೆ ಹೀರೋ ಕೂಡ ಆಗಿ ಎ ಚಿತ್ರದ ಮೂಲಕ ಭಾರೀ ಸಕ್ಸಸ್ ಕಂಡಿದ್ದರು. ಚಾಂದನಿ ನಾಯಕಿಯಾಗಿದ್ದ ಎ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಅಕ್ಷರಶಃ ಸೂಪರ್ ಹಿಟ್ ದಾಖಲಿಸಿತ್ತು.
ಅಚ್ಚರಿ ಎಂಬಂತೆ, ನಟ ಉಪೇಂದ್ರ ನಟನೆಯ 'ಎ' ಚಿತ್ರದ ಕ್ರೇಜ್ ಅನಿರೀಕ್ಷಿತ ಸಂದರ್ಭ ಸೃಷ್ಟಿಮಾಡಿತ್ತು. ಬಿಡುಗಡೆಯಾಗಿದ್ದ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಚಿತ್ರವು ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಮಾತ್ರವಲ್ಲ, ಕನ್ನಡ ಚಿತ್ರಗಳು ಓಡದಿದ್ದ ಥಿಯೇಟರ್‌ಗಳಲ್ಲಿ ಸಹ ಉಪೇಂದ್ರ ನಟನೆ ಹಾಗೂ ನಿರ್ದೇಶನದ ಎ ಚಿತ್ರವು ಭಾರೀ ಕ್ರೇಜ್ ಸೃಷ್ಟಿಸಿ ದಾಖಲೆ ಕಲೆಕ್ಷನ್ ದಾಖಲಿಸಿ ಮುನ್ನುಗ್ಗುತ್ತಿತ್ತು. ಅಂಥ ಸಮಯದಲ್ಲಿ ನಡೆದ ಒಂದು ಘಟನೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.
ಬಾಲಿವುಡ್ ನಲ್ಲಿ ಕೋಮಲ್ ಜಾ ಬಿರುಗಾಳಿ ಶುರು; ಬೇರೆ ಭಾಷೆಯ ಮೇಲೂ ಕಣ್ಣು!
ನಟ ಉಪೇಂದ್ರ ಅವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಸಮೀಪ ಇರುವ 'ಕಾವೇರಿ' ಥಿಯೇಟರ್‌ನಲ್ಲಿ ಅಂದು ನಡೆದಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರಾಗಿದ್ದ ಉಪೇಂದ್ರ ಮೊದಲ ಬಾರಿಗೆ ನಾಯಕರಾಗಿ ನಟಿಸಿದ್ದ ಎ ಚಿತ್ರವು ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು. ಬೆಂಗಳೂರಿನ ಕಾವೇರಿ ಥಿಯೇಟರ್ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು. ಆ ವೇಳೆ ಚಿತ್ರದ ನಿರ್ಮಾಪಕರ ಕೋರಿಕೆ ಮೇರೆಗೆ ನಟ ಉಪೇಂದ್ರ ಥಿಯೇಟರ್ ವಿಸಿಟ್‌ಗೆ ಹೋಗಿದ್ದರು.
ರಾಕಿಂಗ್ ಸ್ಟಾರ್ ಯಶ್: ಮೊದಲು ನಿಮಗೆ ನೀವೇ ಹಾಕಿಕೊಂಡಿರುವ ಬೇಲಿ ದಾಟಿ ಹೊರಗೆ ಬನ್ನಿ!
ನಟ ಉಪೇಂದ್ರ ಅಲ್ಲಿ ಹೋಗಿದ್ದೇ ತಡ, ಚಿತ್ರಮಂದಿರದ ಹೊರಗಡೆ ಇದ್ದ ಜನಜಾತ್ರೆಯಲ್ಲಿ ಕೆಲವರು ಹೀರೋ ಉಪೇಂದ್ರ ಬಂದಿದ್ದಾರೆ ಎಂಬ ಸಂಗತಿಯನ್ನು ಅದು ಹೇಗೋ ಥಿಯೇಟರ್ ಒಳಗೆ ಹೋಗಿ ಹೇಳಿದ್ದಾರೆ. ಉಪೇಂದ್ರ ಹೊರಗೆ ಇದ್ದಾರೆ ಎಂಬ ವಿಷಯ ತಿಳಿದಿದ್ದೇ ತಡ, ಚಿತ್ರಮಂದಿರದ ಒಳಗೆ ಇದ್ದ ಸಿನಿಪ್ರೇಕ್ಷಕರು ಹೊರಗೆ ಉಪೇಂದ್ರರನ್ನು ನೋಡಲು ಬಂದಿದ್ದಾರೆ. ಒಳಗೆ ಚಿತ್ರಮಂದಿರ ಖಾಲಿ, ಹೊರಗೆ ಜನಜಾತ್ರೆ ಸೇರಿದೆ. ನಟ-ನಿರ್ದೇಶಕ ಉಪೇಂದ್ರ ಕೈಕಾಲು ಅಲ್ಲಾಡಿಸಲೂ ಸಾಧ್ಯವಾಗದ ಪರಿಸ್ಥಿತಿ.
ಪ್ರೇಕ್ಷಕರು ಥಿಯೇಟರ್‌ಗೆ ಬಾರದಿರುವ ಸೀಕ್ರೆಟ್ ರಿವೀಲ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ!
ಚಿತ್ರಮಂದಿರದ ಮಾಲೀಕರಿಗಾಗಲೀ ಅಥವಾ ಉಪೇಂದ್ರ ಅಂಡ್ ಟೀಮ್‌ಗಾಗಲೀ ಅಲ್ಲಿನ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲೇ ಇಲ್ಲ. ಪೊಲೀಸರನ್ನು ಕರೆಸಲಾಯಿತು. ಆದರೆ, ಅಲ್ಲಿನ ಜನಜಾತ್ರೆಯನ್ನು ಚದುರಿಸಲು ಅವರಿಗೂ ಕೂಡ ತುಂಬಾ ಕಷ್ಟವಾಗುತ್ತಿತ್ತು. ನಟ ಉಪೇಂದ್ರ ಅಲ್ಲಿಂದ ಜಾಗ ಖಾಲಿ ಮಾಡುವುದಿರಲಿ, ಸ್ವಲ್ಪ ದೂರ ಕದಲಲೂ ಅಸಾಧ್ಯವಾಗಿತ್ತು. ತುಂಬಾ ಹೊತ್ತು ಅದೇ ಪರಿಸ್ಥಿತಿ ಇದ್ದು, ಬಳಿಕ ಅದು ಕಂಟ್ರೋಲ್‌ಗೆ ಬಂದಿತ್ತು.
ಲೈಫ್‌ನಲ್ಲಿ ಯಾವುದು ತುಂಬಾ ಮುಖ್ಯ ಎಂಬ ಸೀಕ್ರೆಟ್ ಹೇಳಿದ ಅಲ್ಲು ಅರ್ಜುನ್!
ಅಂದಿನ ಪರಿಸ್ಥಿತಿಯನ್ನು, ಎ ಸಿನಿಮಾ ಹುಟ್ಟಿಸಿದ್ದ ಕ್ರೇಜ್‌ಅನ್ನು ನಟ ಉಪೇಂದ್ರ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಒಂಥರಾ ಗತವೈಭವ ಎನ್ನಬೇಕು. ಇಪ್ಪತೈದು ವರುಷಗಳ ಹಿಂದೆ ನಡೆದಿದ್ದ ಆ ಘಟನೆ ಇಂದಿಗೂ ಕೂಡ ನನ್ನ ಕಣ್ಣಿಗೆ ಕಟ್ಟುವಂತಿದೆ ಎಂದಿದ್ದಾರೆ ನಟ-ನಿರ್ದೇಶಕ ಉಪೇಂದ್ರ.