ನಾಟಕ ಬಿಟ್ಟರೆ ಡಾನ್ಸ್ ಇಷ್ಟ. ಮಂಗಳೂರಿನಲ್ಲಿ ಯಾವುದೇ ಸಮಾರಂಭ ಇರಲಿ, ನನ್ನದೊಂದು ಡಾನ್ಸ್ ಇರುತ್ತಿತ್ತು. ಹೆಚ್ಚಾಗಿ ನಿಂಬುಡ ನಿಂಬುಡ, ರಂಗೀಲಾ ಮಾರೊಡು ಹಾಡಿಗೆ ನೃತ್ಯ ಮಾಡುತ್ತಿದ್ದೆ. ಎಲ್ಲಿ ಡಾನ್ಸ್ ಮಾಡಿದರೂ ಆವಗೆಲ್ಲ ತಟ್ಟೆ, ಚಮಚ, ಸೌಟು, ಲೋಟ ಸಿಗುತ್ತಿತ್ತು. ನನ್ನ ಬಳಿ ತುಂಬಾ ಸರ್ಟಿಫಿಕೆಟ್ ಇದೆ. ಡಾನ್ಸ್ ಎಂದರೆ ಅಷ್ಟು ಹುಚ್ಚು, ಒಂದು ಡ್ರೆಸ್ ಇರುತ್ತಿತ್ತು. ಇಡೀ ವರ್ಷ ಅದನ್ನೇ ಡ್ಯಾನ್ಸ್ ಮಾಡಲು ಹಾಕುತ್ತಿದ್ದೆ. ನನಗೆ ಡಾನ್ಸ್ ಕಲಿಯಬೇಕೆಂದು ಬಹಳ ಆಸೆ ಇತ್ತು. ಆದರೆ ಆರ್ಥಿಕವಾಗಿ ಸಮಸ್ಯೆ ಇದ್ದುದರಿಂದ ಆಗಲಿಲ್ಲ. ಫ್ರೀ ಡಾನ್ಸ್ ಕ್ಲಾಸ್ ಚಿಲಿಂಬಿಯಲ್ಲಿ ಒಬ್ಬರು ಕೊಡುತ್ತಿದ್ದರು. ಕೊಡಿಕಲ್‌ನಿಂದ ಅಲ್ಲಿಗೆ ಹೋಗುತ್ತಿದ್ದೆ.