ನಾಯಿ ಜೊತೆ ತಮಾಷೆ ಮಾಡಲು ಹೋಗಿ ಸರಿಯಾಗಿ ಕಚ್ಚಿಸಿಕೊಂಡ ಯೂಟ್ಯೂಬರ್: ವೀಡಿಯೋ ವೈರಲ್

By Anusha Kb  |  First Published May 17, 2024, 1:52 PM IST

ತನ್ನ ಕಾಮಿಡಿ ಹಾಗೂ ತಮಾಷೆಯ ವೀಡಿಯೋಗಳಿಂದ ಫೇಮಸ್ ಆಗಿರುವ ಯೂಟ್ಯೂಬರ್ ಒಬ್ಬರು ಇತ್ತೀಚೆಗೆ ತಮಾಷೆ ಮಾಡಲು ಹೋಗಿ ನಾಯಿಯಿಂದ ತಮ್ಮ ಮೂಗಿಗೆ ಕಚ್ಚಿಸಿಕೊಂಡಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ತನ್ನ ಕಾಮಿಡಿ ಹಾಗೂ ತಮಾಷೆಯ ವೀಡಿಯೋಗಳಿಂದ ಫೇಮಸ್ ಆಗಿರುವ ಯೂಟ್ಯೂಬರ್ ಒಬ್ಬರು ಇತ್ತೀಚೆಗೆ ತಮಾಷೆ ಮಾಡಲು ಹೋಗಿ ನಾಯಿಯಿಂದ ತಮ್ಮ ಮೂಗಿಗೆ ಕಚ್ಚಿಸಿಕೊಂಡಿದ್ದಾರೆ, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ತರಹೇವಾರಿ ಕಾಮೆಂಟ್ ಮಾಡಿದ್ದು, ಈ ಕಾಮೆಂಟ್‌ಗಳು ಕೂಡ ನಗು ಉಕ್ಕಿಸುತ್ತಿವೆ. ಐಶೋಸ್ಪೀಡ್ ಎಂಬ ಯೂಟ್ಯೂಬ್‌ ಚಾನೆಲ್‌ನಿಂದಲೇ ಫೇಮಸ್ ಆಗಿರುವ ಅಮೆರಿಕಾ ಮೂಲದ ಕಂಟೆಂಟ್ ಕ್ರಿಯೇಟರ್ ಡ್ಯಾರೆನ್ ವಾಟ್ಕಿನ್ಸ್‌  ಎಂಬುವವರೇ ಹೀಗೆ ತಮಾಷೆ ಮಾಡಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡ ಯುಟ್ಯೂಬರ್. 

ಪ್ರಪಂಚ ಸುತ್ತುವ ಈ ಯೂಟ್ಯೂಬರ್ ದಕ್ಷಿಣ ಕೊರಿಯಾದ ಬೀದಿಯೊಂದರಲ್ಲಿ ತಮ್ಮ ಯೂಟ್ಯೂಬ್ ವೀಡಿಯೋ ಮಾಡುತ್ತಿದ್ದು, ಈ ವೇಳೆ ಅಲ್ಲಿ ನಿಂತು ಇವರನ್ನು ಗಮನಿಸುತ್ತಿದ್ದ ಮಹಿಳೆಯೊಬ್ಬರ ಶ್ವಾನವನ್ನು ಕೆಣಕುವ ಯತ್ನ ಮಾಡಿದ್ದಾರೆ. ನಾಯಿಯಂತೆ ಜೋರಾಗಿ ಹೌ ಹೌ ಎನ್ನುತ್ತಾ ನಾಯಿಯ ಮುಖದ ಬಳಿ ತನ್ನ ಮುಖವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಈತನ ವಿಚಿತ್ರ ಕಾಮಿಡಿ ನಾಯಿಗೆ ಮಾತ್ರ ಇಷ್ಟವಾಗಿಲ್ಲ, ತನ್ನ ಬಳಿ ಹೀಗೆ ಜೋರಾಗಿ ಹೌ ಹೌ ಎನ್ನುತ್ತಾ ಬೊಬ್ಬೆ ಹೊಡೆಯುತ್ತ ಬಂದ ಇವನನ್ನು ನೋಡಿ ವಿಚಲಿತಗೊಂಡ ನಾಯಿ ಇವನ ಮೂಗಿಗೆ ಬಾಯಿ ಹಾಕಿದೆ. ಇದರಿಂದ ಆತನ ಮೂಗಿಗೆ ಗಾಯವಾಗಿದ್ದು, ಮೂಗನ್ನು ಹಿಡಿದುಕೊಂಡು ಆತ ಅತ್ತಿತ್ತ ಹೋಗುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಒಟ್ಟಿನಲ್ಲಿ ಜನರ ನಗಿಸಲು ಹೋಗಿ ಆತ ನಾಯಿಯಿಂದ ಕಚ್ಚಿಸಿಕೊಂಡಿದ್ದಾನೆ. 

Tap to resize

Latest Videos

undefined

ಮನೆಗೆ ನುಗ್ಗಿ 5 ತಿಂಗಳ ಮಗು ಕೊಂದು ತಿಂದ ಬೀದಿ ನಾಯಿ: ಜನರಿಂದ ನಾಯಿಯ ಹತ್ಯೆ

ಆದರೆ ಈ ವೀಡಿಯೋ ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ 14 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವೀಡಿಯೋವನ್ನು ಕೇವಲ ಮೂರು ದಿನದಲ್ಲಿ 48 ಲಕ್ಷ ಜನ ವೀಕ್ಷಿಸಿದ್ದಾರೆ.  ಕೆಲ ವರದಿಯ ಪ್ರಕಾರ, ನಾಯಿ ಕಚ್ಚಿದ್ದರಿಂದ ಮೊದಲಿಗೆ ಗಂಭೀರವಾದ ಹಾನಿಯಾಗಿಲ್ಲ ಎಂದು ಕಂಡು ಬಂದರೂ ನಂತರದಲ್ಲಿ  ಯೂಟ್ಯೂಬರ್‌ ಮೂಗಿನಿಂದ ರಕ್ತ ಬರಲು ಶುರುವಾಗಿದೆ. ನೋವಿನ ಮಧ್ಯೆಯೂ ಆತ ಮೂಗನ್ನು ಹಿಡಿದು ಜನರ ನಗಿಸುವುದಕ್ಕೆ ಮುಂದಾಗಿದ್ದಾನೆ. ಅಲ್ಲದೇ ತಮಾಷೆಯಾಗಿ ಶ್ವಾನದ ಮಾಲೀಕನ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದಾನೆ. ನಂತರ ನಾಯಿಯ ಹತ್ತಿರ ಹೋಗಿದ್ದು, ತನ್ನ ತಪ್ಪು ಎಂದು ಆತ ಹೇಳಿಕೊಂಡಿದ್ದಾನೆ.  

ಬೇರೆಯವರ ಸಾಕು ನಾಯಿಯಿಂದ ಲಿಫ್ಟ್‌ನಲ್ಲಿ ಬಾಲಕಿ ಮೇಲೆ ದಾಳಿ : ವೀಡಿಯೋ ವೈರಲ್

ಆದರೆ ಅನೇಕರು ಈ ವೀಡಿಯೋಗೆ ತಮಾಷೆಯ ಕಾಮೆಂಟ್ ಮಾಡಿದ್ದು, ಇದು ಯೂಟ್ಯೂಬರ್‌ನದ್ದೇ ತಪ್ಪು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಪ್ರಭಾವಿಗಳು ತಮ್ಮ ಗಡಿಯನ್ನು ಮೀರಬಾರದು ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ನಾಯಿ ಫಿಟ್ಬುಲ್‌ ಆಗಿರದೇ ಇದ್ದಿದ್ದೇ ಬೇಸರದ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ.

 

 

click me!