ಅರೆರೆ... ಮಹೇಶ್‌ ಬಾಬು ಮೂಗಿಗೇನಾಯ್ತು! ಸೋಶಿಯಲ್ ಮೀಡಿಯಾದಲ್ಲಿ ಅದೇ ಚರ್ಚೆ!

May 18, 2022, 11:14 PM IST

ನಟ ಮಹೇಶ್ ಬಾಬು (Mahesh Babu), ಕೀರ್ತಿ ಸುರೇಶ್ ( Keerthy Suresh) ನಟನೆಯ ಬಹು ನಿರೀಕ್ಷಿತ 'ಸರ್ಕಾರು ವಾರಿ ಪಾಟ' (Sarkaru Vaari Paata) ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಮಹೇಶ್‌ ಬಾಬು ಮೂಗಿನ (Nose) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆಯಾಗುತ್ತಿದೆ. ಹೌದು! ಮಹೇಶ್‌ ಬಾಬು ಅವರ ಮೂಗು ದೊಡ್ಡದಾಗಿ ಕಾಣ್ತಾ ಇದೆ. ಸರ್ಜರಿ ಏನಾದ್ರೂ ಮಾಡಿಸ್ಕೊಂಡ್ರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು (Fans) ಚರ್ಚೆ ಮಾಡುತ್ತಿದ್ದಾರೆ. ವಿಷಯ ಏನಪ್ಪಾ ಅಂದ್ರೆ ಮಹೇಶ್ ಬಾಬು ಮೂಗಿಗೆ ಯಾವುದೇ ರೀತಿಯ ಸರ್ಜರಿಯನ್ನು ಮಾಡಿಸಿಲ್ಲವಂತೆ. 

Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

'ಸರ್ಕಾರು ವಾರಿ ಪಾಟ' ಚಿತ್ರಕ್ಕಾಗಿ ಮಹೇಶ್ ಬಾಬು ದೇಹ ದಂಡನೆ ಮಾಡಿ ಸಣ್ಣಗಾಗಿದ್ದರಿಂದ ಅವರ ಮುಖದಲ್ಲಿ ಮೂಗು ದೊಡ್ಡದಾಗಿ ಕಾಣುತ್ತಿದೆ ಅಷ್ಟೇಯಂತೆ. ಇನ್ನು 'ಸರ್ಕಾರು ವಾರಿ ಪಾಟ' ಚಿತ್ರಕ್ಕೆ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ಎಸ್ ತಮನ್ ಈ ಚಿತ್ರಕ್ಕೆ ಕ್ಯಾಮರಾ ಕೆಲಸ ಮಾಡಿದ್ದಾರೆ. ಮೆಲ್‌ಬೋರ್ನ್‌ನ ಫೈನಾನ್ಶಿಯರ್ ಹಾಗೂ ರಾಜೇಂದ್ರ ನಾಥ್ ನಡುವೆ ನಡೆಯುವ ಕಥೆ ಇದಾಗಿದೆ. ಫೈನಾನ್ಶಿಯರ್ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಕಲಾವತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕ, ಹೈದರಾಬಾದ್, ದುಬೈನಲ್ಲಿ ಈ ಸಿನಿಮಾ ಶೂಟಿಂಗ್ ನಡೆದಿದೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies