ಬೋಲ್ಡ್‌ ಲುಕ್ಕಲ್ಲಿ ಬಿಗ್‌ಬಾಸ್ ಭೂಮಿ ಶೆಟ್ಟಿ; ಏನು ಹೇಳಿದ್ದಾರೆ ಫ್ಯಾನ್ಸ್?

By Vaishnavi ChandrashekarFirst Published Jul 12, 2023, 11:22 AM IST
Highlights

ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ ಭೂಮಿ ಶೆಟ್ಟಿ ಹಾಟ್ ಲುಕ್ ಫೋಟೋ. ಕಾಮೆಂಟ್ ನೋಡಿ ಬೆಸರಗೊಂಡ ಅಭಿಮಾನಿಗಳು....

ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಸದಾ ಟ್ರಿಪ್, ಬೈಕ್ ರೈಡ್ ಮತ್ತು ಹಳ್ಳಿ ಸೊಬಗಿನ ಫೋಟೋಗಳನ್ನು ಹಾಕುತ್ತಿದ್ದ ಭೂಮಿ ಕೆಲವು ದಿನಗಳಿಂದ ಸಖತ್ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಇತ್ತೀಚಿಗೆ ವೈರಲ್ ಆಗುತ್ತಿರುವ ಫೋಟೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.

ಹೌದು! ಭೂಮಿ ಶೆಟ್ಟಿ  ಪಾರ್ಟಿ ಮಾಡುತ್ತಿರುವ ಫೋಟೋ ಒಂದು ಸಖತ್ ವೈರಲ್ ಆಗುತ್ತಿದೆ. ಕತ್ತಲೆಯಲ್ಲಿ ಕಪ್ಪು ಕನ್ನಡಕ ಧರಿಸಿ ಹೈ ಬನ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಬ್ರೌನ್ ಬಣ್ಣದ ಬ್ಲೌಸ್ ಟಾಪ್‌ಗೆ ಬ್ರೌನ್ ಬಣ್ಣದ ಒಳ ಉಡುಪು ಧರಿಸಿದ್ದಾರೆ ಇದಕ್ಕೆ ಸೂಟ್ ಆಗು ರೀತಿ ಕಲರ್ ಕಲರ್ ಸ್ಕರ್ಟ್ ಧರಿಸಿದ್ದಾರೆ. ಗೋವಾ ಸ್ಟೈಲ್ ರೀತಿ ಕಲರ್ ಕಲರ್ ಮಣಿಗಳಿರುವ ಬ್ರೇಸ್‌ ಲೆಟ್‌ ಕೂಡ ಧರಿಸಿದ್ದಾರೆ. ಈ ಫೋಟೋ ಹೈಲೈಟ್ ಏನೆಂದರೆ ಭೂಮಿ ಎದೆ ಮೇಳಿರುವ ಡ್ರ್ಯಾಗನ್ ಟ್ಯಾಟೂ, ಸಖತ್ ಡಿಫರೆಂಟ್ ಆಗಿದೆ ಹಾಗೂ ಬೋಲ್ಡ್‌ ಆಗಿದೆ. ಫೋಟೋ ನೋಡಲು ಮಸ್ತ್ ಆಗಿದ್ದರೂ ಭೂಮಿ ಮೇಲೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. 

Latest Videos

ಬೈಕ್‌ ರೈಡ್‌ ವೇಳೆ ಓವರ್‌ ಟೇಕ್ ಮಾಡಿದ ಗೂಡ್ಸ್‌ ಡ್ರೈವರ್‌; ಬಾತ್‌ರೂಮ್‌ ಸಿಗಲ್ಲ ಎಂದು ಗರಂ ಆದ ಬಿಗ್ ಬಾಸ್‌ ಭೂಮಿ ಶೆಟ್ಟಿ

'ಆಶಿಕಾ ಬಿಟ್ಟು ಇನ್ನೆಲ್ಲರು ಆಂಟಿಯರಾಗಿದ್ದಾರೆ, ಭೂಮಿ ಈ ರೀತಿ ಡ್ರೆಸ್ ಮಾಡಿಕೊಳ್ಳಬೇಡಿ ಪ್ಲೀಸ್, ಅಲ್ಲ ಗುರು ಇವುಗಳಿಗೆ ಎದೆ ಗೀಟು ಕಾಣದ ಹಾಗೆ ಡ್ರೆಸ್ ಹಕೋಕೆ ಬರಲ್ವಾ ಅಂತಹ ಡ್ರೆಸ್‌ ಡ್ರೆಸ್ಸೇ ಅಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಕಿನ್ನರಿ ಧಾರಾವಾಹಿ ನಂತರ ತೆಲುಗು ನಿನ್ನೆ ಪೆಲ್ಲಥ ಧಾರಾವಾಹಿಯಲ್ಲಿ ನಟಿಸಿದ್ದಾರೆ. 2019ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಸಿದ್ದಾರೆ. ಆನಂತರ ಮತ್ತೊಮ್ಮೆ ತೆಲುಗು ಅಕ್ಕ ಚೆಲ್ಲಲ್ಲು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಇಕ್ಕತ್‌ ಸಿನಿಮಾದಲ್ಲಿ ನಟಿಸಿದ್ದರು, ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಅಗಿತ್ತು. ಹೈದರಾಬಾದ್ ಟೈಮ್ಸ್‌ ಅವರ ಮೋಸ್ಟ್‌ ಡಿಸೈರಬಲ್‌ ಸ್ಮಾಲ್ ಸ್ಕ್ರೀನ್ ವುಮೆನ್ ಅವಾರ್ಡ್‌ನ 2018ರಲ್ಲಿ ಪಡೆದುಕೊಂಡರು. 

ಗೋಡಂಬಿ ಫ್ಯಾಕ್ಟರಿಯಲ್ಲಿ Bhoomi Shettyಗೆ ಕೆಲಸ; ಡೀ-ಗ್ಲಾಮ್ ಲುಕ್ಕಲ್ಲಿ ಕಿನ್ನರಿ ನಟಿ!

ಕನ್ನಡ ಮತ್ತು ತೆಲುಗು ಇಂಡಸ್ಟ್ರಿಯ ನಡುವಿನ ವ್ಯತ್ಯಾಸವನ್ನು ಹೇಗೆ ಕಾಣುತ್ತೀರಿ? ಎಂದು ಈ ಹಿಂದೆ ಕನ್ನಡ ಪ್ರಭ ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಗಿತ್ತು.'ನನಗೆ ಅಂಥ ವ್ಯತ್ಯಾಸವೇನೂ ಅನಿಸಿಲ್ಲ. ಕನ್ನಡದಲ್ಲಿ ನಾನು ಧಾರಾವಾಹಿ ಮಾಡುವಾಗ ಆನ್‌ ಸ್ಪಾಟಲ್ಲೇ ರೆಕಾರ್ಡ್ ಮಾಡಿರುತ್ತೇವೆ. ಆದರೆ ತೆಲುಗುವಲ್ಲಿ ಸಿನಿಮಾದಂತೆ ಚಿತ್ರೀಕರಣ ನಡೆದ ಬಳಿಕ ಡಬ್ ಮಾಡಲಾಗುತ್ತದೆ. ನಟನೆಯ ವಿಚಾರದಲ್ಲಿ ಭಾಷೆಯೊಂದನ್ನು ಬಿಟ್ಟರೆ ಅಂಥ ವ್ಯತ್ಯಾಸಗಳೇನೂ ಇಲ್ಲ. ನಾನು ತೆಲುಗು ಕಲಿತಿದ್ದೇನೆ. ಆದರೆ ನನ್ನ ಪಾತ್ರಕ್ಕೆ  ಬೇರೆ ಕಂಠದಾನ ಕಲಾವಿದೆ ಧ್ವನಿ ನೀಡುತ್ತಾರೆ. ಇನ್ನು ದೃಶ್ಯಗಳಿಗೆ ಸಂಬಂಧಿಸಿದಂತೆ ಸಂಸ್ಕೃತಿ, ರೀತಿ, ನೀತಿಗಳು ಬೇರೆಯಾಗಿರುತ್ತದೆ. ಕೆಲವೊಂದು ಹಬ್ಬ ಹರಿದಿನ, ಅಥವಾ ಕಾರ್ಯಕ್ರಮಗಳ ದೃಶ್ಯಗಳ ಚಿತ್ರೀಕರಣ ಇದ್ದಾಗ ಅಲ್ಲಿನ ಸಂಸ್ಕೃತಿಯ ವಿಭಿನ್ನತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹೊರತಾಗಿ, ಕಲಾವಿದೆಯಾಗಿ ಅಂಥ ವ್ಯತ್ಯಾಸವೇನೂ ಅನುಭವಿಸಿಲ್ಲ' ಎಂದು ಉತ್ತರಿಸಿದ್ದರು.  

click me!