ಬಿಗ್‌ ಬಾಸ್‌ ಕನ್ನಡ 11: ಸ್ವರ್ಗ-ನರಕದ ಮಧ್ಯೆ ಸ್ಪರ್ಧಿಗಳು!

Published : Sep 21, 2024, 09:33 PM IST
ಬಿಗ್‌ ಬಾಸ್‌ ಕನ್ನಡ 11: ಸ್ವರ್ಗ-ನರಕದ ಮಧ್ಯೆ ಸ್ಪರ್ಧಿಗಳು!

ಸಾರಾಂಶ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಸ್ವರ್ಗ-ನರಕದ ಝಲಕ್‌ ತೋರಿಸಲಾಗಿದೆ. ಈ ಬಾರಿ ಸ್ಪರ್ಧಿಗಳು ಹೇಗೆಲ್ಲಾ ಹೊಂದಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಬೆಂಗಳೂರು (ಸೆ. 21): ಮುಂದಿನ ಭಾನುವಾರದಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಅರಂಭವಾಗಲಿದೆ. ಇದರ ಬೆನ್ನಲ್ಲಿಯೇ ಕಿಚ್ಚ ಸುದೀಪ್‌ ಭೂಮಿಕೆಯಲ್ಲಿ ಕಲರ್ಸ್‌ ಕನ್ನಡ ರಿಯಾಲಿಟಿ ಶೋನ ಹೊಸ ಪ್ರೋಮೋವನ್ನು ಪೋಸ್ಟ್‌ ಮಾಡಿದೆ. ಸೆ. 29 ರಂದು ರಾತ್ರಿ 9.30ಕ್ಕೆ ಬಿಗ್‌ ಬಾಸ್‌ ಕನ್ನಡದ 1ನೇ ಆವೃತ್ತಿಯ ಆರಂಭೋತ್ಸವ ಸಮಾರಂಭ ನಡೆಯಲಿದೆ. ಇದರ ನಡುವೆ ಈ ಬಾರಿಯ ಕಾರ್ಯಕ್ರಮ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಈ ಬಾರಿ ಸ್ಪರ್ಧಿಗಳಾಗಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಕುತೂಹಲವಿದೆ. ದೊಡ್ಮನೆಗೆ ಯಾರೆಲ್ಲಾ ಹೋಗುತ್ತಾರೆ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ಶುರುವಾಗಿದೆ. ಇತ್ತೀಚೆಗೆ ಬಿಗ್‌ಬಾಸ್‌ನ ನಿರೂಪಕ ಯಾರಾಗುತ್ಥಾರೆ ಅನ್ನೋದರ ಬಗ್ಗೆ ಕಲರ್ಸ್‌ ಕನ್ನಡ ಸಸ್ಪೆನ್ಸ್‌ ಕ್ರಿಯೇಟ್‌ ಮಾಡಿದ್ದು, ಸುದೀಪ್‌ ಇಲ್ಲದೇ ಇದ್ದಲ್ಲಿ ಶೋ ನೋಡೋದಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದ ನಡುವೆಯೇ, ಈ ಬಾರಿಯೂ ಸುದೀಪ್‌ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ ಎನ್ನುವ ವಿಚಾರವನ್ನು ವಾಹಿನಿ ಬಹಿರಂಗ ಮಾಡಿತ್ತು. ಇದೀಗ ಹೊಸ ಪ್ರೋಮೋ ರಿಲೀಸ್‌ ಮಾಡಲಾಗಿದ್ದು, ಸ್ವರ್ಗ – ನರಕದಲ್ಲಿರುವ ಲೋಕವನ್ನು ತೋರಿಸುವ ಪ್ರೋಮೋದಲ್ಲಿ ಸಂತಸ ಪಡುವ ಜನ ಒಂದು ಕಡೆಯಾದರೆ ಇನ್ನೊಂದೆಡೆ ನರಕದಲ್ಲಿನ ಕಷ್ಟವನ್ನು ತೋರಿಸಲಾಗಿದೆ.

ಬೆಳಕು, ಸಂತೋಷ, ಸುಖ, ನೆಮ್ಮದಿ ಅನ್ನೋದು ಸ್ವರ್ಗವಾದರೆ, ಕತ್ತಲು, ನೋವು, ಕಷ್ಟ, ಹಿಂಸೆ... ನರಕ. ಸ್ವರ್ಗದಲ್ಲಿ ಇರಬೇಕಾದವರು ನರಕದಲ್ಲಿ ಇರಬೇಕಾಗಬಹುದು. ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬೇಕಾಗಬಹುದು. ಬೆನ್ನಿಗೆ ಚೂರಿ ಹಾಕ್ತಾರೆ ಅಂದುಕೊಳ್ಳುವವರು ಮುಂದೆ ಹೋಗಿ ನಿಮ್ಮ ಸ್ನೇಹಿತರಾಗಬಹುದು. ಸ್ನೇಹಿತರಾಗಿಯೇ ಇರ್ತಾರೆ ಅಂದುಕೊಂಡವರು ಮುಂದೆ ಹೋಗಿ ನಿಮಗೆ ವಿಲನ್‌ ಆಗಬಹುದು... ಎಂದು ಸುದೀಪ್‌ ಹೇಳುವ ಮಾತಿನೊಂದಿಗೆ ಬಿಗ್‌ ಬಾಸ್‌ ಹೊಸ ಪ್ರೋಮೋ ಬಂದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!