ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ ವಾಹಿನಿಯ ವೇದಿಕೆಯ ಮೇಲೆ ಅತಿಥಿಯಾಗಿ ಬಂದಿದ್ದ ನಟ ಉಪೇಂದ್ರ ಜೊತೆ ಹತ್ತಾರು ಸುಂದರಿಯರು ನೀನಲ್ಲ... ನೀನಲ್ಲ... ಹಾಡಿಗೆ ಡಾನ್ಸ್ ಮಾಡಿದ್ದಾರೆ ನೋಡಿ...
ಕಳೆದ 3-4 ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕನದ್ದೇ ಹವಾ. ಈಗ ಸ್ವಲ್ಪ ಇದರ ಹವಾ ಕಡಿಮೆಯಾಗಿದ್ದರೂ ಈ ಹಾಡಿಗೆ ರೀಲ್ಸ್ ಮಾಡುವವರಿಗೇನೂ ಕಮ್ಮಿ ಇಲ್ಲ. ಏನಿಲ್ಲ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ ಎಂದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರೀಲ್ಸ್ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು. ಇದೀಗ ಮತ್ತೆ 25 ವರ್ಷಗಳ ಬಳಿಕ ಹಲ್ಚಲ್ ಸೃಷ್ಟಿಸಿತು.
ಇದೀಗ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ವೇದಿಕೆ ಮೇಲೆ ನಿಜವಾದ ಕರಿಮಣಿ ಮಾಲಿಕ ಅಂದ್ರೆ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸೀರಿಯಲ್ ನಟ, ನಟಿಯರು ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಉಪೇಂದ್ರ ಅವರು ತಮ್ಮ ಎಂದಿನ ಐಕಾನಿಕ್ ಸ್ಟೈಲ್ನಲ್ಲಿ ನೀನಲ್ಲ ನೀನಲ್ಲ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದಕ್ಕೆ ಕಮೆಂಟ್ಸ್ ಸುರಿಮಳೆಯೇ ಆಗಿದೆ. ಇನ್ನು ಅನುಬಂಧ ಅವಾರ್ಡ್ ಎರಡು ದಿನಗಳವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಯಿತು. ಮೊದಲ ದಿನ 15-20 ಕೆಟಗರಿಗಳಲ್ಲಿ ಪ್ರಶಸ್ತಿ ನೀಡಿಯಾಗಿದೆ. ಅದರಲ್ಲಿ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಕೀರ್ತಿ ಪಡೆದುಕೊಂಡಿದ್ದಾರೆ. ಕೀರ್ತಿ ಎನ್ನುವ ಸ್ಟೈಲಿಶ್ ಮಾಡರ್ನ್ ಹುಡುಗಿಯ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ರಾವ್ (Tanvi Rao), ಕಳೆದ ವರ್ಷದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಕೀರ್ತಿ ಪಾತ್ರಕ್ಕೆ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದರು. ಇದೀಗ ನಟಿ ಮತ್ತೆ ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದು,ತಮ ಈ ಪ್ರಶಸ್ತಿ ಸಿಕ್ಕಿರೋದಕ್ಕಾಗಿ ನಟಿ ಸಂಭ್ರಮಿಸಿದ್ದಾರೆ.
undefined
ಆ್ಯಂಕರ್ ಅನುಪಮಾ ಗೌಡ ಮದ್ವೆಯಾಗದಿರೋದಕ್ಕೆ ಉಪೇಂದ್ರ ಕಾರಣ ಅಂತೆ! ಪತ್ನಿ ಎದುರೇ ರಿವೀಲ್
ಭಾಗ್ಯ ಮತ್ತು ತಾಂಡವ್ ನ ಸಂಸಾರದ ಕಥೆಯಾಗಿರುವ ಭಾಗ್ಯಲಕ್ಷ್ಮೀ ಧಾರಾವಾಹಿಗೆ (Bhagya Lakshmi serial) ಬೆಸ್ಟ್ ರೇಟೆಡ್ ಫಿಕ್ಷನ್ ಅವಾರ್ಡ್ಸ್ ಬಂದಿದೆ. ಈ ಬಾರಿಯ ಕಲರ್ಸ್ ಅನುಬಂಧದಲ್ಲಿ ಮನೆ ಮೆಚ್ಚಿದ ಅಳಿಯ ಅವಾರ್ಡ್ - ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ ಗೆ ದೊರೆತಿದೆ. ಇಷ್ಟವಿಲ್ಲದೇ ಮದುವೆಯಾದರೂ ವೈಷ್ಣವ್ ಉತ್ತಮ ಗಂಡ, ಮತ್ತು ಅಳಿಯನಾಗಿದ್ದ. ಜನ ಮೆಚ್ಚಿದ ಎಂಟರ್‌ಟೈನರ್ ಪುರುಷರ ವಿಭಾಗದ ಪ್ರಶಸ್ತಿಯನ್ನು ಬಿಗ್ ಬಾಸ್ ಕನ್ನಡ 10ರ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ (Karthik Mahesh) ಅವರು ಪಡೆದಿದ್ದಾರೆ. ಈ ಸಾಲಿನ ಮನೆ ಮೆಚ್ಚಿದ ಸೊಸೆ, ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯ ಭಾಗ್ಯಾ ಪಡೆದಿದ್ದಾರೆ. ಭಾಗ್ಯ ಅತ್ತೆಗೆ ತಕ್ಕಂತ ಸೊಸೆಯಾಗಿದ್ದು, ಅತ್ತೆ ಮೆಚ್ಚಿನ ಸೊಸೆಯೂ ಹೌದು, ಈಗ ಮನೆ ಮೆಚ್ಚಿದ ಸೊಸೆ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಫಿಕ್ಷನ್ ವಿಭಾಗದಲ್ಲಿ ಜನ ಮೆಚ್ಚಿದ ಹೊಸ ಪರಿಚಯ - ಕರಿಮಣಿ ಧಾರಾವಾಹಿಯ ಕರ್ಣ ಪಾಲಾಗಿದೆ. ಕರಿಮಣಿ ಮೂಲಕ ಈಗಷ್ಟೇ ನಟನೆಗೆ ಎಂಟ್ರಿ ಕೊಟ್ಟರು, ತಮ್ಮ ನಟನೆ, ಸ್ಟೈಲ್ ಮೂಲಕ ಇವರು ಮನೆಮಾತಾಗಿದ್ದಾರೆ.
ನಿನಗಾಗಿಯ (Ninagaagi seral) ಜೀವ ಅವರಿಗೆ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿ ಲಭಿಸಿದೆ. ತಾಯಿಯಿಲ್ಲದ ಕೃಷ್ಣಾಳನ್ನು ಪ್ರೀತಿಯಿಂದ ಸಾಕಿ ಸಲಹುವ ಮುದ್ದಿನ ಬೇಬಿಯಾಗಿ ಜೀವಾ ಅಂದ್ರೆ ರಿತ್ವಿಕ್ ಮಠದ್ ಅದ್ಭುತವಾಗಿ ನಟಿಸಿದ್ದಾರೆ. ಅನುಬಂಧ ಅವಾರ್ಡ್ಸ್ (Anubandha) ಮನೆ ಮೆಚ್ಚಿದ ಸಹೋದರ ಪ್ರಶಸ್ತಿಯನ್ನು ಕರಿಮಣಿ ಧಾರವಾಹಿಯ ಭರತ್ ಪಡೆದುಕೊಂಡಿದ್ದಾರೆ. ಅಣ್ಣ ಕರ್ಣನ ಎಲ್ಲಾ ಕೆಲಸದಲ್ಲೂ ನೆರವಾಗುತ್ತಾ, ಜೊತೆಯಾಗಿ ನಿಲ್ಲುವ ಕರ್ಣನ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಇನ್ನು ಜನಮೆಚ್ಚಿದ ಡಿಜಿಟಲ್ ಜೋಡಿ ಪ್ರಶಸ್ತಿಯನ್ನು ರಾಮಾಚಾರಿಯ ಚಾರು-ರಾಮಾಚಾರಿ ಜೋಡಿ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. 2024ನೇ ಸಾಲಿನ ಜನ ಮೆಚ್ಚಿದ ಮಂಥರೆ ಪಟ್ಟ ಎಲ್ಲರೂ ಊಹಿಸಿದಂತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೋಸ್ಟ್ ಡಿಸರ್ವಿಂಗ್ ನಟಿಯಾಗಿರುವ ಕಾವೇರಿ ಪಡೆದಿದ್ದಾರೆ.ಜನಮೆಚ್ಚಿದ ವಿದೂಷಕ ಪ್ರಶಸ್ತಿಯನ್ನು ನಿನಗಾಗಿ ಧಾರವಾಹಿಯ ಬಾಲ ಆಲಿಯಾಸ್ ಬಾಲ ಮಾಮ ಪಡೆದಿದ್ದಾರೆ. ತನ್ನ ಪಂಚಿಂಗ್ ಡೈಲಾಗ್ ಮೂಲಕ ನಟ ವೀಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಆಲಿಯಾಸ್ ತನ್ವಿ ರಾವ್ (Tanvi Rao) ಜನಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ, ಕಳೆದ ಬಾರಿಯೂ ಇವರು ಸ್ಟೈಲ್ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಮನೆ ಮೆಚ್ಚಿದ ಅಮ್ಮ ಪ್ರಶಸ್ತಿ ಇಬ್ಬರ ಪಾಲಾಗಿದ್ದು, ಶ್ರೀಗೌರಿ ಧಾರಾವಾಹಿಯ ಮಂಗಳಮ್ಮ ಹಾಗೂ ರಾಮಾಚಾರಿಯ ಅಮ್ಮ ಜಾನಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅನುಬಂಧ ವೇದಿಕೆ ಮೇಲೆ ಹತ್ತಾರು ಭಾಗ್ಯಲಕ್ಷ್ಮಿಯರು- 25 ವರ್ಷಗಳ ಜರ್ನಿ ನೆನೆದು ನಟಿ ಸುಷ್ಮಾ ಕಣ್ಣೀರು