ಆಕೆ ಬಿಟ್ಟು ಹೋದಾಗ ನನಗೆ 17 ವರ್ಷ, ಕಾರಣ ಇನ್ನೂ ಗೊತ್ತಿಲ್ಲ: ಬಿಗ್​ಬಾಸ್​ ವಿನಯ್​ ಗೌಡ ನೋವಿನ ನುಡಿ

By Suchethana D  |  First Published Sep 21, 2024, 1:04 PM IST

17ನೇ ವಯಸ್ಸಿನಲ್ಲಿಯೇ ತಮ್ಮ ಜೀವನದಲ್ಲಿ ಆಗಿರುವ ಆಘಾತಕಾರಿ ಘಟನೆಯೊಂದನ್ನು ಬಿಗ್​ಬಾಸ್​ ವಿನಯ್​ ಗೌಡ ಅವರು ರಾಜೇಶ್​ ಗೌಡ ಯೂಟ್ಯೂಬ್​ ಚಾನೆಲ್​ನಲ್ಲಿ ತೆರೆದಿಟ್ಟಿದ್ದಾರೆ. 
 


ಬಿಗ್​ಬಾಸ್​ನಲ್ಲಿ ಸದಾ ಜಗಳದಿಂದಲೇ ಫೇಮಸ್​ ಆಗಿರೋ  ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್​ ಆಗಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು.   ಮೂರನೆ ರನ್ನರ್​ ಅಪ್​ ಆಗಿ ಮಿಂಚಿದರು.  ಈಗ ಅವರಿಗೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ.  ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ  ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್​ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.  

 ಇದೀಗ ವಿನಯ್​ ಗೌಡ ಅವರು ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ. ಅದು ಅಪ್ಪ ಮತ್ತು ಅಮ್ಮ ಪ್ರತ್ಯೇಕವಾಗಿದ್ದ ವಿಷಯ. ವಿನಯ್​ ಗೌಡ ಅವರು ಎಲ್ಲಿಯೂ ತಮ್ಮ ಪರ್ಸನಲ್​ ಲೈಫ್​ ಬಗ್ಗೆ ಅಷ್ಟಾಗಿ ಹೇಳಿಕೊಂಡದ್ದು ಇದೆ. ಅದರಲ್ಲಿಯೂ ಅಪ್ಪ-ಅಮ್ಮ ಬೇರೆಯಾಗಿರುವ ವಿಷಯವನ್ನು ಅವರು ಪ್ರಸ್ತಾಪಿಸಿಲ್ಲ. ಇದೀಗ ಅವರು ಯೂಟ್ಯೂಬರ್​ ರಾಜೇಶ್​ ಗೌಡ ಅವರೊಂದಿರುವ ಸಂದರ್ಶನದಲ್ಲಿ ಕೆಲವೊಂದು ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. 'ಅಮ್ಮ ಹೌಸ್​ ವೈಫ್​ ಆಗಿದ್ದರು. ಅಪ್ಪ-ಅಮ್ಮನಿಗೆ ನಾನು ಒಬ್ಬನೇ ಮಗ.  ಬ್ರದರ್​, ಸಿಸ್ಟರ್​ ಯಾರೂ ಇಲ್ಲ. ನನ್ನ ಬಾಲ್ಯ ತುಂಬಾ ಚೆನ್ನಾಗಿಯೇ ನಡೆದಿತ್ತು.  ಏನು ಕೇಳಿದ್ರೂ ಇಲ್ಲಾ ಅಂತಿರಲಿಲ್ಲ. ಅಪ್ಪ ಅಂತೂ ಒಂದು ದಿನವೂ ಬೈದದ್ದೇ ಇಲ್ಲ. ಅಮ್ಮ ಸ್ವಲ್ಪ ಸ್ಟ್ರಿಕ್ಟ್​ ಆಗಿದ್ರು. ನನ್ನ ಓದು, ಬಿಹೇವಿಯರ್​ ಎಲ್ಲರದ ಬಗ್ಗೆ ಅವರಿಗೆ ತುಂಬಾ ಗಮನ ಇತ್ತು. ಎಲ್ಲ ಮಕ್ಕಳಂತೆಯೇ ನಾನು ಹೈಸ್ಕೂಲ್​ ವರೆಗೂ ಚೆನ್ನಾಗಿಯೇ ಇದ್ದೆ. ಆದರೆ ಕಾಲೇಜು ಮೆಟ್ಟಿಲು ಏರುತ್ತಿದ್ದಂತೆಯೇ ದೊಡ್ಡ ಆಘಾತಕಾರಿ ಘಟನೆ ನಡೆಯಿತು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ವಿನಯ್​ ಗೌಡ.

Latest Videos

ಸಿನಿಮಾದಲ್ಲಿ ಹೀರೋ ಆಗಲು ಇಷ್ಟವಿಲ್ಲ... ಆದ್ರೆ... ಬಿಗ್​ಬಾಸ್​ ವಿನಯ್​ ಗೌಡ್​ ಓಪನ್​ ಮಾತು...

ಅಪ್ಪ ಇಸ್ಕಾನ್​ ದೇವಾಲಯದ ಫೌಂಡರ್​ ಮೆಂಬರ್​ ಆಗಿದ್ದರು. ಅಲ್ಲಿ ಕನ್​ಸ್ಟ್ರಕ್ಷನ್​ ನಡೆಯುತ್ತಿತ್ತು. ಅಂದು ಅವರು ಅಲ್ಲಿಗೆ ಹೋಗಿದ್ದರು. ನಾಲ್ಕನೇ ಫ್ಲೋರ್​ನಿಂದ ಆಯ ತಪ್ಪಿ ಬಿದ್ದರು. ತಲೆಯಿಂದ ಹಿಡಿದು ಕಾಲಿನವರೆಗೂ ಸಿಕ್ಕಾಪಟ್ಟೆ ಫ್ರಾಕ್ಚರ್​ ಆಯಿತು. ತುಂಬಾ ಏಟು ಬಿದ್ದಿತು. 20- 25 ದಿನ ಕೋಮಾದಲ್ಲಿಯೇ ಇದ್ದರು. ಆಮೇಲೆ ಎಚ್ಚರವಾಯಿತು. ಅವರು ಸುಧಾರಿಸಿಕೊಳ್ತನೇ ಇದ್ದರು. ಬಿಜಿನೆಸ್​ ಕುಸಿಯಲು ಶುರುವಾಯ್ತು. ಅವರು ತಮ್ಮ ಕೆಲಸದ ಬಗ್ಗೆ ಎಂದಿಗೂ ಅಮ್ಮನ ಬಳಿ ಹೇಳುತ್ತಿರಲಿಲ್ಲ. ಆದರೆ ಅವರ ಅನಾರೋಗ್ಯದ ನಿಮಿತ್ತ ತುಂಬಾ ಸಮಸ್ಯೆಯಾಗಲು ಶುರುವಾಯಿತು. ಆ ನಂತರ ಏನಾಯಿತೋ, ಅವರಿಬ್ಬರ ಮಧ್ಯೆ ಏನು ಮಾತುಕತೆ ನಡೆಯಿತೋ ಈಗಲು ನನಗೆ ಗೊತ್ತಿಲ್ಲ. ಆಗಿನ್ನೂ ನನಗೆ 17 ವರ್ಷ ವಯಸ್ಸಾಗಿತ್ತಷ್ಟೇ. ಅವರಿಬ್ಬರ ಮಧ್ಯೆ ಸಮಸ್ಯೆ ಏನು ಎನ್ನುವುದು ತಿಳಿಯಲಿಲ್ಲ. ಇಬ್ಬರೂ ಬೇರೆಯಾಗಲು ನಿರ್ಧರಿಸಿದರು ಎಂದು ಆ ಕರಾಳ ದಿನವನ್ನು ವಿನಯ್​ ನೆನಪಿಸಿಕೊಂಡಿದ್ದಾರೆ. 
 
ಅವರಿಬ್ಬರನ್ನೂ ಒಂದು ಮಾಡಲು ಆ ಸಮಯದಲ್ಲಿ ಏನು ಬೇಕೋ ಮಾಡಿದೆ. ಆದರೆ ಯಾವುದೇ ಸಾಧ್ಯವಾಗಲಿಲ್ಲ. ಅಮ್ಮ, ಅಪ್ಪನನ್ನು ಬಿಡುವ ನಿರ್ಧಾರ ಮಾಡಿದ್ದರು. ಇಬ್ಬರೂ ಮ್ಯೂಚ್ಯುವಲ್​ ಅಂಡರ್​​ಸ್ಟ್ಯಾಂಡ್​ಗೆ ಬಂದು ಪ್ರತ್ಯೇಕವಾದರು. ನಾನು ಅಪ್ಪನ ಬಳಿಯೇ ಇರುವುದಾಗಿ ಹೇಳಿದೆ. ಅಮ್ಮ ಹೋದ ಮೇಲೆ ಅಪ್ಪ ವಿಪರೀತ ನೋವು ಅನುಭವಿಸಿದರು. ಕುಡಿತದ ಚಟ ಅಂಟಿಸಿಕೊಂಡುಬಿಟ್ಟರು. ಆದರೆ ಯಾರಿಗೂ ಅವರು ಕೆಟ್ಟದ್ದನ್ನು ಮಾಡಲಿಲ್ಲ. ತಮ್ಮ ನೋವನ್ನು ಕುಡಿತದ ಮೂಲಕ ಮರೆಯುವ ಯೋಚನೆ ಮಾಡಿ ಹೀಗೆ ಮಾಡಲು ಶುರು ಮಾಡಿದರು ಎಂದಿದ್ದಾರೆ  ವಿನಯ್​. ನಂತರ ತಾವೂ ಮನೆ ಬಿಡುವ ನಿರ್ಧಾರ ಮಾಡಿ ಮನೆ ಬಿಟ್ಟದ್ದನ್ನು ತಿಳಿಸಿದ್ದಾರೆ.

ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್​ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್​

ಆರಂಭದಲ್ಲಿ ತುಂಬಾ ಅಳುತ್ತಿದ್ದೆ. ಯಾರ ಬಳಿಯೂ ಹೇಳಿಕೊಳ್ಳಲು ಆಗ್ತಿರಲಿಲ್ಲ. ನನ್ನ ಈ ವೈಯಕ್ತಿಯ ಬದುಕಿನ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಜನ ನೋವನ್ನು ಕೇಳ್ತಾರೆ, ಯಾರೂ ಹೆಲ್ಪ್​ ಮಾಡಲ್ಲ. ನಾವು ಅತ್ತ ಹೋದ ಮೇಲೆ ಆ ಬಗ್ಗೆ ಮಾತನಾಡಿಕೊಳ್ತಾರೆ ಅಷ್ಟೇ. ಎಲ್ಲವೂ ನನಗೆ ಗೊತ್ತಿದೆ. ದೇವರು ಮರೆವ ಶಕ್ತಿಯನ್ನು ಕೊಟ್ಟಿದ್ದಾನೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಮುಂದೆ ಸಾಗುತ್ತಿದ್ದೇನೆ. ಯಾರ ಬಳಿಯೂ ಕೈಚಾಚುವ, ಯಾರ ಸಹಾಯವೂ ಅಗತ್ಯವಿಲ್ಲ. ಕೈ-ಕಾಲು ಚೆನ್ನಾಗಿ ದುಡಿದು ತಿನ್ನುತ್ತಿದ್ದೇನೆ. ನನ್ನ ಫ್ಯಾಮಿಲಿ ಜೊತೆ ಚೆನ್ನಾಗಿದ್ದೇನೆ ಎಂದು ವಿನಯ್​ ಹೇಳಿದ್ದಾರೆ. ಅಂದಹಾಗೆ ವಿನಯ್​ ಗೌಡ ಅವರ ತಂದೆಯೂ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.  

click me!