ನೀರಿಗೆ ಸಮಸ್ಯೆ: ಕಲಬುರಗಿಯ ಹಳ್ಳಿ ಹುಡುಗರಿಗೆ ಹೆಣ್ಣು ಕೊಡ್ತಿಲ್ಲ!

ಬೇಸಿಗೆ ಬಂತೆಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. ಈಗ ಸಮಸ್ಯೆ ತೀವ್ರವಾಗಿದ್ದು ಜನ, ಜಾನುವಾರುಗಳು ಹನಿ ನೀರಿಗೆ ಪರದಾಡುವಂತಾಗಿದೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Water problem Villagers in Kalaburagi are not giving girls to boys gvd

ಯಡ್ರಾಮಿ (ಮಾ.25): ಬೇಸಿಗೆ ಬಂತೆಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. ಈಗ ಸಮಸ್ಯೆ ತೀವ್ರವಾಗಿದ್ದು ಜನ, ಜಾನುವಾರುಗಳು ಹನಿ ನೀರಿಗೆ ಪರದಾಡುವಂತಾಗಿದೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗು ಬುಡಕಟ್ಟು ಸಮುದಾಯದ ಜನರೇ ಇರುವ ತಾಲೂಕಿನ ಸುಂಬಡ ಗ್ರಾಪಂ ವ್ಯಾಪ್ತಿಯ ಅಖಂಡಹಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬೇಸಿಗೆ ಅವಧಿಯ ನೀರಿನ ಸಮಸ್ಯೆಕ್ಕೆ ಪರಿಹಾರ ಸಿಕ್ಕಿಲ್ಲ. ಈ ಊರಿನ ಕುಡಿಯುವ ನೀರಿನ ಸಮಸ್ಯೆ ಅದೆಷ್ಟು ಖ್ಯಾತಿ ಎಂದರೆ ಈ ಊರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುವಷ್ಟು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಗಿದೆ.

ಈ ಸಮಸ್ಯೆಗೆ ಸುಮಾರು ಹತ್ತು ವರ್ಷಗಳ ಇತಿಹಾಸವಿದೆ. ಬೇಸಿಗೆಯಲ್ಲಿ ತಲೆದೋರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತಕ್ಕೆ ಆಗಿಲ್ಲ. ಇಲ್ಲಿನ ಜನರ ಬೇಡಿಕೆ ನರಿ ಕೂಗು ಗಿರಿಗೆ ಮುಟ್ಟುವುದೇ ಎಂಬಂತಾಗಿದೆ. ಸುಮಾರು 196 ಮನೆಗಳ 900 ಜನ ಸಂಖ್ಯೆಯಿರುವ ಊರಿನ ಎರಡು ಬಡಾವಣೆಗಳಿಗೆ ಎರಡು ಕೊಳವೆ ಬಾವಿಗಳಿದ್ದು ಅದರ ಅಂತರ್ಜಲ ಕುಸಿದಿದೆ. ನೀರಿಗಾಗಿ ಹೆಣ್ಣು, ಗಂಡು, ಮಕ್ಕಳು ಹೆಂಡತಿ ನಳದ ಮುಂದೆ ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

Latest Videos

ಹಾಳಾದ ಜಲಜೀವನ್: ಜಲ ಜೀವನ್ ಮಿಷನ್‌ನಡಿ ನಳಗಳನ್ನು ಹಾಕಿಸಿದ್ದು ಅವೆಲ್ಲಾ ಹಾಳಾಗಿವೆ. ಈ ನಳಗಳಿಗೆ ನೀರಿನ ಪೈಪ್ ಸಂಪರ್ಕ ಕಲ್ಪಿಸಿದರೆ ನೀರು ಮನೆ ಮನೆಗೆ ಬರುತ್ತದೆ. ಆದರೆ ಕಳಪೆ ಕಾಮಗಾರಿಯಿಂದ ನಳದಲ್ಲಿ ನೀರು ಬದಲಿಗೆ ಗಾಳಿ ಬರುತ್ತದೆ. ಇಷ್ಟೊಂದು ಸಮಸ್ಯೆಯಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಬುಡಕಟ್ಟು ಹಿಂದುಳಿದ ಸಮುದಾಯದವರೇ ಹೆಚ್ಚಿರುವ ಈ ಗ್ರಾಮದಲ್ಲಿ ಕುರಿ, ಮೇಕೆ, ದನ ಕರುಗಳಿಗೆ ನೀರಿಲ್ಲ ಎನ್ನುತ್ತಾರೆ ಗ್ರಾಮದ ಯುವಕ ಸತ್ಯಪ್ಪ ಕೋಟಾರಿ. ಈ ಊರಿನ ನೀರಿನ ಸಮಸ್ಯೆಗೆ ಹೆಣ್ಣು ಮಕ್ಕಳು ಬೇಸತ್ತಿದ್ದಾರೆ, ಯಾಕಾದರೂ ಈ ಊರಿಗೆ ಮದುವೆ ಆಗಿ ಬಂದೆವೋ ಎಂದು ಹೆಣ್ಣು ಮಕ್ಕಳು ಪರಿತಪಿಸುತ್ತಿದ್ದಾರೆ ಎಂದು ಗ್ರಾಮದ ರೇಣುಕಾ, ಮಡಿವಾಳಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪಾಪ.. ಕೆ.ಅಣ್ಣಾಮಲೈ ಅವರಿಗೆ ಏನೂ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್‌ ವ್ಯಂಗ್ಯ

ಹತ್ತು ವರ್ಷಗಳಿಂದ ನೀರಿನ ಸಮಸ್ಯೆಯಿದೆ ಎಂದು ಗ್ರಾಮಸ್ಥರು ಹೇಳಿದರೂ ಅಧಿಕಾರಿ, ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ. ಗಂಡಸರು ದುಡಿಯಲು ಹೋದರೆ ಮಕ್ಕಳು, ಮಹಿಳೆಯರು ನೀರಿಗಾಗಿ ಕಾಯಬೇಕು. ಈ ಗ್ರಾಮಕ್ಕೆ ನೀರು,ರಸ್ತೆ, ಬಸ್ಸಿನ ವ್ಯವಸ್ಥೆ ಇಲ್ಲದರಿಂದ ಈ ಊರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ.
-ಉಮೇಶ ಅಖಂಡಹಳ್ಳಿ, ಗ್ರಾಮಸ್ಥ

vuukle one pixel image
click me!