ಕರುನಾಡಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಬೆಂಗಳೂರು (ಮಾ.29): ಹಳತನ್ನು ಕಳಚಿ ಹೊಸ ಚಿಗುರು ಚಿಗುರಿ ಪರಿವರ್ತನೆಗೆ ಸಂಕೇತವಾಗುವ ಯುಗಾದಿ ಮತ್ತೆ ಬಂದಿದೆ. ಯುಗಾದಿ ಎಂದರೆ ಕೇವಲ ಪ್ರಕೃತಿ ಬದಲಾವಣೆ ಮಾತ್ರವಲ್ಲದೇ ಜೀವಿಗಳ ಬದುಕಿನ ಬದಲಾವಣೆಗಳು. ಅದರಲ್ಲೂ ಜನತೆ ನಮ್ಮ ಆ ವರ್ಷದ ಬದುಕಿಗೆ ಮುನ್ನಡಿ ಬರೆಯುವ ಹಬ್ಬ. ಯುಗಾದಿ ಆಚರಣೆಗೆ ಇಡೀ ಕರುನಾಡು ತಯಾರಿ ನಡೆಸುತ್ತಿದೆ.
ಹಿಂದೂಗಳ ಹೊಸವರ್ಷ ಯುಗಾದಿ ಹಬ್ಬ ಹಿನ್ನೆಲೆ ಮಾರುಕಟ್ಟೆಯಲ್ಲಿ ಕಳೆಗಟ್ಟಿದ ಹಬ್ಬದ ವಾತಾವರಣ ಇದೆ. ಹಬ್ಬಕ್ಕೆ ಬೇಕಾದ ವಸ್ತು ಖರೀದಿಯಲ್ಲಿ ಜನ ಬ್ಯುಸಿ ಆಗಿದ್ದಾರೆ. ಪೂಜೆಗೆ ಬೇಕಾದ ವಸ್ತು ಖರೀದಿಗೆ ಬಂದವರಿಗೆ ಶಾಕ್ ಆಗಿದೆ. ಹಬ್ಬದ ಹಿನ್ನೆಲೆ ಹೂ ಹಣ್ಣು ಬೆಲೆ ಗಗನಕ್ಕೇರಿದೆ. ಹೂ ರೇಟ್ ಕೇಳಿ ಸಾರ್ವಜನಿಕರು ಸುಸ್ತಾಗಿದ್ದಾರೆ.
ಹುಬ್ಬಳ್ಳಿಗೆ ಯುಗಾದಿ ಹಬ್ಬಕ್ಕೆ ವಿಶೇಷ ರೈಲು ಬಿಟ್ಟ ಭಾರತೀಯ ರೈಲ್ವೆ ಇಲಾಖೆ!
ಬೆಂಗಳೂರು ಮಾರ್ಕೆಟ್ ನಲ್ಲಿ ಹೂ- ಹಣ್ಣಿನ ಬೆಲೆ ಎಷ್ಟಿದೆ?
ಹೂವಿನ ಬೆಲೆ
ಮಲ್ಲಿಗೆ- 1800-2000 ರೂ
ಸೇವಂತಿಗೆ- 350 ರೂ
ಗುಲಾಬಿ- 250 ರೂ
ಸೇವಂತಿಗೆ ಬಿಳಿ- 250 ರೂ
ಸುಗಂಧರಾಜ- 300 ರೂ
ಚೆಂಡು ಹೂ- 50 ರೂ
ಕನಕಾಂಬರ- 800 ರೂ
ಕಾಕಡ- 1000 ರೂ
ಮಳ್ಳೆ ಹೂ- 1600 ರೂ
ಬೇವು ಕಟ್- 20-30 ರೂ
ಗಣಗಲೆ ಹೂ- 80 ರೂ
ಮಾವಿನ ತೋರಣದ ಎಲೆ ಕಟ್- 30-40 ರೂ
ಯುಗಾದಿ ಹಬ್ಬಕ್ಕೆ ಮೋದಿ ಸರ್ಕಾರದ ಬಂಪರ್ ಗಿಫ್ಟ್, ಡಿಎ ಶೇ.2ರಷ್ಟು ಏರಿಕೆ
ಹಣ್ಣುಗಳ ಬೆಲೆ
ದಾಳಿಂಬೆ- 150- 200 ರೂ
ಸೇಬು- 120-160 ರೂ
ದ್ರಾಕ್ಷಿ- 80-100 ರೂ
ಕಿವಿ ಫ್ರೂಟ್- 60-100 ರೂ
ಎಲಕ್ಕಿ ಬಾಳೆಹಣ್ಣು- 100 ರೂ
ಬಚ್ಚೆ ಬಾಳೆ- 40 ರೂ
ಮಾವಿನಹಣ್ಣು- 120 ರೂ
ಮೂಸಂಬಿ- 40 ರೂ
ಕಿತ್ತಲೆಹಣ್ಣು- 80 ರೂ
ಬೆಲೆ ತುಸು ಗಗನಕ್ಕೇರಿದ್ದರೂ ಹೂವು, ಹಣ್ಣು, ಮಾವು-ಬೇವು, ಹೊಸಬಟ್ಟೆಖರೀದಿ ಜೋರಾಗಿಯೇ ಇದೆ. ಯುಗಾದಿಯನ್ನು ಹೊಸ ವರ್ಷವಾಗಿ ಸ್ವೀಕರಿಸುವುದರಿಂದ ಈ ಸಂದರ್ಭದಲ್ಲಿ ಭಗವಂತನನ್ನು ಪೂಜಿಸಿ ಬೇವು-ಬೆಲ್ಲವನ್ನು ಸ್ವೀಕರಿಸುವುದು ಸಂಪ್ರದಾಯ. ಇದಕ್ಕಾಗಿ ಮಾವಿನಸೊಪ್ಪಿನೊಂದಿಗೆ ಬೇವಿನಸೊಪ್ಪು, ಹೂವು ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿದೆ.
ಹೊಸ ತೊಡಕು ಯಾವಾಗ?: ಯುಗಾದಿ ಹಬ್ಬದ ದಿನದಂದು ಹಿಂದು ಸಮುದಾಯದ ಜನತೆ ತಲೆಗೆ ಎಣ್ಣೆ ಹಚ್ಚಿಕೊಂಡು ಅಭ್ಯಂಗನ ಸ್ನಾನ ಮಾಡಿ ಹೊಸ ಬಟ್ಟೆಧರಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಲ್ಲದೆ ಸಂಪ್ರದಾಯದಂತೆ ಕೆಲವು ಕಡೆ ಹಿರಿಯರ ಸಮಾಧಿಗಳಿಗೆ ತೆರಳಿ ಪೂಜೆಗಳನ್ನು ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಯುಗಾದಿ ಹಬ್ಬದ ಮಾರನೆಯ ದಿನವಾದ ಹೊಸ ತೊಡಕನ್ನು ಕುರಿ ಕೋಳಿ ಕಡಿದು ಮಾಂಸದ ಊಟವನ್ನು ಸೇರಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಬಾರಿ ಭಾನುವಾರ ಯುಗಾದಿ ಹಬ್ಬ ಬಂದಿರುವುದರಿಂದ ಸೋಮವಾರ ವೆಜಿಟೇರಿಯನ್ ಫೋಲೋ ಮಾಡುವವರು ಬಹಳ ಮಂದಿ ಇದ್ದಾರೆ. ಹೀಗಾಗಿ ಕೆಲವರು ಮಂಗಳವಾರ ಹೊಸ ತೊಡಕು ಆಚರಣೆ ಮಾಡಲಾಗುತ್ತದೆ.