vuukle one pixel image

ಫ್ಯಾನ್ಸ್‌ಗೂ 'ದರ್ಶನ' ನೀಡಲಿಲ್ಲ, ಧನ್ವೀರ್ ಜೊತೆ ನಿಲ್ಲಲ್ಲಿಲ್ಲ: ದರ್ಶನ್ ಈ ನಡೆ ರಹಸ್ಯ ಬಯಲು..!

Shriram Bhat  | Updated: Mar 29, 2025, 1:22 PM IST

ಧನ್ವೀರ್ ಗೌಡ (Dhanveer Gowda) ನಟನೆಯ ವಾಮನ ಸಿನಿಮಾದ ಟ್ರೈಲರ್​ಗೆ ದರ್ಶನ್ (Darshan Thoogudeepa) ಬರ್ತಾರೆ, ಆ ಮೂಲಕ ಫ್ಯಾನ್ಸ್​ಗೆ ದರ್ಶನ ಕೊಡ್ತಾರೆ ಅಂತ ಹೇಳಲಾಗಿತ್ತು. ಆದ್ರೆ ದರ್ಶನ್ ಈ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಟ್ರೈಲರ್​​ನ ನೋಡಿ ವಿಡಿಯೋ ಬೈಟ್ ಮೂಲಕ ವಾಮನ ಟೀಂಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಹಾಗಾದ್ರೆ ದಾಸ ಹೇಳಿದ್ದೇನು..? ಇನ್ನಷ್ಟು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರೋದಕ್ಕೆ ದರ್ಶನ್ ನಿರ್ಧರಿಸಿದ್ದು ಯಾಕೆ..? ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ವಾಮನ ಟ್ರೈಲರ್ ಲಾಂಚ್​​ಗೂ ಬರಲಿಲ್ಲ ದರ್ಶನ್..!
ಹೌದು, ಧನ್ವೀರ್ ನಟನೆಯ ವಾಮನ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್​ಗೆ ದರ್ಶನ್ ಬರ್ತಾರೆ ಅಂತ ಸುದ್ದಿಯಾಗಿತ್ತು. ಚಿತ್ರತಂಡ ಕೂಡ ದರ್ಶನ್​ರಿಂದ ಟ್ರೈಲರ್ ಲಾಂಚ್ ಅಂತ ಅನೌನ್ಸ್​ಮೆಂಟ್ ಮಾಡಿ ಛೀಫ್ ಗೆಸ್ಟ್ ಆಗಿ ದರ್ಶನ್ ಬರಲಿದ್ದಾರೆ ಅಂತ ಅನೌನ್ಸ್ ಮಾಡಿದ್ದು.

ಮೀನಾ ಹೆಸರಿಗೆ ಎಳ್ಳಷ್ಟೂ ಆಸ್ತಿ ಬರೆಯದ ವಿದ್ಯಾಸಾಗರ್, ಮತ್ತೆ 300 ಕೋಟಿ ಆಸ್ತಿಯೆಲ್ಲಾ ಯಾರ ಪಾಲು..!?

ಜೈಲಿಂದ ಹೊರಬಂದ ಮೇಲೆ ದರ್ಶನ್ ಇದೇ ಮೊದಲ ಬಾರಿಗೆ ದರ್ಶನ ಕೊಡ್ತಾರೆ ಅಂತ ಫ್ಯಾನ್ಸ್ ಖುಷ್ ಆಗಿದ್ರು. ಅದ್ರಲ್ಲೂ ಪ್ರಸನ್ನ ಚಿತ್ರಮಂದಿರದಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಇದ್ದುದರಿಂದ ದಾಸನ ಫ್ಯಾನ್ಸ್ ಹಬ್ಬ ಮಾಡ್ಲಿಕ್ಕೆ ಸಜ್ಜಾಗಿದ್ರು. ಆದ್ರೆ ದರ್ಶನ್ ಈ ಇವೆಂಟ್​​ಗೂ ಗೈರಾಗಿದ್ದಾರೆ.

ಅಸಲಿಗೆ ಪ್ರಸನ್ನ ಥಿಯೇಟರ್ ಎದುರು ಧನ್ವೀರ್ ಜೊತೆಗೆ ದರ್ಶನ್ ಕಟೌಟ್ ಕೂಡ ನಿಲ್ಲಿಸಿದ್ದು ನೋಡಿ ದರ್ಶನ್ ಖುದ್ದಾಗಿ ಇವೆಂಟ್​ಗೆ ಬರ್ತಾರೆ ಅಂತ ಫ್ಯಾನ್ಸ್ ಥ್ರಿಲ್ ಆಗಿದ್ರು. ಆದ್ರೆ ದರ್ಶನ್ ಟ್ರೈಲರ್ ನೋಡಿ, ವಿಡಿಯೋ ಬೈಟ್ ಮೂಲಕ ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ.

ಮೊದಲಿಂದಲೂ ಧನ್ವೀರ್​ಗೆ ಸಪೋರ್ಟ್ ಮಾಡ್ತಾ ಬಂದಿರೋ ದರ್ಶನ್, ಧನ್ವೀರ್ ನಟನೆಯ ಎಲ್ಲಾ ಚಿತ್ರಗಳ ಇವೆಂಟ್​ನಲ್ಲೂ ಭಾಗಿಯಾಗಿದ್ರು. ಧನ್ವೀರ್ ಹಿಂದಿನ ಚಿತ್ರ ಕೈವ ಪ್ರೀ ರಿಲೀಸ್ ಇವೆಂಟ್​​ಗೂ ಬಂದಿದ್ರು. ಇದೀಗ ವಾಮನ ಸಿನಿಮಾ ಪ್ರೀ ರಿಲೀಸ್ ಇವೆಂಟ್​ಗೂ ದರ್ಶನ್ ಬಂದೇ ಬರ್ತಾರೆ ಅನ್ನಲಾಗಿತ್ತು. ಆದ್ರೆ ವಿಡಿಯೋ ಬೈಟ್​ ಮೂಲಕ ದರ್ಶನ್ ಶುಭ ಹಾರೈಸಿದ್ದಾರೆ. ಆ ಕ್ಲಿಪ್​ನ ಪ್ರಸನ್ನ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಿ ಫ್ಯಾನ್ಸ್ ಎದುರು ಇಟ್ಟಿದೆ ವಾಮನ ಟೀಂ.

ಹೌದು ದರ್ಶನ್ ಇನ್ನೂ ಒಂದಿಷ್ಟು ದಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೇ ಇರೋದಕ್ಕೆ ನಿರ್ಧಾರ ಮಾಡಿದ್ದಾರೆ. ಸದ್ಯ ದರ್ಶನ್ ಬೇಲ್ ಮೇಲೆ ಹೊರಗಿರೋದು, ಈ ಬೇಲ್ ವಿರುದ್ದ ಸುಪ್ರೀಂ ಕೋರ್ಟ್​ನಲ್ಲಿ ಬೇರೆ ಅಪೀಲ್ ಮಾಡಲಾಗಿದೆ. ಇಂಥಾ ಹೊತ್ತಲ್ಲಿ ಸಾರ್ವಜನಿಕ ಸಮಾರಂಭಕ್ಕೆ ಬಂದು ಏನಾದ್ರೂ ಹೆಚ್ಚು ಕಡಿಮೆ ಮಾತನಾಡಿ , ಅದ್ರಿಂದ ಸಮಸ್ಯೆಯಾದ್ರೆ ಬೇಲ್​ಗೆ ತೊಂದರೆಯಾಗಬಹುದು ಅಂತ ವಕೀಲರು ದಾಸನಿಗೆ ಸಲಹೆ ಕೊಟ್ಟಿದ್ದಾರಂತೆ. ಅಂತೆಯೇ ವಿಡಿಯೋ ಬೈಟ್ ರೆಕಾರ್ಡ್ ಮಾಡಿ ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ ದರ್ಶನ್.

ಕೆಜಿಎಫ್ ಸ್ಟಾರ್ ಯಶ್ 'ಯಾಣ'ಕ್ಕೆ ಹೋಗಿದ್ದೇಕೆ? ಅಲ್ಲಿ ಕಷ್ಟಕ್ಕೆ ಸಿಲುಕಿ ಒದ್ದಾಡಿದ್ದೇಕೆ...?

ಸದ್ಯ ದರ್ಶನ್ ರಾಜಸ್ಥಾನದಲ್ಲಿ ದಿ ಡೆವಿಲ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ. ಈ ವಾರ ಪ್ರಾರಂಭ ಆಗಿರೋ ದಿ ಡೆವಿಲ್ ಶೂಟಿಂಗ್ ಸತತ ಇಪ್ಪತ್ತು ದಿನಗಳ ಕಾಲ ನಡೆಯಲಿದೆ. ನಾಯಕಿ ರಚನ ರೈ, ವಿಲನ್ ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್  ನಟನೆಯ  ದೃಶ್ಯಗಳನ್ನ ಶೂಟ್ ಮಾಡಲಾಗ್ತಾ ಇದೆ. ದರ್ಶನ್ ಕೂಡ ರಾಜಸ್ಥಾನದಲ್ಲೇ ಬೀಡುಬಿಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..