ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ.
ಹೊಸಪೇಟೆ (ಮಾ.29): ಹಂಪಿ ವಿಠ್ಠಲ ಮಂಟಪದಲ್ಲಿನ ಕಲ್ಲಿನ ಕಂಬಗಳನ್ನು ನಿಧಾನವಾಗಿ ತಟ್ಟಿದಾಗ ಸಂಗೀತ ನಾದ ಕೇಳಿ ಬರುವಂತೆಯೇ ಸಂಗೀತ ನಾದ ಮೊಳಗಿಸುವ ಕಲ್ಲುಗಳನ್ನು ಹೊಸಪೇಟೆ ಧರ್ಮಸಾಗರ ಗ್ರಾಮದ ಸಮೀಪದಲ್ಲಿರುವ ದೇವಲಾಪುರದ ಕರೆಕಲ್ಲು ಗುಡ್ಡದಲ್ಲಿ ವಿಜಯನಗರ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದೆ. ಕರೆಕಲ್ಲು ಗುಡ್ಡ ಸಮೂಹದ ಮಧ್ಯಭಾಗ ದಲ್ಲಿರುವ ನಾಲೈದು ಕಲ್ಲುಗುಂಡುಗಳಿಗೆ ಕಲ್ಲಿನಿಂದ ಕುಟ್ಟಿದಾಗ ಸಂಗೀತದ ನಾದವು ಹೊರಹೊಮ್ಮುತ್ತಿದೆ.ವಿಜಯನಗರತಿರುಗಾಟ ಸಂಶೋಧನಾ ತಂಡದ ಡಾ.ಗೋವಿಂದ, ಡಾ. ಎಚ್.ತಿಪ್ಪೇಸ್ವಾಮಿ, ಡಾ. ಗೋವರ್ಧನ್, ಡಾ. ಕೃಷ್ಣಗೌಡ, ಡಾ. ವೀರಾಂಜನೇಯ, ಕೆ. ವೀರಭದ್ರ ಗೌಡ, ರವಿ, ಮಂಜು ಅವರು ಭೈರಪ್ಪ, ಶಂಕರ ಅವರ ಸಹಕಾರದಿಂದ ಈ ಕಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ.
ವಿಶೇಷತೆ ಏನು?: ಈ ಕಲ್ಲುಗಳಲ್ಲಿ ಒಂದು ಕಲ್ಲು ಚಪ್ಪಟೆಯಾಕಾರವಾ ಗಿದ್ದು, ಅದು ಎಂಟು ಅಡಿ ಎತ್ತರ ನಾಲ್ಕು ಅಡಿ ಅಗಲವಾಗಿದೆ. ಅದರ ಪಕ್ಕದ ಇನ್ನಿತರ ಮೂರು ಹಾಸು ಗುಂಡು ಕಲ್ಲುಗಳಿಂದಲೂ ಸಂಗೀತದ ನಿನಾದ ಕೇಳುತ್ತದೆ. ಈ ಸಂಗೀತ ನಾದ ಮೊಳಗುವುದನ್ನು ಆದಿ ಮಾನವರು ಗುರುತಿಸಿ, ಅವರು ಕುಟ್ಟಿದ ಗುರುತು ಈಗಲೂ ಕಾಣಿಸುತ್ತದೆ. ಇದೇರೀತಿಈಗಾಗಲೇ ಪ್ರಾಗೈತಿಹಾಸಿಕ ಸ್ಥಳವೆಂಬ ತಿಗೆ ಗುರಿಯಾಗಿರುವ ಸಂಗನಕಲ್ಲಿನಲ್ಲಿ ಸಹ ಖ್ಯಾತಿ ಇದೇ ರೀತಿ ಸಂಗೀತ ನಾದ ಹೊರಹೊಮ್ಮುವ ಕಲ್ಲುಗಳು ಕಂಡು ಬರುತ್ತವೆ. ಆದರೂ ಈ ಕರೆಕಲ್ಲು ಗುಡ್ಡದ ಕಲ್ಲುಗಳು ತುಂಬಾ ವಿಶೇಷವಾಗಿವೆ. ರಸ್ತೆ ಪಕ್ಕದಲ್ಲಿರುವ ಈ ಗುಂಡುಕಲ್ಲುಗಳ ಸುತ್ತಲೂ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಡಾ. ತಿಪ್ಪೇಸ್ವಾಮಿ, ಡಾ. ಕೃಷ್ಣಗೌಡ ಹಾಗೂ ತಂಡದ ಇತರ ಸದಸ್ಯರು ತಿಳಿಸಿದ್ದಾರೆ.
76 ವರ್ಷ ಹಳೆಯ ಕರ್ನಾಟಕ ವಿವಿಗೆ ಆರ್ಥಿಕ ಸಂಕಷ್ಟ: 416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ
ಕುಟ್ಟು ಚಿತ್ರಗಳ ಶೋಧ: ಈ ಕರೆಕಲ್ಲು ಗುಡ್ಡದಲ್ಲಿ ಸಂಗೀತದ ಕಲ್ಲುಗಳೊಂದಿಗೆ ಕ್ರಿ.ಪೂ. 3000 ಕಾಲಮಾನದ ಆದಿಮಾನವನೆಲೆಸಿದ್ದರ ಕುರುಹಾಗಿ ಅಲ್ಲಿನ ಬಹುತೇಕ ಗುಂಡುಕಲ್ಲುಗಳಿಗೆ ಆದಿಮಾನವರು ಕುಟ್ಟಿದ ಕುಟ್ಟುಚಿತ್ರಗಳಿವೆ. ಇದರಲ್ಲಿ ವಿಶೇಷವಾಗಿ ಸುಂದರವಾದ ಗೂಳಿ ಚಿತ್ರವಿದ್ದು, ಆರು ಇಂಚು ಉದ್ದ, ನಾಲ್ಕು ಇಂಚು ಅಗಲದ ಆ ಗೂಳಿಯ ಹಿಂದೆ ಮಾನವನ ಚಿತ್ರವಿದೆ. ಅಲ್ಲದೇ ಗುಡ್ಡದ ಬಹುತೇಕ ಕಲ್ಲುಗಳಲ್ಲಿ ಇತರ ಪ್ರಾಣಿಗಳ ಚಿತ್ರಗಳಿವೆ. ಅದರಲ್ಲೂ ಹುಲಿಯನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಇವು ಅಲ್ಲದೇ ಆದಿ ಮಾನವ ಬೇಟೆಯಾಡುವ ಹಾಗೂ ಎತ್ತರದ ಮನುಷ್ಯನ ಚಿತ್ರಗಳನ್ನು ಕುಟ್ಟಿರುವುದು ಕಂಡು ಬಂದಿವೆ. ಇನ್ನಿತರ ಗುಂಡು ಕಲ್ಲುಗಳಿಗಿರುವ ಕುಟ್ಟುಚಿತ್ರಗಳು ಗಾಳಿ, ಮಳೆ, ಬಿಸಿಲಿನಿಂದ ಸವೆದು ಹೋಗಿವೆ. ಇವುಗಳನ್ನು ಪುರಾತತ್ವ ಇಲಾಖೆ ಇಲ್ಲವೇ ಆಡಳಿತಾಂಗ ಸಂರಕ್ಷಣೆ ಮಾಡಬೇಕೆಂದು ಡಾ. ಗೋವಿಂದ ಒತ್ತಾಯಿಸಿದ್ದಾರೆ.