Santosh Naik | Published: Mar 28, 2025, 11:59 PM IST
ಬೆಂಗಳೂರು (ಮಾ.28): ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲಿಯೇ ರೆಬಲ್ಸ್ ನಾಯಕರು ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ಉಚ್ಛಾಟನೆ ನಿರ್ಧಾರ ವಾಪಾಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಯತ್ನಾಳ್ ಉಚ್ಚಾಟನೆ: ನಾವು ಜೊತೆಗಿದ್ದೇವೆ ಎಂಬ ಸಂದೇಶ ಸಾರಿದ ಟೀಂ, ಸಭೆಯ ನಿರ್ಣಯಗಳೇನು?
ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಬಿಜೆಪಿಗೆ ಕರೆತರೋಕೆ ರೆಬಲ್ಸ್ ಪ್ಲ್ಯಾನ್ ಮಾಡಿದ್ದಾರೆ. ಯತ್ನಾಳ್ ಪರವಾಗಿ ಗಟ್ಟಿಯಾಗಿ ನಿಲ್ಲಲು ರೆಬಲ್ಸ್ ನಿರ್ಧಾರ ಮಾಡಿದ್ದಾರೆ. ನಾವು ಪಾರ್ಟಿ ವಿರುದ್ಧ ಇಲ್ಲ, ವ್ಯಕ್ತಿ ವಿರುದ್ಧ ಮಾತ್ರ ಅನ್ನೋ ಸಂದೇಶ ರವಾನೆ ಮಾಡಲಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆ ಬೆನ್ನಲ್ಲಿಯೇ ತಮ್ಮ ಕಾರ್ಖಾನೆ ಉದ್ಘಾಟನೆ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಉಚ್ಛಾಟನೆ ಆಗುವ ಮುನ್ನ ದೆಹಲಿಯ ಸಂಸತ್ ಭವನದಲ್ಲಿ ಕೆಲ ನಾಟಕೀಯ ಬೆಳವಣಿಗೆಗಳು ನಡೆದಿದ್ದವು.