ಶಾಲಾ ಶಿಕ್ಷಣ ಸಚಿವರ ಭೇಟಿಗೆ ಬಂದ ಪೋಷಕರನ್ನು ಮಾಧ್ಯಮದೊಂದಿಗೆ ಬಂದ ಕಾರಣಕ್ಕೆ ಸಚಿವರು ಸಿಡಿಮಿಡಿಗೊಂಡಿದ್ದಾರೆ. ವಯೋಮಿತಿ ಗೊಂದಲದಿಂದ ನೊಂದ ಪೋಷಕರು ಸಚಿವರ ಬೇಜವಾಬ್ದಾರಿ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.29): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ನಡೆ ಈಗ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ವಯೋಮಿತಿ ಗೊಂದಲದ ಬಗ್ಗೆ ಶಿಕ್ಷಣ ಸಚಿವರನ್ನ ಭೇಟಿ ಮಾಡಲು ಪೋಷಕರು ಬಂದಿದ್ದರು. ಪೋಷಕರ ಜೊತೆಗೆ ಮಾಧ್ಯಮವನ್ನು ಕಂಡ ಕೂಡಲೇ ಉರಿ ಉರಿಯಾದ ಸಚಿವ ಮಧು ಬಂಗಾರಪ್ಪ ಮೀಡಿಯಾದವರನ್ನ ಕರೆದುಕೊಂಡು ಬಂದಿದ್ದೀರಾ ಅವರ ಹತ್ತಿರವೇ ಮಾತಾಡಿ ಎಂದು ಸಿಡಿಮಿಡಿಕೊಂಡರು.
ಪಕ್ಷದ ಒಳಿತಿಗಾಗಿ ದ್ವೇಷ ಬದಿಗಿಟ್ಟು ಕೆಲಸ ಮಾಡಿ: ಸಚಿವ ಮಧು ಬಂಗಾರಪ್ಪ
ಯಾಕಿಷ್ಟು ದರ್ಪ ನಿಮಗೆ ಶಿಕ್ಷಣ ಸಚಿವರೇ?
"media and do all these rubbish are not allowed in my house" ಎಂದಿದ್ದಾರೆ. ಇದೀಗ ಶಿಕ್ಷಣ ಸಚಿವರದ್ದು ಇದೆಂಥಾ ವರ್ತನೆ? ಯಾಕಿಷ್ಟು ದರ್ಪ ನಿಮಗೆ ಶಿಕ್ಷಣ ಸಚಿವರೇ? ಮಕ್ಕಳ ವಿಚಾರ ನಿಮ್ಮನ್ನ ಕೇಳೋಕೂ ಬರಬಾರದಾ? ನೀವು ಕರೆದಾಗಷ್ಟೇ ಮಾಧ್ಯಮ ಬರಬೇಕಾ? ಎಂಬ ಪ್ರಶ್ನೆ ಎದ್ದಿದೆ. ಮಾಧ್ಯಮದ ಜೊತೆಗೆ ಬಂದ್ರೇ rubbish ಅಂತೆ. ಶಾಸಕ,ಸಚಿವರು ಅಂದ್ರೇ ಜನಪ್ರತಿನಿಧಿಗಳು. ಅದ್ರೇ ಈ ಸಚಿವರಿಗೆ ಪೋಷಕರ ಜೊತೆಗೆ ಮಾಧ್ಯಮ ಬಂದ್ರೇ ರಬ್ಬೀಶ್ ಅಂತೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೇಜವಾಬ್ದಾರಿ ಮಾತು ಈಗ ಪ್ರಶ್ನಾತೀತವಾಗಿದೆ.
ವಯೋಮಿತಿ ಗೊಂದಲ, ಸಚಿವರನ್ನು ಭೇಟಿಯಾಗಲು ಬಂದ ನೂರಾರು ಪೋಷಕರು:
2025-26 ನೇ ಶೈಕ್ಷಣಿಕ ವರ್ಷ ದಾಖಲಾತಿ ಹಿನ್ನೆಲೆ 1 ನೇ ತರಗತಿಗೆ ವಯೋಮಿತಿ ಗೊಂದಲ ವಿಚಾರವಾಗಿ ವಯೋಮಿತಿ ಇದ್ದು ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಲು ನೂರಾರು ಪೋಷಕರು ಅವರ ನಿವಾಸಕ್ಕೆ ಬಂದಿದ್ದರು. ವಯೋಮಿತಿ ಗೊಂದಲ ಬಗೆಹರಿಸುವಂತೆ ಪೋಷಕರು ಮನವಿ ಮಾಡಿಕೊಳ್ಳಲು ಬಂದಿದ್ದರು. 5.6 ವರ್ಷ 6 ತಿಂಗಳು ಇರೋ ಮಕ್ಕಳಿಗೆ ಅವಕಾಶ ನೀಡುವಂತೆ ಮನವಿ. ಈ ರೀತಿ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಇದ್ದಾರೆ ಎಂದು ಸಚಿವರಿಗೆ ಹೇಳಿದ್ದಾರೆ.
58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
ಸೆಪ್ಟೆಂಬರ್ ತಿಂಗಳಿಂದ ಹೋರಾಟ
ಎಜುಕೇಶನ್ ಮಿನಿಸ್ಟರ್ ಸಾಹೇಬ್ರಿಗೆ ಮೀಡಿಯಾ ನೋಡಿದ್ರೇ ಯಾಕಿಷ್ಟು ನೋವು. ಸುಮಾರು ಒಂದು ಲಕ್ಷ ಮಕ್ಕಳು ವಯೋಮಿತಿ ಗೊಂದಲದಲ್ಲಿದ್ದಾರೆ. ಪೋಷಕರು ಕಳೆದ ಸೆಪ್ಟೆಂಬರ್ ತಿಂಗಳಿಂದ ಹೋರಾಟ ಮಾಡ್ತಿದ್ದಾರೆ. ಇಂದು ಬೆಳಗ್ಗೆಯಿಂದ ನಿಮ್ಮ ನಿವಾಸದ ಬಳಿ ಪೋಷಕರು ಕಾಯುತ್ತಿದ್ರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮ ಪ್ರತಿನಿಧಿಗಳು ಸಹ ಇದ್ರು. ಅದ್ರೇ ಮಾಧ್ಯಮ ಕಂಡ ಕೂಡಲೇ ಶಿಕ್ಷಣ ಸಚಿವರು ಏಕಾಏಕಿ ಗರಂ ಆದ್ರು. ನಿಮ್ಮನ್ನ ಯಾರು ಕರೆದ್ರು? ಕರೆದೋರ ಬಳಿಯೇ ಮಾತಾಡಿ! ಎಂದು ಸಚಿವರು ಹೇಳಿದ್ದಾರೆ.
ಎಚ್ಚೆತ್ತ ಶಿಕ್ಷಣ ಸಚಿವರು
1 ನೇ ತರಗತಿ ವಯೋಮಿತಿ ಗೊಂದಲ ವಿಚಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪೋಷಕರಿಗೆ ನಾನು ಹೇಳಿದ್ದು, ಮಾಧ್ಯಮಗಳಿಗೆ ಅಲ್ಲ. ವಯೋಮಿತಿ ಗೊಂದಲದ ಬಗ್ಗೆ ಪೋಷಕರು ನನ್ನ ಬಳಿ ಸಾಕಷ್ಟು ಭಾರಿ ಬಂದಿದ್ದಾರೆ. ವಯೋಮಿತಿ ಬಗ್ಗೆ ಕಳೆದ ಮೂರು ವರ್ಷಗಳ ಹಿಂದೆ ಆಗಿರೋದು. ಈಗ ಕಾನೂನಿನಲ್ಲಿ ಏನು ಮಾಡಲು ಸಾಧ್ಯ ಇದೆ ನೋಡಿಕೊಂಡು ಮಾಡಬೇಕು. ನಾನು ಅಧಿಕಾರಿಗಳಿಗೂ ಈ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಆದ್ರೆ ಪೋಷಕರು ಪದೇ ಪದೇ ಈ ರೀತಿ ಬಂದು ನನಗೆ ಒತ್ತಡ ಹಾಕ್ತಾರೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾನು ತೀರ್ಮಾನ ತೆಗೆದುಕೊಳ್ಳಬೇಕು. ಸುಮ್ಮನೇ ಹೇಗೆ ಅಂದ್ರೆ ಹಾಗೇ ಮಾಡಲು ಸಾಧ್ಯವಿಲ್ಲ ಎಂದರು.