ನಿಮ್ಮ ಮಕ್ಕಳು ಎಲ್ಲ ವಿಷಯಕ್ಕೂ ನಾಚಿಕೆ ಪಟ್ಟುಕೊಳ್ತಾರಾ? ಯಾಕೆ? ಆಗ ಏನು ಮಾಡಬೇಕು?
ಚಿಕ್ಕ ವಯಸ್ಸಿನಲ್ಲಿ ಕೆಲ ಮಕ್ಕಳಿಗೆ ತುಂಬ ನಾಚಿಕೆ ಇರುತ್ತದೆ. ಹೆಸರು ಹೇಳಲು ಮುಜುಗರ, ಮಾತನಾಡಲು ಮುಜುಗರ, ಒಮ್ಮೊಮ್ಮೆ ಅಮ್ಮನ ಮಡಿಲಿನಿಂದ ಏಳಲು ನಾಚಿಕೆ ಆಗೋದುಂಟು. ಮಕ್ಕಳು ಈ ರೀತಿ ಇದ್ದಾಗ ಅವರ ಸರ್ವತೋಮುಖ ಬೆಳವಣಿಗೆಯಾಗೋದು ತುಂಬ ಕಷ್ಟ, ಅವರು ಯಾರ ಜೊತೆಯೂ ಬೆರೆಯೋದಿಲ್ಲ. ಈ ನಾಚಿಕೆ ಹೋಗಲಾಡಿಸಲು ಏನೆಲ್ಲ ಮಾಡಬೇಕು?
ಕಾರಣ ತಿಳಿದುಕೊಳ್ಳಿ
ಮಕ್ಕಳು ಏಕೆ ನಾಚಿಕೆ ಪಡುತ್ತಾರೆ ಅಂತ ಮೊದಲು ತಿಳಿದುಕೊಳ್ಳಿ. ಮನೆಯಲ್ಲಿನ ವಾತಾವರಣ, ಬೆಳೆದುಬಂದ ಹಾದಿ, ವ್ಯಕ್ತಿತ್ವವೂ ಹಾಗೆ ಇರಬಹುದು. ಜಾತಕ ನಂಬುವವರು, ಅಲ್ಲಿನ ಗ್ರಹಗತಿಗಳು ಕಾರಣ ಅಂತ ಹೇಳುತ್ತಾರೆ.
ಭಾರತದ 10 ಬುದ್ಧಿವಂತ ಮಕ್ಕಳು ಇವರೇ ನೋಡಿ! ಈ ಪಟ್ಟಿಯಲ್ಲಿದ್ದಾನೆ ಬೆಂಗಳೂರು ಹುಡುಗ
ಬೇರೆಯವರ ಜೊತೆ ಮಾತಾಡೋಕೆ ಪ್ರೋತ್ಸಾಹಿಸಿ
ಬೇರೆಯವರ ಜೊತೆ ನಿಮ್ಮ ಮಕ್ಕಳು ಮಾತಾಡಲು ಪ್ರೋತ್ಸಾಹಿಸಬೇಕು. ಅವರು ಬೇರೆಯವರ ಜೊತೆಗೆ ಸ್ನೇಹದಿಂದ ಇದ್ದಾಗ, ಅವರಲ್ಲಿ ಮುಜುಗರ ಕಡಿಮೆ ಆಗಬಹುದು. ಇದರಿಂದ ಅವರು ಸ್ವಲ್ಪ ಧೈರ್ಯ ತಾಳುತ್ತಾರೆ, ಸಮಾಜದ ಜೊತೆ ಬೆರೆಯುತ್ತಾರೆ.
ನಿಮ್ಮ ಪ್ರತಿರೂಪವೇ ನಿಮ್ಮ ಮಗು
ಪ್ರತಿ ಮಗು ಪಾಲಕರನ್ನು, ಪೋಷಕರನ್ನು ನೋಡಿ ಕಲಿಯುತ್ತದೆ. ಹೀಗಾಗಿ ನೀವು ಬೇರೆಯವರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದರೆ, ಅದನ್ನೇ ನಿಮ್ಮ ಮಕ್ಕಳು ಕೂಡ ಅನುಸರಿಸುತ್ತವೆ.
ಒಳ್ಳೆಯ ವಾತಾವರಣ
ಸುರಕ್ಷಿತವಾಗಿ, ಬೆಂಬಲ ಕೊಡುವಂತಹ ಪ್ರದೇಶದಲ್ಲಿ ಮಕ್ಕಳು ಇರಬೇಕು. ಇದರಿಂದ ಉತ್ತಮ ಸಂವಹನ ಜೊತೆಗೆ ಆತ್ಮಸ್ಥೈರ್ಯ ಬರುವುದು. ನಂಬಿಕೆ, ಸುರಕ್ಷತೆ ಭಾವನೆ ಹೆಚ್ಚಾದಾಗ ಅವರು ಒಪನ್ ಅಪ್ ಆಗುತ್ತಾರೆ, ಆಗ ಮಾತನಾಡುತ್ತಾರೆ.
ಪ್ರಯತ್ನವನ್ನು ಮೆಚ್ಚಿಕೊಳ್ಳಿ
ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಹೊಗಳಿ ಅವರಿಗೆ ಖುಷಿ ಆಗುವಂತೆ ಮಾಡಿ. ಮಕ್ಕಳು ಮಾಡುವ ಕೆಲಸ ಯಶಸ್ಸು ಪಡೆಯಲಿದೆಯೋ ಇಲ್ಲವೋ ಎನ್ನೋದು ಆಮೇಲೆ, ಮೊದಲು ಅವರ ಪ್ರಯತ್ನವನ್ನು ಹೊಗಳಿ.
ಚೆಪಾಕ್ ಭದ್ರಕೋಟೆ ಭೇದಿಸಿದ ಆರ್‌ಸಿಬಿ; ಬದ್ಧ ಎದುರಾಳಿ ಸಿಎಸ್‌ಕೆ ಸೋಲಿಸಿದ್ದಕ್ಕೆ ವಿಜಯ್ ಮಲ್ಯ ಹೇಳಿದ್ದೇನು?
ಕಲಿಕೆ ಬೇಕು
ಬೇರೆಯವರನ್ನು ಮಾತನಾಡಿಸಬೇಕು, ಕೌಶಲ ವಿಚಾರಿಸಬೇಕು, ಬೆರೆಯಬೇಕು ಎನ್ನೋದನ್ನು ನೀವು ಆರಂಭದಲ್ಲಿಯೇ ಕಲಿಸಬೇಕು. ನೀವು ನಿಮ್ಮ ಮಕ್ಕಳಿಗೆ ಏನು ಹೇಳಿಕೊಡ್ತೀರೋ ಅದೇ ಅವರಲ್ಲಿ ಬೆಳೆಯೋದು.
ನಮ್ಮ ಮಗು ಹೀಗೆ ಅಂತ ಸಮರ್ಥನೆ ಮಾಡಿಕೊಳ್ಳಬೇಡಿ
ನಮ್ಮ ಮಗು ನಾಚಿಕೆ ಸ್ವಭಾವದವರು ಅಂತ ಫಿಕ್ಸ್ ಆಗಬೇಡಿ. ಇದರಿಂದ ಆ ಮಗು ಕೂಡ ನಾವು ಹೀಗೆ ಅಂತ ಫಿಕ್ಸ್ ಆಗುತ್ತದೆ, ಬೆಳವಣಿಗೆಯನ್ನು ತಡೆಯುತ್ತದೆ, ನಂಬಿಕೆ ಇರೋದಿಲ್ಲ. ಮಕ್ಕಳಲ್ಲಿ ದಯೆ, ಆಸಕ್ತಿ, ಇನ್ನಾವುದೇ ಪ್ರತಿಭೆಗಳಿದ್ದರೆ ಅದನ್ನು ಪ್ರೋತ್ಸಾಹಿಸಬೇಕು.
ಯಶಸ್ಸಿಗೆ ಅವಕಾಶಗಳನ್ನು ನೀಡಿ
ನಿಮ್ಮ ಮಕ್ಕಳು ಸಾಮಾಜಿಕವಾಗಿ ಯಶಸ್ಸು ಸಾಧಿಸಲು ಅವರಿಗೆ ಅವಕಾಶಗಳನ್ನು ನೀಡಿ. ಮಕ್ಕಳು ಇಷ್ಟಪಡುವ ಕೆಲಸಗಳನ್ನು ಮಾಡಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಅವರ ನಂಬಿಕೆ ಹೆಚ್ಚಾಗುತ್ತದೆ.
ತಾಳ್ಮೆ ಅವಶ್ಯಕ
ಮಕ್ಕಳಲ್ಲಿರುವ ಮುಜುಗರವನ್ನು ಹೋಗಲಾಡಿಸಲು ತಾಳ್ಮೆ ಬಹಳ ಅವಶ್ಯಕ. ಆದ್ದರಿಂದ ಅವರೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳು ತಮ್ಮಷ್ಟಕ್ಕೆ ತಾವೇ ಬದಲಾಗುವವರೆಗೂ ನೀವು ಅವರಿಗೆ ಬೆಂಬಲ ಕೊಡಬೇಕು, ಉತ್ತಮ ಮಾರ್ಗದಲ್ಲಿ ನಡೆದುಕೊಳ್ಳಬೇಕು.