ಬೆಂಗಳೂರು: ಹಾಲಿನ ದರ ಹೆಚ್ಚಳದ ಬಿಸಿಯನ್ನು ಶ್ರೀಸಾಮಾನ್ಯ ಅರಗಿಸಿಕೊಳ್ಳುವ ಮೊದಲೇ ರಾಜ್ಯ ಸರ್ಕಾರ ಬಸ್ ದರವನ್ನು ಹೆಚ್ಚಿಸಿದೆ. ಆದರೆ ಶೇ.23ರಿಂದ ಶೇ.35ರವರೆಗೂ ಆಗಿರುವ ಈ ಪ್ರಮಾಣದ ಏರಿಕೆ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಎನ್ನಲಾಗಿದೆ.
ಸ್ಟೇಜ್ ವಾರು ದರ ಹೆಚ್ಚಳದ ಸರಾಸರಿ ಲೆಕ್ಕದಲ್ಲಿ ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಪ್ರಯಾಣ ದರ ಸರಾಸರಿ ಶೇ.23 ಹಾಗೂ ಬಿಎಂಟಿಸಿ ದರ ಗರಿಷ್ಠ ಶೇ.35ರಷ್ಟು ಹೆಚ್ಚಳವಾಗಿದೆ.
ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ, ದೀಪಾವಳಿ ಹಬ್ಬದ ಸಂದರ್ಭಕ್ಕೆ ಸೀಮಿತವಾಗಿ ಶೇ.40ರವರೆಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ. ಆದರೆ ದರ ಏರಿಕೆ ಹಬ್ಬದ ಅವಧಿಗೆ ಮಾತ್ರ ಸೀಮಿತ. ಒಟ್ಟಾರೆ ದರ ಹೆಚ್ಚಳ ಸದ್ಯಕ್ಕೆ ಮಾಡುವ ಚಿಂತನೆಯಿಲ್ಲ ಎಂದು ಒಕ್ಕೂಟ ತಿಳಿಸಿದೆ.
ಆ ಕುರಿತಂತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಸಗಿ ಸಾರಿಗೆಗಳು ಸಂಕಷ್ಟದಲ್ಲಿವೆ. ಆದರೂ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ಸದ್ಯಕ್ಕೆ ಖಾಸಗಿ ಬಸ್‌ಗಳ ದರ ಹೆಚ್ಚಳ ಇಲ್ಲ. ಆದರೆ, ಹಬ್ಬ ಸೇರಿದಂತೆ ದೀರ್ಘ ರಜೆಯ ಸಂದರ್ಭದಲ್ಲಿ ಬಸ್ ದರ ಹೆಚ್ಚಳ ಮಾಡುವಂತೆ ಶೇ.40ರವರೆಗೆ ಹೆಚ್ಚಳ ಮಾಡಲಾಗಿದೆ. ನ.6ರಿಂದ 15ರವರೆಗೆ ಈ ಪ್ರಯಾಣ ದರ ಹೆಚ್ಚಳವಿರಲಿದೆ ಎಂದಿದ್ದಾರೆ.
11:37 AM (IST) Nov 05
ಉತ್ತರ ಕನ್ನಡದಲ್ಲಿ ವಿರೋಧಕ್ಕೆ ಕಾರಣವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಸ್ಥಗಿತಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರವೇ ಕೈಗೊಳ್ಳಬೇಕು ಎಂದು ಎನ್‌ಡಬ್ಲ್ಯುಡಿಎ ಸ್ಪಷ್ಟಪಡಿಸಿದೆ. ಯೋಜನೆಯ ಹಣಕಾಸು ವ್ಯವಸ್ಥೆ ಅನುಷ್ಠಾನದ ಹಂತದಲ್ಲಿ ಅಂತಿಮಗೊಳ್ಳಲಿದೆ ಎಂದು ತಿಳಿಸಿದೆ.
11:19 AM (IST) Nov 05
10:50 AM (IST) Nov 05
10:46 AM (IST) Nov 05
10:38 AM (IST) Nov 05
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ತಡೆಗೆ ಕೆಇಎ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಇನ್ನು ಮುಂದೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರು, ಸಿಸಿಟಿವಿ ಮತ್ತು ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇರಲಿದೆ. ಪರೀಕ್ಷೆ ಆರಂಭಕ್ಕೂ 30 ನಿಮಿಷ ಮುಂಚಿತವಾಗಿ ಅಭ್ಯರ್ಥಿಗಳು ಹಾಜರಾಗುವುದು ಕಡ್ಡಾಯ.
10:31 AM (IST) Nov 05
ಯಲಹಂಕದಲ್ಲಿ ಮಗಳ ಜೊತೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಬೀದಿಬದಿ ವ್ಯಾಪಾರಿಯೊಬ್ಬ ಕೂಡಿಹಾಕಿ ದಾರುಣ ಅಂತ್ಯ ಕೊಟ್ಟಿದ್ದಾನೆ. ಎರಡು ದಿನಗಳ ಕಾಲ ಬ್ಯಾಟ್ ಮತ್ತು ಪೈಪ್‌ಗಳಿಂದ ಥಳಿಸಿ, ಆಸ್ಪತ್ರೆಗೆ ಕರೆತಂದಾಗ ಕೊನೆಯುಸಿರೆಳೆದಿರುವುದು ಖಚಿತವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
10:06 AM (IST) Nov 05
ಬೆಂಗಳೂರಿನ ಆರ್ಯನ್ ಹೋಮ್‌ಟೆಕ್ ಕಂಪನಿ ನಿರ್ದೇಶಕರಾದ ಭರತ್ ರೆಡ್ಡಿ ಮತ್ತು ರಶ್ಮೀ ಭರತ್ ರೆಡ್ಡಿಗೆ ಸಂಬಂಧಿಸಿದ ಮೂರು ಸ್ಥಳಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ಅಪಾರ್ಟ್‌ಮೆಂಟ್ ಯೋಜನೆಗಳಿಗಾಗಿ ಸಂಗ್ರಹಿಸಿದ್ದ ₹90 ಕೋಟಿ ಹಣ ದುರ್ಬಳಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
08:16 AM (IST) Nov 05
Ramayana movie 4DX theaters Bengaluru ನಿತೇಶ್ ತಿವಾರಿ ನಿರ್ದೇಶನದ 4000 ಕೋಟಿ ಬಜೆಟ್‌ನ 'ರಾಮಾಯಣ' ಚಿತ್ರ ಬಿಡುಗಡೆಯಾಗಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಬೆಂಗಳೂರಿನ ವಿವಿಧ 4DX ಥಿಯೇಟರ್‌ಗಳಲ್ಲಿ ಈ ಪೌರಾಣಿಕ ಮಹಾಕಾವ್ಯವನ್ನು ನೈಜ ಅನುಭವದೊಂದಿಗೆ ವೀಕ್ಷಿಸಬಹುದಾಗಿದೆ.