Published : May 22, 2026, 07:24 AM ISTUpdated : May 22, 2026, 08:22 PM IST

State News Live: Appu-KGF - 'ಅಪ್ಪು ಅವರಿಗಾಗಿಯೇ ಹುಟ್ಟಿದ್ದ ಆ ಕಥೆ ಅವರ ಜೊತೆಯೇ ಮಣ್ಣಾಗಿ ಹೋಯ್ತು' ಎಂದ ಪ್ರಶಾಂತ್ ನೀಲ್!

ಸಾರಾಂಶ

ಬೆಂಗಳೂರು (ಮೇ.22): ರಾಜ್ಯ ಬಿಜೆಪಿಯಲ್ಲಿನ ಸದ್ಯದ ಸ್ಥಿತಿ ಬಗ್ಗೆ ಆ ಚಿಂತಿತರಾಗಿರುವ ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯೂ ಸೇರಿ ಇಡೀ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸಂಘಟನೆ ಬಲಪಡಿಸುವ ಕುರಿತು ಆಯ್ದ ಪ್ರಮುಖ ನಾಯಕರಿಂದ ಮುಕ್ತ ಅಭಿ ಪ್ರಾಯ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಜ್ಯದ ನಾಯಕರುಗಳು ಹೇಳಿಕೆಗಷ್ಟೆ ಸೀಮಿತ ಆಗುತ್ತಿದ್ದೀರಿ, ನಿರ್ಣಾಯಕ ಹೋರಾಟ ಯಾಕೆ ಆಗುತ್ತಿಲ್ಲ? ಹೋರಾಟಕ್ಕೆ ಅಸ್ತ್ರ ಸಿಕ್ಕರೂ ಅದನ್ನು ಯಾಕೆ ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯ ಘಟಕದಲ್ಲಿ ಮುಂದೆ ಏನಾಗಬೇಕಿದೆ ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷರ ಆಗಮನಕ್ಕೂ ಮುನ್ನವೇ ಚರ್ಚೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

08:22 PM (IST) May 22

Appu-KGF - 'ಅಪ್ಪು ಅವರಿಗಾಗಿಯೇ ಹುಟ್ಟಿದ್ದ ಆ ಕಥೆ ಅವರ ಜೊತೆಯೇ ಮಣ್ಣಾಗಿ ಹೋಯ್ತು' ಎಂದ ಪ್ರಶಾಂತ್ ನೀಲ್!

ಅಪ್ಪು ಜೊತೆ ಸಿನಿಮಾ ಮಾಡಲಾಗದ ಮರುಕವಿದ್ದರೂ, ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ 'ಡ್ರ್ಯಾಗನ್' ಮೂಲಕ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಲ್ಕು ನಿಮಿಷಗಳ ಗ್ಲಿಂಪ್ಸ್ ಈಗಾಗಲೇ ಸಂಚಲನ ಮೂಡಿಸಿದೆ.

Read Full Story

07:45 PM (IST) May 22

Paneer 65 Name Story - ಪನೀರ್ 65ಗೆ '65' ಅಂತ ಹೆಸರು ಬಂದಿದ್ದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

Paneer 65 History: ಪನೀರ್ 65 ಅಂತ ಯಾಕೆ ಕರೀತಾರೆ? ಈ ಫೇಮಸ್ ಸೌತ್ ಇಂಡಿಯನ್ ಡಿಶ್‌ನ ಹೆಸರಿನ ಹಿಂದಿರುವ ಇಂಟ್ರೆಸ್ಟಿಂಗ್ ಕಥೆ, ಇತಿಹಾಸ ಮತ್ತು ಕೆಲವು ಮಜವಾದ ಸಂಗತಿಗಳನ್ನು ಇಲ್ಲಿ ತಿಳಿಯಿರಿ.

Read Full Story

07:25 PM (IST) May 22

ರಾಜ್ಯದ ಮುಂದಿನ ಸಿಎಂ ಕಾಕ್ರೋಚ್​ ಜನತಾ ಪಕ್ಷದ ಕ್ರಿಶ್​ - ಪ್ರಮಾಣ ವಚನಕ್ಕೂ ಸಿದ್ಧತೆ- ವಿಡಿಯೋ ವೈರಲ್​

ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಕ್ಷ'ದ ಹವಾ ಜೋರಾಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೆಸರಿನ ಟೀ-ಶರ್ಟ್ ಬಿಡುಗಡೆ ಮಾಡಿದ್ದರೆ, 'ಹಿಟ್ ಜನತಾ ಪಕ್ಷ'ದ ವಿಡಿಯೋವೊಂದು ವೈರಲ್ ಆಗಿ ತಿರುಗೇಟು ನೀಡುತ್ತಿದೆ.
Read Full Story

06:55 PM (IST) May 22

ಯಾವ ದೇವರ ಮುಂದೆ ಬೇಕಾದರೂ ಸತ್ಯ ಮಾಡುತ್ತೇನೆ - ಸಿ.ಟಿ.ರವಿ ಹೀಗೆ ಹೇಳಿದ್ದು ಯಾಕೆ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಅನುಷ್ಠಾನಗೊಳ್ಳುತ್ತಿರುವ ಶೇ.95 ರಷ್ಟು ಕಾಮಗಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

Read Full Story

06:37 PM (IST) May 22

ಮಂಗಳೂರು ಎಂಆರ್‌ಪಿಎಲ್ ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಭೂಗತ ಇಂಧನ ಸಂಪರ್ಕದ ಯೋಜನೆ!

ಮಂಗಳೂರು ರಿಫೈನರಿ ಅಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್), ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಮಾನ ಇಂಧನ (ATF) ಪೂರೈಸಲು ಹೊಸ ಪೈಪ್‌ಲೈನ್ ನಿರ್ಮಿಸಲು ಅನುಮೋದನೆ ಪಡೆದಿದೆ. ದೇವನಗೊಂಡಿಯಿಂದ ವಿಮಾನ ನಿಲ್ದಾಣದವರೆಗೆ ನಿರ್ಮಿಸಲಾಗುವ ಈ ಯೋಜನೆಯು 36 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲಿದೆ.
Read Full Story

06:04 PM (IST) May 22

ಮೇ 25 ಮತ್ತು 26ರಂದು ಎಸ್‌ಬಿಐ ರಾಷ್ಟ್ರವ್ಯಾಪಿ ಮುಷ್ಕರ, 2 ದಿನದ ಮುಷ್ಕರಕ್ಕೆ ಮೇ 27ರವರೆಗೆ ಸಂಕಷ್ಟ

ಎಸ್‌ಬಿಐ ನೌಕರರ ಒಕ್ಕೂಟವು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 25 ಮತ್ತು 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರ ಮತ್ತು ಸರಣಿ ರಜೆಗಳಿಂದಾಗಿ, ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ತೊಂದರೆ ಅನುಭವಿಸುವ ಸಾಧ್ಯತೆಯಿದೆ.
Read Full Story

05:35 PM (IST) May 22

ಹುಬ್ಬಳ್ಳಿಯಲ್ಲಿ ಭೀಕರ ಘಟನೆ - ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮಾವನನ್ನೇ ಕೊಂದ ಅಳಿಯ!

ಶೆಡ್‌ನಲ್ಲಿ ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ. ಛಬ್ಬಿ ಗ್ರಾಮದ..

Read Full Story

05:14 PM (IST) May 22

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು 11 ಹೊಸ ಫ್ಲೈಓವರ್; ₹3,055 ಕೋಟಿ ಮೆಗಾ ಪ್ಲ್ಯಾನ್!

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಿಸಲು, ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮ್ಲೈಲ್) 3,055 ಕೋಟಿ ರು. ವೆಚ್ಚದಲ್ಲಿ 11 ಹೊಸ ಫ್ಲೈಓವರ್‌ಗಳನ್ನು ನಿರ್ಮಿಸಲು ಮುಂದಾಗಿದೆ. ನಗರದ ಕೇಂದ್ರ ಭಾಗ, ಮೈಸೂರು ರಸ್ತೆ, ಯಲಹಂಕ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಈ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
Read Full Story

04:31 PM (IST) May 22

ನೀಟ್ ಫಲಿತಾಂಶಕ್ಕಾಗಿ ಫಲಿತಾಂಶಕ್ಕೆ ಕಾಯದೆ ಇಂಜಿನಿಯರಿಂಗ್‌ಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲು ಕರ್ನಾಟಕ ನಿರ್ಧಾರ!

ನೀಟ್ ಪರೀಕ್ಷೆಯ ವಿವಾದಗಳಿಂದ ವೈದ್ಯಕೀಯ ಕೌನ್ಸೆಲಿಂಗ್ ವಿಳಂಬವಾಗುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ನೀಟ್ ಫಲಿತಾಂಶಕ್ಕಾಗಿ ಕಾಯದೆ ಇಂಜಿನಿಯರಿಂಗ್ ಮತ್ತು ಇತರ ಕೋರ್ಸ್‌ಗಳಿಗೆ ಸಿಇಟಿ ಕೌನ್ಸೆಲಿಂಗ್ ಅನ್ನು ಪ್ರತ್ಯೇಕವಾಗಿ ಆರಂಭಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಖಾಸಗಿ ಕಾಲೇಜುಗಳು ಶುಲ್ಕ ಮರುಪಾವತಿಗೆ ಒಪ್ಪಿವೆ ಎಂದು ತಿಳಿಸಿದ್ದಾರೆ.
Read Full Story

03:39 PM (IST) May 22

ಕೆಂಗೇರಿ ಗಟಾರದಲ್ಲಿ ಬಿದ್ದಿದ್ದ ಮಗುವನ್ನು ದತ್ತು ತಗೊಂಡಿದ್ದ ಮಂಗಳೂರಿನ ನಟಿ, Bigg Boss ಸ್ಪರ್ಧಿ, ಆ ಮಗು ಈಗ?

ಮಂಗಳೂರಿನ ಕೀರ್ತಿ ಭಟ್‌ ಅವರು ಈಗ ಉದಯ ಟಿವಿಯ ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿ ವಿಲನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪಘಾತವೊಂದರಲ್ಲಿ ಕೀರ್ತಿ ಭಟ್‌ ತಾಯಿ, ತಂದೆ, ಸಹೋದರ ಕೂಡ ತೀರಿಕೊಂಡಿದ್ದರು. ಕೆಲ ವರ್ಷಗಳಿಂದ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.

 

Read Full Story

03:34 PM (IST) May 22

ಮೇ 23ಕ್ಕೆ ಡಿಸಿಇಟಿ, ಎಂ.ಟೆಕ್ ಪ್ರವೇಶ ಪರೀಕ್ಷೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 23 ರಂದು ಡಿಸಿಇಟಿ ಮತ್ತು ಎಂ.ಟೆಕ್/ಎಂಇ ಪ್ರವೇಶ ಪರೀಕ್ಷೆಗಳನ್ನು ನಡೆಸಲಿದೆ. ಈ ಪರೀಕ್ಷೆಗಳಿಗೆ ಒಟ್ಟು 33,000ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದು, ಬೆಂಗಳೂರು ಸೇರಿದಂತೆ 8 ಕೇಂದ್ರಗಳಲ್ಲಿ ಬಿಗಿ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ.
Read Full Story

03:04 PM (IST) May 22

ಸುಹಾಸ್ ಸುಧಾಕರ್‌ ರಾಜಕೀಯ ಅಖಾಡ ಪ್ರವೇಶಿಸುವುದು ಖಚಿತ, ಕೈ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಸಂದೇಶ

ವರದಿ: ಜಡೇಕುಂಟೆ ಮಂಜುನಾಥ್

ದಿವಂಗತ ಸಚಿವ ಡಿ. ಸುಧಾಕರ್ ಅವರ ನಿಧನದ ನಂತರ ಪುತ್ರ ಸುಹಾಸ್ ರಾಜಕೀಯ ಅಖಾಡಕ್ಕೆ ಧುಮುಕುವುದು ನಿಶ್ಚಿತವಾಗಿದೆ. ಅಪ್ಪನ ಉತ್ತರಾಧಿಕಾರಿಯಾಗಿ ಹಿರಿಯೂರಿನಲ್ಲಿ ಬೆಂಬಲಿಗರನ್ನು ಭೇಟಿಯಾಗಿರುವ ಸುಹಾಸ್ ಅವರ ರಾಜಕೀಯ ಭವಿಷ್ಯವು ಇದೀಗ ಮತದಾರರು ಮತ್ತು ಪಕ್ಷದ ನಾಯಕರ ಕೈಯಲ್ಲಿದೆ.

Read Full Story

01:40 PM (IST) May 22

ಶಿವಂ ಅಸೋಸಿಯೇಟ್ 4500 ಕೋಟಿ ವಂಚನೆ - ಲಾಭ ಪಡೆದವರಿಗೆ ಈಗ ತನಿಖೆಯ ಬಿಸಿ, 1 ರೂ ಹೆಚ್ಚಿಗೆ ಪಡೆದ್ರೂ ಸಂಕಷ್ಟ!

ಬೆಳಗಾವಿಯ ಶಿವಂ ಅಸೋಸಿಯೇಟ್ ಹೂಡಿಕೆ ವಂಚನೆ ಪ್ರಕರಣದ ತನಿಖೆಯು ಹೊಸ ತಿರುವು ಪಡೆದುಕೊಂಡಿದ್ದು, ಹೂಡಿಕೆಗಿಂತ ಹೆಚ್ಚು ಲಾಭ ಪಡೆದವರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆರೋಪಿ ಶಿವಾನಂದ ನೀಲಣ್ಣವರ, ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಈ ಬೆಳವಣಿಗೆಯು ಲಾಭ ಪಡೆದ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.
Read Full Story

01:14 PM (IST) May 22

Darshan Coming - ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿರುವ ದರ್ಶನ್; ಸಕಲ ಸಿದ್ಧತೆ ಆಗಿದೆ, ಬರೋದಷ್ಟೇ ಬಾಕಿ!

ಒಂದ್ ಕಾಲದಲ್ಲಿ ಕುಚಿಕು ಗೆಳೆಯರಂತಿದ್ದವರು ದರ್ಶನ್ ಹಾಗು ಸುದೀಪ್.. ಆದ್ರೆ ಇವರಿಬ್ಬರ ಸ್ನೇಹ ಮುರಿದು ಬಿದ್ದಿದೆ. ಈಗ ದಾಸ ಉಳಿಸಿಕೊಂಡಿರೋ ಗೆಳೆತನ ಅಂದ್ರೆ ಅದು ‘ಸುಂಟರಗಾಳಿ’ ನಟಿ ರಕ್ಷಿತಾ ಬಳಿ ಮಾತ್ರ. ಸದ್ಯದಲ್ಲೇ ನಟ ದರ್ಶನ್ ಫ್ಯಾನ್ ಮುಂದೆ ಬರಲಿದ್ದಾರೆ, ಅದು ಹೇಗೆ? ನೋಡಿ ಈ ಸ್ಟೋರಿ..

Read Full Story

01:09 PM (IST) May 22

Rajeev Chandrasekhar - ಕೇರಳ ನೂತನ ಸ್ಪೀಕರ್‌ಗೆ ರಾಜೀವ್ ಚಂದ್ರಶೇಖರ್ ಅಭಿನಂದನೆ; NDA ಸಂಪೂರ್ಣ ಬೆಂಬಲ ಭರವಸೆ

ಕೇರಳದ ನೂತನ ಸ್ಪೀಕರ್ ಆಗಿ ಆಯ್ಕೆಯಾದ ತಿರುವಂಚೂರ್ ರಾಧಾಕೃಷ್ಣನ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಸದನದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು, ರಾಜ್ಯದ ಅಭಿವೃದ್ಧಿಗೆ ಎನ್‌ಡಿಎ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.

Read Full Story

12:56 PM (IST) May 22

ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಘೇರಾವ್ ಹಾಕಲು ಬಂದ 30ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರ ಬಂಧನ

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.

 

Read Full Story

12:50 PM (IST) May 22

Survey Number 45 - ಬಿಗ್​ಬಾಸ್​ ಗಿಲ್ಲಿಗೆ ಜೊತೆಯಾದ ಮಹಾನಟಿ ಬ್ಯೂಟಿ - ಹೊಸ ಸಿನಿಮಾದ ರೋಚಕ ಸ್ಟೋರಿ

ಬಿಗ್​ಬಾಸ್​ 12ರ ವಿಜೇತ ಗಿಲ್ಲಿ ನಟ, 'ಸರ್ವೇ ನಂಬರ್ 45' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಸೊಗಡಿನ ಈ ಕಥೆಯಲ್ಲಿ, ಮಹಾನಟಿ ಖ್ಯಾತಿಯ ಪ್ರವಳಿಕಾ ನಾಯಕಿಯಾಗಿದ್ದು, ರೈತನೊಬ್ಬ ತನ್ನ ಜಮೀನಿನ ಸರ್ವೇ ನಂಬರ್ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥಾವಸ್ತು.
Read Full Story

12:49 PM (IST) May 22

ಮಂಗಳೂರು - 1.48 ಕೋಟಿ ವೆಚ್ಚದಲ್ಲಿ ಸುರತ್ಕಲ್ ರೈಲ್ವೆ ನಿಲ್ದಾಣ ಅಭಿವೃದ್ಧಿ, ವಂದೇ ಭಾರತ್ ನಿಲುಗಡೆಗೆ ಸಿದ್ಧತೆಯೇ?

ಸಂಸದ ಬ್ರಿಜೇಶ್ ಚೌಟರ ಪ್ರಯತ್ನದಿಂದ 1.48 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳ್ಳುತ್ತಿದೆ. ಈಗಾಗಲೇ ಪ್ಲಾಟ್‌ಫಾರ್ಮ್ ಮತ್ತು ಮೇಲ್ಛಾವಣಿ ಕಾಮಗಾರಿ ಪೂರ್ಣಗೊಂಡಿದ್ದು, ವಂದೇ ಭಾರತ್ ಸೇರಿದಂತೆ ಪ್ರಮುಖ ರೈಲುಗಳ ನಿಲುಗಡೆಗೆ ಬೇಡಿಕೆ ಹೆಚ್ಚಿದೆ. ಈ ನಿಲ್ದಾಣವು ವಿದ್ಯಾರ್ಥಿಗಳಿಗೆ, ಕೈಗಾರಿಕೆಗಳಿಗೆ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವದ್ದಾಗಿದೆ.
Read Full Story

11:56 AM (IST) May 22

ತಂದೆಯನ್ನೇ ಕೊಂದ ಉಗ್ರರ ಪರ ನಿಲ್ಲುವ ಟಿವಿಕೆ ಜೊತೆ ಮೈತ್ರಿ? ರಾಹುಲ್ ಗಾಂಧಿಗೆ ಏನೂ ಅನ್ನಿಸಲ್ಲವೇ? ಬಿಜೆಪಿ ಶಾಸಕ ಚನ್ನಬಸಪ್ಪ ಕಿಡಿ

ಬಿಜೆಪಿ ಶಾಸಕ ಚನ್ನಬಸಪ್ಪ ಅವರು, ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್‌ಟಿಟಿಇಯನ್ನು ಗೌರವಿಸುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಕಾಂಗ್ರೆಸ್ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read Full Story

11:50 AM (IST) May 22

ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಜೂ.19ರವರೆಗೆ ಬದಲಾವಣೆ, ಕಾರಣವೇನು?

ಮಂಗಳೂರಿನಿಂದ ಮುಂಬೈಗೆ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಥಾಣೆಯಲ್ಲಿ ತಾತ್ಕಾಲಿಕವಾಗಿ ಕೊನೆಗೊಳಿಸಲಾಗುತ್ತಿದೆ. ಈ ಸೇವೆಯು ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದಾಗಿದೆ. ಇದಲ್ಲದೆ, ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಚೆನ್ನೈ-ಮಂಗಳೂರು ಮಾರ್ಗದ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ.
Read Full Story

11:38 AM (IST) May 22

'ಮೋದಿ 70 ವರ್ಷದ ಮುದಿಯ..' ಪ್ರಧಾನಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ್‌

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ದೇಶವು ಸಮಸ್ಯೆಗಳಿಂದ ಬಳಲುತ್ತಿರುವಾಗ ಮೋದಿ, ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸುತ್ತಿದ್ದ ನೀರೋ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Read Full Story

11:22 AM (IST) May 22

ಬಾಗಲಕೋಟೆ - 16 ವರ್ಷ ಪೂರ್ಣ, ಕುಡಚಿ ರೈಲು ಮಾರ್ಗ ಅಪೂರ್ಣ! ಭೂಮಿ ಕಳಕೊಂಡ ರೈತರು ಕೋರ್ಟ್ ಮುಂದೆ

2011ರಲ್ಲಿ ಆರಂಭವಾದ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯು ಭೂಸ್ವಾಧೀನ ವಿಳಂಬ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. 142 ಕಿ.ಮೀ. ಪೈಕಿ ಕೇವಲ 38 ಕಿ.ಮೀ. ಪೂರ್ಣಗೊಂಡಿದ್ದು, ಪ್ರಯಾಣಿಕರ ರೈಲು ಸಂಚಾರ ಆರಂಭವಾಗದ ಕಾರಣ ಸ್ಥಳೀಯ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.
Read Full Story

10:23 AM (IST) May 22

ಲಾಡ್ಲೇ ಮಶಾಕ್ ದರ್ಗಾ ಕೇಸ್ ವಿಚಾರದಲ್ಲಿ ಸಚಿವರ ಹಿಂದೇಟು - ಕಾನೂನು ಚೌಕಟ್ಟಿನಲ್ಲೇ 52 ಕೇಸ್‌ಗಳ ರದ್ದು ಎಂದ ಸರ್ಕಾರ!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ರೈತ ಮತ್ತು ಕನ್ನಡಪರ ಸಂಘಟನೆಗಳ ಮೇಲಿನ 52 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ಪೆಟ್ರೋಲ್-ಡೀಸೆಲ್ ದರ ಇಳಿಕೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

Read Full Story

10:06 AM (IST) May 22

ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ - ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಕರ್ನಾಟಕಕ್ಕೆ ವರುಣ ತಂಪೆರೆದಿದ್ದಾನೆ. ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು 19 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.

Read Full Story

09:15 AM (IST) May 22

ಕೆಜಿಎಫ್‌ ಯಶಸ್ಸನ್ನು ಹಣ ಗಳಿಕೆಗೆ ಬಳಸಲ್ಲ - ಯಶ್

ನಟ ಯಶ್ ತಮ್ಮ 'ಟಾಕ್ಸಿಕ್' ಚಿತ್ರದ ಮೂಲಕ ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಯಶಸ್ಸಿನ ಸೂತ್ರವನ್ನು ತಿರಸ್ಕರಿಸಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಭಾವನಾತ್ಮಕವಾಗಿ ಸಂಕೀರ್ಣವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Read Full Story

09:04 AM (IST) May 22

Soujanya case re-investigation - ಸೌಜನ್ಯ ಪ್ರಕರಣದಲ್ಲಿ ಅಚ್ಚರಿ ಬೆಳವಣಿಗೆ, ಸೌಜನ್ಯ ಕೇಸ್ ಮರು ತನಿಖೆಗೆ ಸಿಬಿಐಗೆ ಹಸ್ತಾಂತರ ಸಾಧ್ಯತೆ!

ಸೌಜನ್ಯ ಅತ್ಯಾ೧ಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯ ಕುರಿತು ಸಿಬಿಐ ಅಥವಾ ಕೇಂದ್ರ ಸರ್ಕಾರವೇ ಅಂತಿಮ ನಿರ್ಣಯ ಕೈಗೊಳ್ಳಲಿ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಮರು ತನಿಖೆಗೆ ಸೌಜನ್ಯ ಅವರ ತಾಯಿ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ.

Read Full Story

08:36 AM (IST) May 22

ನಿಮ್ಮ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಲೈಬ್ರರಿ ಇದೆಯೇ? ಬಳ್ಳಾರಿಯಲ್ಲಿ ನೋಡಿದರೆ ಅಚ್ಚರಿ ಆಗುತ್ತದೆ!

ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಯಾಣಿಕರು, ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಸ್ಥಾಪಿಸಿದೆ. ಬಸ್‌ಗಾಗಿ ಕಾಯುವ ಸಮಯವನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಲು ಇದು ಸಹಕಾರಿಯಾಗಿದ್ದು, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ವರದಾನವಾಗಿದೆ.

Read Full Story

07:28 AM (IST) May 22

ದರ್ಶನ್‌ ಜೊತೆ ಟೀ ಹೀರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ!

ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಟ ದರ್ಶನ್ ಜೊತೆಗಿನ ಫೋಟೋ ವೈರಲ್ ಆದ ಬಳಿಕ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ ಈತನಿಗೆ, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾಗಲೇ ಜಾಮೀನು ದೊರೆತು ಬಿಡುಗಡೆ ಮಾಡಲಾಗಿದೆ.

 

Read Full Story

07:27 AM (IST) May 22

2nd PUC Exam 2 Result : ಶೇ.40.36 ಮಾತ್ರ ಉತ್ತೀರ್ಣ, ನಿಮ್ಮ ಫಲಿತಾಂಶ ಚೆಕ್ ಮಾಡಿ, ಇಲ್ಲಿದೆ ಸಂಪೂರ್ಣ ಅಪ್ಡೇಟ್!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದ 1,20,410 ವಿದ್ಯಾರ್ಥಿಗಳಲ್ಲಿ ಶೇ.40.36ರಷ್ಟು ಮಂದಿ ಉತ್ತೀರ್ಣರಾಗಿದ್ದು, ಪರೀಕ್ಷೆ-1 ಮತ್ತು 2ರ ಒಟ್ಟು ಕ್ರೋಢೀಕೃತ ಫಲಿತಾಂಶ ಶೇ.86.72ಕ್ಕೆ ತಲುಪಿದೆ.

 

Read Full Story

07:27 AM (IST) May 22

ಬೆಂಗಳೂರಲ್ಲಿ ಅಂ.ರಾ. ಕ್ರಿಕೆಟ್ ಸ್ಟೇಡಿಯಂಗೆ ಸಿಎಂ ಚಾಲನೆ; ವಿಶ್ವದರ್ಜೆಯ ಕ್ರೀಡಾಂಗಣದ ವಿಶೇಷತೆಗಳೇನು?

ಆನೇಕಲ್‌ನ ಸೂರ್ಯನಗರ 4ನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿಯು 76,000 ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಮಗಾರಿಗೆ ಚಾಲನೆ ನೀಡಲಿದ್ದು, ಇದು ಪೂರ್ಣಗೊಂಡರೆ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.

 

Read Full Story

07:26 AM (IST) May 22

Gruha Lakshmi Scheme: 2 ತಿಂಗಳ ಕಂತು ಬಾಕಿ ಉಳಿಸಿಕೊಂಡ ಸರ್ಕಾರ; ಗೃಹಲಕ್ಷ್ಮಿ ಹಣ ಬಿಡುಗಡೆ ಕೋರಿ ಮಹಿಳೆಯರಿಬ್ಬರಿಂದ ಕೋರ್ಟ್‌ ಮೊರೆ!

ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಿಂಬಾಕಿ ಹಣ ಬಿಡುಗಡೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

 

Read Full Story

07:26 AM (IST) May 22

SC ST ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: 8ನೇ ಕ್ಲಾಸ್‌ ಅಲ್ಲ, ಈಗ SSLC ವರೆಗೂ ಫ್ರೀ ಎಜುಕೇಶನ್, ಇದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತಾ?

ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಈ ವಿದ್ಯಾರ್ಥಿಗಳು ಈವರೆಗೆ 8ನೇ ತರಗತಿವರೆಗೆ ಪಡೆಯುತ್ತಿದ್ದ ಉಚಿತ ಶಿಕ್ಷಣವನ್ನು ಇದೀಗ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ.

 

Read Full Story

07:26 AM (IST) May 22

ರಾಜ್ಯ ಬಿಜೆಪಿಗೆ ಟಾನಿಕ್‌ ನೀಡಲು ದಿಲ್ಲಿ ನಾಯಕರ ಕಸರತ್ತು; ಮಾತುಕತೆ - ಹೇಳಿಕೆಗಷ್ಟೇ ಸೀಮಿತ ಆಗ್ತಿದ್ದೀರಿ, ನಿರ್ಣಾಯಕ ಹೋರಾಟ ಯಾಕಿಲ್ಲ?

ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಮತ್ತು ಸಂಘಟನಾತ್ಮಕ ದೌರ್ಬಲ್ಯದ ಬಗ್ಗೆ ವರಿಷ್ಠರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ, ದಿಲ್ಲಿ ನಾಯಕರು ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ, ಕಾಂಗ್ರೆಸ್ ಸರ್ಕಾರದ ವೈಫಲ್ಯ ಬಳಸಿಕೊಳ್ಳುವಲ್ಲಿನ ವಿಫಲತೆ ಬಗ್ಗೆ ಅಭಿಪ್ರಾಯ ಸಂಗ್ರಹ

 

Read Full Story

07:25 AM (IST) May 22

ನಾನು ಯಾವಾಗ ಸಿಎಂ ಆಗುತ್ತೇನೆ ಗೊತ್ತಾ?: ಡಿ.ಕೆ.ಶಿವಕುಮಾರ್ ಉತ್ತರ ಕೇಳಿ ಎಲ್ಲರೂ ಶಾಕ್!

ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್‌ಗೆ..

 

Read Full Story

More Trending News