ಬೆಂಗಳೂರು (ಜೂ.19): ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿಯ ಬರೋಬ್ಬರಿ 11 ಶಾಸಕರಿಂದ ಅಡ್ಡ ಮತದಾನವಾಗಿದೆ. ಇದರಿಂದಾಗಿ ಕಾಂಗ್ರೆಸ್‌ನ 7ನೇ ಅಭ್ಯರ್ಥಿ ವಿನಯ್‌ಗೆ ಹೆಚ್ಚುವೋಟ್ ಸಿಕ್ಕಿದೆ. ಅಡ್ಡ ಮತದಾನ ಮಾಡಿದ್ದು ಯಾರು ಅನ್ನೋದು ದೋಸ್ತಿ ಪಾಳಯದ ಚಿಂತೆಯಾಗಿದೆ. ಇದರೊಂದಿಗೆ ಕಾಂಗ್ರೆಸ್ ವಿಧಾನಪರಿಷತ್ ಚುನಾವಣೆಯಲ್ಲಿ 5ಕ್ಕೆ 5 ಸ್ಥಾನವನ್ನೂ ಗೆದ್ದುಕೊಂಡಿದ್ದರೆ,ಬಿಜೆಪಿ 2ಕ್ಕೆ 2 ಹಾಗೂ ಜೆಡಿಎಸ್ 1ಕ್ಕೆ 0 ಸೀಟು ಪಡೆದುಕೊಂಡಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
10:27 PM (IST) Jun 19
10:17 PM (IST) Jun 19
ಶಕ್ತಿ ಯೋಜನೆ ಕುರಿತು ನಡೆದ ಮಹತ್ವದ ಸಭೆಯಲ್ಲಿ ಸಾರಿಗೆ ನಿಗಮಗಳು ಸ್ಫೋಟಕ ವರದಿ ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ವರದಿ ನೀಡಿದ್ದಾರೆ. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ?
09:06 PM (IST) Jun 19
Hoskote ತಾಲ್ಲೂಕಿನ ಸೂಲಿಬೆಲೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ, ಅಮ್ಮ ಹಾಗೂ ಮಗಳು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
09:02 PM (IST) Jun 19
ಮಂಗಳೂರು ಮೂಲದ ಉದ್ಯಮಿ ,ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ 'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು.
08:22 PM (IST) Jun 19
Rashmika Mandanna ಅವರ ಐಷಾರಾಮಿ ಜೀವನಶೈಲಿ ಯಾವಾಗಲೂ ಗಮನ ಸೆಳೆಯುತ್ತದೆ. ಅವರ ಬೆರಗುಗೊಳಿಸುವ ಕೊಡಗಿನ ಮನೆಯಿಂದ ಹಿಡಿದು ಅದರ ಸುಂದರವಾದ ಒಳಾಂಗಣದವರೆಗೆ, 'ಕಾಕ್‌ಟೇಲ್ 2' ನಟಿಯ ಕನಸಿನ ಮನೆ, ಅದರ ಮೌಲ್ಯ ಮತ್ತು ಸೊಗಸಾದ ವಾಸದ ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ.
08:07 PM (IST) Jun 19
07:38 PM (IST) Jun 19
Ayya Movie ಶೂಟಿಂಗ್ ವೇಳೆ ನಟ ದರ್ಶನ್‌ಗೆ ಉಪ್ಪಿಟ್ಟು ಮಾಡಿ ತಿನ್ನಿಸಿದ್ದ ಕುತೂಹಲಕರ ಘಟನೆಯನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಅಡುಗೆ ಪ್ರಯೋಗದ ಹಿಂದಿನ ಮಜವಾದ ಕಥೆಯನ್ನೂ ಅವರು ಬಹಿರಂಗಪಡಿಸಿದ್ದಾರೆ.
07:08 PM (IST) Jun 19
06:11 PM (IST) Jun 19
ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (IHCL), ಬೆಂಗಳೂರಿನ ಯಶವಂತಪುರದಲ್ಲಿ ಹೊಸ 'ಗೇಟ್‌ವೇ' ಹೋಟೆಲ್ ಆರಂಭಿಸಲು ಆರ್.ಎನ್. ಶೆಟ್ಟಿ ಗ್ರೂಪ್‌ನ 'ನವೀನ್ ಹೋಟೆಲ್ಸ್' ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬ್ರೌನ್‌ಫೀಲ್ಡ್ ಯೋಜನೆಯು 283 ಕೊಠಡಿಗಳು, ರೆಸ್ಟೋರೆಂಟ್‌ಗಳು, ಮತ್ತು ಬೃಹತ್ ಸಮಾವೇಶ ಸ್ಥಳವನ್ನು ಹೊಂದಿರಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
05:21 PM (IST) Jun 19
ಸಾಕುಪ್ರಾಣಿಗಳ ಐಷಾರಾಮಿ ಆರೈಕೆ ಮತ್ತು ಸಂತೋಷಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ಮೂಲಕ ಬೆಂಗಳೂರು ಭಾರತದ 'ಪೆಟ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದೆ. ದೇಶಾದ್ಯಂತ ಬೆಕ್ಕಿನ ಆಹಾರದ ಆರ್ಡರ್‌ಗಳು ಹೆಚ್ಚಿದ್ದರೂ, ಶ್ವಾನ ಪ್ರೇಮಿಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ
04:53 PM (IST) Jun 19
Rishab Shetty ಅಭಿನಯದ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನ ಈ ಐತಿಹಾಸಿಕ ಚಿತ್ರ 2028 ಮತ್ತು 2029ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.
04:41 PM (IST) Jun 19
04:11 PM (IST) Jun 19
Rachita Ram: ರಕ್ಷಿತಾ, ರಮ್ಯಾ, ರಾಧಿಕಾ ಬಳಿಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ‘ರ’ ಹೆಸರಿನ ಪ್ರತಿಭಾವಂತ ನಟಿ. ಮೊದಲ ಮೂವರೂ ಒಂದು ದಶಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 14 ವರ್ಷಗಳಾದರೂ ರಚಿತಾ ಓಟ ಮುಂದುವರಿಕೆ. ಈ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ.
03:46 PM (IST) Jun 19
02:51 PM (IST) Jun 19
ಬೆಂಗಳೂರಿನ 'ನಮ್ಮ ಮೆಟ್ರೋ' ವಿಸ್ತರಣೆ ಯೋಜನೆಗಳು ತೀವ್ರ ವಿಳಂಬ ಎದುರಿಸುತ್ತಿವೆ. ಹಂತ-3 ಮತ್ತು ಹಂತ-3ಎ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮೋದನೆ ಪ್ರಕ್ರಿಯೆಯಲ್ಲಿ ಸಿಲುಕಿದ್ದು, ಡಬಲ್ ಡೆಕ್ಕರ್ ಕಾರಿಡಾರ್‌ನಂತಹ ಹೊಸ ಪ್ರಸ್ತಾಪಗಳು ವಿಳಂಬಕ್ಕೆ ಮತ್ತಷ್ಟು ಕಾರಣವಾಗಿವೆ.
01:28 PM (IST) Jun 19
01:16 PM (IST) Jun 19
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.
12:49 PM (IST) Jun 19
ಈ ವರ್ಷ ವಿಶ್ವದಲ್ಲಿ ಮಿಲಿಯನೇರ್ಗಳು ಹೊಸ ದಾಖಲೆ ಸ್ಥಾಪಿಸಲಿದ್ದಾರೆ. ಹೆನ್ಲಿ ಖಾಸಗಿ ಸಂಪತ್ತು ವಲಸೆ ವರದಿ 2026 ರ ಪ್ರಕಾರ, ವಿಶ್ವದ ಸುಮಾರು 165,000 ಶ್ರೀಮಂತರು ತಮ್ಮ ತಾಯ್ನಾಡನ್ನು ತೊರೆದು ಇತರ ದೇಶಗಳಲ್ಲಿ ನೆಲೆಸುವ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಮಿಲಿಯನೇರ್ ಗಳ ಫೆವರೆಟ್ ಜಾಗ ಬದಲಾಗಿದೆ.
12:44 PM (IST) Jun 19
ತಿರುಮಲದಲ್ಲಿರುವ ಕರ್ನಾಟಕ ಭವನದ 350 ಕೊಠಡಿಗಳ ನಿರ್ವಹಣೆಯನ್ನು ಮುಜರಾಯಿ ಇಲಾಖೆಯು ಕೆಎಸ್‌ಟಿಡಿಸಿಗೆ ಹಸ್ತಾಂತರಿಸಿದೆ. ಇದರಿಂದ ಕೆಎಸ್‌ಟಿಡಿಸಿ ಪ್ರವಾಸ ಪ್ಯಾಕೇಜ್ ಮೂಲಕ ಹೋಗುವ ಭಕ್ತರಿಗೆ ಉತ್ತಮ ವಸತಿ ಸೌಲಭ್ಯ ಸಿಗಲಿದ್ದು, ಬೆಂಗಳೂರಿನಿಂದ ವಿಶೇಷ ಪ್ಯಾಕೇಜ್ ಮೂಲಕ ಶೀಘ್ರ ದರ್ಶನವನ್ನೂ ಪಡೆಯಬಹುದು.
12:20 PM (IST) Jun 19
11:29 AM (IST) Jun 19
ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್‌ಫಾರ್ಮ್ ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ.
11:12 AM (IST) Jun 19
11:05 AM (IST) Jun 19
10:33 AM (IST) Jun 19
ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿದ್ದ 30 ಎಕರೆ ಭೂಮಿಗೆ ಸಂಬಂಧಿಸಿದಂತೆ 14 ವರ್ಷಗಳ ಹಿಂದೆ ಏಕಸದಸ್ಯ ಪೀಠ ನೀಡಿದ್ದ ರದ್ದತಿ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಇದೀಗ ವಜಾಗೊಳಿಸಿದೆ.
10:32 AM (IST) Jun 19
ಭಟ್ಕಳದ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಮೇಲೆ ಸಹೋದ್ಯೋಗಿ ಮುಸ್ಲಿಂ ಯುವಕ ಶಾಹೀದ್ ಖಾನ್‌ನನ್ನು ಯುವತಿಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
10:04 AM (IST) Jun 19
ರಾಜ್ಯ ಸರ್ಕಾರಗಳು 2.21 ಕೋಟಿ ಅನರ್ಹ ಪಡಿತರ ಚೀಟಿಗಳನ್ನು ತೆಗೆದುಹಾಕುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಸುಮಾರು 3 ಕೋಟಿ ಹೊಸ ಪಡಿತರ ಚೀಟಿಗಳನ್ನು ವಿತರಿಸಲು ಅನುಮತಿ ನೀಡಿದೆ. ಪಿಡಿಎಸ್ ವ್ಯವಸ್ಥೆಯ ಡಿಜಿಟಲೀಕರಣದಿಂದಾಗಿ ಈ ಕ್ರಮ ಸಾಧ್ಯವಾಗಿದೆ.
08:07 AM (IST) Jun 19
08:01 AM (IST) Jun 19
ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ ಕಳ್ಳತನ ಆರೋಪದ ಮೇಲೆ ಅರ್ಚಕ ಎಸ್. ನಾರಾಯಣಭಟ್ಟ ಸೇರಿದಂತೆ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲರನ್ನೂ ಅಮಾನತುಗೊಳಿಸಿ ಆದೇಶ.
07:33 AM (IST) Jun 19
ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲೇ ಹೃದಯಾಘಾತ(heart attack) ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು, ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
07:33 AM (IST) Jun 19
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
07:33 AM (IST) Jun 19
ರಾಜ್ಯ ಬಿಜೆಪಿಯಲ್ಲಿನ ನಾಯಕತ್ವದ ಗೊಂದಲ, ನಿರ್ಧಾರ ವಿಳಂಬ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮಾತನಾಡಿದ್ದಾರೆ. ರಾಜ್ಯಾಧ್ಯಕ್ಷರ ಕುರಿತು ಶೀಘ್ರದಲ್ಲೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ, ಪಕ್ಷದ ಆಂತರಿಕ ಕಾರ್ಯವೈಖರಿ ಸಮರ್ಥಿಸಿಕೊಂಡಿದ್ದಾರೆ.
07:32 AM (IST) Jun 19
20 ವರ್ಷಗಳಿಂದ ಭೂ ಪರಿಹಾರ ಸಿಗದ ಕಾರಣ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ್ದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಲೋಕಾಯುಕ್ತರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಮಾಧ್ಯಮ ವರದಿ ಆಧರಿಸಿ ಈ ಕ್ರಮ ಕೈಗೊಂಡಿದ್ದು, ಸಂಬಂಧಿತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
07:32 AM (IST) Jun 19
ಜೂನ್ 19ರಂದು ಯಾವೆಲ್ಲಾ ಶುಭ-ಅಶುಭ ಯೋಗಗಳು ರೂಪುಗೊಳ್ಳಲಿವೆ? ಅಂದು ಯಾವ ಗ್ರಹ ರಾಶಿ ಬದಲಿಸಲಿದೆ? ಜೂನ್ 19ರಂದು ಯಾವ ರಾಶಿಯಲ್ಲಿ 'ಗ್ರಹಣ' ಎಂಬ ಅಶುಭ ಯೋಗ ಉಂಟಾಗಲಿದೆ? ಇಲ್ಲಿದೆ ಮಾಹಿತಿ.
07:32 AM (IST) Jun 19
ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣ ಆರ್‌ಬಿಐ, ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರವನ್ನು ನಿಷೇಧಿಸಲಾಗಿದೆ
07:31 AM (IST) Jun 19
ಬೆಂಗಳೂರಿನಲ್ಲಿ ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಸರ್ಕಾರವು ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಈ ಅವಕಾಶ ಜೂ.21 ರಿಂದ ಜು.10 ರವರೆಗೆ ಲಭ್ಯವಿದ್ದು, ನಗರದ 12 ಕಡೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ ಹಾಗೂ ವಿವಿಧ ಆ್ಯಪ್‌ಗಳ ಮೂಲಕವೂ ದಂಡ ಪಾವತಿಸಬಹುದು.
07:31 AM (IST) Jun 19
ಕರ್ನಾಟಕ ಸರ್ಕಾರವು ಡಿ.ರಂದೀಪ್, ತುಳಸಿ ಮದ್ದಿನೇನಿ ಸೇರಿದಂತೆ ಹದಿಮೂರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಹಲವು ಅಧಿಕಾರಿಗಳಿಗೆ ಹೊಸ ಹುದ್ದೆಗಳನ್ನು ನೀಡಲಾಗಿದ್ದು, ಕೆಲವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ.