ಬೆಂಗಳೂರು: ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಪುಟ ಪುನಾರಚನೆ ನಡೆಸುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು ಸುಮಾರು 25 ಶಾಸಕರ ತಂಡ ಇಂದು ಭಾನುವಾರ ದೆಹಲಿಗೆ ತೆರಳಲಿದೆ. ಸಂಪುಟ ಪುನಾರಚನೆ ಮಾಡುವಂತೆ ಪಕ್ಷದಲ್ಲಿ ತೀವ್ರ ಒತ್ತಡವಿದ್ದು, ಹಿರಿಯ ಸದಸ್ಯರು ಸೇರಿ ವಿಧಾನ ಪರಿಷತ್ ಸದಸ್ಯರು, ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತ್ಯೇಕ ಸಭೆ ಮಾಡಿ ಸಂಪುಟ ಪುನಾರಚನೆ ಮಾಡಿ ತಮಗೆ ಸ್ಥಾನ ನೀಡಬೇಕೆಂದು ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು ಸೇರಿ ವಿವಿಧ ಕಾರಣಗಳಿಂದ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಹೈಕಮಾಂಡ್ ಮುಂದೂಡುತ್ತಾ ಬಂದಿದೆ.
11:56 PM (IST) Apr 12
11:24 PM (IST) Apr 12
ನೆಲಮಂಗಲದಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ನೇಣಿಗೆ ಶರಣಾಗಿದ್ದಾರೆ. ವಿವಾಹಿತ ಮಹಿಳೆಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
10:50 PM (IST) Apr 12
08:33 PM (IST) Apr 12
ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ವೈದ್ಯಕೀಯ ವೃತ್ತಿಪರರು ಸಹಾನುಭೂತಿ, ನೈತಿಕ ಮೌಲ್ಯಗಳು ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನು ಮರೆಯಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
08:22 PM (IST) Apr 12
Masala Vada Recipe: ಕಡಲೆಬೇಳೆ ವಡೆ. ಹೊರಗೆ ಗರಿಗರಿಯಾಗಿ, ಒಳಗೆ ಖಾರವಾಗಿ, ಬಿಸಿಬಿಸಿ ಚಹಾ ಜೊತೆ ಸವಿದರೆ ಬಾಯಲ್ಲಿ ನೀರೂರುತ್ತೆ. ದಕ್ಷಿಣ ಭಾರತೀಯರ ನೆಚ್ಚಿನ ಸ್ನ್ಯಾಕ್ಸ್ ಅಂದ್ರೆ ಅದು ಕಡಲೆಬೇಳೆ ವಡೆ. ಇದನ್ನು ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಮಾಡಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.
08:21 PM (IST) Apr 12
ಸಂಪುಟ ಪುನರ್ ರಚನೆ ಆಗಬೇಕೆಂದು ಹಿರಿಯ ಶಾಸಕರು ಕೇಳಿದ್ದಾರೆ. ಅದು ತಪ್ಪೂ ಅಲ್ಲ, ಬಂಡಾಯ ಅಥವಾ ಪಕ್ಷ ವಿರೋಧಿ ಅಂತನೂ ಅಲ್ಲ. ಅವರ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
07:47 PM (IST) Apr 12
06:56 PM (IST) Apr 12
06:51 PM (IST) Apr 12
06:31 PM (IST) Apr 12
06:30 PM (IST) Apr 12
ದ್ವೇಷ ಬಿಟ್ಟು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
06:18 PM (IST) Apr 12
ಜೆಡಿಎಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಒಂದೇ ಒಂದು ಬಾರಿ ಅವಕಾಶ ನೀಡಿ. ಈ ರಾಜ್ಯಕ್ಕೆ ಹಿಡಿದಿರುವ ಗ್ರಹಣವನ್ನು ಸಂಪೂರ್ಣವಾಗಿ ಬಿಡಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
06:07 PM (IST) Apr 12
ಬೆಂಗಳೂರಿನಲ್ಲಿ ಐಷಾರಾಮಿ ಜೀವನಕ್ಕಾಗಿ ಪ್ರತಿಷ್ಠಿತ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಅಪಹರಿಸಿದ್ದಾರೆ. ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪಿಗಳನ್ನು, ಸಂತ್ರಸ್ತನ ಸ್ನೇಹಿತರು ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಬಂಧಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
06:02 PM (IST) Apr 12
ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು.
05:31 PM (IST) Apr 12
05:08 PM (IST) Apr 12
04:38 PM (IST) Apr 12
ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು ಸುಮಾರು 2.83 ಕೋಟಿ ರೂ. ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಭೂ ವಿನ್ಯಾಸ ನಕ್ಷೆ ಅನುಮೋದನೆಯಲ್ಲೂ ವ್ಯಾಪಕ ಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ.
04:15 PM (IST) Apr 12
ನಟಿ ಸುಧಾರಾಣಿ ಅವರು ನಟ ಆಮೀರ್ ಖಾನ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 1988ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿಯಾಗಿದ್ದರೂ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
02:22 PM (IST) Apr 12
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಪ್ರಮುಖ ಪಾತ್ರ ಮುಕ್ತಾಯಗೊಳಿಸಲಾಗಿದೆ. ಈ ಹಿಂದೆ ಹಲವು ಪಾತ್ರಗಳು ಕಣ್ಮರೆಯಾಗಿದ್ದು, ಇದೀಗ ಜಾನು ವಾಪಸ್ ಬಂದಿರುವುದರಿಂದ ಕಥೆಯು ಜಾನು ಮತ್ತು ಜಯಂತ್ ನಡುವಿನ ಸಂಘರ್ಷದತ್ತ ಸಾಗುವ ಸೂಚನೆ ನೀಡಿದೆ.
01:51 PM (IST) Apr 12
ಕರ್ಣ ಸೀರಿಯಲ್ನಲ್ಲಿ ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ್ ಹೊಸ ಪ್ಲ್ಯಾನ್ ಮಾಡಿದ್ದು, ಇದಕ್ಕೆ ತಿರುಗೇಟು ನೀಡಲು ಕರ್ಣ ಸಿದ್ಧನಾಗಿದ್ದಾನೆ. ಆದರೆ, ಎಲ್ಲರ ಊಹೆಗಳನ್ನು ಮೀರಿ 'ಸೀತಾರಾಮ' ಖ್ಯಾತಿಯ ಗಗನ್ ಚಿನ್ನಪ್ಪ, ಅರ್ಜುನ್ ಆಗಿ ನಿಧಿಯನ್ನು ಮದುವೆಯಾಗಲು ಎಂಟ್ರಿ ಕೊಟ್ಟಿದ್ದಾನೆ.
01:21 PM (IST) Apr 12
ಧಾರವಾಡದಲ್ಲಿ ನಡೆದ ಯುವ ಕಾಂಗ್ರೆಸ್ ನಾಯಕ ಫೈರೋಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಸಂಚುಕೋರರು ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ. ಪಠಾಣ್ ಅವರ ಆತ್ಮೀಯರೇ ಈ ಕೃತ್ಯ ಎಸಗಿದ್ದು, ಇತ್ತೀಚಿನ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.
01:20 PM (IST) Apr 12
ಪ್ರತಿ ದಿನ ಬೆಂಗಳೂರಲ್ಲಿ ಖರ್ಚಾಗುವ ಹಣ ಎಷ್ಟು? ಇಷ್ಟೊಂದು ಹಣ ಎಲ್ಲಿ ಹೋಗುತ್ತಿದೆ?, ಭಾರತ ಟೆಕ್ ಸಿಟಿ ಬೆಂಗಳೂರಲ್ಲಿ ಪ್ರತಿ ದಿನದ ಖರ್ಚು ವೆಚ್ಚದ ಮಾಹಿತಿ ಹಲವರನ್ನು ಅಚ್ಚರಿಗೊಳಿಸುವುದು ಖಚಿತ
01:10 PM (IST) Apr 12
12:58 PM (IST) Apr 12
12:20 PM (IST) Apr 12
ಮಂಗಳೂರಿನಲ್ಲಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಪ್ರೇಮ ಪ್ರಕರಣದ ತಿರುವು ಸಿಕ್ಕಿದೆ. ಮೃತ ಯುವಕನ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಚಾಟ್ ಆಧಾರದ ಮೇಲೆ, ಆತ ಪ್ರೀತಿಸುತ್ತಿದ್ದ ಯುವತಿ ಮತ್ತು ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
12:18 PM (IST) Apr 12
"ಯೋಗ ಆರಂಭಿಸಿದ ಮೇಲೆ ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ ‘ಸದ್ಗುರು’ ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ' ಎಂದ ನಟಿ ಐಶ್ವರ್ಯಾ ಭಾಸ್ಕರನ್..
12:14 PM (IST) Apr 12
11:49 AM (IST) Apr 12
ದೀಪಿಕಾ ಪಡುಕೋಣೆ ಅವರ ಕ್ರೇಜ್ ಬಾಲಿವುಡ್‌ನಲ್ಲಿ ಕಡಿಮೆಯಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರಿಗೆ ಈ ಸುದ್ದಿ ಒಂದು ಶಾಕ್ ನೀಡಲಿದೆ. ‘ರಾಕಾ’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 'ಇಷ್ಟು' ಕೋಟಿ ರೂಪಾಯಿ! ಹೀಗಂತ ಸುದ್ದಿ ಸುತ್ತುತ್ತಿದೆ!
11:48 AM (IST) Apr 12
ಪುತ್ತೂರಿನ ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನೂತನ ಗೋಪುರವನ್ನು ಲೋಕಾರ್ಪಣೆ ಮಾಡಿದರು. ಹನುಮಂತನ ಸೇವೆ ಮತ್ತು ಶ್ರೀರಾಮನ ಧರ್ಮಪಾಲನೆಯನ್ನು ಸ್ಮರಿಸಿದ ಅವರು, ಧರ್ಮ-ಸಂಸ್ಕೃತಿ ಬಲಪಡಿಸಲು ಸಂಘಟಿತರಾಗಲು ಕರೆ ನೀಡಿದರು.
11:47 AM (IST) Apr 12
ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಅಮಾನವೀಯವಾಗಿ ಸೆರೆ ಹಿಡಿದಿದ್ದನ್ನು ಖಂಡಿಸಿ ನಟಿ ರಮ್ಯಾ ಪ್ರತಿಭಟನೆಯಲ್ಲಿ ಭಾಗವಹಿಸಿ ಕಣ್ಣೀರಿಟ್ಟಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದ್ದು, ಪ್ರಾಣಿಪ್ರಿಯರು ನಾಪತ್ತೆಯಾದ ನಾಯಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ.
11:14 AM (IST) Apr 12
ಚಂದನ್ ಶೆಟ್ಟಿ ಈಗ ಕೇವಲ ಗಾಯಕನಾಗಿ ಉಳಿದಿಲ್ಲ, ಸ್ಯಾಂಡಲ್‌ವುಡ್‌ನ ಭರವಸೆಯ ನಟನಾಗಿಯೂ ಮಿಂಚಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ನಮ್ಮನ್ನು 90ರ ದಶಕದ ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗಲಿದೆ. ಇದೀಗ ಮ್ಯಾರೇಜ್ ಸುದ್ದಿ ಸೌಂಡ್ ಮಾಡ್ತಿದೆ.
11:09 AM (IST) Apr 12
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಅಡಕೆ ಹಾಳೆಯಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ರಕ್ಷಿಸಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
10:43 AM (IST) Apr 12
09:32 AM (IST) Apr 12
09:04 AM (IST) Apr 12
ನಾಸಾದ ಆರ್ಟೆಮಿಸ್-2 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾನಿಗಳು ಚಂದ್ರನ ಪ್ರದಕ್ಷಿಣೆ ಹಾಕಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಐತಿಹಾಸಿಕ ಸಾಧನೆಯ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಅಮಿತ್ ಕ್ಷತ್ರಿಯ ಅವರ ಪ್ರಮುಖ ಪಾತ್ರವಿದೆ.
08:44 AM (IST) Apr 12
ಆರೋಪಿತರಿಗೆ ಎಫ್ಐಆರ್ ಪ್ರತಿ ನೀಡಲು ನಿರಾಕರಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ. ಡ್ರೋನ್ ಪತನ ಪ್ರಕರಣದಲ್ಲಿ ಆರೋಪಿತರಿಗೆ ಎಫ್ಐಆರ್ ಪ್ರತಿ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
08:35 AM (IST) Apr 12
ಮದುವೆಯಾದ ಒಂದೇ ತಿಂಗಳಿಗೆ ಪತಿ ಸುದೀಪ್ ರೈ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕರಾವಳಿಯ ನಟಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಸುದೀಪ್ ರೈ ಅವರ ತಂದೆ ನೀಡಿದ ದೂರಿನ ಅನ್ವಯ ಈ ಬಂಧನ ನಡೆದಿದೆ.
08:20 AM (IST) Apr 12
ಚಿತ್ರದುರ್ಗದಲ್ಲಿ ಶಾಲಾ ಬಾಲಕಿಯ ಮೇಲೆ ನಿರಂತರ ಅತ್ಯಾ೧ಚಾರ ಎಸಗಿ, ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಶಿಕ್ಷಕ ಎಚ್.ಒ. ರಾಜಣ್ಣನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ ಈತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ ವೈದ್ಯೆ ನಾಪತ್ತೆ