Published : Feb 09, 2026, 06:48 AM ISTUpdated : Feb 09, 2026, 11:00 PM IST

Karnataka News Live: Pawan Kalyan - ಪವನ್ ಕಲ್ಯಾಣ್ 100 ಬಾರಿ ನೋಡಿದ ಬಾಲಯ್ಯ ಸಿನಿಮಾ ಯಾವುದು? ಪವರ್‌ಸ್ಟಾರ್‌ಗೆ ಅಷ್ಟೊಂದು ಇಷ್ಟವೇ?

ಸಾರಾಂಶ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ನಿಗದಿತ ಸ್ಥಳ ಬಿಟ್ಟು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್‌ಗಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡಿನಲ್ಲಿ ಲ್ಯಾಂಡಿಂಗ್ ಆಗಿ ಅಧಿಕಾರಿಗಳನ್ನು ಗಲಿಬಿಲಿ ಮಾಡಿದ ಘಟನೆ ಭಾನುವಾರ ಲಿಂಗಸುಗೂರಿನಲ್ಲಿ ಸಂಭವಿಸಿದೆ.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಸಿಎಂ ಪ್ರಯಾಣಕ್ಕೆ ವಿಟಿ ಕಂಪನಿ ಹೆಲಿಕಾಪ್ಟರ್ ಕಾಯ್ದಿರಿಸಲಾಗಿತ್ತು. ಸಚಿವ ಸತೀಶ ಜಾರಕಿಹೊಳಿಗೂ ಇದೇ ಕಂಪನಿಯ ಒಂದೇ ಮಾದರಿಯ ಎರಡು ಪ್ರತ್ಯೇಕ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗಿತ್ತು. ಪಟ್ಟಣದ ಲಿಂಗಸುಗೂರು-ರಾಯಚೂರು ಮುಖ್ಯರಸ್ತೆ ಬದಿಯ ಖಾಸಗಿ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನಿರೀಕ್ಷಿಸಿದಂತೆ ಹೆಲಿಕಾಪ್ಟರ್ ಬಂದಿಳಿಯಿತು. ಆದರೆ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರಲಿಲ್ಲ. ಬದಲಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು. ಇದರಿಂದ ಅಧಿಕಾರಿಗಳು ಗಲಿಬಿಲಿಗೊಂಡರು

11:00 PM (IST) Feb 09

Pawan Kalyan - ಪವನ್ ಕಲ್ಯಾಣ್ 100 ಬಾರಿ ನೋಡಿದ ಬಾಲಯ್ಯ ಸಿನಿಮಾ ಯಾವುದು? ಪವರ್‌ಸ್ಟಾರ್‌ಗೆ ಅಷ್ಟೊಂದು ಇಷ್ಟವೇ?

ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳಲ್ಲಿ ಅತಿ ಹೆಚ್ಚು ಇಷ್ಟವಾದ ಚಿತ್ರ ಯಾವುದು ಗೊತ್ತಾ? ಆ ಸಿನಿಮಾವನ್ನು ಪವನ್ 100 ಬಾರಿ ನೋಡಿದ್ದಾರಂತೆ! ಏನಿದರ ಅಸಲಿಯತ್ತು?
Read Full Story

10:41 PM (IST) Feb 09

ಆಯುರ್ವೇದ ಕೇವಲ ಮನೆಮದ್ದಲ್ಲ, ಇದೊಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿ - ತಪ್ಪು ಕಲ್ಪನೆಗಳನ್ನು ಬಿಟ್ಟುಬಿಡಿ!

ಆಯುರ್ವೇದವು ಕೇವಲ ಮನೆಮದ್ದಲ್ಲ, ಅದೊಂದು ವೈಜ್ಞಾನಿಕ ವೈದ್ಯಕೀಯ ಶಾಸ್ತ್ರ. ಸೋಶಿಯಲ್ ಮೀಡಿಯಾದಲ್ಲಿನ ತಪ್ಪು ಮಾಹಿತಿ ನಂಬಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುವ ಬದಲು, ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪದವಿ ಪಡೆದ ನೋಂದಾಯಿತ ಆಯುರ್ವೇದ ವೈದ್ಯರಿಂದಲೇ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

Read Full Story

10:25 PM (IST) Feb 09

ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆಗೆ ಬಸರಾಳು ಬಳಿ 105 ಎಕರೆ ಭೂಮಿ ಲಭ್ಯ - ಕುಮಾರಸ್ವಾಮಿಗೆ ಪತ್ರ ಬರೆದ ಎಂ.ಬಿ. ಪಾಟೀಲ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೋರಿಕೆಯಂತೆ, ಮಂಡ್ಯದಲ್ಲಿ ದೇಶದ ಮೊದಲ ನಿರ್ಮಾಣ ಕಾಮಗಾರಿ ಪರೀಕ್ಷಾ ಸ್ಥಾವರ ಸ್ಥಾಪನೆಗೆ 105 ಎಕರೆ ಜಮೀನು ಲಭ್ಯವಿದೆ ಎಂದು ಸಚಿವ ಎಂ.ಬಿ. ಪಾಟೀಲರು ಪತ್ರದ ಮೂಲಕ ತಿಳಿಸಿದ್ದಾರೆ. ಭೂಮಿ ಪರಿಶೀಲಿಸಿ, ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.

Read Full Story

10:00 PM (IST) Feb 09

'ಮದುವೆಗೆ ಬರ್ತೀನಿ ಅಂದಿದ್ದ ಅಪ್ಪ ಕೊನೆಗೂ ಬಂದೇ ಬಿಟ್ಟರು'; ಭುಜದ ಮೇಲೆ ಕುಳಿತ ಚಿಟ್ಟೆ ಕಂಡು ಕಣ್ಣೀರಿಟ್ಟ ಮದುಮಗಳು!

ಮೃತ ತಂದೆ ನೀಡಿದ ಮಾತಿನಂತೆ, ವಧುವೊಬ್ಬಳ ಮದುವೆಯಲ್ಲಿ ಚಿಟ್ಟೆಯೊಂದು ಪ್ರತ್ಯಕ್ಷವಾಗಿ ಆಕೆಗೆ ಆಶೀರ್ವಾದ ಮಾಡಿದೆ. ತನ್ನ ತಂದೆಯೇ ಚಿಟ್ಟೆಯ ರೂಪದಲ್ಲಿ ಬಂದಿದ್ದಾರೆಂದು ನಂಬಿದ ವಧು ಕಣ್ಣೀರು ಹಾಕಿದ ಈ ಭಾವುಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

10:00 PM (IST) Feb 09

'ಮದುವೆಗೆ ಬರ್ತೀನಿ ಅಂದಿದ್ದ ಅಪ್ಪ ಕೊನೆಗೂ ಬಂದೇ ಬಿಟ್ಟರು'; ಭುಜದ ಮೇಲೆ ಕುಳಿತ ಚಿಟ್ಟೆ ಕಂಡು ಕಣ್ಣೀರಿಟ್ಟ ಮದುಮಗಳು!

ಮೃತ ತಂದೆ ನೀಡಿದ ಮಾತಿನಂತೆ, ವಧುವೊಬ್ಬಳ ಮದುವೆಯಲ್ಲಿ ಚಿಟ್ಟೆಯೊಂದು ಪ್ರತ್ಯಕ್ಷವಾಗಿ ಆಕೆಗೆ ಆಶೀರ್ವಾದ ಮಾಡಿದೆ. ತನ್ನ ತಂದೆಯೇ ಚಿಟ್ಟೆಯ ರೂಪದಲ್ಲಿ ಬಂದಿದ್ದಾರೆಂದು ನಂಬಿದ ವಧು ಕಣ್ಣೀರು ಹಾಕಿದ ಈ ಭಾವುಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

09:25 PM (IST) Feb 09

ಮಿಲ್ಕಿ ಬ್ಯೂಟಿ ಮುಂದೆ ಸಿಲ್ಕ್‌ನಂತೆ ಜಾರಿದ ಕರ್ನಾಟಕ ಸರ್ಕಾರ; ಮೈಸೂರ್ ಸ್ಯಾಂಡಲ್ ಸೋಪ್ ಅಧಿಕೃತ ರಾಯಭಾರಿಯಾದ ತಮನ್ನಾ!

ಕರ್ನಾಟಕದ ಹೆಮ್ಮೆಯ 'ಮೈಸೂರು ಸ್ಯಾಂಡಲ್ ಸೋಪ್‌'ಗೆ ನಟಿ ತಮನ್ನಾ ಭಾಟಿಯಾ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೆ.ಎಸ್.ಡಿ.ಎಲ್ ಸಂಸ್ಥೆಯು ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ 2 ವರ್ಷಗಳವರೆಗೆ ರಾಯಭಾರಿ ಮಾಡಿದೆ. ಈ ಮೂಲಕ ಶತಮಾನದ ಪರಂಪರೆಯು ಬ್ರ್ಯಾಂಡ್‌ಗೆ ಹೊಸ ಗ್ಲಾಮರ್ ಸ್ಪರ್ಶ ನೀಡಲಾಗಿದೆ.

Read Full Story

09:17 PM (IST) Feb 09

Explainer - ಬೆಂಗಳೂರು ಮೆಟ್ರೋ ದೇಶದಲ್ಲೇ 'ಅತ್ಯಂತ ದುಬಾರಿ' ಅನ್ನೋ ಕುಖ್ಯಾತಿ ಗಳಿಸಿದ್ದು ಯಾರಿಂದ?

Why Bengaluru Namma Metro is the Most Expensive in India ನಮ್ಮ ಮೆಟ್ರೋವನ್ನು ಭಾರತದ ಪ್ರಯಾಣ ದರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಳ್ಳಿದ ಹಣಕಾಸು, ಕಾರ್ಯಾಚರಣೆ ಮತ್ತು ನೀತಿ ಅಂಶಗಳ ವಿವರ ಇಲ್ಲಿದೆ.

 

Read Full Story

07:50 PM (IST) Feb 09

ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಜಾಲ - ಮೂವರು ಲೋಕಲ್ ಮಹಿಳೆಯರಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!

ಹಣದಾಸೆಗಾಗಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯಾಯಾಲಯವು ಮೂವರು ಮಹಿಳೆಯರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 1.61 ಲಕ್ಷ ರೂ. ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. 2021ರಲ್ಲಿ ಪೊಲೀಸ್ ದಾಳಿ ನಡೆದು ಈ ಜಾಲವನ್ನು ಭೇದಿಸಲಾಗಿತ್ತು.
Read Full Story

07:01 PM (IST) Feb 09

ಫೋರಂ ಮಾಲ್‌ನಲ್ಲಿ ತಮಿಳು ಗಾನ - ಕರವೇ ಕೊಟ್ಟ ಶಾಕ್‌ಗೆ ಹರಿದುಬಂತು ನೋಡಿ ಡಾ.ರಾಜ್ ಕುಮಾರ್ ಗಾಯನ!

ಬೆಂಗಳೂರಿನ ಕೋರಮಂಗಲ ಫೋರಂ ಮಾಲ್‌ನ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ತಮಿಳು ಹಾಡುಗಳನ್ನು ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು  ಕನ್ನಡ ಕಡೆಗಣನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನಂತರ, ಆಯೋಜಕರು ಕ್ಷಮೆಯಾಚಿಸಿ ಡಾ. ರಾಜ್‌ಕುಮಾರ್ ಸಿನಿಮಾಗಳ ಹಾಡುಗಳನ್ನು ಹಾಕಿದರು.

Read Full Story

06:24 PM (IST) Feb 09

I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ ಬಿಡುಗಡೆ

ಪ್ರೇಮಿಗಳ ದಿನದ ಸನಿಹದಲ್ಲಿ, ಕನ್ನಡದ ಜನಪ್ರಿಯ ಸೀರಿಯಲ್‌ಗಳ ನಾಯಕಿಯರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಅಮೃತಧಾರೆ , ಬ್ರಹ್ಮಗಂಟು ಮುಂತಾದ ಧಾರಾವಾಹಿಗಳಲ್ಲಿ  ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಭಿನ್ನ ಶೈಲಿಗಳನ್ನು ಇಲ್ಲಿ ವಿವರಿಸಲಾಗಿದೆ.

 

Read Full Story

05:34 PM (IST) Feb 09

ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!

ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾಳ ಕರಾಳ ಹಿನ್ನೆಲೆ ಬಯಲಾಗಿದೆ. ಹದಿಹರೆಯದಲ್ಲೇ ಐಷಾರಾಮಿ ಜೀವನದ ಆಸೆಗಾಗಿ ದಾರಿ ತಪ್ಪಿದ್ದ ಈಕೆ, ಹಲವರೊಂದಿಗೆ ಸಂಬಂಧ ಬೆಳೆಸಿಕೊಂಡು ಅಂತಿಮವಾಗಿ ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು.
Read Full Story

05:04 PM (IST) Feb 09

ಸುಚಿತ್ರಾಳನ್ನ ₹2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದ ಸ್ತ್ರೀಲೋಲ ಕಮಲಾಕರ್ ಭಟ್; ಈಕೆ ವಿಡಿಯೋ ಮಾಡಿ ಗುನ್ನಾ ಇಟ್ಲು!

ಸಿದ್ದಾಪುರದ ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಸಂಬಂಧವು ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಜಾಲವಾಗಿತ್ತು ಎಂದು ಸುಚಿತ್ರಾಳ ಪತಿ ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ದೈಹಿಕ ಸಂಬಂಧ ಬೆಳೆಸಿ, ಗುಪ್ತವಾಗಿ ವಿಡಿಯೋ ಮಾಡಿದ್ದಳು.

Read Full Story

05:02 PM (IST) Feb 09

Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌

Bigg Boss Sonu Gowda: ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ ಸೋನು ಗೌಡ ಅವರು ಬಾಯ್‌ಫ್ರೆಂಡ್‌ ಯಾರು? ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯುಟ್ಯೂಬ್‌ ಚಾನೆಲ್‌ನಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

Read Full Story

04:26 PM (IST) Feb 09

ರಣಜಿ ಟ್ರೋಫಿ - ಮುಂಬೈ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ! ಕೆ.ಎಲ್ ಭರ್ಜರಿ ಶತಕ

2025-26ರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡವು ಮುಂಬೈಯನ್ನು ಅವರದ್ದೇ ತವರಿನಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಕೆ ಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ 325 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಜ್ಯ ತಂಡ, 4 ವಿಕೆಟ್‌ಗಳ ಜಯ ಸಾಧಿಸಿತು.
Read Full Story

04:10 PM (IST) Feb 09

ಮಂಗಳೂರು ಕಾಲೇಜಿಗೆ ಹೊರಟಿದ್ದ ಪಿಯುಸಿ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ; ಬಾಲಕಿ ರಕ್ಷಣೆ ಮಾಡಿದ ಅಬ್ಬುಸಾಲಿ!

ಬೆಳ್ತಂಗಡಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಅಪಹರಣಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ವಿರೋಧಿಸಿದಾಗ ಆಕೆಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದು, ಸ್ಥಳೀಯರೊಬ್ಬರು ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read Full Story

03:42 PM (IST) Feb 09

ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.

Read Full Story

03:18 PM (IST) Feb 09

ತಮಿಳುನಾಡು ಸಿಎಂ ಸ್ಟಾಲಿನ್ ಮೇಲಿನ ಆರೋಪಕ್ಕೆ ಬೆಂಗಳೂರಲ್ಲಿಯೋ ವಿದೇಶಿ ರಾಯಭಾರಿ ಕಚೇರಿಗೆ ಬಾಂಬ್! ಹೈ ಅಲರ್ಟ್

ಬೆಂಗಳೂರಿನಲ್ಲಿರುವ ಜಪಾನ್ ಮತ್ತು ಡಚ್ ರಾಯಭಾರ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.

Read Full Story

03:16 PM (IST) Feb 09

ದೇವಸ್ಥಾನದ ಹಿಂಭಾಗ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಾಸನ, ಸರ್ಪ ರೂಪದ ಶಿಲ್ಪ ಪತ್ತೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಈ ಹಿಂದೆ ಕೂಡ ಇಲ್ಲಿ ವಿಗ್ರಹಗಳು ಸಿಕ್ಕಿವೆ.

Read Full Story

02:54 PM (IST) Feb 09

Bhagyalakshmi Serial ಕೊನೇ ಸಂಚಿಕೆಯಲ್ಲಿ ಆದಿ ಭಾಗ್ಯ ಒಂದಾಗ್ತಾರಾ? ಸಕಲೇಶಪುರದಲ್ಲಿ ಸಿಕ್ಕ ಸಾಕ್ಷಿಯಿದು

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಮನೆಗೆ ಬಂದ ತಾಂಡವ್‌ ಧರಣಿ ಕೂತಿದ್ದಾನೆ. ಅವನಿಗೆ ಭಾಗ್ಯ ಒಪ್ಪುತ್ತಾಳಾ? ಇಲ್ಲವಾ ಎನ್ನುವ ಚಿಂತೆ ಶುರುವಾಗಿದೆ. ಈಗ ಸಕಲೇಶಪುರದಲ್ಲಿ ಕೊನೆಯ ಸಂಚಿಕೆ ಶೂಟಿಂಗ್‌ ನಡೆದಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.

 

Read Full Story

02:39 PM (IST) Feb 09

ಸರಣಿ ಕಾಮದಾಟದ 'ಕಲಾಕಾರ' ಈ ಕಮಲಾಕರ ಭಟ್ - ಸುಚಿತ್ರಾಗೂ ಮೊದಲೇ, ಮುಸ್ಲಿಂ ಮಹಿಳೆ ಸೇರಿ ನಾಲ್ವರೊಂದಿಗೆ ಪಲ್ಲಂಗದಾಟ!

ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ ಭಟ್, ಸಹ ಆರೋಪಿ ಸುಚಿತ್ರಾಳಿಗಿಂತ ಮುಂಚೆಯೇ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸತ್ಯ ಬಯಲಾಗಿದೆ. ಹಳೆಯ ಪ್ರಿಯತಮೆಯೊಂದಿಗೆ ಜಗಳವಾಡುವ ಆಡಿಯೋ ವೈರಲ್ ಆಗಿದೆ.

Read Full Story

02:32 PM (IST) Feb 09

Mandya - ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ, ಮದುವೆ ಸಿದ್ಧತೆಯಲ್ಲಿದ್ದ ಪ್ರಿಯಾಂಕ (19) ಮತ್ತು ಆಕೆಯ ತಾಯಿ ಶಕುಂತಲಾದೇವಿ (46) ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತನೊಂದಿಗಿನ ಮಗಳ ಪ್ರೀತಿಯ ವಿಷಯ ತಿಳಿದು, ಮರ್ಯಾದೆಗೆ ಹೆದರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

Read Full Story

02:29 PM (IST) Feb 09

ಮುರಿದ ಬಿದ್ದ ಮದುವೆ, ಮತ್ತೆ ತಗ್ಲಾಕ್ಕೊಂಡ ಹರಿಪ್ರಸಾದ; ಮೊದಲ ಪತ್ನಿಯಾಯ್ತು, ಈಗ ಮಂಡ್ಯ ಹುಡುಗಿಯಿಂದಲೂ ಮತ್ತೊಂದು ಶಾಕ್!

ತುಮಕೂರು: ಕಾನೂನುಬದ್ದವಾಗಿ ಡಿವೋರ್ಸ್ ಪಡೆಯದೇ ಎರಡನೇ ಮದುವೆಯಾಗಲು ರೆಡಿಯಾಗಿದ್ದ ದೈಹಿಕ ಶಿಕ್ಷಕ ಹರಿಪ್ರಸಾದ್‌ಗೆ ಭಾನುವಾರ ಮೊದಲ ಪತ್ನಿ ಕಲ್ಯಾಣ ಮಂಟಪದಲ್ಲಿ ಹೈಡ್ರಾಮಾ ಮಾಡಿದ್ದರು. ಇದೀಗ ಮಂಡ್ಯ ಮೂಲದ ಯುವತಿ ಕೂಡಾ ಹರಿಪ್ರಸಾದನಿಗೆ ಶಾಕ್ ನೀಡಿದ್ದಾಳೆ. ಏನಿದು ಪ್ರಕರಣ? ನೋಡೋಣ ಬನ್ನಿ

 

Read Full Story

02:27 PM (IST) Feb 09

ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಜೊತೆ ತ್ರಿಕೋನ ಪ್ರೇಮಕಥೆ; ಗ್ರೀನ್‌ ಸಿಗ್ನಲ್‌ ಕೊಟ್ಟ Gilli Nata

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಜೇತ ಗಿಲ್ಲಿ ನಟ ಅವರು ಸೂಪರ್‌ ಹಿಟ್‌ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಮೀನು ತಗೊಂಡಿದ್ದು, ತ್ರಿಕೊನ ಪ್ರೇಮಕಥೆ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

 

Read Full Story

01:57 PM (IST) Feb 09

ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ - ನಟನ ಇಂಟರೆಸ್ಟಿಂಗ್​ ಮಾಹಿತಿ

'ಅಮೃತಧಾರೆ' ಧಾರಾವಾಹಿಯ ಮೂಲಕ ಮನೆಮಾತಾದ ನಟ ಆನಂದ್, ತೆರೆಮೇಲೆ ಎಲ್ಲರನ್ನೂ ನಗಿಸುತ್ತಾರೆ. ಆದರೆ, ಅವರ ನಿಜ ಜೀವನದಲ್ಲಿ ಪತ್ನಿ ಚೈತ್ರಾ ಮತ್ತು ತಾಯಿಯ ಜೀವ ಉಳಿಸಲು ಕೊರೋನಾ ಸಮಯದಲ್ಲಿ ನಡೆಸಿದ ಹೋರಾಟ ಮಾತ್ರ ಕಣ್ಣೀರು ತರಿಸುತ್ತದೆ. ಅವರ ಬದುಕಿನ ಏಳುಬೀಳುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
Read Full Story

01:28 PM (IST) Feb 09

ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ?

Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್‌ ಛೇಂಬರ್‌ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್‌ ಹಿಟ್‌ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

 

Read Full Story

01:25 PM (IST) Feb 09

Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

ಬಿಗ್‌ಬಾಸ್‌ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ  ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.

Read Full Story

12:51 PM (IST) Feb 09

‌Photos - ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌ - ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

Actress Mansa Manohar: 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

Read Full Story

12:21 PM (IST) Feb 09

ನಂದಗೋಕುಲ ಪ್ರಿಯಾ ಹೊಸ ಲುಕ್; ಓಪನ್‌ ಹೇರ್‌ ಬಿಟ್ಟು, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ ಏರಿಯಾದಲ್ಲಿ ತಿರುಗ್ಬೇಡಿ; ಲವ್‌ ಆಗ್ತದೆ!

Nanda Gokula Serial Priya: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಗೌಡ ಅವರು ಸ್ಲೀವ್‌ಲೆಸ್‌ ಬ್ಲೌಸ್‌, ಸೀರೆ ಉಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 

Read Full Story

12:16 PM (IST) Feb 09

ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ - ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ

ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ, ಮುಸ್ಲಿಂ ದಂಪತಿಯೊಬ್ಬರು ಅನಾಥ ಹಿಂದೂ ಹುಡುಗರನ್ನು ದತ್ತು ಪಡೆದು ಬೆಳೆಸಿದ್ದಾರೆ. ಇದೀಗ, ತಮ್ಮ ಹಿರಿಯ ದತ್ತು ಪುತ್ರನ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿಸಿ, ಧರ್ಮ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
Read Full Story

11:56 AM (IST) Feb 09

Sri Raghavendra Mahathme - ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ತಾಯಿ ಗೋಪಿಕಾಂಬಾ ಪಾತ್ರದಲ್ಲಿ ನಟಿ ಶ್ರೀಲತಾ ನಟಿಸುತ್ತಿದ್ದಾರೆ. ಗದಗ ಮೂಲದವರಾದ ಇವರು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದು, ಯಾವುದೇ ನಟನಾ ಹಿನ್ನೆಲೆಯಿಲ್ಲದೆ ಅಚಾನಕ್ಕಾಗಿ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
Read Full Story

11:53 AM (IST) Feb 09

ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಈಕೆ ಹುಡುಗರನ್ನು ಪಟಾಯಿಸ್ತಿದ್ದ ರೀತಿನೇ ಡಿಫರೆಂಟ್!

ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ.

Read Full Story

11:49 AM (IST) Feb 09

‌ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?

Bigg Boss Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್‌ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್‌ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

11:26 AM (IST) Feb 09

ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌

ಯಶ್‌ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್‌ ಜುಯಲ್‌ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್‌ ಮಗನಾಗಿ ರಾಘವ್‌ ಜುಯಲ್‌ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್‌ ಮಿಂಚಲಿದ್ದಾರೆ.

Read Full Story

11:20 AM (IST) Feb 09

Upcoming Movies 2026 - ಶೀಘ್ರದಲ್ಲೇ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ರೆಡಿಯಾದ‌ 6 ಸಿನಿಮಾಗಳಿವು!

Bollywood Box Office Clash 2026: ಮಾರ್ಚ್ 19 ರಿಂದ ಮೇ 1ರ ನಡುವೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಸುನಾಮಿಯೇ ಆಗಲಿದೆ. ಒಂದೆರಡಲ್ಲ, ಬರೋಬ್ಬರಿ 6 ದೊಡ್ಡ ಸಿನಿಮಾಗಳು ತೆರೆ ಕಾಣಲಿವೆ. ಈ ಚಿತ್ರಗಳ ಮೇಲೆ 1020 ರಿಂದ 1550 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಲಾಗಿದೆ. 

Read Full Story

11:02 AM (IST) Feb 09

ಓ ಹಿರಿಯ ಸೊಸೆ ಪ್ರಿಯಾ ಎಲ್ಲಾ ಓಕೆ ಅಮ್ಮಾ? ಕೊನೆಗೆ ಯಾಕೆ ಇಷ್ಟು ಕೆಟ್ಟ ಬುದ್ದಿ, ಅಮ್ಮು-ಮೀನಾ ಪಾಪ!

ಹಿರಿಯ ಸೊಸೆ ಪ್ರಿಯಾ, ನೆಚ್ಚಿನ ಸೊಸೆಯಾಗುವ ಹಠಕ್ಕೆ ಬಿದ್ದಿದ್ದಾಳೆ. ಮುಂಜಾನೆ ಎದ್ದು ಅಡುಗೆ ಮಾಡಿ ಅತ್ತೆಯ ಮನಗೆದ್ದ ಆಕೆ, ತನ್ನ ಓರಗಿತ್ತಿಯರಾದ ಮೀನಾ ಮತ್ತು ಅಮೂಲ್ಯಗೆ ಟಾಂಗ್ ನೀಡಿದ್ದಾಳೆ. ಪ್ರಿಯಾಳ ಈ ವರ್ತನೆಯನ್ನು ವೀಕ್ಷಕರು 'ವಿಲನ್ ಎಂಟ್ರಿ' ಎಂದು ಬಣ್ಣಿಸುತ್ತಿದ್ದಾರೆ.

Read Full Story

10:54 AM (IST) Feb 09

OTT Release This Week - ಕೊನೆಗೂ ಒಟಿಟಿಗೆ ಬಂದ ಸೂಪರ್ ಹಿಟ್‌, 5 ಬ್ಲಾಕ್‌ಬಸ್ಟರ್ ಸಿನಿಮಾಗಳು!

OTT Release: ಫೆಬ್ರವರಿ 2026ರ 2ನೇ ವಾರ ಪ್ರೇಮಿಗಳ ದಿನಾಚರಣೆಯ ಸಂಭ್ರಮ ತರುತ್ತಿದೆ. ಇದೇ ಸಮಯದಲ್ಲಿ, OTT ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಅದ್ಭುತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹಾರರ್ ಕಾಮಿಡಿಯಿಂದ ಹಿಡಿದು ಆ್ಯಕ್ಷನ್ ಡ್ರಾಮಾವರೆಗೆ, ಈ ವಾರ OTTಯಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾಗಳಿವು

Read Full Story

10:16 AM (IST) Feb 09

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ - ಹೈಕೋರ್ಟ್‌

ವಾಹನವನ್ನು ಅತಿ ವೇಗವಾಗಿ ಚಲಾಯಿಸಿದ ಮಾತ್ರಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ವಾಹನವನ್ನು ಅವಸರ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಅಪಘಾತ ಮಾಡಿದ ಪ್ರಕರಣದ ಶಿಕ್ಷೆ ರದ್ದು ಮಾಡಿ ಆದೇಶ

Read Full Story

09:47 AM (IST) Feb 09

Bagalkote - ಅಂಜುಮನ್ ಕಮಿಟಿಗೆ ರಾಜ್ಯ ಸರ್ಕಾರದಿಂದ ₹1 ಕೋಟಿ ಅನುದಾನ ಮಂಜೂರು

ಬಾಗಲಕೋಟೆಯ ಅಂಜುಮನ್ ಇಸ್ಲಾಂ ಕಮಿಟಿಗೆ ಬಹುಪಯೋಗಿ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ₹1 ಕೋಟಿ ಅನುದಾನ ಮಂಜೂರಾಗಿದೆ. ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ಕುದುರೆ ಈ ವಿಷಯವನ್ನು ಪ್ರಕಟಿಸಿದ್ದು, ಶಾಸಕರು ಹಾಗೂ ಸಚಿವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
Read Full Story

09:29 AM (IST) Feb 09

ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಜೋಶಿ ಸಮಾಜದ ಭಕ್ತರಿಂದ ಪುಣ್ಯಕ್ಷೇತ್ರಗಳ ದರ್ಶನ

ಮಹಾರಾಷ್ಟ್ರದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು, ತಮ್ಮ ಸಂಪ್ರದಾಯದಂತೆ ಮೂರು ಬೃಹತ್ ಕಾಂಕ್ರೇಜ್ ಹೋರಿಗಳೊಂದಿಗೆ ಧರ್ಮಸ್ಥಳ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದಾರೆ. 

Read Full Story

09:09 AM (IST) Feb 09

₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ

ಬೆಂಗಳೂರು ನಗರ ಜಿಲ್ಲಾಡಳಿತವು ನಗರದಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿ, ಒತ್ತುವರಿಯಾಗಿದ್ದ 8.04 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ. ಈ ಜಮೀನಿನ ಒಟ್ಟು ಮೌಲ್ಯ 27.72 ಕೋಟಿ ರೂಪಾಯಿಗಳಾಗಿದ್ದು, ಪೂರ್ವ, ಆನೇಕಲ್, ದಕ್ಷಿಣ, ಯಲಹಂಕ ಮತ್ತು ಉತ್ತರ ತಾಲೂಕುಗಳಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.
Read Full Story

More Trending News