ಬೆಂಗಳೂರು: ಇಂದು ಮತ್ತು ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದ್ದು, ಎರಡು ದಿನ ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ
11:06 PM (IST) Nov 05
ಬಿಗ್‌ಬಾಸ್ ಮನೆಯಿಂದ ಅನಿರೀಕ್ಷಿತವಾಗಿ ಹೊರಬಂದ ಮಲ್ಲಮ್ಮ, ತಮ್ಮ ಎಲಿಮინೇಷನ್‌ಗೆ ಕಾಂಟ್ರವರ್ಸಿ ಇಲ್ಲದಿರುವುದೇ ಕಾರಣ ಎಂಬ ಚರ್ಚೆಯ ನಡುವೆ, ಬಿಗ್ ಬಾಸ್ 12ರ ವಿನ್ನರ್ ಯಾರೆಂದು ಅಳುಕುತ್ತಲೇ ಗಿ ಹೆಸರನ್ನು ಸೂಚಿಸಿದ್ದಾರೆ. ಅವರು ಹೇಳಿದ್ದು ಯಾರ ಹೆಸರನ್ನು?
10:55 PM (IST) Nov 05
ನಾನು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಕನ್ನಡದಲ್ಲಿ 125ಕ್ಕೆ 123 ಅಂಕ ಗಳಿಸಿದ್ದು ನನ್ನ ಕನ್ನಡ ಪ್ರೀತಿಗೆ ಸಾಕ್ಷಿ. ಮುಂದೆ ವೈದ್ಯನಾಗಬೇಕೆನ್ನುವ ಮಹದಾಸೆ ಇತ್ತು ಎಂದರು ನಟ ಡಾಲಿ ಧನಂಜಯ.
10:49 PM (IST) Nov 05
ದರೋಡೆಗೆ ಇಳಿದಿದೆ ಲಗ್ನ ಪತ್ರಿಕೆ ಗ್ಯಾಂಗ್, ಮದುವೆ ಆಹ್ವಾನ ಕೊಡೋ ನೆಪದಲ್ಲಿ ಮನಗೆ ನುಗ್ಗಿ ಕಳ್ಳತನ, ಎಚ್ಚರ ಬೆಂಗಳೂರಿನ ಹೊರ ವಲಯದಲ್ಲಿ ಇದೀಗ ಲಗ್ನ ಪತ್ರಿಕೆ ಮೂಲಕ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ, ಎಚ್ಚರ.
09:12 PM (IST) Nov 05
'ಮಹಾವತಾರ' ಚಿತ್ರದಲ್ಲಿ ವಿಕ್ಕಿ ಕೌಶಲ್ ಪರಶುರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾಂಸಾಹಾರವನ್ನು ತ್ಯಜಿಸಲಿದ್ದಾರೆ. ಇದು ಪಾತ್ರಕ್ಕೆ ಗೌರವ ತೋರಿಸುವ ಅವರ ವಿಧಾನವಾಗಿದೆ.
09:07 PM (IST) Nov 05
25ನೇ ವಯಸ್ಸಿನಲ್ಲಿ ಎಂಬಿಎ ಓದುವವರು ಮೂರ್ಖರು, ನಿಖಿಲ್ ಕಾಮತ್ ಹೀಗೆ ಹೇಳಿದ್ದೇಕೆ? ನಿಖಿಲ್ ಕಾಮತ್ ಹೇಳಿಕೆ ವಿವಾದ ಸೃಷ್ಟಿಸಿದೆ. ಭಾರತದಲ್ಲಿ ಈಗ ಕಾಲೇಜುಗಳು ಸತ್ತಿದೆ ಎಂದು ನಿಖಿಲ್ ಹೇಳಿದ್ದಾರೆ.
08:55 PM (IST) Nov 05
ಜಿಲ್ಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬರುವಂತೆ ಶಾಲಾ ಶಿಕ್ಷಣ ಇಲಾಖೆ ಶ್ರಮಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಶಿಕ್ಷಣ ಇಲಾಖೆಗೆ ತಾಕೀತು ಮಾಡಿದರು.
08:40 PM (IST) Nov 05
ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಸಲ್ಮಾನ್ ಖಾನ್ ಅವರನ್ನು ಗೋಲ್ಡನ್ ಹಾರ್ಟ್ ಬಾಯ್ ಎಂದು ಕರೆದಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್‌ನ ಅತಿದೊಡ್ಡ ಮತ್ತು ಉದಾರ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.
08:15 PM (IST) Nov 05
ಮೂರು ಬಾರಿ ಗೆದ್ದು ಶಾಸಕನಾಗಿರುವ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಬೇಳೂರು ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇನೆ.
08:08 PM (IST) Nov 05
ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಒಬ್ಬರು ಹೋರಾಟ ಮಾಡಿದರೆ, ಕುರ್ಚಿಯನ್ನು ಪಡೆದು ಸಿಎಂ ಆಗುವ ಆಟದಲ್ಲಿ ಮತ್ತೊಬ್ಬರು ತೊಡಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
07:49 PM (IST) Nov 05
‘ನಾ ನಿನ್ನ ಬಿಡಲಾರೆ’ ಮತ್ತು ‘ಬ್ರಹ್ಮಗಂಟು’ ಸೀರಿಯಲ್‌ಗಳ ಮಹಾಸಂಗಮದ ನಡುವೆ, ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಮಗುವಿನೊಂದಿಗಿನ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾಗೆ ಮಗುವಾಗುತ್ತಾ? ಏನಿದು ಟ್ವಿಸ್ಟ್?
07:44 PM (IST) Nov 05
ಕಬ್ಬು ಬೆಳೆಗಾರರ ಜೊತೆಗೆ ಸಚಿವರ ಸಂಧಾನ ವಿಫಲ, ನಾಳೆ ಸಂಜೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಭೆಗೆ ಬರುವುದಿಲ್ಲ, ನೀವೇ ನಿರ್ಧಾರ ಪ್ರಕಟಿಸಿ ಹೇಳಿ, ಸಂಜೆ ವರೆಗೆ ಟೈಮ್ ಕೊಡುತ್ತೇವೆ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
07:38 PM (IST) Nov 05
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ರೈತರ ಸರಣಿ ಆತ್ಮ*ತ್ಯೆ ಮುಂದುವರೆದಿದೆ.ಕಳೆದ 2 ವರ್ಷದಲ್ಲಿ 2000ಕ್ಕೂ ಹೆಚ್ಚು ರೈತರ ಆತ್ಮ*ತ್ಯೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಮೇಲೆ ರೈತರಿಗೆ ವಿಶ್ವಾಸ ಕುಂದಿದೆ ಎಂದು ಆರ್.ಅಶೋಕ್ ಹೇಳಿದರು.
07:15 PM (IST) Nov 05
ಧನ್ಯಾ ರಾಮ್ಕುಮಾರ್ ಅವರು ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿ ಹಾಟ್ ಟಾಪಿಕ್ ಆಗಿವೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿವೆ.
07:08 PM (IST) Nov 05
Uttara Kannada MP Kageri Claims Jana Gana Mana Was Written to Welcome the British ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
06:48 PM (IST) Nov 05
ಯಡಿಯೂರು ದೇಗುಲ ಪೂಜೆ ಮುಗಿಸಿ ಬರುವಾಗ ಅಪಘಾತ, ತುಮಕೂರು ದಂಪತಿ ಸ್ಥಳದಲ್ಲೇ ಸಾವು, ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ದಂಪತಿ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
06:41 PM (IST) Nov 05
ರಶ್ಮಿಕಾ ಮಂದಣ್ಣ ನಟನೆಯ ಲೇಟೆಸ್ಟ್ ಸಿನಿಮಾ 'ದಿ ಗರ್ಲ್‌ಫ್ರೆಂಡ್'. ರಾಹುಲ್ ರವೀಂದ್ರನ್ ನಿರ್ದೇಶನದ ಈ ಚಿತ್ರಕ್ಕೆ ರಶ್ಮಿಕಾ ಮೊದಲ ಆಯ್ಕೆಯ ನಾಯಕಿಯಾಗಿರಲಿಲ್ಲ. ಹಾಗಾದ್ರೆ ಆ ನಟಿ ಯಾರು ನೋಡೋಣ.
06:26 PM (IST) Nov 05
Karnataka SSLC & PUC Exam Time Table 2026 Announced PUC from Feb 28, SSLC from Mar 18 ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
06:15 PM (IST) Nov 05
ಶಿಗ್ಗಾಂವಿ, ಸವಣೂರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಕಾಣುತ್ತಿದೆ. ಅದಕ್ಕೆ ಮತದಾರರು ನೀಡಿದ ಬೆಂಬಲ, ಪ್ರೋತ್ಸಾಹವೇ ಕಾರಣ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
06:04 PM (IST) Nov 05
ಬೆಳಗಾವಿ ಅಧಿವೇಶನದ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದೆ. ಆದರೆ ಡಿ.ಕೆ.ಶಿವಕುಮಾರ್ ಅವರಂತೂ ಮುಖ್ಯಮಂತ್ರಿ ಆಗೋದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ.
05:35 PM (IST) Nov 05
ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕಲ್ಲುಕೋರೆಗಳಿಂದ ಈ ಜಿಲ್ಲೆಯ ನೂರಾರು ಕುಟುಂಬಗಳ ಹಲವು ಜನರು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಿದ್ದರು. ಕೊನೆಗೂ ಅವುಗಳೀಗೆ ಬೀಗ ಬಿದ್ದಿದೆ.
05:09 PM (IST) Nov 05
ಟಾಕ್ಸಿಕ್‌ನಲ್ಲಿ ಯಶ್ ಅವರಂಥಾ ದೊಡ್ಡ ಸ್ಟಾರ್, ಗೀತೂ ಮೋಹನ್‌ದಾಸ್ ಅವರಂಥಾ ಕ್ರಿಯೇಟಿವ್ ನಿರ್ದೇಶಕಿ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಇದೆ ಎಂದು ಬಾಲಿವುಡ್ ನಟಿ ಹುಮಾ ಖುರೇಷಿ ತಿಳಿಸಿದ್ದಾರೆ.
04:39 PM (IST) Nov 05
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಹೆಸರು ಭಾರೀ ಸೌಂಡ್ ಮಾಡ್ತಿದೆ. ಇದೇನು ಹೆಸರಿನ ಮುಂದೆ ಗಿಲ್ಲಿ ಅಂತ ಇದೆ, ಯಾಕೆ ಎಂದು ಕೆಲವರಿಗೆ ಸಂದೇಹ ಇರಬಹುದು. ಈಗ ಕಾವ್ಯ ಶೈವ ಅವರು ಗಿಲ್ಲಿ ನಟನ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಆಸಕ್ತಿಕರ ವಿಷಯವೊಂದು ರಿವೀಲ್ ಆಗಿದೆ.
04:26 PM (IST) Nov 05
ಹ್ಯುಂಡೈನಿಂದ ಮಿನಿ ಕ್ರೇಟಾ ಕಾರು ಲಾಂಚ್, ಕೇವಲ 7.9 ಲಕ್ಷ ರೂಗೆ ಲಭ್ಯ, ಅತ್ಯಾಧುನಿಕ ತಂತ್ರಜ್ಞಾನ, ಕೈಗೆಟುಕುವ ದರದಲ್ಲಿ ಕಾರು ಲಭ್ಯವಿದೆ. ಹೊಸ ಕಾರು 8 ಬಣ್ಣ ಹಾಗೂ 8 ವೇರಿಯೆಂಟ್‌ನಲ್ಲಿ ಲಭ್ಯವಿದೆ.
04:25 PM (IST) Nov 05
CM Siddaramaiah Emotional at HY Meti Funeral ಬಾಗಲಕೋಟೆ ಶಾಸಕ ಎಚ್‌ವೈ ಮೇಟಿ ಅವರ ಅಂತ್ಯಸಂಸ್ಕಾರವು ಅವರ ಹುಟ್ಟೂರಿನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಮೇಟಿಯವರನ್ನು ಆತ್ಮೀಯ ಸ್ನೇಹಿತ ಎಂದು ಸ್ಮರಿಸಿದರು.
04:12 PM (IST) Nov 05
ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 5ನೇ ಕನ್ನಡ ಪುಸ್ತಕ ಹಬ್ಬದಲ್ಲಿ, ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಕವನಗಳ ಆಧರಿಸಿದ ಜನಪ್ರಿಯ ನಾಟಕ ‘ಮೈಸೂರು ಮಲ್ಲಿಗೆ’ ಪ್ರದರ್ಶನ.. ಡಾ. ಬಿ.ವಿ. ರಾಜಾರಾಂ ನಿರ್ದೇಶನದ ಈ ನಾಟಕವು ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ.
03:42 PM (IST) Nov 05
03:00 PM (IST) Nov 05
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ವ್ಯಕ್ತಿತ್ವದ ಆಟ. ಸ್ಪರ್ಧಿಗಳಿಗೆ ಮಾತ್ರ ಈ ಬಾರಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಮಾಡಲಾಗುತ್ತಿದೆ. ಅದರಲ್ಲೂ ಮನೆಯವರಿಂದ ಬಂದ ಪತ್ರಗಳು ಸ್ಪರ್ಧಿಗಳ ಕಣ್ಣಲ್ಲಿ ನೀರು ಹಾಕಿಸುತ್ತಿವೆ.
02:51 PM (IST) Nov 05
CM Siddaramaiah Backs Rahul Gandhi Vote Theft is the Answer to BJP Haryana Victory Surprise ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಸಿದ್ದರಾಮಯ್ಯ ಬೆಂಬಲಿಸಿದ್ದಾರೆ.
02:39 PM (IST) Nov 05
ಹಾಸ್ಟೆಲ್ ಟರೇಸ್ ಮೇಲೆ ಹೋದ ವಿದ್ಯಾರ್ಥಿನಿ ಬರಳಿ ಬರಲೇ ಇಲ್ಲ, ವನಿಷಾಗೆ ಏನಾಯ್ತು?, ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ದುರಂತ ಘಟನೆ ನಡೆದಿದೆ. ಅಷ್ಟಕ್ಕೂ 21ರ ಹರೆಯದ ವನಿಷಾಗೆ ಏನಾಯ್ತು?
02:20 PM (IST) Nov 05
ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬ ಟಾಸ್ಕ್ ನಂತರ, ರಕ್ಷಿತಾ ಶೆಟ್ಟಿ ಹೇಳಿಕೆಯನ್ನು ಅಶ್ವಿನಿ ಗೌಡ ತಿರುಚಿದ್ದಾರೆ ಎಂದು ಜಾನ್ವಿ ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಆಪ್ತರಾಗಿದ್ದ ಜಾನ್ವಿ ಮತ್ತು ಅಶ್ವಿನಿ ನಡುವೆ ಅಂತರ ಹೆಚ್ಚಾಗಿದ್ದು, ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ.
02:05 PM (IST) Nov 05
ಬನವಾಸಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಂಚಿನಲ್ಲಿದೆ ಎಂದು ಆರೋಪಿಸಿದರು. ಬಡವರಿಗೆ ಮನೆ, ಅತಿವೃಷ್ಟಿ ಪರಿಹಾರ ನೀಡದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ખುರ್ಚಿಗಾಗಿ ಕಚ್ಚಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
01:50 PM (IST) Nov 05
Karna Serial Today Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ಅವರು ಸುಳ್ಳು ಮದುವೆ ಆಗಿದ್ದಾರೆ. ತೇಜಸ್ ಹುಡುಕಾಟದಲ್ಲಿರುವ ಈ ಜೋಡಿಗೆ ನಿಜಕ್ಕೂ ನ್ಯಾಯ ಸಿಗತ್ತಾ ಎನ್ನುವ ಪ್ರಶ್ನೆ ಬಂದಿದೆ. ಸೀರಿಯಲ್‌ನಲ್ಲಿ ಮುಂದೆ ಏನಾಗುವುದು ಎಂದು ಸಂಜಯ್ ಸುಳಿವು ಕೊಟ್ಟಿದ್ದಾನೆ.
01:40 PM (IST) Nov 05
Trump NASA chief appointment: ಮಸ್ಕ್ ಅವರ ಆಪ್ತ ಸ್ನೇಹಿತ ಮತ್ತು ಖಾಸಗಿ ಗಗನಯಾತ್ರಿ ಐಸಾಕ್‌ಮನ್‌ರನ್ನು ಮೊದಲು ನಾಸಾ ಆಡಳಿತಾಧಿಕಾರಿಯನ್ನಾಗಿ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ ನಂತರ ಮಸ್ಕ್ ಮತ್ತು ಟ್ರಂಪ್ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ...
01:15 PM (IST) Nov 05
ಭಾರತ ಪ್ರವಾಸದಲ್ಲಿರುವ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಭಾರತವನ್ನು 'ಜಾಗತಿಕ ಮಹಾಶಕ್ತಿ' ಮತ್ತು 'ಭವಿಷ್ಯ' ಎಂದು ಬಣ್ಣಿಸಿದ್ದಾರೆ. ಹಮಾಸ್ ದಾಳಿಯ ನಂತರ ಪ್ರಧಾನಿ ಮೋದಿ ಮೊದಲು ಕರೆ ಮಾಡಿದ್ದನ್ನು ಸ್ಮರಿಸಿದ ಅವರು, ಇಸ್ರೇಲ್ ಮತ್ತು ಭಾರತದ ಸಂಬಂಧ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.
12:53 PM (IST) Nov 05
Nikhil Kumaraswamy criticism on Karnataka government :ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಕುರ್ಚಿಗಾಗಿ ಆಂತರಿಕವಾಗಿ ಕಿತ್ತಾಡುತ್ತಾ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಗುಬ್ಬಿಯಲ್ಲಿ ಆರೋಪಿಸಿದರು.
12:38 PM (IST) Nov 05
12:20 PM (IST) Nov 05
12:11 PM (IST) Nov 05
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ನಾನು 100 ಸಿನಿಮಾ ಮಾಡಿದ್ದೀನಿ, ನೀನು 1 ಯುಟ್ಯೂಬ್ ಚಾನೆಲ್ ಮಾಡಿಕೊಂಡು ನಾಟಕ ಮಾಡಬೇಡ, ನಿನ್ನಂಥ 100 ಯುಟ್ಯೂಬ್ ಚಾನೆಲ್ ಮಾಡ್ತೀನಿ ಎಂದು ಅಶ್ವಿನಿ ಗೌಡ, ರಕ್ಷಿತಾಗೆ ಚಾಲೆಂಜ್ ಮಾಡಿದ್ದರು. ನಾನು ಏನಾಗಿದ್ದೀನೋ ಅದು ಯುಟ್ಯೂಬ್‌ನಿಂದ ಎಂದು ಗಿಲ್ಲಿ ನಟ ಹೇಳಿದ್ರು
11:47 AM (IST) Nov 05
ಇತ್ತೀಚಿನ ಸಂಶೋಧನೆಯೊಂದು ಬೆಳಗಿನ ಉಪಾಹಾರ ದಿನದ ಪ್ರಮುಖ ಊಟ ಎಂಬ ನಂಬಿಕೆ ಪ್ರಶ್ನಿಸಿದೆ. ವಯಸ್ಕರಲ್ಲಿ ಉಪಾಹಾರ ಬಿಡುವುದರಿಂದ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಗಣನೀಯ ಪರಿಣಾಮ ಬೀರುವುದಿಲ್ಲ, ಏಕೆಂದರೆ ಮೆದುಳು 'ಕೀಟೋನ್'ಗಳನ್ನು ಇಂಧನವಾಗಿ ಬಳಸುತ್ತದೆ. ಆದಾಗ್ಯೂ, ಮಕ್ಕಳ ಬೆಳವಣಿಗೆಗೆ ಉಪಾಹಾರ ಅತ್ಯಗತ್ಯ
11:10 AM (IST) Nov 05
ಭಾರತಕ್ಕೆ ಬೇಕಾಗಿರುವ ವಿವಾದಿತ ಧರ್ಮಪ್ರಚಾರಕ ಝಾಕಿರ್ ನಾಯ್ಕ್ ಅವರ ಬಾಂಗ್ಲಾದೇಶ ಭೇಟಿ ಮುಹಮ್ಮದ್ ಯೂನಸ್ ಸರ್ಕಾರ ತಡೆಹಿಡಿದಿದೆ. ಭಾರತದ ಅಧಿಕೃತ ಆಕ್ಷೇಪಣೆ ಮತ್ತು ವ್ಯಾಪಕ ಟೀಕೆಗಳ ನಂತರ, ಢಾಕಾದಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರದ್ದುಗೊಳಿಸಿ, ನಾಯ್ಕ್ ಪ್ರವೇಶವನ್ನು ನಿಷೇಧಿಸಲಾಗಿದೆ.