LIVE NOW
Published : Jul 04, 2026, 06:09 AM ISTUpdated : Jul 04, 2026, 10:53 PM IST

Karnataka News Live: ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ

ಸಾರಾಂಶ

ದಾವಣಗೆರೆ: ಜಾತಿಗಣತಿ ಸಮೀಕ್ಷೆ ಮಾಡಿ, ವರದಿ ಜಾರಿಗೊಳಿಸಲು ಬಯಸಿದ್ದ ಸಿದ್ದರಾಮಯ್ಯ ಅವರು ಇನ್ನೂ 2 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದುಕೊಂಡಿದ್ದೆವು, ಆದರೆ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯಬೇಕಾಯಿತು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಮಾಡಿ, ಅದನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಬಯಸಿದ್ದರು. ಆದರೆ, ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯಬೇಕಾಯಿತು. ಸಿಎಂ ಸ್ಥಾನದಿಂದ ಕೆಳಗಿಳಿದರೂ, ಅದಕ್ಕೆ ಮುಂಚೆ ಕೊನೆಯ ದಿನ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಪಡೆದಿದ್ದರು. ಜಾತಿ ಜನಗಣತಿ ವರದಿಯನ್ನು ಜಾರಿಗೊಳಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಪ್ರಸ್ತಾಪ ಮಾಡಿದ್ದೆವು. ಅದನ್ನು ಈಡೇರಿಸಬೇಕಾಗಿರುವುದು ನಮ್ಮ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

10:53 PM (IST) Jul 04

ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ, ಮನೆಯ ಬಾಗಿಲ ಬಳಿ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ ಮತ್ತು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Read Full Story

09:55 PM (IST) Jul 04

SIR ಪ್ರಕ್ರಿಯೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಅಪಘಾತದಲ್ಲಿ ಸಾವು, ಒತ್ತಡಕ್ಕೆ ಬಲಿಯಾಯ್ತಾ ಜೀವ?

SIR ಪ್ರಕ್ರಿಯೆ ತೆರಳುತಿದ್ದ ಗ್ರಾಮ ಲೆಕ್ಕಾಧಿಕಾರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಇದೀಗ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಅಧಿಕಾರಿಗಳ ಒತ್ತಡದಿಂದ ಘಟನೆ ನಡೆದಿದೆ ಅನ್ನೋ ಆರೋಪಗಳು ಕೇಳಿಬಂದಿದೆ.

Read Full Story

09:44 PM (IST) Jul 04

Bharat Mata Painting - ಭಾರತ ಮಾತೆಯ ಮೊದಲ ಚಿತ್ರ ಹೇಗಿತ್ತು? ಯಾರು ಚಿತ್ರಿಸಿದರು ಗೊತ್ತಾ?

ನಾವು ಸಾಮಾನ್ಯವಾಗಿ ನೋಡುವ ಭಾರತ ಮಾತೆ ಅಂದ್ರೆ ತ್ರಿವರ್ಣ ಸೀರೆಯುಟ್ಟು, ಕೈಯಲ್ಲಿ ಧ್ವಜ ಹಿಡಿದಿರುವ ಚಿತ್ರ. ಆದರೆ ಭಾರತ ಮಾತೆಯ ಮೊದಲ ಚಿತ್ರ ಹೇಗಿತ್ತು ಗೊತ್ತಾ? ಅದನ್ನು ಯಾರು, ಯಾವಾಗ ಚಿತ್ರಿಸಿದ್ದರು? ಇಲ್ಲಿದೆ ಮಾಹಿತಿ.

Read Full Story

09:26 PM (IST) Jul 04

ಅಪ್ಪ ತೆಗೆದುಕೊಂಡ ಆ ಒಂದು ದಿಟ್ಟ ನಿರ್ಧಾರ ನನ್ನ ಹಣೆಬರಹ ಬದಲಿಸಿತು - ಸಂಜು ಭಾವುಕ

ತುಳಿಯೋರ ನಡುವೆ ಕ್ರಿಕೆಟ್‌ನಲ್ಲಿ ಕ್ಲಿಕ್ ಆಗಿರುವ ಹಿಂದಿನ ಅಸಲಿ ಸಿಕ್ರೇಟ್ ಅನ್ನು ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ. ನನ್ನ ತಂದೆ ತೆಗೆದುಕೊಂಡು ಆ ಒಂದು ನಿರ್ಧಾರದಿಂದ ನನ್ನ ಬದುಕೇ ಬದಲಾಯ್ತು ಎಂದು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ದೆಹಲಿಯಲ್ಲಿ ಆಗಿದ್ದೇನು? ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Read Full Story

09:07 PM (IST) Jul 04

Amruthadhaare Serial - ಗೌತಮ್‌ಗೆ ಮಾರಣಾಂತಿಕ ಕಾಯಿಲೆ; ಸಾವಿನಿಂದಲೇ 'ಅಮೃತಧಾರೆ' ಅಂತ್ಯ ಆಗುತ್ತಾ?

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಶಕುಂತಲಾ-ಗೌತಮ್‌ ಒಂದಾಗಿದ್ದಾರೆ. ಇನ್ನೊಂದು ಕಡೆ ಭೂಮಿಕಾ ಅಕ್ಷರವನ್ನು ಪುಸ್ತಕ ರೂಪಕ್ಕೆ ಇಳಿಸಲು ಗೌತಮ್‌ ಸಜ್ಜಾಗಿದ್ದಾನೆ. ಆದರೆ ವಿಧಿ ಆಟ ಬೇರೆ ಇದ್ದಂತಿದೆ.

 

Read Full Story

08:51 PM (IST) Jul 04

ಎಚ್.ಕೆ. ಪಾಟೀಲ ಹೆಸರಿನಲ್ಲೇ ಮೂರು ಮತ - ಸಂಸದ ಬೊಮ್ಮಾಯಿ ಸ್ಫೋಟಕ ಆರೋಪ

ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು..

Read Full Story

07:37 PM (IST) Jul 04

ಜಸ್ಟ್ 14 ವರ್ಷಕ್ಕೆ ಬುರ್ಜ್ ಖಲೀಫಾದಲ್ಲಿ AI ಕಚೇರಿ ಸ್ಥಾಪನೆ! ಈ ಜೈನಂ ಜೈನ್ ಯಾರು?

14 ವರ್ಷದ ಭಾರತೀಯ ಮೂಲದ ಜೈನಂ ಜೈನ್, ದುಬೈನ ಬುರ್ಜ್ ಖಲೀಫಾದಲ್ಲಿ 'ಮೆಂಗೊ ಇಂಜಿನ್' ಎಂಬ ಕೃತಕ ಬುದ್ಧಿಮತ್ತೆ ಕಂಪನಿಯನ್ನು ಸ್ಥಾಪಿಸಿದ್ದಾರೆ. ಕೇವಲ 105 ದಿನಗಳಲ್ಲಿ 10ನೇ ತರಗತಿ ಮುಗಿಸಿದ ಇವರ ಸಾಧನೆಯು, ಯಶಸ್ಸಿಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.
Read Full Story

06:44 PM (IST) Jul 04

ಮಳೆಗಾಗಿ ಕಾಯುವ ದಿನ ಮುಗಿದಿದೆ.. ಹವಾಮಾನ ಇಲಾಖೆಯಿಂದ ಬಿಗ್ ಅಪ್‌ಡೇಟ್ಸ್

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದೇಶದ ಹಲವೆಡೆ ಮುಂಗಾರು ಮತ್ತೆ ಚುರುಕುಗೊಂಡಿದೆ. ಇದರ ಪರಿಣಾಮವಾಗಿ, ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 4-5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.
Read Full Story

06:25 PM (IST) Jul 04

ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಂಭೀರವಾಗಿ ಗಾಯಗೊಂಡ ರೈಡರ್

ಕಾರವಾರದಿಂದ ಉಡುಪಿಯತ್ತ ಸಾಗುತ್ತಿದ್ದ ಸಚಿವ ಯುಟಿ ಖಾದರ್ ಅವರಿಗೆ ಬೆಂಗಾವಲು ಪಡೆಯಾಗಿ ತೆರಳುತ್ತಿದ್ದ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

 

Read Full Story

06:20 PM (IST) Jul 04

ಕಾಮಿಡಿಯಿಂದ ಮಾಸ್‌ಗೆ ಶಿಫ್ಟ್ ಆದ ಕೋಮಲ್ - ಸಿಗಾರ್ ಹಿಡಿದ 'ರೋಲೆಕ್ಸ್'ನ ರಹಸ್ಯವೇನು?

ತಮ್ಮ ವಿಶಿಷ್ಟ ಕಾಮಿಡಿ ಟೈಮಿಂಗ್ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಕೋಮಲ್ ಕುಮಾರ್ ಇದೀಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

Read Full Story

05:35 PM (IST) Jul 04

'ನೀನು ಒಪ್ಪದಿದ್ದರೆ ನಿನ್ನ ತಂಗಿಗೆ ಪ್ರಪೋಸ್ ಮಾಡ್ತೀನಿ' - ಪ್ರಜ್ವಲ್ ದೇವರಾಜ್-ರಾಗಿಣಿ ಪ್ರೀತಿಯ ಕಥೆ ಗೊತ್ತಾ?

Prajwal Devaraj: ಪ್ರಜ್ವಲ್ ಮತ್ತು ರಾಗಿಣಿ ಅವರ ಪರಿಚಯ ಬಾಲ್ಯದಲ್ಲೇ ಶುರುವಾಯಿತು. ಇಬ್ಬರೂ ಬೆಂಗಳೂರಿನ ಬನಶಂಕರಿಯಲ್ಲಿರುವ ಡಿಂಕಿ ಸಂಗೀತ ಮತ್ತು ನೃತ್ಯ ಅಕಾಡೆಮಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದರು.

Read Full Story

04:58 PM (IST) Jul 04

ಹುಟ್ಟುಹಬ್ಬದ ದಿನವೇ ‘ಮಾಫಿಯಾ’ಗೆ ಎಂಟ್ರಿ ಕೊಟ್ಟ ಪ್ರಜ್ವಲ್‌ ದೇವರಾಜ್‌ - ಅಪ್ಪ ಕೂಡಾ ಸಾಥ್!

Mafia New Poster: ಇಂದು (ಜು.4) ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ. ಈ ಪ್ರಯುಕ್ತ ಅವರು ನಟಿಸಿರುವ ‘ಮಾಫಿಯಾ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ತಂದೆ - ಮಗ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

Read Full Story

04:54 PM (IST) Jul 04

Sara Mahesh - ಕಾಂಗ್ರೆಸ್‌ ವಿರುದ್ಧ ಗುಡುಗಿದ ಸಾರಾ ಮಹೇಶ; ವ್ಯಂಗ್ಯವಾಗಿ ಮಾಜಿ ಸಿಎಂ ಟೀಕೆ!

SR Mahesh on Congress Government: ಮಾಜಿ ಸಚಿವ ಸಾರಾ ಮಹೇಶ್ ಅವರು ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೂಡಾ 50:50 ಸೈಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

Read Full Story

04:38 PM (IST) Jul 04

Deadly Killer Review - ಕಾಡಿನ ಮಧ್ಯೆ ನಡೆದ ಆ ರಾತ್ರಿ ನಿಜಕ್ಕೂ ಏನಾಯಿತು?

Deadly Killer Review: ಕ್ರಿಮಿನಲ್‌ಗಳನ್ನು ಕರೆದುಕೊಂಡು ಪೊಲೀಸ್‌ ವ್ಯಾನ್‌ ಒಡಿಸ್ಸಾದ ಕಾಡಿನಿಂದ ಕರ್ನಾಟಕದೆಡೆಗೆ ಬರುತ್ತದೆ. ಆಂಧ್ರದ ಸರಹದ್ದಿಗೆ ಬರುವಾಗ ಇವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಾರೆ.

Read Full Story

04:28 PM (IST) Jul 04

Love Seasons Review - ಈ ಒಂದು ಕಾರಣಕ್ಕಾಗಿ 'ಲವ್ ಸೀಸನ್ಸ್' ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ!

Love Seasons Movie Review: ಈ ಕತೆ ವಿಭಿನ್ನ ಹಾದಿ ಹಿಡಿಯುತ್ತದೆ. ಅವನ ಬದುಕನ್ನು ಸೀಸನ್‌ಗಳ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಲವು ಪ್ರೇಮಗಳ ಕಥನ ಹೇಳುತ್ತಾರೆ.

Read Full Story

04:13 PM (IST) Jul 04

Gramayana Movie Review - ಹೇಗಿದೆ ದೊಡ್ಮನೆ ಕುಡಿ ‘ಗ್ರಾಮಾಯಣ’? ಇಲ್ಲಿದೆ ಸಂಪೂರ್ಣ ವಿಮರ್ಶೆ

ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, ‘ಗ್ರಾಮಾಯಣ’ ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ.

Read Full Story

03:44 PM (IST) Jul 04

USA Priyanka Chopra - ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಅಮೆರಿಕಾದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರಿಯಾಂಕಾ ಹಂಚಿಕೊಂಡಿರುವ ವೀಡಿಯೋದಲ್ಲಿ, ದೊಡ್ಡ ಗಾಜಿನ ಕಿಟಕಿಯ ಮೂಲಕ ಆಕಾಶದಲ್ಲಿ ಸಿಡಿಯುತ್ತಿರುವ ವರ್ಣರಂಜಿತ ಪಟಾಕಿಗಳು ಕಾಣಿಸುತ್ತವೆ.

Read Full Story

03:06 PM (IST) Jul 04

ಕೊಪ್ಪಳ - ಚಿನ್ನದ ವ್ಯಾಪಾರಿಯ ಇಡೀ ಕುಟುಂಬ ಸರ್ವನಾಶ, ಸಾಮೂಹಿಕವಾಗಿ ಸಾವಿಗೆ ಶರಣು!

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಜ್ಯುವೆಲರಿ ಅಂಗಡಿ ಮಾಲೀಕ ಪ್ರಕಾಶ್ ರಾಯ್ಕರ್, ಅವರ ಪತ್ನಿ ಮತ್ತು ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯು ಇಡೀ ನಗರವನ್ನು ಬೆಚ್ಚಿಬೀಳಿಸಿದ್ದು, ಸಾಲಬಾಧೆಯೇ ಸಾವಿಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.

Read Full Story

02:51 PM (IST) Jul 04

ಬತ್ತಿದ ಕೃಷ್ಣೆಯ ಒಡಲಲ್ಲಿ ಮತ್ತೆ ಜಲಝೇಂಕಾರ! ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆಯಿಂದಾಗಿ, ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾಗಿದೆ. ಎರಡು ತಿಂಗಳಿಂದ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದ್ದು, ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
Read Full Story

02:50 PM (IST) Jul 04

Shabari Movie - ಕನ್ನಡದ ಬೆಳ್ಳಿತೆರೆ ಮೇಲೆ ಶಬರಿ ಆದ Raani Kannada Serial ಬಾಲನಟಿ ಧನ್ವಿ!

Shabari Movie: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಾಲನಟಿ ಈಗ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಶಬರಿ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದು, ಟೀಸರ್‌ ರಿಲೀಸ್‌ ಆಗಿದೆ. 

Read Full Story

02:13 PM (IST) Jul 04

Iran - ಖಮೇನಿ ಪಕ್ಕದಲ್ಲಿ 14 ತಿಂಗಳ ಮಗುವಿನ ಪುಟ್ಟ ಶವಪೆಟ್ಟಿಗೆ ಕಂಡ ಇರಾನ್; ಕಣ್ಣೀರ ಕಡಲಾದ ಟೆಹ್ರಾನ್! ಯಾರು ಗೊತ್ತಾ ಆ ಪುಟ್ಟ ಹುಡುಗಿ!

Zahra Mohammadi Golpayegani: ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮಗುವಿನದ್ದು, ಆ ಮಗು ಯಾರು ಗೊತ್ತಾ? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ. 

Read Full Story

02:11 PM (IST) Jul 04

ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಕಳೆದಿಲ್ಲ, ರಾಜ್ಯದ ಎಲ್ಲ ಡ್ಯಾಂಗಳು ಖಾಲಿ - ಆರ್ ಅಶೋಕ್ ವಾಗ್ದಾಳಿ, ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಕೆ ಶಿವಕುಮಾರ್ ಸರ್ಕಾರದ ಅವಧಿಯಲ್ಲಿ ಡ್ಯಾಂಗಳು ಖಾಲಿಯಾಗಿರುವುದನ್ನು ಟೀಕಿಸಿದ್ದಾರೆ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯದಂತೆ ಹೇಳುವ ಸರ್ಕಾರ, ತಮಿಳುನಾಡಿಗೆ ಇದೇ ಮಾತನ್ನು ಹೇಳಲು ಸವಾಲು ಹಾಕಿದ್ದು, ಬೆಳೆ ಬೆಳೆಯದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
Read Full Story

01:40 PM (IST) Jul 04

'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra

Pavan Ravindra Arathi Subash engagement: ‘ನೀ ಇರಲು ಜೊತೆಯಲ್ಲಿ’, ‘ರಂಗನಾಯಕಿ’ ಧಾರಾವಾಹಿ ನಟ ಪವನ್‌ ರವೀಂದ್ರ ಅವರು ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ನಟಿ ಆರತಿ ಸುಭಾಷ್‌ ಜೊತೆಗೆ ಪ್ರೀತಿಯಲ್ಲಿ ಬಿದ್ದ ಇವರೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

Read Full Story

01:25 PM (IST) Jul 04

ಚಿಕ್ಕಮಗಳೂರು - ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಕಾಲಲ್ಲಿ ಹಾಕಿ ತುಳಿದ ಪಾಗಲ್ ಪ್ರೇಮಿ!

Chikkamagaluru shocking incident ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

 

Read Full Story

01:07 PM (IST) Jul 04

Uttar kannada - ಅಯ್ಯೋ.. ಸಾವಿನ ದುಃಖ; ನೀರಲ್ಲೇ ಸಾಗಿದ ಶವ; ಹೊನ್ನಾವರದಲ್ಲಿ ತಲೆ ಸಮಾಜವೇ ತಲೆ ತಗ್ಗಿಸುವಂಥ ಘಟನೆ!

carrying dead body in water karnataka: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ, ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಉಕ್ಕಿ ಹರಿಯುವ ಹೊಳೆಯಲ್ಲಿಯೇ ಶವವನ್ನು ಹೊತ್ತು ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಂತರವೂ ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯನ್ನು ಎತ್ತಿ ತೋರಿಸುತ್ತದೆ.

Read Full Story

12:55 PM (IST) Jul 04

Paddu Gowda Passed Away - ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಖ್ಯಾತಿ ಪದ್ದು ಗೌಡ ನಿಧನ; ಜೀವನಯಾನ ಮುಗಿಸಿದ ಮುಗ್ಧ ಸ್ನೇಹಜೀವಿ!

ಕನ್ನಡ ಕಿರುತೆರೆಯಲ್ಲಿ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಒಂದು ಸಾಹಸಪ್ರಧಾನ ಜನಪ್ರಿಯ ರಿಯಾಲಿಟಿ ಶೋ ಆಗಿತ್ತು. ಇದರ 2ನೇ ಸರಣಿಯಲ್ಲಿ ಪದ್ದು ಗೌಡ ಭಾಗವಹಿಸಿ ಮನೆಮಾತಾಗಿದ್ದರು. ಬಳಿಕ ಅವರು ಕಲಾವಿದರಾಗಿ, ನಿರೂಪಕರಾಗಿ ಗುರುತಿಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.

Read Full Story

11:31 AM (IST) Jul 04

Vaibhav Sooryavanshi - ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೆ ಸೂರ್ಯವಂಶಿ ಕ್ರೀಸ್‌ಗಿಳಿಯೋದು ಫಿಕ್ಸ್? ಎರಡೇ ಮಾತಲ್ಲಿ ರಹಸ್ಯ ಬಿಚ್ಚಿಟ್ಟ ವೈಭವ್!

15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಕುರಿತು ಹಿಂಟ್‌ ನೀಡಿದ್ದಾರೆ. ಅಲ್ಲದೇ ಅವರ ಇನಸ್ಟಾಗ್ರಾಂ ಸಂಚಲನ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

11:15 AM (IST) Jul 04

Hyena - ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ! ಗ್ರಾಮದಲ್ಲಿ ಆತಂಕ, ರಾತ್ರಿ ಸಂಚಾರಕ್ಕೆ ಡವಡವ!

Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

 

Read Full Story

10:33 AM (IST) Jul 04

Bike Ambulance - ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್‌ಗೆ ಮರುಜೀವ ನೀಡಿದ ಸರ್ಕಾರ!

ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಕರ್ನಾಟಕ ಆರೋಗ್ಯ ಇಲಾಖೆಯು 'ಬೈಕ್ ಆಂಬುಲೆನ್ಸ್' ಸೇವೆಯನ್ನು ಮರುಪ್ರಾರಂಭಿಸುತ್ತಿದೆ. ಮೊದಲ ಹಂತದಲ್ಲಿ 100 ಹೈಟೆಕ್ ಬೈಕ್‌ಗಳು ರಸ್ತೆಗಿಳಿಯಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

09:55 AM (IST) Jul 04

ಬೆಂಗಳೂರು - ಅಪಾರ್ಟ್‌ಮೆಂಟ್‌ ಒಂದರಲ್ಲಿ ಅಕ್ರಮ ಪೈಥಾನ್ ಹಾವುಗಳ ಸಾಕಣೆ ಪತ್ತೆ! ಆಂಧ್ರ ಮೂಲದ ವ್ಯಕ್ತಿ ವಶಕ್ಕೆ

ಬೆಂಗಳೂರಿನ ಕಾಮಾಕ್ಷಿಪಾಳ್ಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಕ್ರಮವಾಗಿ ಹೆಬ್ಬಾವುಗಳನ್ನು ಸಾಕುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಅಡಗಿಸಿಟ್ಟಿದ್ದ ಹಾವುಗಳನ್ನು ರಕ್ಷಿಸಲಾಗಿದೆ.
Read Full Story

09:52 AM (IST) Jul 04

Rain Alert - ಮನೆಯಿಂದ ಹೊರಡುವ ಮುನ್ನ ಎಚ್ಚರ; ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಮುಂದಿನ ಕೆಲ ಗಂಟೆಗಳಲ್ಲಿ ಭಾರೀ ಮಳೆ!

ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆ ಕರಾವಳಿಯ ಮೂರು ಮತ್ತು ಮಲೆನಾಡು ಹಾಗೂ ಉತ್ತರ ಒಳನಾಡಿನ ಆರು ಜಿಲ್ಲೆಗಳು ಸೇರಿ ಒಟ್ಟು 9 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ. 

Read Full Story

09:27 AM (IST) Jul 04

ಬೆಂಗಳೂರು - KR Circle ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ, ಪ್ರಯಾಣಿಕರ ರಕ್ಷಣೆಗೆ ಹರಸಾಹಸ!

ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಬೆಳ್ಳಂಬೆಳಗ್ಗೆ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ವೋಲ್ವೋ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
Read Full Story

09:03 AM (IST) Jul 04

ಕರ್ನಾಟಕ ಹೈಕೋರ್ಟ್ ನೇಮಕಾತಿ - ಡೇಟಾ ಎಂಟ್ರಿ ಹುದ್ದೆಗಳು, 80 ಸಾವಿರದವರೆಗೆ ವೇತನ

ಕರ್ನಾಟಕ ಉಚ್ಚ ನ್ಯಾಯಾಲಯವು ಬೆಂಗಳೂರಿನಲ್ಲಿ ಖಾಲಿ ಇರುವ 21 ಡೇಟಾ ಎಂಟ್ರಿ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ ₹25,500 ರಿಂದ ₹81,100 ವರೆಗೆ ವೇತನ ನೀಡಲಾಗುತ್ತದೆ.
Read Full Story

08:22 AM (IST) Jul 04

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ? ಗುಪ್ತಚರ ವರದಿಯಲ್ಲಿ ಶಾಕಿಂಗ್ ಮಾಹಿತಿ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ನಂತರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆಯು ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Read Full Story

08:19 AM (IST) Jul 04

Karnataka SIR - ಮುರಾ ಗ್ರಾಮ ಮರ, ಟ್ರೀ ಬರೆದು ಎಡವಟ್ಟು, ಎಸ್‌ಐಆರ್ ಕನ್ನಡಲ್ಲೇ ನಡೆಸಲು ಕರವೇ ಆಗ್ರಹ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಅಕ್ಷರ ದೋಷದಿಂದ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಗ್ರಹಿಸಿದೆ.

Read Full Story

08:07 AM (IST) Jul 04

ಮುದ್ದೇಬಿಹಾಳದಿಂದ ಮಂತ್ರಾಲಯಕ್ಕೆ ಬಸ್ ಆರಂಭ; ಈ ರೂಟ್‌ನಲ್ಲಿ ಸಂಚರಿಸಲಿದೆ ನೂತನ ಬಸ್

ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು, ಕಾರ್ಮಿಕರು, ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

Read Full Story

07:56 AM (IST) Jul 04

ಕಾರು ಚಲಾಯಿಸುವಾಗ ದಿಢೀರ್ ಉಸಿರಾಟ ಸಮಸ್ಯೆ, ಮಹಿಳೆಯ ಜೀವ ಉಳಿಸಿದ ಮಡಿವಾಳ ಸಂಚಾರಿ ಪೊಲೀಸ್ ಪೇದೆ

ಕಾರು ಚಲಾಯಿಸುವಾಗ ದಿಢೀರನೇ ಉಸಿರಾಟ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್‌ವೇರ್ ಕಂಪನಿ ಮಹಿಳಾ ಉದ್ಯೋಗಿಯನ್ನು ಮಡಿವಾಳ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು ರಕ್ಷಿಸಿದ್ದಾರೆ. ಪೇದೆಯ ಸಮಯಪ್ರ

Read Full Story

07:55 AM (IST) Jul 04

50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ - ಜನರಿಗೆ ಕೈಗೆಟುಕುವ ಬೆಲೆಗೆ ನಿವೇಶನ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಿ, ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ನೀಡಲು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ, ಪೌರಕಾರ್ಮಿಕರ ನೇಮಕಾತಿ, ಪಾರ್ಕ್ ಅಭಿವೃದ್ಧಿ ಮತ್ತು ಇ-ಖಾತಾ ಪ್ರಕ್ರಿಯೆ ಸರಳೀಕರಣಗೊಳಿಸುವಂತೆಯೂ ಅವರು ಸೂಚನೆ ನೀಡಿದರು.
Read Full Story

07:38 AM (IST) Jul 04

ಶಿವರಾಮ ಕಾರಂತ ಬಡಾವಣೆ ಫಲಾನುಭವಿಗಳಿಗೆ ಗುಡ್‌ನ್ಯೂಸ್! ನಿವೇಶನ ಹಂಚಿಕೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಸಂಬಂಧ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಸರ್ಕಾರಕ್ಕೆ ಅನುಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.

Read Full Story

07:20 AM (IST) Jul 04

ಅಮೆರಿಕದ ವಿಶೇಷ ವಿಮಾನದಿಂದ ಹಾವೇರಿ ಜಿಲ್ಲೆಯಲ್ಲಿ 3 ದಿನ ಮೋಡ ಬಿತ್ತನೆ - ಶಾಸಕರಿಂದಲೇ ವೆಚ್ಚ

ಹಾವೇರಿ ಜಿಲ್ಲೆಯಲ್ಲಿನ ಮಳೆ ಕೊರತೆ ನೀಗಿಸಲು ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಜುಲೈ 7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆಗೆ ಅಮೆರಿಕದಿಂದ ವಿಶೇಷ ವಿಮಾನ ತರಿಸಲಾಗುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ಜಿಲ್ಲೆಯ ಶಾಸಕರೇ ಭರಿಸಲಿದ್ದಾರೆ.
Read Full Story

More Trending News