ಬೆಂಗಳೂರು: ಪ್ರಸಕ್ತ ಸಾಲಿನ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 3 ಮತ್ತು 4 ನೇ ಕಂತಿನ 443.25 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ಜಿಪಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಿಗೆ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಆದೇಶ ಹೊರಡಿಸಿದ್ದಾರೆ. ಯೋಜನೆಗಳಿಗೆ ಸಂಬಂಧಿಸಿ ಪ್ರತಿ ಜಿಲ್ಲಾವಾರು ಅವಲೋಕನ ಮಾಡಿ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ.

10:38 PM (IST) Feb 04
ಅಮೆರಿಕದ ವೀಸಾ ನಿಯಮಗಳು ವಿದೇಶಗಳಲ್ಲಿ ತಾಂತ್ರಿಕ ನೇಮಕಾತಿಗಳನ್ನು ಬಿಗಿಗೊಳಿಸುತ್ತಿರುವುದರಿಂದ, ಬೆಂಗಳೂರಿನಲ್ಲಿ 20,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಬಹುದಾದ ಹೊಸ ಕಚೇರಿ ಸ್ಥಳದೊಂದಿಗೆ ಆಲ್ಫಾಬೆಟ್ ಭಾರತದಲ್ಲಿ ಪ್ರಮುಖ ವಿಸ್ತರಣೆಯನ್ನು ಯೋಜಿಸುತ್ತಿದೆ.
10:13 PM (IST) Feb 04
Bhagyalakshmi Serial: 'ಭಾಗ್ಯಲಕ್ಷ್ಮಿ' ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳ ಬದುಕಿಗೆ ಹಳೆಯ ಪತಿ ತಾಂಡವ್ ಕೂಡ ಬಂದಿದ್ದಾನೆ, ಇಷ್ಟುದಿನಗಳ ಕಾಲ ಕಷ್ಟದಲ್ಲಿ ಜೊತೆಗಿದ್ದು, ಆಕೆಯನ್ನು ಗೌರವಿಸುವ ಆದೀಶ್ವರ್ ಕಾಮತ್ ಇದ್ದಾನೆ. ಆದೀಶ್ವರ್ ಜೊತೆ ಮದುವೆ ಆಗಬೇಕು ಎಂದುಕೊಂಡ ಭಾಗ್ಯಗೆ ಧರ್ಮಸಂಕಟ ಬಂದಿದೆ.
09:36 PM (IST) Feb 04
Actor Mandya Ramesh Daughter Disha: ನಟ ಮಂಡ್ಯ ರಮೇಶ್ ಮಗಳು ದಿಶಾ ಅವರು ಮದುವೆಯ ಫೋಟೋಗಳನ್ನು ಶೇರ್ ಮಾಡಿದ್ದಲ್ಲದೆ, ಲವ್‌ಸ್ಟೋರಿ ರಹಸ್ಯದ ಬಗ್ಗೆ ಫಸ್ಟ್ ಟೈಮ್ ರಿವೀಲ್ ಮಾಡಿದ್ದಾರೆ. ಸುಂದರ ಫೋಟೋಗಳನ್ನು ನೋಡಿ.
08:14 PM (IST) Feb 04
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ದಕ್ಷಿಣ ಕರ್ನಾಟಕದ ಮೊದಲ ಟಿಎಂವಿಆರ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಅಪಾಯದಲ್ಲಿದ್ದ 72ವರ್ಷದ ರೋಗಿಗೆ ಈ ಅತ್ಯಾಧುನಿಕ,ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಚಿಕಿತ್ಸೆ ನೀಡಿ, ಮೂರೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.
07:56 PM (IST) Feb 04
ಬೆಂಗಳೂರಿನ 'ನಮ್ಮ ಮೆಟ್ರೋ' ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆ.9, ಸೋಮವಾರದಿಂದ ಹೊಸ ದರಗಳು ಜಾರಿಗೆ ಬರಲಿದ್ದು, ನಿರ್ವಹಣಾ ವೆಚ್ಚದ ಹೆಚ್ಚಳವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
07:53 PM (IST) Feb 04
'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ನ ಶೂಟಿಂಗ್ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ನಟಿ ರಕ್ಷಿತಾ ಭಾಸ್ಕರ್, ಸಹನಟ ಅಥರ್ವ ಅವರ ಕೆನ್ನೆಗೆ ಹೊಡೆಯುವ ದೃಶ್ಯದ ಚಿತ್ರೀಕರಣದ ಹಿಂದಿನ ಸವಾಲುಗಳು ಮತ್ತು ತಮಾಷೆಯ ಕ್ಷಣಗಳನ್ನು ತೋರಿಸಲಾಗಿದೆ.
07:47 PM (IST) Feb 04
07:17 PM (IST) Feb 04
ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ನಟನೆ ಮಾತ್ರವಲ್ಲದೆ 'ಕೋಣ' ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ತಮ್ಮ ಹಾಟ್ ಫೋಟೋಶೂಟ್ ಮೂಲಕವೂ ಅವರು ಸದ್ದು ಮಾಡುತ್ತಿದ್ದಾರೆ.
07:15 PM (IST) Feb 04
Kamalakar Bhat Case: 7 Accused Sent to Judicial Custody Till Feb 11 ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
07:09 PM (IST) Feb 04
07:04 PM (IST) Feb 04
ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ತನ್ನ ಟ್ಯಾಟೋ ಹಾಕಿಸಿಕೊಂಡಿದ್ದ ಮಂಡ್ಯದ ಅಭಿಮಾನಿಯನ್ನು ಭೇಟಿಯಾಗದ ಕಾರಣ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಗೆದ್ದ ನಂತರ ಅಭಿಮಾನಿಗಳನ್ನು ಮರೆತಿದ್ದಾರೆ ಎಂದು ಅಭಿಮಾನಿ ಕುಮಾರ್ ಬೇಸರ ವ್ಯಕ್ತಪಡಿಸಿದ್ದು, ಈ ಘಟನೆಯಿಂದ ನೊಂದ ಗಿಲ್ಲಿ ನಟ ಕ್ಷಮೆಯಾಚಿಸಿದ್ದಾರೆ.
06:17 PM (IST) Feb 04
ನೀನು ನನ್ನ ಪ್ಲೇವರ್, ಬಂದು ಬಿಡು ಬಂಗಾರಿ, ನಿನ್ನ ರಾಣಿ ಥರ ನೋಡ್ಕೋತೀನಿ ಬಂದು ಬಿಡು ಲೀಲಾ ಹೀಗೆ ಮಂಜು ಗೋಳಾಡಿದ್ದು ನೀವೆಲ್ಲರೂ ನೋಡಿದ್ದೀರ. ಇದೀಗ ಅದೇ ರೀತಿಯ ಸನ್ನಿವೇಷ ಶಾಂತಂ ಪಾಪಂನಲ್ಲಿ ಮೂಡಿ ಬಂದಿದೆ. ಆಟೋ ರಾಜ ಬಂದು ಬಿಡು ಶೀಲಾ ಅಂದ್ರೆ ಬರ್ತಾಳಾ?
05:40 PM (IST) Feb 04
ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್, ರೀಲ್ಸ್ ಮಾಡುವ ವಿವಾಹಿತೆ ಸುಚಿತ್ರಾಳ ವ್ಯಾಮೋಹಕ್ಕೆ ಬಿದ್ದು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಈ ಸಂಬಂಧವು ಘೋರ ದುರಂತಕ್ಕೆ ಕಾರಣವಾಗಿ, ಮಹಿಳೆಯ ಸಂಬಂಧಿಕರ ಮೇಲೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದು, ಇದೀಗ ಜ್ಯೋತಿಷಿ ಕಂಬಿ ಎಣಿಸುತ್ತಿದ್ದಾರೆ.
05:14 PM (IST) Feb 04
ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ 23 ಲಕ್ಷಕ್ಕೂ ಅಧಿಕ ಹಣದ ವಂಚನೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿಗಳು ವೈಯಕ್ತಿಕ ಕೋಡ್ ಬಳಸಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದಾರೆ.
05:11 PM (IST) Feb 04
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, 'ಕೃಷ್ಣ ರುಕ್ಕು' ಮತ್ತು 'ಜಗದ್ಧಾತ್ರಿ' ಎಂಬ ಹೊಸ ಸೀರಿಯಲ್‌ಗಳು ಬರಲಿವೆ. ಇದರಿಂದಾಗಿ, 'ಅಮೃತಧಾರೆ' ಅಥವಾ 'ಬ್ರಹ್ಮಗಂಟು' ಧಾರಾವಾಹಿ ಅಥವಾ ಬೇರೆ ಸೀರಿಯಲ್ ಯಾವುದು ಅಂತ್ಯವಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
05:08 PM (IST) Feb 04
‘ಟಾಕ್ಸಿಕ್’ ಸಿನಿಮಾ ಈಗಾಗಲೇ ‘ಧುರಂಧರ್ 2’ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ' ಎಂದು ಹಿಂದಿಯ ಕೆಲವು ಫ್ಯಾನ್ಸ್ ಹೇಳಿಕೊಂಡಿದ್ದಾರೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ.
04:57 PM (IST) Feb 04
ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ, ಕೇವಲ ಎರಡು ಸಿಗರೇಟ್ ಮತ್ತು ನೀರಿನ ಬಾಟಲಿ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ ಅವರನ್ನು ಯುವಕರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
04:39 PM (IST) Feb 04
ಕೊಲೆ ಪ್ರಕರಣದ ಆರೋಪಿ ಕಮಲಾಕರ್ ಭಟ್ ಜೊತೆಗಿನ ಸಂಬಂಧದ ಬಗ್ಗೆ ಶಾಸಕ ಸುರೇಶ್ ಕುಮಾರ್ ಮೇಲೆ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದರು. ಇದಕ್ಕೆ ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಸಿದ್ದರಾಮಯ್ಯ ಜೊತೆಗಿನ ಭಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
04:19 PM (IST) Feb 04
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಹಳೇ ಚಂದಾಪುರದ ಬಳಿ ನಡೆಯುತ್ತಿದ್ದ ಅಂಡರ್ ಪಾಸ್ ಕಾಮಗಾರಿಯಿಂದಾಗಿ ರಸ್ತೆ ಸುಮಾರು 20 ಅಡಿ ಆಳಕ್ಕೆ ಕುಸಿದಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
04:18 PM (IST) Feb 04
ಚಿಕ್ಕಮಗಳೂರಿನ ವಿವಾದಿತ ದತ್ತಪೀಠದ ಗುಹೆಯೊಳಗೆ 'ಕಲಮೆ ತಯ್ಯಬಾ' ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ನಿಯಮಬಾಹಿರವಾಗಿ ಮುಜಾವರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿವೆ.
04:08 PM (IST) Feb 04
04:01 PM (IST) Feb 04
'ವಡಾ ಪಾವ್ ಗರ್ಲ್' ಖ್ಯಾತಿಯ ಚಂದ್ರಿಕಾ ದೀಕ್ಷಿತ್, ತಮ್ಮ ಪತಿ ಯುಗಮ್ ಗೆರಾ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಕಣ್ಣೀರಿನ ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿಕೊಂಡಿರುವ ಅವರು, ಎರಡು ತಿಂಗಳಿಂದ ಈ ನೋವನ್ನು ಸಹಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
03:31 PM (IST) Feb 04
03:01 PM (IST) Feb 04
02:36 PM (IST) Feb 04
ಭಾರ್ತಿ ಏರ್‌ಟೆಲ್ ತನ್ನ ರಿಚಾರ್ಜ್ ಪ್ರೀಪೇಯ್ಡ್ ಪ್ಲಾನ್‌ಗಳನ್ನು ನವೀಕರಿಸಿದ್ದು, ಇನ್ನು ಮುಂದೆ ಅನ್‌ಲಿಮಿಟೆಡ್ 4G ಮತ್ತು 5G ಡೇಟಾ ಲಭ್ಯವಾಗಲಿದೆ. ಈ ಅನ್‌ಲಿಮಿಟೆಡ್ ಡೇಟಾಗೆ 300 GB ಫೇರ್ ಯೂಸೇಜ್ ಪಾಲಿಸಿ (FUP) ಅನ್ವಯವಾಗಲಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಪ್ಲಾನ್‌ಗಳು ಬರುತ್ತವೆ.
02:34 PM (IST) Feb 04
02:22 PM (IST) Feb 04
ಬಿಗ್ ಬಾಸ್ ಖ್ಯಾತಿಯ ಹಾಗೂ 'ಕರ್ಣ' ಧಾರಾವಾಹಿ ನಟಿ ನಮ್ರತಾ ಗೌಡ ಇದೀಗ ತಮ್ಮ ಕಾಳಿ ಅವತಾರದ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ರೌದ್ರಾವತಾರದ ರೂಪವು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
02:02 PM (IST) Feb 04
ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ, ಕೈದಿಗಳು ಬಳಸುತ್ತಿದ್ದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ಮೂರು ಸ್ಮಾರ್ಟ್‌ಫೋನ್‌ಗಳು ಇಯರ್ ಬಡ್ಸ್ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.
01:48 PM (IST) Feb 04
'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ನಟಿ ಸುಷ್ಮಾ ಕೆ. ರಾವ್ ಅವರು ಪತಿ ಮತ್ತು ಮಗನನ್ನು ಪರಿಚಯಿಸುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಎದ್ದಿರುವ ಚರ್ಚೆ ಮತ್ತು ಅವರ ಖಾಸಗಿತನದ ಹಕ್ಕಿನ ಕುರಿತು ಈ ಲೇಖನ ವಿವರಿಸುತ್ತದೆ.
01:42 PM (IST) Feb 04
ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಆರೋಪಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ಮಗ ಪ್ರೀತಿಸಿದ ಯುವತಿಯೊಂದಿಗೆ ಓಡಿಹೋದ ಕಾರಣಕ್ಕೆ ಯುವಕನ ತಾಯಿಯ ಮೇಲೆ ಈ ಅಮಾನವೀಯ ಕೃತ್ಯ ಎಸಗಲಾಗಿತ್ತು.
01:39 PM (IST) Feb 04
ಹಾಲುಗಲ್ಲದ ಪುಟ್ಟ ಮಕ್ಕಳು ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿ ಬಿಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲೊಂದು ಮಗು ಆಟಿಕೆಯೊಂದನ್ನು ನುಂಗಿ ಪೋಷಕರಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ. ವೈದ್ಯರ ಸಮಯಪ್ರಜ್ಞೆಯಿಂದ ಮಗು ಬದುಕುಳಿದಿದೆ.
01:36 PM (IST) Feb 04
01:24 PM (IST) Feb 04
ಮಂಡ್ಯದ ತಗ್ಗಹಳ್ಳಿ ಪಂಚಾಯ್ತಿಯಲ್ಲಿ ಪ್ರಭಾರಿಯಾಗಿ ಅಧಿಕಾರ ವಹಿಸಿಕೊಂಡ ಪಿಡಿಒ ಕೇವಲ ಮೂರು ದಿನಗಳಲ್ಲಿ 54 ಲಕ್ಷಕ್ಕೂ ಹೆಚ್ಚು ಹಣವನ್ನು ಅಕ್ರಮವಾಗಿ ಪಾವತಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಹಿರಿಯ ಅಧಿಕಾರಿಗಳು, ಹೆಚ್ಚಿನ ಹಣ ಪಾವತಿಯಾಗುವುದನ್ನು ತಡೆದು ತನಿಖೆ ಆರಂಭಿಸಿದ್ದಾರೆ.
01:03 PM (IST) Feb 04
ಕಲ್ಯಾಣಿ ಚಾಲುಕ್ಯರ ಟಂಕಸಾಲೆಯಾಗಿದ್ದ ಲಕ್ಕುಂಡಿಯಲ್ಲಿ ಅಪಾರ ನಿಧಿ ಅಡಗಿದೆ ಎಂದು ನಂಬಲಾಗಿದೆ. ಈ ನಿಧಿಯನ್ನು 7 ಹೆಡೆ ಸರ್ಪಗಳು ಕಾಯುತ್ತಿದ್ದು, ಮಹಾದೇವಿ ಎಂಬ ಮಹಿಳೆ ಈ ಹಾವುಗಳೊಂದಿಗೇ ವಾಸಿಸುತ್ತಿದ್ದಳು ಎಂಬ ಮಾಹಿತಿಯನ್ನ ಹಿರಿಯ ವ್ಯಕ್ತಿ ಬಿಚ್ಚಿಟ್ಟಿದ್ದಾರೆ.
01:01 PM (IST) Feb 04
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್‌ಗೆ ದುರ್ಗಾ ಮೇಲೆ ಅರಿವಿಲ್ಲದೆ ಪ್ರೀತಿ ಮೂಡುತ್ತಿದ್ದು, ಇದರಿಂದ ದುರ್ಗಾ ಸಂತಸಗೊಂಡಿದ್ದಾಳೆ. ಈ ನಡುವೆ ದುರ್ಗಾ ಪಾತ್ರಧಾರಿ ರಿಷಿಕಾ, ಸೀರೆ ಬಿಟ್ಟು ಮಾಡರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
12:59 PM (IST) Feb 04
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಿ ಯಲ್ಲಮ್ಮ ಜಾತ್ರೆಯಿಂದ ಬಾಡೂಟ ಮುಗಿಸಿ ಹಿಂತಿರುಗುತ್ತಿದ್ದ ಬೈಕ್ ಸವಾರನಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಟಿಪ್ಪರ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
12:54 PM (IST) Feb 04
12:20 PM (IST) Feb 04
ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಭಾಗಿಯಾಗಿದ್ದಾರೆ ಎನ್ನಲಾದ ಕೊಲೆ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ. ಆರೋಪಿಯೊಂದಿಗೆ ಬಿಜೆಪಿ ನಾಯಕರ ಫೋಟೋಗಳು ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪೋಸ್ಟ್ ಮಾಡಿ ಶಾಸಕ ಎಸ್ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
12:07 PM (IST) Feb 04
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮಟ್ರಿಕ್ ಟನ್ ಸೋಪು ಉತ್ಪನ್ನ ಉತ್ಪಾದಿಸಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.
12:04 PM (IST) Feb 04
ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ, ಮನೆ ಕಟ್ಟಲು ಯತ್ನಿಸಿದ ಬಡ ಕುಟುಂಬಕ್ಕೆ ಸಂಬಂಧಿಕರಿಂದ ಕಿರುಕುಳ ಮತ್ತು ಪೊಲೀಸ್ ನಿರ್ಲಕ್ಷ್ಯ ಎದುರಾಗಿದೆ. ಹೈಕೋರ್ಟ್ ಆದೇಶವಿದ್ದರೂ ನ್ಯಾಯ ಸಿಗದ ಕಾರಣ ಉಂಟಾದ ಮಾನಸಿಕ ಒತ್ತಡದಿಂದ ಕುಟುಂಬದ ಮಗಳು ಸಾವನ್ನಪ್ಪಿದ್ದು, ಇದೀಗ ಕುಟುಂಬ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಿದೆ.