Published : Oct 03, 2025, 06:00 AM ISTUpdated : Oct 03, 2025, 11:54 PM IST

Karnataka News Live: ಹೃದಯ ಕಾಯಿಲೆ ತಪ್ಪಿಸಲು ನಿಮ್ಮ ಆಹಾರದಲ್ಲಿರಲಿ ಈ 4 ಮಸಾಲೆ ಪದಾರ್ಥಗಳು!

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಫರ್ಮಾನು ಹೊರಡಿಸಿತ್ತು. ಈಗ ಮತ್ತೆ ಸಿಎಂ ಬದಲಾವಣೆ ಕೂಗು ಎದ್ದಿದೆ. ಕೆಲವು ಕಾಂಗ್ರೆಸ್‌ ಶಾಸಕರು ಹಾಗೂ ಪಕ್ಷದ ಮುಖಂಡರು 'ಡಿಕೆಶಿ ಸಿಎಂ ಆಗುವುದು ನಿಶ್ಚಿತ' ಎಂದು ಹೇಳಿದ್ದಾರೆ. ಆದರೆ ಈ ಸಾಧ್ಯತೆಯನ್ನು ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ತಳ್ಳಿಹಾಕಿದ್ದಾರೆ. ಇಂಥ ಹೇಳಿಕೆಯನ್ನು ಯಾರೂ ನೀಡಬಾರದು ಎಂದಿರುವ ಡಿಕೆಶಿ, ಈ ಹೇಳಿಕೆ ನೀಡಿದವರಿಗೆ ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ.

Natural Spices for a Healthy Heart Diet

11:54 PM (IST) Oct 03

ಹೃದಯ ಕಾಯಿಲೆ ತಪ್ಪಿಸಲು ನಿಮ್ಮ ಆಹಾರದಲ್ಲಿರಲಿ ಈ 4 ಮಸಾಲೆ ಪದಾರ್ಥಗಳು!

Natural Spices for a Healthy Heart Diet: ಸರಿಯಾದ ಆಹಾರ ಮತ್ತು ವ್ಯಾಯಾಮ ಇಲ್ಲದಿದ್ದಾಗ ಹೃದ್ರೋಗ ಉಂಟಾಗುತ್ತದೆ. ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಪದಾರ್ಥಗಳಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.

Read Full Story

11:34 PM (IST) Oct 03

ತುಮಕೂರು - ತಾಂತ್ರಿಕದೋಷದಿಂದ ಕಾಂತಾರ ಸಿನಿಮಾ ಶೋ ರದ್ದು, ರೊಚ್ಚಿಗೆದ್ದ ಪ್ರೇಕ್ಷಕರು!

Tumakuru INOX technical glitch: ತುಮಕೂರಿನ ಎಸ್ ಮಾಲ್ ಐನಾಕ್ಸ್‌ನಲ್ಲಿ 'ಕಾಂತಾರ'  ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರದರ್ಶನ ರದ್ದುಗೊಳಿಸಲು ಮುಂದಾದಾಗ ಪ್ರೇಕ್ಷಕರು ರೊಚ್ಚಿಗೆದ್ದರು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿ, ಒಂದೂವರೆ ಗಂಟೆ ಬಳಿಕ ಸಿನಿಮಾ ಪ್ರದರ್ಶಿಸಿದರು.

Read Full Story

10:59 PM (IST) Oct 03

Bengaluru Rains - ಸಂಜೆ ಸುರಿದ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮಿನಿಫಾಲ್ಸ್!

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ವೀರಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಿಂದ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

10:57 PM (IST) Oct 03

BBK 12 - ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್

ಬಿಗ್‌ಬಾಸ್ ಮನೆಯಲ್ಲಿ ನಟ ಅಭಿಷೇಕ್ ಮತ್ತು ನಿರೂಪಕಿ ಜಾನ್ವಿ ನಡುವೆ ವಯಸ್ಸಿನ ಬಗ್ಗೆ ನಡೆದ ಸಂಭಾಷಣೆ ಗಮನ ಸೆಳೆದಿದೆ. ತಮಗಿಂತ 10 ವರ್ಷ ದೊಡ್ಡವರಾದ ಜಾನ್ವಿ ಜೊತೆ ಅಭಿಷೇಕ್ ಫ್ಲರ್ಟ್ ಮಾಡಿದ್ದು, ಇದೇ ವೇಳೆ ಜಾನ್ವಿ ತಮ್ಮ ವಿಚ್ಛೇದನ ಮತ್ತು ಮಾಜಿ ಪತಿಯ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.
Read Full Story

10:30 PM (IST) Oct 03

ಶಿವಮೊಗ್ಗ - ಜಾತಿ ಗಣತಿ ಹೆಸರಲ್ಲಿ ಒಂಟಿ ಮಹಿಳೆ ಮೇಲೆ ದರೋಡೆ ಯತ್ನ - ಖತರ್ನಾಕ್ ದಂಪತಿ ಅರೆಸ್ಟ್

Caste survey crime: ಶಿವಮೊಗ್ಗದ ಆಜಾದ್ ನಗರದಲ್ಲಿ, ಜಾತಿ ಸಮೀಕ್ಷೆಯ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ಬಂದ ದಂಪತಿಗಳು ದರೋಡೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲ್ಪಟ್ಟ ಆರೋಪಿಗಳು, ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದು, ಅವರ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.

Read Full Story

09:57 PM (IST) Oct 03

ಮಹಾರಾಷ್ಟ್ರದ ಸೀರೋಡಾ ಸಮುದ್ರದಲ್ಲಿ ಘನಘೋರ ದುರಂತ - ದಸರಾ ರಜೆ ಕಳೆಯಲು ಹೋಗಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿ, ನಾಲ್ವರು ಕಣ್ಮರೆ!

Siroda beach Maharashtra tragedy :ದಸರಾ ರಜೆ ಕಳೆಯಲು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ.  ನಾಲ್ವರು ಕಣ್ಮರೆಯಾಗಿದ್ದು, ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರೆದಿದೆ.

Read Full Story

09:44 PM (IST) Oct 03

Karna Serial ಮದ್ವೆ ವಿಡಿಯೋ ಶೇರ್​ ಮಾಡಿ ಬಿಗ್​ ಅಪ್​ಡೇಟ್​ ಕೊಟ್ಟ ನಮ್ರತಾ ಗೌಡ- ಫ್ಯಾನ್ಸ್ ಬೇಸರ

ಕರ್ಣ ಸೀರಿಯಲ್‌ನಲ್ಲಿ ನಿತ್ಯಾ ಪಾತ್ರಕ್ಕೆ ವೀಕ್ಷಕರಿಂದ ದ್ವೇಷ ವ್ಯಕ್ತವಾಗುತ್ತಿರುವ ಬಗ್ಗೆ ನಟಿ ನಮ್ರತಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾಳ ಮದುವೆಯ ಸಂಚಿಕೆಯಲ್ಲಿ ಆಕೆ ಗರ್ಭಿಣಿ ಎನ್ನುವ ಸತ್ಯ ಕರ್ಣನಿಗೆ ತಿಳಿಯುವುದರೊಂದಿಗೆ ಕಥೆಯು ರೋಚಕ ತಿರುವು ಪಡೆಯಲಿದೆ.
Read Full Story

09:25 PM (IST) Oct 03

ಮನೆ-ಮನೆ ಜಾತಿ ಗಣತಿಗೆ ಹೋದ ಸರ್ಕಾರಿ ಶಾಲೆಯ ಟೀಚರ್ ದಾರಿ ಮಧ್ಯದಲ್ಲಿಯೇ ಸಾವು!

ಬಾಗಲಕೋಟೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ಮುಗಿಸಿ ಮಗನೊಂದಿಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ಶಿಕ್ಷಕಿ ದಾನಮ್ಮ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಸಿದೆ.

Read Full Story

09:02 PM (IST) Oct 03

ಕಾಂತಾರ ಚಾಪ್ಟರ್-1 ಬಗ್ಗೆಯೂ ತುಟಿಬಿಚ್ಚಿದ ಕರವೇ ನಾರಾಯಣಗೌಡ; ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ!

ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದ 30 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ದೇಶ-ವಿದೇಶಗಳಿಂದ ಮೆಚ್ಚುಗೆ ಮಹಾಪೂರ ಬರುತ್ತಿವೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story

08:49 PM (IST) Oct 03

Hiriyur road accident - ಚಿತ್ರದುರ್ಗ ಬಳಿ ಕಾರು ಪಲ್ಟಿ, ಯಾದಗಿರಿ ಮೂಲದ ಮಗು ಸೇರಿ ಮೂವರು ದಾರುಣ ಸಾವು!

Hiriyur road accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದವರೆಂದು ಗುರುತಿಸಲಾದ ಮೃತರ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂದು ಹೇಳಲಾಗಿದೆ.  ಕಳವಳ ಮೂಡಿಸಿದೆ.

Read Full Story

08:35 PM (IST) Oct 03

ಕಾಂತಾರ-1 ಸಿನಿಮಾ ನೋಡೋಕೆ ಇಡೀ ಥಿಯೇಟರ್ ಟಿಕೆಟ್ ಖರೀದಿಸಿದ ಪ್ರತಾಪ್ ಸಿಂಹ; ಕಾರ್ಯಕರ್ತರಿಗೆ ಆಹ್ವಾನ!

ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ 'ಕಾಂತಾರ ಚಾಪ್ಟರ್-1' ಚಿತ್ರದ ಸಂಪೂರ್ಣ ಸ್ಕ್ರೀನ್ ಅನ್ನು ಬುಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ₹69,000 ಹಣ ಖರ್ಚು ಮಾಡಿದ್ದಾರೆ.

Read Full Story

08:21 PM (IST) Oct 03

Madikeri Dasara 2025 - ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ ಇಟ್ಟ ಪೊಲೀಸರ ಮೇಲಿನ ಹಲ್ಲೆ, ವ್ಯಕ್ತಿ ಬಂಧನ

Madikeri Dasara 2025: ಮಡಿಕೇರಿ ದಸರಾ ಮಂಟಪ ಪ್ರಶಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕರವಲೆ ಭಗವತಿ ದೇವಾಲಯ ಸಮಿತಿ ವೇದಿಕೆ ಏರಿ ದಾಂಧಲೆ ನಡೆಸಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಹೋದ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ. ವೈಭವದ ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಿದೆ.

Read Full Story

07:58 PM (IST) Oct 03

ಯಾದಗಿರಿ - ಇ-ಖಾತಾ ಮಾಡಿಕೊಡಲು ₹8000 ಲಂಚ, ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Lokayukta raid Yadgir city council corruption: ಯಾದಗಿರಿ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ, ಇ-ಖಾತಾ ಮಾಡಿಕೊಡಲು ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರರಿಂದ ₹5,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

Read Full Story

07:31 PM (IST) Oct 03

ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ, ತೀರ್ಪಿನ ವಿಷಯ ತಿಳಿದು ತಾಯಿ ಕಣ್ಣೀರು!

ಕೊಪ್ಪಳದ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಈ ತೀರ್ಪಿನಿಂದ ತೀವ್ರ ದುಃಖಿತರಾದ ಮೃತನ ತಾಯಿ ಕೆಂಚಮ್ಮ, ಇದು ಕೊಲೆ, ಆತ್ಮಹತ್ಯೆಯಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನ್ಯಾಯಕ್ಕಾಗಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.
Read Full Story

06:58 PM (IST) Oct 03

ಮಲೆ ಮಹದೇಶ್ವರ ಕಾಡಲ್ಲಿ ಮತ್ತೊಂದು ಹುಲಿ ಬಲಿ, ಹತ್ಯೆಗೆ ಕಾರಣ ನಿಗೂಢ!

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣದ ಬೆನ್ನಲ್ಲೇ, ಮತ್ತೊಂದು ಹುಲಿಯನ್ನು ಕೊಡಲಿಯಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ವನ್ಯಧಾಮದಲ್ಲಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
Read Full Story

06:47 PM (IST) Oct 03

ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಕರಿಗೆ ಸರ್ಕಾರದಿಂದಲೇ ಕ್ಯಾಶ್‌ಬ್ಯಾಕ್; ಟಿಕೆಟ್ ದಾಖಲೆ ಜೋಪಾನವಾಗಿಟ್ಟಿಕೊಳ್ಳಿ!

ಮಲ್ಟಿಪ್ಲೆಕ್ಸ್‌ಗಳಲ್ಲಿ ₹200 ಟಿಕೆಟ್ ದರ ನಿಗದಿಪಡಿಸುವ ಸರ್ಕಾರದ ಆದೇಶ ಕುರಿತು ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್‌ಹಳು ಗ್ರಾಹಕರಿಂದ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಲಿವೆ. ಟಿಕೆಟ್‌ಗಳನ್ನು ಭದ್ರವಾಗಿರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.

Read Full Story

06:22 PM (IST) Oct 03

ಚಿಕ್ಕೋಡಿ - ಕಾಂಗ್ರೆಸ್‌ ಸರ್ಕಾರ ಬದುಕಿದ್ದರೆ ರೈತರಿಗೆ ಪರಿಹಾರ ಕೊಟ್ಟು ಸಾಬೀತುಪಡಿಸಲಿ -ಸಿಟಿ ರವಿ ಸವಾಲು

ಚಿಕ್ಕೋಡಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿ.ಟಿ. ರವಿ, ಸರ್ಕಾರ ಹಾರಾಟ ನಿಲ್ಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಪರಿಹಾರ ನೀಡಿ ತಮ್ಮ ಬದ್ಧತೆಯನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
Read Full Story

06:03 PM (IST) Oct 03

ಕೈವಾರ ತಾತಯ್ಯನಿಗೆ ಹೋಗಿ ಬರುತ್ತಿದ್ದ ಅಕ್ಕ-ತಂಗಿ ಸ್ಕೂಟರ್‌ನಿಂದ ಬಿದ್ದು ದಾರುಣ ಸಾವು!

ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.

Read Full Story

05:39 PM (IST) Oct 03

ಚಿಕ್ಕಬಳ್ಳಾಪುರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಕಾರು, ಮಂತ್ರಾಲಯ ರಾಘವೇಂದ್ರಸ್ವಾಮಿ ಭಕ್ತೆ ಸ್ಥಳದಲ್ಲೇ ಸಾವು!

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ತುಮಕೂರಿನ ಮಹಿಳೆಯೊಬ್ಬರು ಮೃತಪಟ್ಟರೆ, ಮತ್ತೊಂದೆಡೆ ಬೈಕ್‌ಗಳ ಡಿಕ್ಕಿಯಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

Read Full Story

05:13 PM (IST) Oct 03

ಹಾಸನದಲ್ಲಿ ಅಡುಗೆ ಮಾಡಿಲ್ಲವೆಂದು ತಾಯಿ ಮೇಲೆ ಹಲ್ಲೆ ಮಾಡಿದ ಮಗ; ಅಸುನೀಗಿದ ಅಮ್ಮ!

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ, ಅಡುಗೆ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದಿದ್ದ 19 ವರ್ಷದ ಸಂತೋಷ, ದೊಣ್ಣೆಯಿಂದ ತಾಯಿ ಪ್ರೇಮಾ ಅವರ ತಲೆಗೆ ಹೊಡೆದ ಪರಿಣಾಮ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Read Full Story

04:28 PM (IST) Oct 03

Bigg Bossನಲ್ಲಿ ಶುರುವಾಗೋಯ್ತು ಲವ್ವು! ಡಾಗ್​ ಸತೀಶ್ ಪ್ರಪೋಸಲ್​ಗೆ ನಾಚಿ ನೀರಾದ ಕಾವ್ಯಾ - ವಿಡಿಯೋ ವೈರಲ್​

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾದ ಕೆಲವೇ ದಿನಗಳಲ್ಲಿ ಮೊದಲ ಪ್ರೇಮ ನಿವೇದನೆ ನಡೆದಿದೆ. ಸ್ಪರ್ಧಿ ಡಾಗ್ ಸತೀಶ್ ಅವರು ನಟಿ ಕಾವ್ಯಾ ಶೈವ ಅವರಿಗೆ ಪ್ರಪೋಸ್ ಮಾಡಿದ್ದು, ಈ ಘಟನೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ವಿಡಿಯೋ ನೋಡಿ… 

Read Full Story

04:10 PM (IST) Oct 03

ಶಿವಮೊಗ್ಗ - ಮಗಳನ್ನು ಮಚ್ಚಿನಿಂದ ಕೊಲೆಗೈದು ಆಕೆಯ ಹೆಣದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ!

ಶಿವಮೊಗ್ಗದಲ್ಲಿ, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ 6ನೇ ತರಗತಿಯ ಮಗಳನ್ನು ಮಚ್ಚಿನಿಂದ ಕೊಲೆ ಮಾಡಿ, ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಪತ್ನಿ ಮತ್ತು ಮಗಳು ಮೃತಪಟ್ಟಿದ್ದಾರೆ.

Read Full Story

03:48 PM (IST) Oct 03

ಯಪ್ಪಾ, ಈ ಸುಂದ್ರಿ ನಾನೇನ್ರೀ? ಮೇಲಿರೋ ಗಂಡಂಗೆ ಮಾತ್ರ ತೋರಿಸ್​ಬೇಡ್ರಪ್ಪೋ- Bigg Boss ಮಲ್ಲಮ್ಮ ಮಾತು ಕೇಳಿ

ಬಿಗ್ ಬಾಸ್ ಮನೆಯಲ್ಲಿ ಮುಗ್ಧತೆಯಿಂದ ಗಮನ ಸೆಳೆಯುತ್ತಿರುವ ಉತ್ತರ ಕರ್ನಾಟಕದ ಮಲ್ಲಮ್ಮ, ತಮ್ಮದೇ ಎಐ ಫೋಟೋ ಕಂಡು ಅಚ್ಚರಿಪಟ್ಟಿದ್ದಾರೆ. ಕಷ್ಟದ ಬದುಕನ್ನು ಸಾಗಿಸಿ ಬಂದಿರುವ ಮಲ್ಲಮ್ಮ, ಇದೀಗ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಕಂಟೆಂಡರ್ ಆಗಿ ಹೊರಹೊಮ್ಮಿದ್ದಾರೆ.
Read Full Story

03:25 PM (IST) Oct 03

ಬೆಂಗಳೂರು ಟ್ರಾಫಿಕ್‌ನಲ್ಲಿ ಅರಳಿದ ಮಾನವೀಯತೆ - ಸಹಾಯಕ್ಕೆ ಬಂದ ರಾಪಿಡೋ ಚಾಲಕ

ಬೆಂಗಳೂರಿನಲ್ಲಿ ಪೆಟ್ರೋಲ್ ಖಾಲಿಯಾಗಿ ಸಂಕಷ್ಟದಲ್ಲಿದ್ದ ಯುವಕನಿಗೆ ರಾಪಿಡೋ ಚಾಲಕನೊಬ್ಬ ನೆರವಾಗಿದ್ದಾನೆ. ತನ್ನ ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ನೀಡಿ, ಹಣವನ್ನೂ ಪಡೆಯದೆ ಮಾನವೀಯತೆ ಮೆರೆದಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:33 PM (IST) Oct 03

ಕರ್ತವ್ಯ, ಗೌರವ, ಧೈರ್ಯ - 'ನನ್ನ ಹುಡುಗರು ಎಲ್ಲಿಗೆ ಹೋಗ್ತಾರೋ ನಾನು ಅಲ್ಲಿರಬೇಕು' ಎಂದಿದ್ದ ರುಕ್ಷ್ಮಿಣಿ ವಸಂತ್‌ ತಂದೆ ಕರ್ನಲ್ ವಸಂತ್!

Rukmini Vasanth Father Vasanth Venugopal ನಟಿ ರುಕ್ಷ್ಮಿಣಿ ವಸಂತ್ ಅವರ ತಂದೆ, ಭಾರತೀಯ ಸೇನೆಯ ವೀರ ಯೋಧ ಕರ್ನಲ್ ವಸಂತ್ ವೇಣುಗೋಪಾಲ್ ಅವರ ಬದುಕಿನ ಕಥೆ. 2007ರಲ್ಲಿ ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಅವರು ವೀರಮರಣವನ್ನಪ್ಪಿದರು. 

Read Full Story

02:30 PM (IST) Oct 03

Brahmagantu ಮಾಡೆಲ್​ ದಿಶಾ ಜೊತೆ ಚಿರು - ಆಟದಲ್ಲಿ ಗೆಲ್ಲೋರು ಯಾರು? ಸಕತ್​ ರೋಚಕ ಗೇಮ್​

‘ಬ್ರಹ್ಮಗಂಟು’ ಧಾರಾವಾಹಿಯು ಗುಣ ಮತ್ತು ಸೌಂದರ್ಯದ ನಡುವಿನ ಸಂಘರ್ಷದ ಕಥೆಯಾಗಿದ್ದು, ಇದೀಗ ರೋಚಕ ತಿರುವು ಪಡೆದಿದೆ. ಇದರ ನಾಯಕ-ನಾಯಕಿ ದಿಯಾ ಪಾಲಕ್ಕಲ್ ಮತ್ತು ಭುವನ್ ಸತ್ಯ ಅವರು ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಆಟವೊಂದರಲ್ಲಿ ಭಾಗವಹಿಸಿದ್ದು, ಲೇಖನವು ಅವರ ನಟನಾ ಹಿನ್ನೆಲೆಯನ್ನೂ ವಿವರಿಸುತ್ತದೆ.
Read Full Story

02:06 PM (IST) Oct 03

ಮಂಗಳೂರು ದಸರಾ ವೈಭವಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಮೆಚ್ಚುಗೆ - ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿ

ವಿಶ್ವವಿಖ್ಯಾತ ಮಂಗಳೂರು ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಶಾರದೆಯ ಸನ್ನಿಧಿಯಲ್ಲಿ ಡಿಕೆಶಿಗೆ ಪ್ರಸಾದ ನೀಡಿ, ದೇವಳದ ವತಿಯಿಂದ ಗೌರವಿಸಲಾಯಿತು.

Read Full Story

01:39 PM (IST) Oct 03

ಹೊಸ ಗೃಹಪ್ರವೇಶಕ್ಕೆ ಯಾರಿಗೂ ಆಹ್ವಾನವಿಲ್ಲ; ನೀವು ಬಂದರೂ ಹೊರಗೆ ಕಳಿಸ್ತೇನೆ! ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೊಸ ಮನೆಯ ಗೃಹ ಪ್ರವೇಶ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಇದು ಕೇವಲ ಕೌಟುಂಬಿಕ ಸಮಾರಂಭವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ (ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ) ಕುರಿತು ಮಾಹಿತಿ ನೀಡಿದರು.

Read Full Story

01:37 PM (IST) Oct 03

28ನೇ ವಯಸ್ಸಿಗೆ 1000 ಕೋಟಿ ಆಸ್ತಿ, ಐಷಾರಾಮಿ ಕಾರು, ಮನೆ, ಸಿನಿಮಾಗಳೊಂದಿಗೆ ಮಿಂಚುತ್ತಿರುವ ನಟಿ ಯಾರು?

28ನೇ ವಯಸ್ಸಿಗೆ 1000 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಯುವ ನಟಿಯೊಬ್ಬರು, ವಾರಸುದಾರಿಕೆಯೊಂದಿಗೆ ಚಿತ್ರರಂಗಕ್ಕೆ ಬಂದು, ನಟಿಯಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾರೆ. ಸದ್ಯ ಸಿನಿರಂಗದಲ್ಲಿ ಮಿಂಚುತ್ತಿರುವ ಈ ಸುಂದರಿ ಯಾರು ಗೊತ್ತಾ?

Read Full Story

01:27 PM (IST) Oct 03

Naa Ninna Bidalaare - ಕೊನೆಗೂ ಅಪ್ಪ-ಮಗಳು ಒಂದಾಗೇ ಬಿಟ್ರು! ಈಗ ಬಂತು ನೋಡಿ ಮಜಾ

ಹಿತಾ ಮತ್ತು ದುರ್ಗಾರನ್ನು ಬೇರೆ ಮಾಡಲು ಮಾಯಾ ಮಾಡಿದ ಪ್ಲ್ಯಾನ್ ವಿಫಲವಾಗುತ್ತದೆ. ದುರ್ಗಾ ತನ್ನ ಬುದ್ಧಿವಂತಿಕೆಯಿಂದ ಅಪ್ಪ-ಮಗಳಾದ ಶರತ್ ಮತ್ತು ಹಿತಾಳನ್ನು ಒಂದು ಮಾಡುತ್ತಾಳೆ. ಆದರೆ, ಹಿತಾಳ 7ನೇ ಹುಟ್ಟುಹಬ್ಬದಂದೇ ಆಕೆಯನ್ನು ಬ*ಲಿ ಕೊಡಲು ಮಾಳವಿಕಾ ಸಿದ್ಧತೆ. ಮುಂದೇನು? 

Read Full Story

01:11 PM (IST) Oct 03

ಆರ್‌ಎಸ್‌ಎಸ್‌ 100 ವರ್ಷಗಳ ದೇಶ ಸೇವೆ - ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ

ನೂರು ವರ್ಷಗಳ ಹಿಂದೆ, ವಿಜಯದಶಮಿಯ ಶುಭ ಸಂದರ್ಭದಂದು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲಾಯಿತು. ಇದು ಸಂಪೂರ್ಣವಾಗಿ ಹೊಸ ಸೃಷ್ಟಿಯೇನೂ ಆಗಿರಲಿಲ್ಲ. ಇದು ಪ್ರಾಚೀನ ಪರಂಪರೆಯ ಹೊಸ ಅಭಿವ್ಯಕ್ತಿಯಾಗಿತ್ತು.

Read Full Story

12:28 PM (IST) Oct 03

Annayya Serial ರೋಚಕ ಟ್ವಿಸ್ಟ್​! ಕೈಯಲ್ಲಿ ಕತ್ತಿ ಝಳಪಿಸಿ ರಕ್ಕಸರ ಸಂಹಾರಕ್ಕೆ ನಿಂತೇ ಬಿಟ್ಟಳು ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ, ಶಿವುವಿನ ರೌಡಿ ಹಿನ್ನೆಲೆಯನ್ನು ಪಾರುಳ ತಂದೆ ಬಯಲು ಮಾಡುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಗೆ ಮಸಿ ಬಳಿಯಲು ಬಂದ ದುಷ್ಟರ ವಿರುದ್ಧ ಪಾರು ದುರ್ಗಾವತಾರ ತಾಳಿ, ಕತ್ತಿ ಹಿಡಿದು ಹೋರಾಡುತ್ತಾಳೆ. ಶಿವು ಮತ್ತು ಪಾರು ದೂರವಾಗುತ್ತಾರೆಯೇ ಎಂಬ ಕುತೂಹಲ ಈಗ ಹೆಚ್ಚಾಗಿದೆ.
Read Full Story

12:27 PM (IST) Oct 03

ದಸರಾ ವಿವಾದ - ಸಿಎಂ-ಡಿಸಿಎಂ ಜೀಪ್‌ನಲ್ಲಿ ಕಾಣಿಸಿಕೊಂಡ ನಿಗೂಢ ಬಾಲಕ ಯಾರು? ಹೈಕಮಾಂಡ್‌ಗೆ ದೂರು!

Mystery Boy in CM-DCM Dasara Parade Jeep Reaches Congress High Command ಮೈಸೂರು ದಸರಾ ಜಂಬೂ ಸವಾರಿ ವೇಳೆ ಸಿಎಂ ಹಾಗೂ ಡಿಸಿಎಂ ಜೊತೆ ತೆರೆದ ಜೀಪಿನಲ್ಲಿ ಕಾಣಿಸಿಕೊಂಡ ಬಾಲಕನೊಬ್ಬನಿಂದ ವಿವಾದ ಭುಗಿಲೆದ್ದಿದೆ. 

Read Full Story

12:02 PM (IST) Oct 03

ಹುಟ್ಟುಹಬ್ಬದಂದು ಮದುವೆಯ ಶಾಕಿಂಗ್​ ಹೇಳಿಕೆ ಕೊಟ್ಟ Rachita Ram! ಈಗಿನ​ ಕಾಲದಲ್ಲೂ ಇಂಥ ಹುಡುಗಿನಾ?

ನಟಿ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ತಮ್ಮ ಮದುವೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೋಷಕರಿಗೆ ವಹಿಸಿದ್ದು, ಅವರು ಯಾರನ್ನು ತೋರಿಸಿದರೂ ಮದುವೆಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.  

Read Full Story

11:59 AM (IST) Oct 03

ನಮ್ಮ ಅಣ್ಣ ದರ್ಶನ್ ಆದಷ್ಟು ಬೇಗ ಹೊರ ಬರಲಿ - ತುಮಕೂರು ದಸರಾದಲ್ಲಿ ಭಾವುಕರಾದ ನಟ ಝೈದ್ ಖಾನ್

ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿ. ದರ್ಶನ್ ನನ್ನ ಮನಸ್ಸಲ್ಲಿ ಯಾವತ್ತು ಇರ್ತಾರೆ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ. ನೀವು ದೇವರಿಗೆ ಬೇಡಿಕೊಳ್ಳುವಾಗ ಅವರಿಗೋಸ್ಕರನು ಬೇಡಿಕೊಳ್ಳಿ ಎಂದು ನಟ ಝೈದ್ ಖಾನ್ ತಿಳಿಸಿದರು.

Read Full Story

11:54 AM (IST) Oct 03

ಬೆಂಗಳೂರು VS ಆಂಧ್ರ - ರಸ್ತೆ ಗುಂಡಿ, ಐಟಿ ಕಂಪನಿಗಳ ವಿಚಾರದಲ್ಲಿ ಪ್ರಿಯಾಂಕ್‌ ಖರ್ಗೆ, ನಾರಾ ಲೋಕೇಶ್‌ 'ಎಕ್ಸ್' ಸಮರ!

Priyank Kharge and Nara Lokesh Trade Barbs Over Bengaluru Potholes IT Shift ಬೆಂಗಳೂರಿನ ರಸ್ತೆ ಗುಂಡಿ ಮತ್ತು ಟ್ರಾಫಿಕ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಂಧ್ರ ಸಚಿವ ನಾರಾ ಲೋಕೇಶ್ ಐಟಿ ಕಂಪನಿಗಳಿಗೆ ತಮ್ಮ ರಾಜ್ಯಕ್ಕೆ ಆಹ್ವಾನ ನೀಡಿದ್ದಾರೆ. 

Read Full Story

11:32 AM (IST) Oct 03

ರೆಟ್ರೋ ಲುಕ್‌, ಆಧುನಿಕ ಸ್ಟೈಲ್‌, ಹೊಸ ಫ್ಯಾಷನ್‌.. ಬಾಲಿವುಡ್ ಹುಡುಗಿಯರ 'ಮಿಯು ಮಿಯು' ಡ್ರೆಸ್ ಟ್ರೆಂಡ್

ಸ್ಕರ್ಟ್‌ ಶರ್ಟ್‌ಗಿಂತಲೂ ಗಿಡ್ಡವಿದ್ದ ಕಾರಣ ಇದನ್ನು ಯಾವ ಆ್ಯಂಗಲ್‌ನಿಂದ ನೋಡಬೇಕು ಎಂದು ಕೆಲಮಂದಿ ಕಕ್ಕಾಬಿಕ್ಕಿಯಾದರು. ಈ ಮಿಯು ಮಿಯು ಡ್ರೆಸ್‌ ಕೊರಿಯಾದಲ್ಲೋ, ಜಪಾನ್‌ನಲ್ಲೋ ಹುಟ್ಟಿದ್ದಲ್ಲ. ಇಟಲಿಯ ಶ್ರೀಮಂತ ಸ್ಟೈಲ್‌ ಇದು.

Read Full Story

11:31 AM (IST) Oct 03

ಅಹಮದಾಬಾದ್‌ ಟೆಸ್ಟ್‌ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಭರ್ಜರಿ ಶತಕ; 8 ವರ್ಷಗಳ ಬಳಿಕ ತವರಲ್ಲಿ ಮೊದಲ ಸೆಂಚೂರಿ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ತವರಿನಲ್ಲಿ 8 ವರ್ಷಗಳ ಬಳಿಕ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದು, ಶುಭ್‌ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಮುನ್ನಡೆ ಸಾಧಿಸಿದೆ.
Read Full Story

11:13 AM (IST) Oct 03

ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಪತ್ನಿಯ ಖಾಸಗಿ ವಿಡಿಯೋ ರೆಕಾರ್ಡ್, ಪತಿಯ ಮೇಲೆ FIR!

Bengaluru Husband Booked for Recording and Sharing Wifes Private Videos ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಖಾಸಗಿ ಕ್ಷಣಗಳನ್ನು ಬೆಡ್‌ರೂಂನಲ್ಲಿ ರಹಸ್ಯವಾಗಿ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿ, ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾರೆ. 

Read Full Story

10:56 AM (IST) Oct 03

777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಹೊಸ ಸಿನಿಮಾ ಸ್ಕ್ರಿಪ್ಟ್‌ ರೆಡಿ - ನಾಯಿಗೆ ಮತ್ತೆ ಪ್ರಮುಖ ಪಾತ್ರ

ಇದೊಂದು ಹಾರರ್‌ ಥ್ರಿಲ್ಲರ್‌ ಫ್ಯಾಂಟಸಿ ಡ್ರಾಮಾ. ಇದರ ವ್ಯಾಪ್ತಿ ರಾಷ್ಟ್ರಮಟ್ಟದ್ದು. ಯೂನಿವರ್ಸಲ್‌ ಎಮೋಶನ್‌ ಇರುವ ಕಥೆ. ಆದರೂ ನನ್ನ ಈ ಹಿಂದಿನ ‘777 ಚಾರ್ಲಿ’ ಸಿನಿಮಾಕ್ಕಿಂತ ಇದರ ಕಥೆ, ಬಜೆಟ್‌ ಎಲ್ಲಾ ಅಗಾಧವಾದುದು ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ.

Read Full Story

More Trending News