MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Naa Ninna Bidalaare: ಕೊನೆಗೂ ಅಪ್ಪ-ಮಗಳು ಒಂದಾಗೇ ಬಿಟ್ರು! ಈಗ ಬಂತು ನೋಡಿ ಮಜಾ

Naa Ninna Bidalaare: ಕೊನೆಗೂ ಅಪ್ಪ-ಮಗಳು ಒಂದಾಗೇ ಬಿಟ್ರು! ಈಗ ಬಂತು ನೋಡಿ ಮಜಾ

ಹಿತಾ ಮತ್ತು ದುರ್ಗಾರನ್ನು ಬೇರೆ ಮಾಡಲು ಮಾಯಾ ಮಾಡಿದ ಪ್ಲ್ಯಾನ್ ವಿಫಲವಾಗುತ್ತದೆ. ದುರ್ಗಾ ತನ್ನ ಬುದ್ಧಿವಂತಿಕೆಯಿಂದ ಅಪ್ಪ-ಮಗಳಾದ ಶರತ್ ಮತ್ತು ಹಿತಾಳನ್ನು ಒಂದು ಮಾಡುತ್ತಾಳೆ. ಆದರೆ, ಹಿತಾಳ 7ನೇ ಹುಟ್ಟುಹಬ್ಬದಂದೇ ಆಕೆಯನ್ನು ಬ*ಲಿ ಕೊಡಲು ಮಾಳವಿಕಾ ಸಿದ್ಧತೆ. ಮುಂದೇನು? 

2 Min read
Author : Suchethana D
Published : Oct 03 2025, 01:27 PM IST
Share this Photo Gallery
  • FB
  • TW
  • Linkdin
  • Whatsapp
16
ಮಾಯಾ ಪ್ಲ್ಯಾನ್​ ಎಲ್ಲವೂ ಠುಸ್​
Image Credit : Asianet News

ಮಾಯಾ ಪ್ಲ್ಯಾನ್​ ಎಲ್ಲವೂ ಠುಸ್​

ಯಾವುದೇ ಕಾರಣಕ್ಕೂ ದುರ್ಗಾ ಮತ್ತು ಹಿತಾ ಒಂದಾಗಬಾರದು. ಹಿತಾ ಮತ್ತು ಅಪ್ಪ ಶರತ್​ ಒಟ್ಟಾಗಬಾರದು ಎಂದು ಮಾಯಾ ಹರಸಾಹಸ ಪಡುತ್ತಿದ್ದಾರೆ. ಇವರೆಲ್ಲರ ನಡುವೆ ಜಗಳ ಮಾಡಿಸುವ ಸಂಬಂಧ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಇದೀಗ ಹಿತಾಳ ಫೆವರೆಟ್​ ಗೊಂಬೆಯನ್ನು ದುರ್ಗಾ ಕ್ಲೀನ್​ ಮಾಡಿ ಇಟ್ಟಿದ್ದರೆ, ಅದಕ್ಕೆ ಆ್ಯಸಿಡ್​ ಹಾಕಿ ವಿರೂಪಗೊಳಿಸಿದ್ದಾಳೆ ಮಾಯಾ. ಕೊನೆಗೆ ಶರತ್​ ಬಳಿ ಹೋಗಿ ಕ್ಲೀನ್​ ಮಾಡುವಾಗ ದುರ್ಗಾಳೆ ಹಾಳು ಮಾಡಿರುವುದಾಗಿ ಹೇಳಿದ್ದಾಳೆ.

26
ದುರ್ಗಾಳ ಮೇಲೆ ಹಿತಾ ಕೋಪ
Image Credit : Naa Ninna Bidalaare FB

ದುರ್ಗಾಳ ಮೇಲೆ ಹಿತಾ ಕೋಪ

ಗೊಂಬೆ ನೋಡಿ ಹಿತಾಳಿಗೆ ಇನ್ನಿಲ್ಲದ ನೋವು ಉಂಟಾಗಿ ಅದಕ್ಕೆ ದುರ್ಗನೇ ಕಾರಣ ಎಂದುಕೊಂಡು ಅವಳನ್ನು ರೂಮಿನಿಂದ ಹೊರಕ್ಕೆ ದಬ್ಬಿದ್ದಾಳೆ. ಇತ್ತ ಹಿತಾಳ ವಿಷಯದಲ್ಲಿ ದುರ್ಗಾ ಯಾವ ತಪ್ಪನ್ನೂ ಮಾಡುವುದಿಲ್ಲ ಎನ್ನುವುದು ಶರತ್​ಗೆ ಗೊತ್ತು. ಆದ್ದರಿಂದ ದುರ್ಗಾಳನ್ನು ಸಮಾಧಾನಪಡಿಸಿ, ನಿನ್ನ ತಪ್ಪಿಲ್ಲ ಎನ್ನುವುದು ಗೊತ್ತು ಎಂದಾಗ ದುರ್ಗಾಗೆ ಸಮಾಧಾನವಾಗಿದೆ. ಅದೇ ರೀತಿ ಚಿಟ್ಟೆಯೊಂದು ದುರ್ಗಳ ಬಳಿ ಬಂದಾಗ, ಹಿತಾಳಿಗೂ ಅಮ್ಮನ ಮಾತು ನೆನಪಾಗಿ ದುರ್ಗಾಳನ್ನು ಬೈದುದಕ್ಕಾಗಿ ಕ್ಷಮೆ ಕೋರಿದ್ದಾಳೆ.

Related Articles

Related image1
Naa Ninna Bidalaare: ಶರತ್​ ಜೊತೆ ಬಂದೇಬಿಟ್ಟಳು ಮೊದಲ ಪತ್ನಿ ಅಂಬಿಕಾ! ದುರ್ಗಾ ಗತಿ ಏನೀಗ?
Related image2
ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್​ ವಿಡಿಯೋ ವೈರಲ್​
36
ಅಪ್ಪ-ಮಗಳ ಒಂದು ಮಾಡಲು ದುರ್ಗಾ ಪ್ಲ್ಯಾನ್​
Image Credit : Instagram

ಅಪ್ಪ-ಮಗಳ ಒಂದು ಮಾಡಲು ದುರ್ಗಾ ಪ್ಲ್ಯಾನ್​

ಒಟ್ಟಿನಲ್ಲಿ ಮಾಯಾ ಪ್ಲ್ಯಾನ್​ ಬುಡಮೇಲಾಗಿದೆ. ಕೊನೆಗೆ ದುರ್ಗಾಳ ಬಳಿ ಬಂದ ಹಿತಾ, ನಿನಗೆ ಅಮ್ಮ ಕಾಣಿಸ್ತಾಳಲ್ವಾ ಹಾಗಿದ್ರೆ ಅಮ್ಮ ಈಗ ಏನು ಹೇಳಿದಳು ಎಂದು ಕೇಳಿದಾಗ, ಅಪ್ಪ-ಮಗಳನ್ನು ಒಂದು ಮಾಡಲು ಇದೇ ಒಳ್ಳೆಯ ಟೈಮ್​ ಎಂದುಕೊಂಡ ದುರ್ಗಾ, ನಿನ್ನ ಅಪ್ಪ ನಿನಗೆ ಹುಟ್ಟುಹಬ್ಬದ ಗಿಫ್ಟ್​ ಕೊಡಲು ಕಾಯುತ್ತಿದ್ದು, ಅದನ್ನು ತೆಗೆದುಕೊಳ್ಳುವಂತೆ ಅಮ್ಮ ಹೇಳಿದ್ದಾಳೆ ಎನ್ನುತ್ತಾಳೆ.

46
ಒಂದಾದ ಅಪ್ಪ-ಮಗಳು
Image Credit : Instagram

ಒಂದಾದ ಅಪ್ಪ-ಮಗಳು

ಇದನ್ನು ಕೇಳಿ ಹಿತಾಗೆ ಖುಷಿಯಾಗುತ್ತದೆ. ಓಡೋಡಿ ಅಪ್ಪನ ಬಳಿ ಬರುತ್ತಾಳೆ. ಹುಟ್ಟುಹಬ್ಬಕ್ಕೆ ತಂದ ಕಾಲ್ಗೆಜ್ಜೆಯನ್ನು ಅವಳಿಗೆ ಹೇಗೆ ಕೊಡುವುದು ಎಂದು ಶರತ್​ ಚಿಂತಾಕ್ರಾಂತನಾಗಿ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಹಿತಾ, ಒಂದು ಕಥೆಯನ್ನು ಹೇಳುತ್ತಾ, ಗಿಫ್ಟ್​ ಕೊಡುವಂತೆ ಹೇಳಿದಾಗ ಶರತ್​ಗೆ ಆಶ್ಚರ್ಯ ಖುಷಿ ಎಲ್ಲವೂ ಆಗುತ್ತದೆ.

56
ಮಗಳಿಗೆ ಗೆಜ್ಜೆ ತೊಡಿಸಿದ ಶರತ್​
Image Credit : Instagram

ಮಗಳಿಗೆ ಗೆಜ್ಜೆ ತೊಡಿಸಿದ ಶರತ್​

ಕೊನೆಗೆ ತನ್ನ ಮಗಳಿಗೆ ತಾನು ತಂದ ಗೆಜ್ಜೆಯನ್ನು ತೊಡಿಸಿದಾಗ ಹಿತಾಳಿಗೆ ಇನ್ನಿಲ್ಲದ ಖುಷಿ. ಅಲ್ಲಿಗೆ ದುರ್ಗಾಳ ಪ್ಲ್ಯಾನ್​ ಸಕ್ಸಸ್​ ಆಗಿದ್ದು, ಅಪ್ಪ-ಮಗಳನ್ನು ಸದಾ ದೂರ ಮಾಡಲು ಹೊಂಚು ಹಾಕ್ತಿರೋ ಮಾಯಾ ಪ್ಲ್ಯಾನ್​ ಠುಸ್​ ಆಗುತ್ತದೆ.

66
ಹಿತಾಳ ಬ*ಲಿಗೆ ಸಿದ್ಧತೆ
Image Credit : Instagram

ಹಿತಾಳ ಬ*ಲಿಗೆ ಸಿದ್ಧತೆ

ಇನ್ನು, ಸೀರಿಯಲ್​ನಲ್ಲಿ ಸಕತ್​ ಟ್ವಿಸ್ಟ್​ ಇದೆ. ಇದು ಹಿತಾಳ 7ನೇ ವರ್ಷದ ಹುಟ್ಟುಹಬ್ಬ ಆಗಿದ್ದು, ಅಂದು ಆಕೆಯನ್ನು ಬ*ಲಿ ಕೊಡಲು ಸಿದ್ಧತೆ ನಡೆಯುತ್ತಿದೆ. ಮಾಳವಿಕಾ ಹಿತಾಳ ಬ*ಲಿಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ. ಆಮೇಲೆ ಏನಾಗುತ್ತದೆ ಎನ್ನುವುದು ಈ ಕೆಳಗಿರುವ ಲಿಂಕ್​ನಲ್ಲಿ ವಿಷಯವಿದೆ ನೋಡಿ... ​

ದುರ್ಗಾಷ್ಟಮಿಯಂದೇ ಹಿತಾಳ ಬ*ಲಿಗೆ ಸಿದ್ಧತೆ! ಮುಂದಾದದ್ದು ಮೈ ಜುಂ ಎನ್ನೋ ಘಟನೆ... Naa Ninna Bidalaare

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
Naa Ninna Bidalaare: ಶರತ್​ ಜೊತೆ ಬಂದೇಬಿಟ್ಟಳು ಮೊದಲ ಪತ್ನಿ ಅಂಬಿಕಾ! ದುರ್ಗಾ ಗತಿ ಏನೀಗ?
Recommended image2
ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್​ ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved