- Home
- Entertainment
- TV Talk
- Bigg Bossನಲ್ಲಿ ಶುರುವಾಗೋಯ್ತು ಲವ್ವು! ಡಾಗ್ ಸತೀಶ್ ಪ್ರಪೋಸಲ್ಗೆ ನಾಚಿ ನೀರಾದ ಕಾವ್ಯಾ - ವಿಡಿಯೋ ವೈರಲ್
Bigg Bossನಲ್ಲಿ ಶುರುವಾಗೋಯ್ತು ಲವ್ವು! ಡಾಗ್ ಸತೀಶ್ ಪ್ರಪೋಸಲ್ಗೆ ನಾಚಿ ನೀರಾದ ಕಾವ್ಯಾ - ವಿಡಿಯೋ ವೈರಲ್
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾದ ಕೆಲವೇ ದಿನಗಳಲ್ಲಿ ಮೊದಲ ಪ್ರೇಮ ನಿವೇದನೆ ನಡೆದಿದೆ. ಸ್ಪರ್ಧಿ ಡಾಗ್ ಸತೀಶ್ ಅವರು ನಟಿ ಕಾವ್ಯಾ ಶೈವ ಅವರಿಗೆ ಪ್ರಪೋಸ್ ಮಾಡಿದ್ದು, ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ವಿಡಿಯೋ ನೋಡಿ…

ಏನೇನೋ ಇರತ್ತೆ!
ಬಿಗ್ಬಾಸ್ (Bigg Boss) ಭಾಷೆ ಯಾವುದೇ ಇರಲಿ, ಅಲ್ಲಿ ಜಗಳ, ಕಾದಾಟ, ಚೀರಾಟದ ಜೊತೆಜೊತೆಗೇನೂ ಟಿಆರ್ಪಿ ಏರಿಸುವುದು ಲವ್ ಮ್ಯಾಟರ್. ಕೆಲವು ಭಾಷೆಗಳ ಬಿಗ್ಬಾಸ್ನಲ್ಲಿ ಅಶ್ಲೀಲತೆಯೇ ರಾರಾಜಿಸುವುದೂ ಇದೆ. ಈ ರೀತಿ ಹೆಚ್ಚೆಚ್ಚು ಆದರೆ, ಈ ಷೋಗೆ ಟಿಆರ್ಪಿ ಕೂಡ ಹೆಚ್ಚು ಬರುತ್ತದೆ ಎನ್ನುವುದು ಇದಾಗಲೇ ಸಾಬೀತು ಕೂಡ ಆಗಿಹೋಗಿದೆ. ಇದನ್ನು ಟೀಕಿಸುತ್ತಲೇ, ಈ ಅಶ್ಲೀಲತೆ ವಿರುದ್ಧ ಕಮೆಂಟ್ ಹಾಕುತ್ತಲೇ, ಶಪಿಸಿಕೊಳ್ಳುತ್ತಲೇ ಅದನ್ನು ಎಂಜಾಯ್ ಮಾಡುವ ದೊಡ್ಡ ವರ್ಗವಿದೆ ಎನ್ನುವುದು ಗುಟ್ಟಾಗಿ ಉಳಿದಿರುವ ವಿಷಯವೇನಲ್ಲ.
ಇಲ್ಲಿ ಎಲ್ಲವೂ ನಿಜನಾ?
ಬಿಗ್ಬಾಸ್ ಎನ್ನುವುದೇ ಸ್ಕ್ರಿಪ್ಟೆಡ್ ಎನ್ನುವ ಮಾತಿದೆ. ಹೀಗೆಯೇ ಮಾಡಿ ಎಂದು ನೇರವಾಗಿ ಹೇಳುತ್ತಾರೆ ಎಂದು ಬಿಗ್ಬಾಸ್ಗೆ ಹೋಗಿ ಬಂದಿರುವ ಕೆಲವು ಸ್ಪರ್ಧಿಗಳು ಹೇಳಿಕೊಂಡಿದ್ದರೆ, ಮತ್ತೆ ಕೆಲವರು ಅನಿವಾರ್ಯವಾಗಿ ಹಾಗೆಯೇ ಮಾಡುವ ಸನ್ನಿವೇಶವನ್ನು ಬಿಗ್ಬಾಸ್ ಸೃಷ್ಟಿಸುವುದು ಸುಳ್ಳಲ್ಲ ಎಂದಿದ್ದಾರೆ. ಕನ್ನಡ ಬಿಗ್ಬಾಸ್ನಲ್ಲಿಯೂ ಈ ಹಿಂದೆ ಬಹುತೇಕ ಎಲ್ಲಾ ಸೀಸನ್ಗಳಲ್ಲಿ ಒಂದೋ, ಎರಡೋ ಜೋಡಿ ತೀರಾ ಆಪ್ತ ಆಗಿರುವುದು, ಕೆಲವೊಮ್ಮೆ ಎಲ್ಲೆ ಮೀರಿರುವುದು, ಹೀಗೆ ಎಲ್ಲೆ ಮೀರಿ ವರ್ತಿಸಿದಾಗಲೇ ಈ ಷೋನ ಟಿಆರ್ಪಿ ರೇಟ್ ಕೂಡ ಜಾಸ್ತಿಯಾಗಿರುವುದು ತಿಳಿದಿರುವ ವಿಷಯವೇ.
ಬಿಗ್ಬಾಸ್ನಲ್ಲಿ ಶುರುವಾಯ್ತು ಲವ್
ಇದೀಗ Bigg Boss Season 12 ಶುರುವಾಗಿ 3-4 ದಿನವಾಗಿಲ್ಲ. ಈಗಲೇ ಒಂದು ಲವ್ ಪ್ರಪೋಸಲ್ ಶುರುವಾಗಿದೆ. ನಟಿ ಕಾವ್ಯಾ ಶೈವ (Bigg Boss Kavya Shaiva)ಅವರಿಗೆ ಡಾಗ್ ಸತೀಶ್ ಅವರು ಪ್ರಪೋಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕೇಳಿ ಕಾವ್ಯ ಅವರು ನಾಚಿಕೊಂಡಿರುವುದನ್ನೂ ನೋಡಬಹುದು. ಕೆಲವರು ಇದನ್ನು ಸ್ಕ್ರಿಪ್ಟೆಡ್ ಎನ್ನುತ್ತಿದ್ದರೆ, ಮತ್ತೆ ಕೆಲವರು ಶುರುವಿನಲ್ಲೇ ಶುರುಹಚ್ಕೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ.
ಸತೀಶ್ ಲವ್ಸ್ ಕಾವ್ಯಾ!
ಡಾಗ್ ಸತೀಶ್ (Bigg Boss Dog satish ) ಅವರು ಕಾವ್ಯಾ ಅವರ ಬಳಿ ಬಂದು ಕಾವು ನಿನ್ನ ಲವ್ ಮಾಡ್ತಾ ಇದ್ದೀವಿ ನಾವು ಎಂದು ಹೇಳಿದ್ದಾರೆ. ಇದನ್ನು ಅವರು ನಾವು ಎನ್ನುವ ಮೂಲಕ ಸಂಬೋಧಿಸಿದ್ದಾರೆ. ಯಾರು ಎನ್ನೋದನ್ನು ಅವರು ಹೇಳಿಲ್ಲ. ಆದರೆ ಇದನ್ನು ಕೇಳಿ ಕಾವ್ಯಾ ಮಾತ್ರ ನಾಚಿ ನೀರಾಗಿರೋದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ನಟಿ ಕಾವ್ಯಾ ಶೈವ ಕುರಿತು
ಇನ್ನು ನಟಿ ಕಾವ್ಯಾ ಶೈವ ಕುರಿತು ಹೇಳುವುದಾದರೆ, ಇವರು ಕಿರುತೆರೆ ನಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದವರು. ಕೆ.ಆರ್.ಪೇಟೆಯವರಾದ ಕಾವ್ಯಾ, ಮೈಸೂರಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ. 'ಭೂಮಿ ತಾಯಾಣೆ' ಕಾವ್ಯ ನಟನೆಯ ಮೊದಲ ಸೀರಿಯಲ್. ನಂತರ ಬೆಳ್ಳಿಪರದೆಯ ಮೇಲೆ 'ಕೊತ್ತಲವಾಡಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ, ಈಗ ಬಿಗ್‍ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಯಾರೀ ಡಾಗ್ ಸತೀಶ್?
ಇನ್ನು ಡಾಗ್ ಸತೀಶ್ ಕುರಿತು ಹೇಳುವುದಾದರೆ, ಸತೀಶ್ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆಯಂತೆ. ಬಿಗ್ ಬಾಸ್‌ಗಾಗಿ 25 ಲಕ್ಷ ರೂಪಾಯಿಗಳಿಗೆ ಬಟ್ಟೆಗಳನ್ನ ಖರೀದಿಸಿರುವುದಾಗಿ ಅವರು ಬಿಗ್‌ಬಾಸ್ ಮನೆಯ ಒಳಗೆ ಹೋಗುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮುಂದೆ ಹೇಳಿಕೊಂಡಿದ್ದಾರೆ. 50 ಕೋಟಿ ರೂಪಾಯಿಗಳ ನಾಯಿಗಳನ್ನು ಹೊಂದಿರುವವರು 50 ಲಕ್ಷಕ್ಕಾಗಿ ಬಿಗ್‌ಬಾಸ್ ಆಟವಾಡುತ್ತಿದ್ದಾರೆ ಎಂದೂ ಇವರು ಸದ್ದು ಮಾಡುತ್ತಿದ್ದಾರೆ.
ಟ್ರೋಲ್ನಿಂದ ಆಹ್ವಾನ
ಇನ್ನು ಕೆಲವು ದಿನಗಳ ಹಿಂದೆ ಇವರು ನೀಡಿದ್ದ ಸಂದರ್ಶನವೊಂದರಲ್ಲಿ, ನನ್ನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟಕೆಟ್ಟದ್ದಾಗಿ ಮಾತನಾಡಿದರು. ಅದರಿಂದ ನಾನು ಫೇಮಸ್ ಆದೆ. ಬಿಗ್‌ಬಾಸ್ 12ಕ್ಕೆ ನನಗೆ ಆಹ್ವಾನ ಬಂದಿದೆ. ಮಾತ್ರವಲ್ಲದೇ ಎರಡು ಸಿನಿಮಾಗಳಲ್ಲಿ ಹೀರೋ ಆಗಿದ್ದೇನೆ. ಒಳ್ಳೊಳ್ಳೆ ಅವಕಾಶಗಳು ಬಂದಿವೆ. ಒಂದು ಗಂಟೆ ಎರಡೂವರೆ ಲಕ್ಷ ರೂ. ಪೇಮೆಂಟ್ ಇತ್ತು. ಅದೀಗ 10 ಲಕ್ಷ ಆಗಿದೆ ಎಂದಿದ್ದರು.