- Home
- Entertainment
- TV Talk
- Annayya Serial ರೋಚಕ ಟ್ವಿಸ್ಟ್! ಕೈಯಲ್ಲಿ ಕತ್ತಿ ಝಳಪಿಸಿ ರಕ್ಕಸರ ಸಂಹಾರಕ್ಕೆ ನಿಂತೇ ಬಿಟ್ಟಳು ಪಾರು
Annayya Serial ರೋಚಕ ಟ್ವಿಸ್ಟ್! ಕೈಯಲ್ಲಿ ಕತ್ತಿ ಝಳಪಿಸಿ ರಕ್ಕಸರ ಸಂಹಾರಕ್ಕೆ ನಿಂತೇ ಬಿಟ್ಟಳು ಪಾರು
ಅಣ್ಣಯ್ಯ ಧಾರಾವಾಹಿಯಲ್ಲಿ, ಶಿವುವಿನ ರೌಡಿ ಹಿನ್ನೆಲೆಯನ್ನು ಪಾರುಳ ತಂದೆ ಬಯಲು ಮಾಡುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಗೆ ಮಸಿ ಬಳಿಯಲು ಬಂದ ದುಷ್ಟರ ವಿರುದ್ಧ ಪಾರು ದುರ್ಗಾವತಾರ ತಾಳಿ, ಕತ್ತಿ ಹಿಡಿದು ಹೋರಾಡುತ್ತಾಳೆ. ಶಿವು ಮತ್ತು ಪಾರು ದೂರವಾಗುತ್ತಾರೆಯೇ ಎಂಬ ಕುತೂಹಲ ಈಗ ಹೆಚ್ಚಾಗಿದೆ.

ಇತಿಹಾಸ ಬಯಲಿಗೆ
ಅಣ್ಣಯ್ಯ ಸೀರಿಯಲ್ (Annayya Serial)ನಲ್ಲಿ ಇನ್ನೇನು ಶಿವು ಮತ್ತು ಪಾರು ಒಂದಾದ್ರು ಎನ್ನೋ ಹೊತ್ತಿನಲ್ಲಿಯೇ ಶಿವು ರೌಡಿಯಾಗಿದ್ದ ಸಮಯದ ಫೈಲ್ ಓಪನ್ ಮಾಡಿಸಿದ್ದಾನೆ ಪಾರು ಅಪ್ಪ. ಶಿವುನ ಆಸ್ತಿಯನ್ನೆಲ್ಲಾ ಹೊಡೆಯಬೇಕು ಎಂದು ಸಂಚು ರೂಪಿಸಿದ್ದ ಪಾರು ಅಪ್ಪನಿಗೆ ಅಡ್ಡಗಾಲಾಗಿ ನಿಂತವಳೇ ಪಾರು. ಆದರೆ ಈ ಕುತಂತ್ರ ಎಲ್ಲಾ ಶಿವುಗೆ ತಿಳಿದಿಲ್ಲ. ಆದರೆ ತನ್ನ ಸ್ವಂತ ಮಗಳು ಪಾರುವನ್ನು ಮಟ್ಟ ಹಾಕಲು ಪಣ ತೊಟ್ಟಿರುವ ಆಕೆಯ ಅಪ್ಪ ಶಿವುವಿನ ಇತಿಹಾಸ ಕೆದಕಿಸಿದ್ದಾನೆ.
ಪಾರುಗೆ ಶಾಕ್
ಆತನ ಇತಿಹಾಸದ ಬಗ್ಗೆ ಅರಿಯುತ್ತಲೇ ಪಾರುಗೆ ಶಾಕ್ ಆಗಿದೆ. ಈ ಹಿಂದೆ ಶಿವು ರೌಡಿಯಾಗಿದ್ದ ಎನ್ನುವುದು ತಿಳಿದಿದೆ. ಆದರೆ ದುಷ್ಟರ ದಮನಕ್ಕೆ ಆತ ರೌದ್ರನಾಗಿದ್ದ ಎನ್ನುವುದು ನಿಜವಾಗಿರುವ ಸತ್ಯ. ಆದರೆ ಇದೀಗ ಮತ್ತೆ ಅದೇ ದರ್ಶನದಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆ ಅವನಿಗೆ ಎದುರಾಗಿದೆ. ಶಿವು ಸಹೋದರಿ ರತ್ನಳ ಗೆಳತಿಯೊಬ್ಬಳಿಗೆ ಮೆರಿಟ್ ಅಲ್ಲಿ ಸೀಟ್ ಸಿಕ್ಕಿದ್ದು, ಅದನ್ನು ಕೇಳೋದಕ್ಕೆ ಸರ್ಕಾರಿ ಕಚೇರಿಗೆ ಹೋದ್ರೆ, ಅಲ್ಲಿ ಅಧಿಕಾರಿ, ಕೆಟ್ಟದಾಗಿ ಮಾತನಾಡಿ, ನಾನು ಹೇಳಿದ್ದನ್ನು ಮಾಡಿದ್ರೆ ಮಾತ್ರ ಕೆಲಸ ಕೋಡೋದು ಅಂದಿದ್ದಾನೆ. ಇದರಿಂದ ರತ್ನ ಗೆಳತಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಶಿವು ರೌದ್ರರೂಪ
ಸಮಸ್ಯೆಯನ್ನು ಬಗೆಹರಿಸಲು ಕಚೇರಿಗೆ ಹೋಗುವ ಶಿವಣ್ಣನಿಗೆ ಅಲ್ಲಿನ ಅಧಿಕಾರಿ ಏನು ರೌಡಿಸಂ ಮಾಡ್ತಿಯಾ, ನಾನು ರೌಡಿಗಳನ್ನು ಕರೆಯಿಸುತ್ತೇನೆ, ಎನ್ನುತ್ತಾ ಹಲವು ರೌಡಿಗಳನ್ನು ಕರೆಸುತ್ತಾರೆ. ಅಲ್ಲಿ ಬಂದ ರೌಡಿಗಳು ಶಿವಣ್ಣನನ್ನು ನೋಡಿ ಮಂಡಿಯೂರಿ ಕೂರುತ್ತಾರೆ. ಇದನ್ನ ನೋಡಿ ಅಧಿಕಾರಿಯೆ ನಡುಗುತ್ತಾನೆ. ಹೀಗಿರುವಾಗಲೇ ಪೊಲೀಸರು ಬಂದು ಆತನ ಇತಿಹಾಸದ ಎಲ್ಲಾ ರೌಡಿಸಂ ದಾಖಲೆಗಳನ್ನು ಪೊಲೀಸರ ಕೈಗೆ ಇಟ್ಟಿದ್ದಾರೆ. ಶಿವು ಈ ಮೊದಲು ಮುಂಬೈನಲ್ಲಿದ್ದು, ಅಲ್ಲಿ ಏನು ಮಾಡುತ್ತಿದ್ದ? ಹಿಂದೆ ರೌಡಿಯಾಗಿದ್ದವ ಈಗ ಬದಲಾಗಿ ಇಷ್ಟೊಂದು ಮುಗ್ಧ ಆಗಿರೋದಾದರೂ ಯಾಕೆ? ಎಲ್ಲಾ ಕಥೆ ಸದ್ಯದಲ್ಲೇ ರಿವೀಲ್ ಆಗಬೇಕಿದೆ.
ಮಸಿ ಬಳೆಯಲು ಮುಂದು
ಇದನ್ನು ನೋಡಿ ಇನ್ನೇನು ಶಿವು ಮತ್ತು ಪಾರು ದೂರವಾಗ್ತಾರಾ ಎಂದು ವೀಕ್ಷಕರಿಗೆ ಕುತೂಹಲ ಇದೆ. ಅದೇ ಹೊತ್ತಿನಲ್ಲಿ, ಕೆಲವರು ಇದನ್ನೇ ನೆಪ ಮಾಡಿಕೊಂಡು ಪಾರುವಿನ ಮನೆಗೆ ಮಸಿ ಬಳಿಯಲು ಮುಂದಾಗಿದ್ದರು. ಇನ್ನು ಪಾರು ಸುಮ್ಮನೇ ಇರ್ತಾಳಾ? ಅದೂ ದುಷ್ಟರ ದಮನ ಮಾಡಿರೋ ದುರ್ಗಾದೇವಿಯ ಕಥೆಯುಳ್ಳ ದಸರಾ ಹಬ್ಬದ ಟೈಮ್ ಬೇರೆ. ಈ ಸೀರಿಯಲ್ನಲ್ಲಿಯೂ ಮಹಿಳೆಯ ದುರ್ಗಾವತಾರ ತೋರಿಸದಿದ್ದರೆ ಹೇಗೆ ಹೇಳಿ.
ದುರ್ಗಾವತಾರ ಎತ್ತಿದ ಪಾರು
ಇಲ್ಲಿ ಪಾರು ದುರ್ಗಾವತಾರ ಎತ್ತಿದ್ದಾಳೆ. ಕತ್ತಿಯನ್ನು ಝಳಪಿಸುತ್ತಾ ದುಷ್ಟರ ಸಂಹಾರ ಮಾಡಲು ಹೊರಟಿದ್ದಾಳೆ. ಈಕೆಯ ಈ ರೌದ್ರ ರೂಪವನ್ನು ನೋಡಿ ಮನೆಮಂದಿಯಷ್ಟೇ ಅಲ್ಲ, ಅಲ್ಲಿ ಬಂದವರೂ ತತ್ತರಿಸಿ ಹೋಗಿದ್ದಾರೆ. ನಾರಿ ಮುನಿದರೆ ಮಾರಿಯಾಗುತ್ತಾಳೆ ಎನ್ನುವುದಕ್ಕೆ ಇದೊಂದು ಜಸ್ಟ್ ಸ್ಯಾಂಪಲ್ ಅಷ್ಟೇ.
ದಸರಾ ಸಮಯದಲ್ಲಿ ಸನ್ನಿವೇಶ
ಅದರಲ್ಲಿಯೂ ದಸರಾ ಹಬ್ಬದಂದು ಮನೆಯಲ್ಲಿ ಗೊಂಬೆಯನ್ನು ಕುಳ್ಳರಿಸಿ ಪೂಜೆ ಮಾಡುತ್ತಿದ್ದ ಸಮಯದಲ್ಲಿಯೇ ರೌಡಿಗಳ ಆಗಮನ ಆಗಿದ್ದು, ನಾರಿಯ ದುರ್ಗಾವತಾರದ ಶಕ್ತಿಯನ್ನು ಅಣ್ಣಯ್ಯ ಸೀರಿಯಲ್ನಲ್ಲಿ ಕೂಡ ತೋರಿಸಲಾಗಿದೆ.