ಮುಂಬೈ : ಭಾನುವಾರ ಮೈಸೂರಿನ ಹೊರವಲಯದಲ್ಲಿ ಮುಂಬೈ ಪೊಲೀಸರು ನಡೆಸಿದ ದಾಳಿಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಸಂಪೂರ್ಣ ಚಿತ್ರಣವನ್ನು ದಾಳಿ ನಡೆಸಿದ್ದ ಮುಂಬೈ ಪೊಲೀಸರು ಸೋಮವಾರ ನೀಡಿದ್ದು ಒಟ್ಟು 390 ಕೋಟಿ ರು. ಮೌಲ್ಯದ 192 ಕೆ.ಜೆ. ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 8 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಮುಂಬೈ ಉಪ ಪೊಲೀಸ್ ಆಯುಕ್ತರ ದತ್ತಾ ನಲವಾಡೆ, ಮೈಸೂರು ದಾಳಿಗೂ ಮುಂಚೆ 8 ಕೋಟಿ ರು. ಮೌಲ್ಯದ 5 ಕೇಜಿ ಮಫೆಡ್ರೋನ್ ಡ್ರಗ್ಸ್ ಸಿಕ್ಕಿತ್ತು. ಮೈಸೂರು ದಾಳಿ ನಂತರ 187 ಕೇಜಿ ಮೆಥೆಡ್ರೋನ್ ಡ್ರಗ್ಸ್ ಸಿಕ್ಕಿದ್ದು, ಅದರ ಮೌಲ್ಯ 382 ಕೋಟಿ ರುಪಾಯಿ. ಒಟ್ಟಾರೆ 390 ಕೋಟಿ ರು. ಮೌಲ್ಯದ 192 ಕೇಜಿ ಡ್ರಗ್ಸ್ ಇಡೀ ಪ್ರಕರಣದಲ್ಲಿ ಈವರೆಗೆ ಸಿಕ್ಕಿದೆ ಎಂದಿದ್ದಾರೆ.

11:01 PM (IST) Jul 29
ಯಾವುದೇ ದೊಡ್ಡ ಪ್ರಚಾರವಿಲ್ಲದೆ ಬಿಡುಗಡೆಯಾದ 'ಸೈಯಾರಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಚಿತ್ರವು 404 ಕೋಟಿ ರೂಪಾಯಿಗಳ ಜಾಗತಿಕ ಗಳಿಕೆಯನ್ನು ಗಳಿಸಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಲವ್ ಸ್ಟೋರಿ ಸಿನಿಮಾ ಗಳಿಸಿದ ಅತಿ ಹೆಚ್ಚು ಹಣವಾಗಿದೆ.
10:41 PM (IST) Jul 29
ಬಿಬಿಎಂಪಿ ರದ್ದತಿಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಆಗಸ್ಟ್ 3 ರಿಂದ ವಾರ್ಡ್‌ಗಳ ಮರುರಚನೆ ಆರಂಭವಾಗಲಿದೆ. ಸೆಪ್ಟೆಂಬರ್ 1 ರೊಳಗೆ ತಾತ್ಕಾಲಿಕ ವಾರ್ಡ್‌ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿ ಸ್ವೀಕಾರ ಮುಂತಾದ ಕೆಲಸಗಳು ಪೂರ್ಣಗೊಳ್ಳಲಿವೆ. ಬಳಿಕ ಮೀಸಲಾತಿ ಪ್ರಕ್ರಿಯೆ ಆರಂಭ.
08:34 PM (IST) Jul 29
08:22 PM (IST) Jul 29
ನಟ ದರ್ಶನ್ ಪ್ರಕರಣದಲ್ಲಿ ಅನುಪಮಾ ಗೌಡ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿವವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಮೆಸೇಜ್‌ಗೂ ಮುನ್ನ ನಿಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಯೋಚಿಸುವಂತೆ ಕೇಳಿದ್ದಾರೆ.
07:44 PM (IST) Jul 29
ಅಮೆರಿಕಾಗೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಅತೀ ದೊಡ್ಡ ದೇಶ ಭಾರತ ಅನ್ನೋ ದಾಖಲೆ ಬರೆದಿದೆ. ಚೀನಾ ಹಿಂದಿಕ್ಕಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ.
07:25 PM (IST) Jul 29
07:00 PM (IST) Jul 29
ಮೀನು ಆರೋಗ್ಯಕ್ಕೆ ಉತ್ತಮ. ಆದರೆ ಮೀನು ಫ್ರೈ ಮಾಡಲು ಎಣ್ಣೆ ಬಳಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಆಯಿಲ್ ಫ್ರೈ ಅಥವಾ ಆಯಿಲ್ ಬಳಸಿ ಮಾಡುವ ತವಾ ಫ್ರೈ ಉತ್ತಮವಲ್ಲ. ಆದರೆ ಅತ್ಯಂತ ರುಚಿರುಚಿಯಾದ, ಆರೋಗ್ಯಕ್ಕೂ ಉತ್ತಮವಾದ ಮೀನು ಫ್ರೈ ಅಡುಗೆ ಎಣ್ಣೆ ಹಾಕದೇ ಮಾಡುವುದು ಹೇಗೆ?
06:59 PM (IST) Jul 29
06:26 PM (IST) Jul 29
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ ಸಮಾಧಿ ಸ್ಥಳ ಅಗೆಯುವ ಕೆಲಸ ನಡೆಯುತ್ತಿದೆ. ಆದರೆ ಮೊದಲ ಜಾಗದಲ್ಲಿ 15 ಅಡಿ ಆಳ ಆಗದೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.
06:13 PM (IST) Jul 29
05:42 PM (IST) Jul 29
ನಟಿ ರಮ್ಯಾ ಅವರನ್ನು ಬೆಂಬಲಿಸಿದ ಶಿವರಾಜ್‌ಕುಮಾರ್ ದಂಪತಿಗಳ ವಿರುದ್ಧ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದಲ್ಲಿಯೇ ಮಹಿಳೆಗೆ ಅನ್ಯಾಯ ಆಗುತ್ತಿದ್ದರೂ ಯಾರೂ ಮಾತನಾಡಲಿಲ್ಲ. ರಮ್ಯಾ ವಿವಾದದ ಬೆನ್ನಲ್ಲೇ ದೊಡ್ಮನೆ ಕುಟುಂಬದಲ್ಲಿ ಮತ್ತೊಂದು ಸಂಘರ್ಷ.
05:15 PM (IST) Jul 29
ಕೇವಲ 400 ರೂಪಾಯಿ ತಿಂಗಳ ರೀಚಾರ್ಜ್ ಮಾಡಿದರೆ ಸಾಕು, ನಿಮ್ಮ ಮನೆ ಟಿವಿಯೇ ಹೈಎಂಡ್ ಕಂಪ್ಯೂಟರ್ ಆಗಿ ಬದಲಾಗಲಿದೆ. ವರ್ಚುವಲ್ ಡೆಸ್ಕ್‌ಟಾಪ್ ಜಿಯೋಪಿಸಿ ಬಿಡುಗಡೆಯಾಗಿದೆ.
05:13 PM (IST) Jul 29
05:10 PM (IST) Jul 29
04:44 PM (IST) Jul 29
ಸೈನ್ಯಾಧಿಕಾರಿಗೆ ಅವಮಾನಿಸಿದ ಮಧ್ಯಪ್ರದೇಶ ಸಚಿವರು ಮಂತ್ರಿಯೋ,ಕಂತ್ರಿಯೋ. ನಮ್ಮ ಮಾತು ಕೇಳುವ ಧೈರ್ಯ ಮೋದಿಗಿಲ್ಲ ಎಂದರೆ ಸ್ಥಾನಕ್ಕೆ ಅರ್ಹರಲ್ಲ, ಪೆಹಲ್ಗಾಂ ದಾಳಿಗೆ ಹೊಣೆ ಯಾರು, ಯಾರೇ ಆದರೂ ರಾಜೀನಾಮೆ ನೀಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸದನದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
04:33 PM (IST) Jul 29
ಕರ್ನಾಟಕದಲ್ಲಿ ಕುಟುಂಬಗಳ ಆರ್ಥಿಕ ಭದ್ರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ರೈತ ವಿದ್ಯಾನಿಧಿ, PM-KISAN, MGNREGA, ಮತ್ತು NSAP ಯೋಜನೆಗಳ ವಿವರ, ಅರ್ಹತೆ ಮತ್ತು ಲಾಭಗಳನ್ನು ಒಳಗೊಂಡಿದೆ.
04:21 PM (IST) Jul 29
04:15 PM (IST) Jul 29
ಪ್ರೇಮಾನಂದ್ ಮಹಾರಾಜ್ ಹೇಳಿಕೆಯೊಂದು ಈಗ ವೈರಲ್ ಆಗಿದೆ. ಯುವಕ – ಯುವತಿಯರ ಶುದ್ಧತೆ ಬಗ್ಗೆ ಮಾತನಾಡಿರುವ ಅವರು, ಲಿವ್ ಇನ್ ರಿಲೇಶನ್ ಶಿಪ್ ಖಂಡಿಸಿದ್ದಾರೆ.
03:59 PM (IST) Jul 29
ಯುನೈಟೆಡ್ ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ವಿಮಾನದ ಒಂದು ಎಂಜಿನ್ ಆಫ್ ಆಗಿದೆ. ತಕ್ಷಣವೇ ಪೈಲೆಟ್ ಮೇಡೇ ಕಾಲ್ ನೀಡಿದ್ದಾರೆ. ಕೇವಲ 5,000 ಅಡಿ ಎತ್ತರದಲ್ಲಿ ತುರ್ತು ಪರಿಸ್ಥಿತಿ ಎದುರಿಸಿದೆ.
03:44 PM (IST) Jul 29
03:04 PM (IST) Jul 29
ಧರ್ಮಸ್ಥಳದಲ್ಲಿ ಮುಸುಕುದಾರಿ ದೂರುದಾರ ಗುರುತಿಸಿದ ಸಮಾದಿ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಆದರೆ ಮೊದಲ ಸಮಾಧಿ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಹೀಗಾಗಿ 2ನೇ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ.
02:57 PM (IST) Jul 29
02:57 PM (IST) Jul 29
ಬೆಂಗಳೂರಿನಲ್ಲಿ ಉಲ್ಫಾ ಮತ್ತು ನಕ್ಸಲೈಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಶಾಮಾ ಪರ್ವೀನ್ ಎಂಬಾಕೆಯನ್ನು ಬಂಧಿಸಲಾಗಿದ್ದು,
02:22 PM (IST) Jul 29
02:06 PM (IST) Jul 29
01:55 PM (IST) Jul 29
01:37 PM (IST) Jul 29
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರನ ಜೊತೆ ಮಹಜರು ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇದೀಗ ಶವ ಹೊರತೆಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ.
01:23 PM (IST) Jul 29
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪೆರೇರಾ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಈ ಹಿಂದಿನ 127 ಗಂಟೆಗಳ ದಾಖಲೆಯನ್ನು ಮುರಿದಿದ್ದಾರೆ.
01:17 PM (IST) Jul 29
ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ. ಹೆಬ್ಬಾಳದಲ್ಲಿ ಬಂಧಿತಳಾದ ಪರ್ವಿನ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
12:59 PM (IST) Jul 29
ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕುರಿತು ಅಮಿತ್ ಶಾ ಸದನದಲ್ಲಿ ಪೆಹಲ್ಗಾಂ ಉಗ್ರರ ಹತ್ಯೆಯನ್ನು ಖಚಿತಪಡಿಸಿದ್ದಾರೆ.
12:47 PM (IST) Jul 29
12:32 PM (IST) Jul 29
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಮಹಜರು 2ನೇ ದಿನ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಕ ಮಹಜರು ಪ್ರಕ್ರಿಯ ಮುಂದುವರಿದಿದೆ. ಇತ್ತ ಗುರುತಿಸಿದ ಜಾಗದಿಂದ ಶವಗಳನ್ನು ಇಂದೇ ಹೊರತೆಗಯಲು ಎಸ್ಐಟಿ ಎಲ್ಲಾ ಸಿದ್ಧತೆ ನಡೆಸಿದೆ.
12:24 PM (IST) Jul 29
12:19 PM (IST) Jul 29
11:53 AM (IST) Jul 29
ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಿಂದಾಗಿ ಗಂಗಾವತಿ ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ನಾಡದೋಣಿ ಚಾಲಕರು ಪ್ರವಾಸಿಗರನ್ನು ಪ್ರವಾಹದ ನಡುವೆಯೂ ತೆಪ್ಪದಲ್ಲಿ ಕರೆದೊಯ್ಯುತ್ತಿದ್ದು, ಜಿಲ್ಲಾಡಳಿತದ ಎಚ್ಚರಿಕೆಯನ್ನು ಉಲ್ಲಂಘಿಸುತ್ತಿದ್ದಾರೆ.
11:32 AM (IST) Jul 29
ಬಳ್ಳಾರಿ ಜಿಲ್ಲೆಯಲ್ಲಿ ಯೂರಿಯಾ ಕೊರತೆಯ ನಡುವೆಯೂ ಕಾಳಸಂತೆ ಮಾರಾಟ ಜೋರಾಗಿದೆ. ಅಂಗಡಿ ಮಾಲೀಕರು ದುಪ್ಪಟ್ಟು ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
11:16 AM (IST) Jul 29
10:25 AM (IST) Jul 29
09:56 AM (IST) Jul 29
09:26 AM (IST) Jul 29