ಮೈಸೂರು: ಮುಖ್ಯಮಂತ್ರಿಗಳ ನಡೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಾತಾಗಿದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಲ್ಲದೆ, ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ಕಾವೇರಿ ಭಾಗದ ರೈತರಿಗೆ ವಿಷ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿದೆ. ಕದ್ದು ಮುಚ್ಚಿ ಈಗಾಗಲೇ ಬಹಳಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಈಗ ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಂಡಿಸದೆ ರೈತರಿಗೆ ವಿಷ ಹಾಕಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಕದ್ದು ಮುಚ್ಚಿ ಯಾಕೆ ನೀರು ಬಿಟ್ಟರು. ನ್ಯಾಯಾಧಿಕರಣದ ಮುಂದೆ ಪ್ರಬಲವಾಗಿ ಏಕೆ ವಾದ ಮಂಡಿಸಲಿಲ್ಲ? ರಾಜ್ಯ ಸರ್ಕಾರಕ್ಕೆ ರೈತರು ಆಧ್ಯತೆಯಾಗಿ ಉಳಿದಿಲ್ಲ. 1 ತಿಂಗಳಿನಿಂದ ಬರಿ ಸಂಪುಟ ವಿಸ್ತರಿಸುವ ಕಸರತ್ತಿನಲ್ಲೇ ಇದ್ದಾರೆ ಎಂದು ಟೀಕಿಸಿದರು.
ದರ ನಿಗದಿ ಆಗುವವರೆಗೆ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಆಗುವುದಿಲ್ಲ. ಇವರ ಈ ತಿಕ್ಕಾಟದಲ್ಲಿ ರಾಜ್ಯದ ಸಮಸ್ಯೆಗಳು ದೊಡ್ಡಾದಾಗುತ್ತಿದೆ. ಯಾರನ್ನೊ ಓಲೈಸಿಕೊಳ್ಳಲು ರಾಜ್ಯ ಸರ್ಕಾರ ಕರ್ನಾಟಕ ರೈತರನ್ನು ಬಲಿ ಕೊಡುತ್ತಿದೆ. ಬಿಜೆಪಿ ಯಾವಗಲೂ ರೈತರ ಪರವಾಗಿ ನಿಲ್ಲುತ್ತದೆ ಎಂದರು.
11:22 PM (IST) Jul 29
10:56 PM (IST) Jul 29
ಕೇರಳದ ಕೋಝಿಕ್ಕೋಡ್‌ನಲ್ಲಿ, ಕಡಿಮೆ ಸಂಬಳ ಪಡೆಯುತ್ತಿದ್ದ ಮೂವರು ಮಹಿಳಾ ಶಿಕ್ಷಕಿಯರು ಎಂಡಿಎಂಎ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
10:08 PM (IST) Jul 29
ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.
09:23 PM (IST) Jul 29
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..
09:02 PM (IST) Jul 29
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಪಂದ್ಯ ಶುಲ್ಕ ಮತ್ತು ಬಹುಮಾನದ ಹಣ ಸೇರಿ ಅವರು ಒಟ್ಟಾರೆ ಸಂಪಾದಿಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!
08:18 PM (IST) Jul 29
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಈ ಯಶಸ್ಸಿನ ಹಿಂದೆ ಇರುವ ಪರಿಶ್ರಮ ಮತ್ತು ಸಿನಿಮಾ ಮೇಲಿನ ಸಮರ್ಪಣೆಯನ್ನು ಕಂಡಿರುವ ಹಿರಿಯ ನಟ ಜಯರಾಮ್ ಇದೀಗ ಅವರ ಕೆಲಸದ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
08:04 PM (IST) Jul 29
ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
07:52 PM (IST) Jul 29
Reba Monica John Baby Girl: ʻರತ್ನನ್ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ ‘ಬಿಗಿಲ್’ ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
07:02 PM (IST) Jul 29
Billa Ranga Baashaa First Blood: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಭಾಷಾ - ಫಸ್ಟ್ ಬ್ಲಡ್' ಚಿತ್ರದ ಚಿತ್ರೀಕರಣ ಮತ್ತೆ ಭರ್ಜರಿಯಾಗಿ ಆರಂಭವಾಗಿದೆ.
07:01 PM (IST) Jul 29
ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.
06:42 PM (IST) Jul 29
ಕೊಚ್ಚಿಯ ರೆಸ್ಟೋರೆಂಟ್‌ನಲ್ಲಿ ಮೊಟ್ಟೆ ತಿನ್ನುವಾಗ ಯುವಕನೊಬ್ಬನ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿತು. ತಕ್ಷಣವೇ ಆತನ ಸ್ನೇಹಿತರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ್ದಾರೆ. ಹೇಗೆ ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
06:32 PM (IST) Jul 29
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ.
06:02 PM (IST) Jul 29
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್‌ನಲ್ಲಿ 'ಲೀಡರ್‌ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದಕ್ಕಾಗಿ ಈ ಗೌರವ ಸಂದಿದೆ.
05:48 PM (IST) Jul 29
ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
05:38 PM (IST) Jul 29
ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್‌ಗೆ ಭರ್ಜರಿ ಎಂಟ್ರಿ..
05:16 PM (IST) Jul 29
ದುಬೈ: ಐಸಿಸಿ ನೂತನ ಏಕದಿನ ರ್‍ಯಾಂಕಿಂಗ್ ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇನ್ನು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
05:13 PM (IST) Jul 29
05:09 PM (IST) Jul 29
Farmers Agitation: ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು.
04:59 PM (IST) Jul 29
Tungabhadra Dam: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
04:48 PM (IST) Jul 29
Chamarajeshwara Rathotsava: ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ.
04:40 PM (IST) Jul 29
ಬಡ ರೈತ ಕುಟುಂಬದ ಪ್ರತಿಭಾವಂತೆ ಜ್ಯೋತಿ, ಆ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುವಾಗ ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ. ಸಾವಿನ ಸುತ್ತ ಸಾಲು-ಸಾಲು ಆರೋಪಗಳು ಹೊರಬೀಳುತ್ತಿದ್ದು, ಅವರ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೊರಿ ಇಲ್ಲಿದೆ.
04:33 PM (IST) Jul 29
ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವು 29 ವರ್ಷಗಳ ನಂತರ ತನ್ನ 'ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್' (ILS) ಅನ್ನು ಉನ್ನತೀಕರಿಸುತ್ತಿದೆ. ಇದೇ ಸಮಯದಲ್ಲಿ, ನಗರದ ಹೃದಯಭಾಗದಲ್ಲಿರುವ ಈ ನಿಲ್ದಾಣದಿಂದ ವಾಣಿಜ್ಯ ವಿಮಾನ ಸೇವೆಗಳನ್ನು ಪುನರಾರಂಭಿಸಬೇಕೆಂಬ ಒತ್ತಡ ಹೆಚ್ಚಾಗಿದೆ.
04:30 PM (IST) Jul 29
ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್ ಪೊನ್ನಣ್ಣ ನಟನೆಯ ಹೊಸ ಸಿನಿಮಾ ‘ಬುಲ್ಲಿ’ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.
04:11 PM (IST) Jul 29
ಸಿನಿಮಾದಲ್ಲಿ ಹೆಚ್ಚು ಖರ್ಚಾಗುವುದು ಸಂಭಾವನೆ ವಿಚಾರದಲ್ಲಿ. ಹೀರೋ ಸೇರಿದಂತೆ ಎಲ್ಲರೂ ಸಂಭಾವನೆಯಲ್ಲಿ ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಚಿತ್ರಕ್ಕೇ ಹೂಡಿಕೆ ಮಾಡಬೇಕು ಎಂದರು ನಿರ್ದೇಶಕ ಕಿರಣ್ ರಾಜ್.
03:52 PM (IST) Jul 29
ದೇಶಾದ್ಯಂತ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಹಾಗೂ ಸಂಚಲನ ಮೂಡಿಸಿದ್ದ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
02:36 PM (IST) Jul 29
02:36 PM (IST) Jul 29
02:33 PM (IST) Jul 29
ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಸದ್ಯ 2 ಲಕ್ಷ ಕೋಟಿ ಗಡಿ ತಲುಪಿರುವ ಐಪಿಎಲ್ ವ್ಯಾಲ್ಯೂ ಹೊಸ ದಾಖಲೆ ಬರೆದಿದೆ. ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಎಷ್ಟು?
02:19 PM (IST) Jul 29
ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ.
01:24 PM (IST) Jul 29
12:52 PM (IST) Jul 29
'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ಚರ್ಚೆ ಜೋರಾಗಿದೆ!
12:12 PM (IST) Jul 29
ಕಾಲ್ತುಳಿತ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಸಾರಾ ಮಹೇಶ್, ಈ ದುರಂತಕ್ಕೆ ಯಾರು ಹೊಣೆ ಎಂದು ಸರ್ಕಾರಕ್ಕೆ ತರಾಟೆ.. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ವಿಐಪಿ ದರ್ಶನದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಮನವಿ
11:52 AM (IST) Jul 29
11:51 AM (IST) Jul 29
ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಬ್ರಹ್ಮ ಮುಹೂರ್ತದಲ್ಲಿ ಆಗಲಿದೆ. ಜುಲೈ 30ರಂದು ಬೆಳ್ಳಂಬೆಳಿಗ್ಗೆ ಬ್ರಹ್ಮ ಮಹೂರ್ತದಲ್ಲಿ ನಮ್ಮ ರಾಮಾಯಣದ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ರಾಮಾಯಣ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಯಾಗಿದೆ. ಎಷ್ಟು ಗಂಟೆಗೆ? ಇಲ್ಲಿ ನೋಡಿ..
10:40 AM (IST) Jul 29
10:30 AM (IST) Jul 29
09:40 AM (IST) Jul 29
09:01 AM (IST) Jul 29
ನಮ್ಮ ಮೆಟ್ರೋದಲ್ಲಿ 2012ರಿಂದ ಇಲ್ಲಿಯವರೆಗೆ ಆತ್ಮHತ್ಯೆ, ಆಕಸ್ಮಿಕ ಪತನ ಸೇರಿದಂತೆ ಒಟ್ಟು 59 ಹಳಿ ಸಂಬಂಧಿತ ಅಹಿತಕರ ಘಟನೆಗಳು ವರದಿಯಾಗಿವೆ. ಹೆಚ್ಚುತ್ತಿರುವ ದುರ್ಘಟನೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ (PSD) ಅಳವಡಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಬಿಎಂಆರ್‌ಸಿಎಲ್ ಸದ್ಯಕ್ಕೆ ಪ್ರಮುಖ ನಿಲ್ದಾಣಗಳಲ್ಲಿ ಉಕ್ಕಿನ ಬ್ಯಾರಿಕೇಡ್‌ಗಳನ್ನು ಅಳವಡಿಸಿದೆ.
08:40 AM (IST) Jul 29
ಭಾರತೀಯ ಸಂಸ್ಕೃತಿಯಲ್ಲಿ ಗುರು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವ ದಿವ್ಯಶಕ್ತಿಯಾಗಿದ್ದಾರೆ. ವೇದವ್ಯಾಸರಿಂದ ಆರಂಭವಾದ ಗುರುಪರಂಪರೆಯು ಇಂದಿನ ಆಧುನಿಕ ಯುಗದಲ್ಲೂ ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ತಿಳಿಸಿ, ಬದುಕಿಗೆ ದಾರಿ ತೋರುತ್ತದೆ.
08:18 AM (IST) Jul 29
ಯೂಟ್ಯೂಬ್(Youtube)ನಲ್ಲಿ ಕಳ್ಳತನ ಕೃತ್ಯಗಳ ವಿಡಿಯೋ ನೋಡಿ ಮೊಬೈಲ್ ಮಾರಾಟ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನೊಬ್ಬನನ್ನು ಎಚ್ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.