Published : Jun 27, 2026, 07:01 AM ISTUpdated : Jun 27, 2026, 06:46 PM IST

Karnataka News Live: Daali Dhananjaya - ತಾಯಿ ಸೆಂಟಿಮೆಂಟ್‌, ಗ್ಯಾಂಗ್‌ವಾರ್‌, ಕ್ರಿಕೆಟ್ ಬೆಟ್ಟಿಂಗ್... 'ಮದರ್ ಪ್ರಾಮಿಸ್'ನಲ್ಲಿ ಏನಿದೆ?

ಸಾರಾಂಶ

ಎರಡು ದಿನಗಳ ಭೇಟಿಗಾಗಿ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಇಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.ಕೆಂಪೇಗೌಡ 517ನೇ ದಿನಾಚರಣೆ ಯಲ್ಲಿ ಉಪ ರಾಷ್ಟ್ರಪತಿ ಭಾಗಿಯಾಗಲಿದ್ದಾರೆ. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿ ವಿ ಸಂಸ್ಥಾಪನ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. ಗ್ಯಾಸ್ ಬೆಲೆ ಇಳಿಕೆಗೆ ಹೊಟೆಲ್ ಅಸೋಸಿಯೇಶನ್ ಸಂತಸ, ರಾಜ್ಯ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆ, ಕರ್ನಾಟಕ ಬಿಜೆಪಿಯ ಸಂಕಷ್ಟ ಸೇರಿದಂತೆ ಇಂದಿನ ಪ್ರತಿ ಕ್ಷಣದ ಲೈವ್ ಅಪ್‌ಡೇಟ್ ಸುದ್ದಿ ಇಲ್ಲಿದೆ.

Mother Promise

06:46 PM (IST) Jun 27

Daali Dhananjaya - ತಾಯಿ ಸೆಂಟಿಮೆಂಟ್‌, ಗ್ಯಾಂಗ್‌ವಾರ್‌, ಕ್ರಿಕೆಟ್ ಬೆಟ್ಟಿಂಗ್... 'ಮದರ್ ಪ್ರಾಮಿಸ್'ನಲ್ಲಿ ಏನಿದೆ?

Mother Promise: ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ 'ಮದರ್ ಪ್ರಾಮಿಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ನೇಹ, ಗ್ಯಾಂಗ್‌ವಾರ್‌, ತಾಯಿ-ಮಗನ ಭಾವನಾತ್ಮಕ ಕಥೆಯೊಂದಿಗೆ ಜುಲೈ 10ರಂದು ಸಿನಿಮಾ ಬಿಡುಗಡೆಯಾಗಲಿದೆ.

Read Full Story

06:28 PM (IST) Jun 27

Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ತೀವ್ರ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) 2.18 ಕಿ.ಮೀ ಉದ್ದದ ಕಿರು ಸುರಂಗ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಮಣ್ಣು ಪರೀಕ್ಷೆ ಆರಂಭವಾಗಿದೆ,

Read Full Story

06:12 PM (IST) Jun 27

Shivamogga - ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ; ಕರಗಿದ ಜಲರಾಶಿ, ರಾಜ್ಯಕ್ಕೆ ಎದುರಾಗಲಿದೆಯೇ ಪವರ್ ಕಟ್ ಭೀತಿ?

ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಕೆಪಿಸಿಎಲ್ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

Read Full Story

06:12 PM (IST) Jun 27

8 ಗಂಟೆ ಮೇಕಪ್‌, ನಿದ್ದೆಯೇ ಇಲ್ಲ... 'ನಾಗಬಂಧಂ'ಗಾಗಿ KGF ಗರುಡ ರಾಮ್ ಪಟ್ಟ ಕಷ್ಟ ಏನು?

Nagabandham ಸಿನಿಮಾದಲ್ಲಿ ಗರುಡ ರಾಮ್ 8 ಗಂಟೆ ಮೇಕಪ್ ಮಾಡಿಕೊಂಡು ನಟಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ರಹಸ್ಯ ಆಧಾರಿತ ಈ ಪ್ಯಾನ್ ಇಂಡಿಯಾ ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.

Read Full Story

05:57 PM (IST) Jun 27

Uttara kannada ಇತಿಹಾಸಕ್ಕೆ ಹೊಸ ತಿರುವು ನೀಡಿದ ಹೊನ್ನಾವರ ಕಡತೋಕೆ ಶಾಸನದ ಮರು ಸಂಶೋಧನೆ!

ಹೊನ್ನಾವರದ ಕಡತೋಕೆ ಶಿಲಾಶಾಸನದ ಮರು-ಅಧ್ಯಯನವು ಐತಿಹಾಸಿಕ ಸತ್ಯವನ್ನು ಬಹಿರಂಗಪಡಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ 'ಕಡತೋಕೆಯ ದೇವರು' ದೇವಸ್ಥಾನದ ಮೂರ್ತಿಯಲ್ಲ, ಬದಲಿಗೆ ಸ್ವರ್ಣವಲ್ಲಿ ಮಠದ 26ನೇ ಯತಿಗಳಾದ ಶ್ರೀ ವಿಶ್ವವಂದ್ಯ ಸರಸ್ವತೀ ಸ್ವಾಮೀಜಿ ಎಂದು ಸಂಶೋಧಕ ಶ್ಯಾಮಸುಂದರ ಗೌಡರು ಸಾಬೀತುಪಡಿಸಿದ್ದಾರೆ. ಈ ಸಂಶೋಧನೆಯು ಶಾಸನದ ಕಾಲವನ್ನು ನಿಖರವಾಗಿ ನಿರ್ಣಯಿಸಿ, ಗುರು ಪರಂಪರೆಯ ಇತಿಹಾಸವನ್ನು ಪರಿಷ್ಕರಿಸಿದೆ.
Read Full Story

05:47 PM (IST) Jun 27

Priya Anand Interview - ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ - ಪ್ರಿಯಾ ಆನಂದ್‌

Priya Anand Interview: 'ಬಲರಾಮನ ದಿನಗಳು' ಚಿತ್ರದ ಬಗ್ಗೆ, ವಿನೋದ್ ಪ್ರಭಾಕರ್ ಜೊತೆಗಿನ ಅನುಭವ, ಪುನೀತ್ ರಾಜ್‌ಕುಮಾರ್ ನೆನಪುಗಳು ಮತ್ತು ಕನ್ನಡ ಚಿತ್ರರಂಗದ ಕುರಿತು ಪ್ರಿಯಾ ಆನಂದ್ ವಿಶೇಷ ಸಂದರ್ಶನ.

Read Full Story

05:45 PM (IST) Jun 27

ಪತ್ನಿ ದೂರು ಕೊಟ್ಟ ತಕ್ಷಣ ಪತಿ ಬಂಧನ - ಅರೆಸ್ಟ್​ ನಿಮಗೆ ಆಟನಾ? ಪೊಲೀಸರ ಬೆವರಿಳಿಸಿದ ಹೈಕೋರ್ಟ್​

ಪತ್ನಿಯ ನಕಲಿ ದಾಖಲೆ ಮತ್ತು ವಂಚನೆ ಆರೋಪದ ಮೇಲೆ ಪತಿಯನ್ನು ಬಂಧಿಸಿದ್ದ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನನ್ನು ದುರುಪಯೋಗಪಡಿಸಿಕೊಂಡು ನಾಗರಿಕರ ಜೀವನದೊಂದಿಗೆ ಆಟವಾಡುತ್ತಿದ್ದೀರಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪತಿಯನ್ನು ತಕ್ಷಣ ಬಿಡುಗಡೆ ಮಾಡಲು ಮತ್ತು ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.
Read Full Story

05:32 PM (IST) Jun 27

Vijayanagara - ಧರ್ಮಸಾಗರದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಾಸನ ಪತ್ತೆ, ಆದಿಮಾನವರ ವಾಸಸ್ಥಾನದ ಕುರುಹು ಪತ್ತೆ!

ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಸಂಶೋಧನಾ ತಂಡವೊಂದು ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನ, ಆದಿಮಾನವರು ಬಳಸುತ್ತಿದ್ದ ಕಲ್ಲುಗೊಡಲಿಗಳು ಮತ್ತು 101 ಲಿಂಗಗಳಿರುವ ವಿಶಿಷ್ಟ ಗುಡಿಯನ್ನು ಪತ್ತೆಹಚ್ಚಿದೆ. ಈ ಅನ್ವೇಷಣೆಯು ವಿಜಯನಗರ ಕಾಲದ ಇತಿಹಾಸ ಮತ್ತು ಪ್ರಾಗೈತಿಹಾಸಿಕ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.
Read Full Story

05:14 PM (IST) Jun 27

Vinod Prabhakar Interview - 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?

Vinod Prabhakar: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಪಾತ್ರವಾಗಿಯೇ ಬದುಕಿದ್ದೇನೆ. 'ಸ್ಕ್ರಿಪ್ಟ್‌ನೇ ಹೀರೋ', 13 ಕೋಟಿ ಬಜೆಟ್ ಸಿನಿಮಾ, 'ಮಾದೇವ' ಯಶಸ್ಸು ಮತ್ತು ನಿರ್ದೇಶನದ ಕನಸಿನ ಬಗ್ಗೆ ವಿನೋದ್ ಪ್ರಭಾಕರ್ ವಿಶೇಷ ಸಂದರ್ಶನ.

Read Full Story

05:13 PM (IST) Jun 27

ಅಭಿವೃದ್ಧಿಯ ಗಂಧಗಾಳಿಯೇ ಗೊತ್ತಿಲ್ಲದ ಅಧಿಕಾರಿಗಳು ಕಟ್ಟಿದ ಹೈಟೆಕ್‌ ಸ್ಮಶಾನ, 'ಬೆಂಗಳೂರಿನ ಅಂಡರ್‌ಗ್ರೌಂಡ್ ಎಸಿ ಮಾರ್ಕೆಟ್‌'!

ಬೆಂಗಳೂರಿನ 'ಕೃಷ್ಣದೇವರಾಯ ಪಾಲಿಕೆ ಬಜಾರ್' ಎಂಬ ₹14 ಕೋಟಿ ವೆಚ್ಚದ ಹವಾನಿಯಂತ್ರಿತ ಭೂಗತ ಮಾರುಕಟ್ಟೆಯು ಉದ್ಘಾಟನೆಯಾಗಿ 23 ತಿಂಗಳು ಕಳೆದರೂ ಜನರಿಲ್ಲದೆ ಭಣಗುಡುತ್ತಿದೆ. ವ್ಯಾಪಾರಿಗಳ ನಿರಾಸಕ್ತಿಯಿಂದಾಗಿ ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾಕ್ಷಿಯಾಗಿದೆ.

Read Full Story

04:58 PM (IST) Jun 27

ಬೆಂಗಳೂರಲ್ಲಿ ಕಿಡ್ನಾಪ್, ತುಮಕೂರಲ್ಲಿ ಕಾರ್ ಬ್ಲಾಸ್ಟ್ - ಪಾಗಲ್ ಪ್ರೇಮಿ ಸಜೀವ ದಹನ, ಸಿನಿಮೀಯ ರೀತಿ ಬದುಕಿದ ಯುವತಿ!

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬೆಂಗಳೂರಿನಿಂದ ಯುವತಿಯನ್ನು ಅಪಹರಿಸಿದ್ದ ಯುವಕ, ತುಮಕೂರು ಬಳಿ ಚಲಿಸುವ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಯುವಕ ಕಾರಿನಲ್ಲೇ ಸಜೀವ ದಹನವಾಗಿದ್ದಾನೆ.
Read Full Story

04:55 PM (IST) Jun 27

Simple Suni Interview - ಈ ಕತೆಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಚಿತ್ರವೇ ಸ್ಫೂರ್ತಿ - ಸಿಂಪಲ್‌ ಸುನಿ

Simple Suni Interview: 'ಮೋಡ ಕವಿದ ವಾತಾವರಣ' ಚಿತ್ರದ ಕಥೆ ಹೇಗೆ ಹುಟ್ಟಿತು? ಶೀಲಂ ಹೀರೋ ಆದದ್ದು ಹೇಗೆ? ದಿಗಂತ್ ಜೊತೆ ಅಂಡರ್‌ವರ್ಡ್ ಸಿನಿಮಾ ಯೋಜನೆ ಏನು? ಸಿಂಪಲ್‌ ಸುನಿ ವಿಶೇಷ ಸಂದರ್ಶನ ಓದಿ.

Read Full Story

04:42 PM (IST) Jun 27

Aditi AI Film - ಶೂಟಿಂಗ್ ಇಲ್ಲದೆ ಸಿನಿಮಾ? ಎಐ ಮೂಲಕ ಸಿದ್ಧವಾದ ಟೆಲಿಚಿತ್ರ 'ಅದಿತಿ'ಯಲ್ಲಿ ಏನಿದೆ?

Aditi AI Film: ಎಐ ತಂತ್ರಜ್ಞಾನ ಬಳಸಿ ಪಿ.ವಿ. ಪ್ರದೀಪ್ ಕುಮಾರ್ ನಿರ್ದೇಶಿಸಿರುವ ಕನ್ನಡ ಟೆಲಿಚಿತ್ರ 'ಅದಿತಿ' ಮಂಗಳೂರಿನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್, ಆಕ್ಷನ್ ಮತ್ತು ಪ್ರೇಮಕಥೆಯೊಂದಿಗೆ ಹೊಸ ಪ್ರಯೋಗ.

Read Full Story

04:24 PM (IST) Jun 27

ಗಂಡ, ಇಬ್ಬರು ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ ಬಂದಿದ್ದ ಮಹಿಳೆ ನಿಗೂಢ ಕೊ*; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಬೆಂಗಳೂರಿನ ಜಿಗಣಿಯಲ್ಲಿ, ಪತಿ-ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಅಕ್ಷತಾ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊ* ಮಾಡಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊ* ಬಳಿಕ ಪ್ರಿಯಕರ ನಾನಾ ಸಾಹೇಬ್ ಪರಾರಿಯಾಗಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

04:21 PM (IST) Jun 27

Balaramana Dinagalu Review - 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ಮರಿ ಟೈಗರ್ ಆರ್ಭಟ!

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಜಗತ್ತು, ವಿನೋದ್ ಪ್ರಭಾಕರ್ ಅಭಿನಯ ಮತ್ತು ಕೆ.ಎಂ. ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಮತ್ತು ರೇಟಿಂಗ್ ಓದಿ.

Read Full Story

04:17 PM (IST) Jun 27

Kiccha Sudeep Caravan - ಅಬ್ಬಬ್ಬಾ.. 6.5 ಕೋಟಿ ರೂ ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್!

Actor Kiccha Sudeep News: ಭಾರತದಲ್ಲಿ ಸಾಕಷ್ಟು ದಿಗ್ಗಜರು ಸ್ವಂತ ಕ್ಯಾರವಾನ್‌ ಹೊಂದಿರುತ್ತಾರೆ. ಅದರಲ್ಲಿ ಬಾತ್‌ರೂಮ್‌, ಬೆಡ್‌, ಕಿಚನ್‌ ಸೇರಿದಂತೆ ಕೆಲ ಸೌಲಭ್ಯಗಳು ಇರುತ್ತವೆ. ಈಗ ನಟ ಕಿಚ್ಚ ಸುದೀಪ್‌ ಅವರು ಕ್ಯಾರವಾನ್‌ ಖರೀದಿ ಮಾಡಿದ್ದಾರೆ.

 

Read Full Story

04:05 PM (IST) Jun 27

Moda Kavida Vatavarana Review - ಮಳೆ, ಮಂಜು, ಹಸಿರು ಬೆಟ್ಟಗಳ ನಡುವೆ ಸಿಂಪಲ್ ಸುನಿ ಮ್ಯಾಜಿಕ್!

Moda Kavida Vatavarana Review: ಮಳೆ, ಹಸಿರು ಬೆಟ್ಟಗಳು, ಕಾವ್ಯಾತ್ಮಕ ನಿರೂಪಣೆ ಮತ್ತು ಸಸ್ಪೆನ್ಸ್‌ ಕಥೆಯೊಂದಿಗೆ ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಹಾಗೂ ರೇಟಿಂಗ್ ಓದಿ.

Read Full Story

03:50 PM (IST) Jun 27

ತುಮಕೂರು - ಕ್ಯಾಬ್ ಮಾಡಿ ಉತ್ತರಕನ್ನಡಕ್ಕೆ ಯುವತಿ ಜತೆ ಹೊರಟ ಯುವಕ ಕಾರೊಳಗೆ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಾವು!

ತುಮಕೂರು ಜಿಲ್ಲೆಯ ಶಿರಾ ಬಳಿ, ಚಲಿಸುತ್ತಿದ್ದ ಕಾರಿನಲ್ಲಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ. ಈ ಭೀಕರ ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Read Full Story

03:43 PM (IST) Jun 27

ನಾಯಕನಾದ ಮೊದಲ ಪಂದ್ಯದಲ್ಲೇ ಸೋಲು..! ಕೆಟ್ಟ ದಾಖಲೆ ಬೆನ್ನಲ್ಲೇ ಗುಡುಗಿದ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಸೋತಿದ್ದು, ನಾಯಕನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಕೆಟ್ಟ ದಾಖಲೆ ಬರೆದಿದ್ದಾರೆ. ಈ ಮೂಲಕ, ನಾಯಕರಾದ ಮೊದಲ ಪಂದ್ಯದಲ್ಲೇ ಸೋತ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಅವರ ಸಾಲಿಗೆ ಅಯ್ಯರ್ ಸೇರಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅಯ್ಯರ್, ತಂಡದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದಾರೆ.
Read Full Story

03:12 PM (IST) Jun 27

Bidadi Township - ಸಿಎಂ ಡಿಕೆಶಿಗೆ ಒಂದು ಕುರ್ಚಿ ಮೀಸಲಿಟ್ಟು ಕಾದು ಕುಳಿತ ಹೆಚ್‌ಡಿಕೆ! ಮಳೆ ನಡುವೆ ಭಾಷಣ ಕೇಳುತ್ತ ನಿಂತ ರೈತರು!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿ, ಅವರಿಗಾಗಿ ಖಾಲಿ ಕುರ್ಚಿ ಇಟ್ಟು ಕಾದರು. ರೈತರ ಭೂಮಿ ಉಳಿಸುವ ಹೋರಾಟವನ್ನು ಮುಂದುವರೆಸುವುದಾಗಿ ಅವರು ಭರವಸೆ.

Read Full Story

02:56 PM (IST) Jun 27

Bengaluru - ಯಾರಾದ್ರು ಮಲಯಾಳಿ ಇದ್ರೆ ನನ್ನ ಸಪೂರ್ಟ್‌ಗೆ ಬನ್ನಿ, ಕನ್ನಡಿಗನ ಮೇಲೆ ಹಲ್ಲೆ ನಡೆಸಿ ಕೇರಳ ಯುವಕನ ಪುಂಡಾಟ!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ, ಡ್ರಗ್ಸ್ ಅಮಲಿನಲ್ಲಿದ್ದ ಇಬ್ಬರು ಮಲಯಾಳಿ ಯುವಕರು ಖಾಸಗಿ ಜಾಗಕ್ಕೆ ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ನಿವೃತ್ತ ಕಂಡಕ್ಟರ್ ಸೇರಿದಂತೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಅವರ ಬ್ಯಾಗ್‌ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
Read Full Story

02:44 PM (IST) Jun 27

ಧರ್ಮಸ್ಥಳ ಪ್ರಕರಣ, ಬುರುಡೆ ಗ್ಯಾಂಗ್‌ನಲ್ಲಿದ್ದ ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವಹೇಳನ ಹೇಳಿಕೆ ಹಿನ್ನಲೆಯಲ್ಲಿ ಸೌಜನ್ಯ ಮಾವ ವಿಠಲ ಗೌಡಗೆ ಬಂಧನ ವಾರೆಂಟ್ ಜಾರಿಯಾಗಿದೆ.ಆದರೆ ವಿಠಲ ಗೌಡ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Read Full Story

02:28 PM (IST) Jun 27

Ba Ma Harish Son Death - ನಿಶ್ಚಿತಾರ್ಥ ಮಾಡ್ಕೊಂಡಿದ್ದ ಬಾ ಮಾ ಹರೀಶ್‌ ಪುತ್ರ 28ರ ಉಲ್ಲಾಸ್‌ ಗೌಡ ನಿಧನ

Producer Ba Ma Harish Son Ullas Gowda Deat: ‘ಮೆಜೆಸ್ಟಿಕ್’ , ‘ಮಿ ಬಕ್ರಾ’, ‘ಮಾಗಡಿ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಬಾ ಮಾ ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿಯೂ ಆಕ್ಟಿವ್‌ ಆಗಿದ್ದ ಉಲ್ಲಾಸ್‌ ಗೌಡ ಅವರಿಗೆ 28 ವರ್ಷ ವಯಸ್ಸಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಲ್ಲಾಸ್‌ ಈಗ ಇಹಲೋಕ ತ್ಯಜಿಸಿದ್ದಾರೆ.

 

Read Full Story

01:41 PM (IST) Jun 27

ಮಹಿಳೆ ಕಟ್ಟಿಹಾಕಿ ಹಲ್ಲೆ ಪ್ರಕರಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್

ಮಲ್ಪೆ ಬಂದರಿನಲ್ಲಿ ಮಹಿಳೆ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅವರ ಭಾಷಣದಲ್ಲಿ ಗಲಭೆ ಸೃಷ್ಟಿಸುವ ಯಾವುದೇ ಕ್ರಿಮಿನಲ್ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ವಜಾಗೊಳಿಸಿ ಆದೇಶಿಸಿದೆ.
Read Full Story

12:31 PM (IST) Jun 27

ಬೆಂಗಳೂರು - ಶೆಡ್‌ ಒಂದರಲ್ಲಿ ಇಟ್ಟಿದ್ದ ಬರೋಬ್ಬರಿ 3 ಕೋಟಿ ನಗದು ಹಣ ಪತ್ತೆ! ಹಣದ ಮೂಟೆ ನೋಡಿ ಪೊಲೀಸರೇ ಶಾಕ್

ಬೆಂಗಳೂರಿನ ಕುರುಬರಹಳ್ಳಿಯ ಶೆಡ್‌ ಒಂದರ ಮೇಲೆ ದಾಳಿ ನಡೆಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ದಾಖಲೆಗಳಿಲ್ಲದ ಸುಮಾರು 3 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಹಣವನ್ನು ಬಚ್ಚಿಟ್ಟಿದ್ದ ಆರೋಪದ ಮೇಲೆ ನಾಗರಾಜ್ ಮತ್ತು ವೆಂಕಟೇಶ್ ಎಂಬುವವರನ್ನು ಬಂಧಿಸಲಾಗಿದ್ದು, ಹಣದ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.
Read Full Story

10:35 AM (IST) Jun 27

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!

ಮಂಗಳೂರಿನಿಂದ ಬಾಂದ್ರಾ ಟರ್ಮಿನಸ್‌ಗೆ ಹೊಸ ರೈಲು ಸೇವೆ ಆರಂಭಿಸುವ ಪ್ರಸ್ತಾವನೆ ಸಕಾರಾತ್ಮಕ ಹಂತದಲ್ಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಐದು ದಿನಗಳ ಕಾಲ ನಿಲ್ಲುವ ರಾಮೇಶ್ವರಂ ರೈಲಿನ ರೇಕ್ ಅನ್ನು ಈ ಸೇವೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
Read Full Story

10:34 AM (IST) Jun 27

Mumbai Rains - ₹1 ಲಕ್ಷ ಮನೆ ಬಾಡಿಗೆ ಕೊಟ್ಟು , 30ನೇ ಮಹಡಿಗೆ ಮೆಟ್ಟಿಲು ಹತ್ತುವ ಮುಂಬೈ ನಟನ ವಿಡಿಯೋ ವೈರಲ್, ಇದೇನಿದು ಗೋಳು?

ಮುಂಬೈನ ನಟನೊಬ್ಬ ಹಂಚಿಕೊಂಡ ವಿಡಿಯೋ ಭಾರೀ ವೈರಲ್ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುವ ಐಷಾರಾಮಿ ಮನೆ ಅದು. ಆದರೆ ದಿನನಿತ್ಯ ಮೂವತ್ತು ಮಹಡಿ ಹತ್ತಿ ಇಳಿಯಬೇಕಾದ ಪರಿಸ್ಥಿತಿ. ಯಾಕೆ ಅಷ್ಟೊಂದು ಮಹಡಿ ಮೆಟ್ಟಿಲು ಹತ್ತಬೇಕು ಅಂತೀರಾ? ಲಿಫ್ಟ್ ಇದೆ ಆದರೆ..

Read Full Story

10:02 AM (IST) Jun 27

EV vs CNG - ಇವಿ ಮತ್ತು ಸಿಎನ್‌ಜಿ ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದು ಖರೀದಿಸಿದರೆ ಹೆಚ್ಚು ಲಾಭ?

Electric Car vs CNG Car : ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಹೊಸ ಕಾರು ಖರೀದಿಸುವವರು ಎಲೆಕ್ಟ್ರಿಕ್ ವೆಹಿಕಲ್ (EV) ಅಥವಾ ಸಿಎನ್‌ಜಿ (CNG) ಕಾರುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಯಾವುದು ಹೆಚ್ಚು ಲಾಭ ತಂದುಕೊಡುತ್ತದೆ? ಯಾವುದರ ನಿರ್ವಹಣಾ ವೆಚ್ಚ ಕಡಿಮೆ?

Read Full Story

09:54 AM (IST) Jun 27

ಇಂದು ಎಸ್‌.ಎಂ. ಕೃಷ್ಣ ರಸ್ತೆ ಉದ್ಘಾಟನೆ - ಬೆಂಗಳೂರಿನಲ್ಲಿ 60 ನಿಮಿಷದ ಪ್ರಯಾಣ ಇನ್ನು 15 ನಿಮಿಷಕ್ಕೆ

ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಎಸ್‌.ಎಂ.ಕೃಷ್ಣ ದಶಪಥ ರಸ್ತೆ ಉದ್ಘಾಟನೆಗೊಳ್ಳಲಿದೆ. ಈ ನೂತನ ರಸ್ತೆಯು 60 ನಿಮಿಷಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಗಳಿಗೆ ಇಳಿಸಲಿದೆ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಈ ರಸ್ತೆಯನ್ನು ಉದ್ಘಾಟಿಸಲಾಗುತ್ತಿದೆ.
Read Full Story

09:06 AM (IST) Jun 27

Varuna Mitra Helpline ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?

  • ವಿಶ್ವನಾಥ ಮಲೇಬೆನ್ನೂರು

ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ

Read Full Story

08:35 AM (IST) Jun 27

ಸಂಸದರು, ಶಾಸಕರಿಗಾಗಿ ಹೈಪ್ರೊಫೈಲ್ ಕಾರ್ಯಾಗಾರ, ವಿಕ್ಷಿತ್ ಭಾರತ್‌ ನಿರ್ಮಾಣಕ್ಕೆ ಡಿಜಿಟಲ್ ಕೌಶಲ್ಯ

ಸಂಸದರು ಮತ್ತು ಶಾಸಕರಿಗಾಗಿ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಗುಲ್ಮೊಹರ್ ಹಾಲ್‌ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಲೋಕಸಭೆ, ರಾಜ್ಯಸಭೆ ಹಾಗೂ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 70 ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Read Full Story

08:28 AM (IST) Jun 27

''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ..' - ಪ್ರದೀಪ್‌ ಈಶ್ವರ್‌ಗೆ ಜೆಡಿಎಸ್ ಶಾಸಕ ಸವಾಲ್‌!

 ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್‌ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್‌ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.

Read Full Story

07:56 AM (IST) Jun 27

ಬೆಂಗಳೂರಲ್ಲಿ ಹೊಟೆಲ್‌ಗೆ ನುಗ್ಗಿ ಧಮ್ಕಿ, ಸಹಾಯಕ್ಕಾಗಿ ಕರೆ ಮಾಡಿದ ಮಾಲೀಕನ ಮೇಲೆ ಪೊಲೀಸ್ ಕೆಂಡಾಮಂಡಲ

ತಡ ರಾತ್ರಿ ಹೊಟೆಲ್ ಮುಚ್ಚಿದ ಬಳಿಕ ಊಟ ಕೊಟ್ಟಿಲ್ಲ ಎಂದು ಕಿಡಿಗೇಡಿಗಳು ಧಮ್ಕಿ ಹಾಕಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಸಹಾಯಕ್ಕಾಗಿ ಇನ್ಸ್‌ಪೆಕ್ಟರ್‌ಗೆ ಮಾಲೀಕ ಕರೆ ಮಾಡಿದರೆ, ಮಧ್ಯರಾತ್ರಿ ಕಾಲ್ ಮಾಡ್ತಿಯಾ ಕಾಮನ್ ಸೆನ್ಸ್ ಇಲ್ವಾ ಎಂದು ಕೆಂಡಾಮಲವಾದ ಘಟನೆ ನಡೆದಿದೆ.

Read Full Story

07:32 AM (IST) Jun 27

ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read Full Story

07:01 AM (IST) Jun 27

ಉಪ ರಾಷ್ಟ್ರಪತಿ ಆಗಮನದಿಂದ ಸಂಚಾರದಲ್ಲಿ ಕೆಲ ಬದಲಾವಣೆ

ಜೂನ್ 27 ರಿಂದ ಉಪ ರಾಷ್ಟ್ರಪತಿ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಕೆಂಪೇಗೌಡ ಜಯಂತಿ, ಆರೋಗ್ಯ ವಿವಿ ಸಂಸ್ಥಾಪನ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಪರಿಣಾಮ ಉಪರಾಷ್ಟ್ರಪತಿ ಕಾರ್ಯಕ್ರಮಗಳ ಸುತ್ತ ಮುತ್ತು ಟ್ರಾಫಿಕ್ ನಿರ್ಬಂಧಗಳು ಇರಲಿದೆ.


More Trending News