ಹುಬ್ಬಳ್ಳಿ : ಕಳೆದ ವಾರವಷ್ಟೇ ಮೂರು ಗಂಟೆಗೂ ಅಧಿಕ ಕಾಲ ಆಗಸದಲ್ಲಿ ಸುತ್ತಾಡಿ ಆತಂಕ ಸೃಷ್ಟಿಸಿದ್ದ ಫ್ಲೈ-91 ವಿಮಾನ ಹುಬ್ಬಳ್ಳಿಯಲ್ಲಿ ಶನಿವಾರ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಂಡುಬಂತು. 35 ನಿಮಿಷಕ್ಕೂ ಹೆಚ್ಚು ಅವಧಿ ಆಕಾಶದಲ್ಲೇ ಸುತ್ತಿ ಬಳಿಕ ಸುರಕ್ಷಿತವಾಗಿ ಕೆಳಕ್ಕಿಳಿಯಿತು.
10 ದಿನದಲ್ಲಿ ಇದು ಮೂರನೇಯ ಬಾರಿ ಈ ರೀತಿ ಆಗುತ್ತಿರುವುದು. ಫ್ಲೈ-91 ವಿಮಾನ ಸೇವೆ ಹಾಗೂ ಸೌಲಭ್ಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಈ ರೀತಿಯ ಘಟನೆಗಳು ಸಂಶಯವನ್ನು ಹುಟ್ಟು ಹಾಕುತ್ತಿವೆ.
ಐಸಿ 3401 ಫ್ಲೈಟ್ ಶನಿವಾರ ಮಧ್ಯಾಹ್ನ 3.13ಕ್ಕೆ ಹೈದರಾಬಾದ್‌ನಿಂದ ಹೊರಟಿತ್ತು. ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಉಂಟಾಗಿ ಬೆಳಗಾವಿ ಸೇರಿದಂತೆ ವಿವಿಧೆಡೆ ಆಗಸದಲ್ಲೇ ಸುತ್ತಾಡಿ, ಬಳಿಕ 5.09ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯಿತು.
ಈ ಬಗ್ಗೆ ಕೇಳಿದಾಗ ಫ್ಲೈ-91 ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಪಲೇಶ ಅವರು, ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ 35 ನಿಮಿಷ ತಡವಾಯಿತು ಎಂದು ಹೇಳಿದರು. ಪದೇ ಪದೇ ಫ್ಲೈ-91ಗೆ ಲ್ಯಾಂಡಿಂಗ್ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಕೆಲ ಪ್ರಯಾಣಿಕರು ವಿಮಾನದ ಸುರಕ್ಷತೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
07:10 PM (IST) Apr 27
06:27 PM (IST) Apr 27
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
05:40 PM (IST) Apr 27
Rihanna: ಪಾಪ್ ತಾರೆ ರಿಹಾನಾ ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭೇಟಿ ನೀಡಿ, ವಿಶೇಷ ಔತಣದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ, ರಿಲಯನ್ಸ್ ರೀಟೇಲ್‌ನ 'ಟೈರಾ' ಪ್ಲಾಟ್‌ಫಾರ್ಮ್ ಮತ್ತು ಸೆಫೊರಾ ಮೂಲಕ ಭಾರತದಲ್ಲಿ ತಮ್ಮ 'ಫೆಂಟಿ ಬ್ಯೂಟಿ' ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ.
05:24 PM (IST) Apr 27
ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
05:20 PM (IST) Apr 27
05:00 PM (IST) Apr 27
ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಈಗ AI, 'ಡಿಜಿಟಲ್ ಹವಾ ಜೋರಾಗಿದೆ. ಒಂದು ಕಡೆ ಕಂಪನಿಗಳು ತಾಂತ್ರಿಕವಾಗಿ ಮುಂದುವರಿದು, ಸಂಬಳ ಕೊಡಬೇಕು ಎಂದು ಉದ್ಯೋಗಿಗಳ ವಜಾ ಮಾಡಲಾಗಿದೆ. ಮೆಟಾ, ಮೈಕ್ರೋಸಾಫ್ಟ್, ಒರಾಕಲ್‌ನಂತಹ ಟೆಕ್ ಕಂಪೆನಿಗಳು ಲೇಆಫ್ ಮಾಡುತ್ತಿವೆ. ಈಗ ಅಕ್ಸಿಸ್ ಬ್ಯಾಂಕ್ ಕೂಡ ಲೇಆಫ್ ಮಾಡಿದೆ.
04:51 PM (IST) Apr 27
ಹಾಸನದ 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ.
04:17 PM (IST) Apr 27
Amazon Now 2800 Crore Rupees Investment: ಅಮೆಜಾನ್ ಕಂಪೆನಿಯು ಮಂಗಳೂರು, ಮೈಸೂರಿನತ್ತ ಕಾಲಿಟ್ಟಿದೆ. ಹೌದು, ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ರೆಡಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
03:38 PM (IST) Apr 27
02:46 PM (IST) Apr 27
Mamata Banerjee Vegetable Shopping Video: ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರು ತರಕಾರಿ ತಗೊಂಡು ದುಡ್ಡು ಕೊಡದೆ ಬಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
02:37 PM (IST) Apr 27
01:43 PM (IST) Apr 27
ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳವಿದ್ದರೂ, ಕರ್ನಾಟಕದ 65% ಕ್ಕಿಂತ ಹೆಚ್ಚು ಜನರಿಗೆ ಕನ್ನಡವೇ ಪ್ರಾಥಮಿಕ ಭಾಷೆಯಾಗಿದೆ. ಈ ಲೇಖನವು ರಾಜ್ಯದಲ್ಲಿ ಅತಿ ಹೆಚ್ಚು ಮಾತನಾಡುವ ಕನ್ನಡದ ನಂತರ ಯಾವ್ಯಾವ ಭಾಷೆ ಇವೆ ಎನ್ನುವುದು ಕುತೂಹಲವನ್ನು ತಿಳಿಸುತ್ತದೆ.
01:35 PM (IST) Apr 27
10ನೇ ತರಗತಿಯಲ್ಲಿ ಟಾಪರ್ ಆಗಿದ್ದಕ್ಕೆ ತನ್ನ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್, ಇದೀಗ ಪಿಯುಸಿಯಲ್ಲೂ 91.2% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಟ್ರೋಲ್‌ಗಳನ್ನು ಕಡೆಗಣಿಸಿ, ಅಧ್ಯಯನದತ್ತ ಗಮನಹರಿಸಿದ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.
01:02 PM (IST) Apr 27
12:51 PM (IST) Apr 27
Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್ ಅಥವಾ ಟರ್ಮಿನೇಟ್ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್ ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.
11:57 AM (IST) Apr 27
ಈ ಬಾರಿಯ SSLC ಪರೀಕ್ಷೆಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದರೂ, ಪ್ರಥಮ ಭಾಷೆ ಕನ್ನಡದಲ್ಲೇ ಸುಮಾರು 19 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಬೋಧನಾ ಕ್ರಮ, ಭಾಷೆಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತಕ್ಷಣದ ಪರಾಮರ್ಶೆಯ ಅಗತ್ಯವನ್ನು ಒತ್ತಿಹೇಳುತ್ತದೆ.
11:55 AM (IST) Apr 27
ಸಿನಿಮಾದಲ್ಲಿ ಅಷ್ಟೇ ಅಲ್ಲದೆ ನಿಜ ಜೀವನದಲ್ಲೂ ನಿತ್ಯಾ ಮೆನನ್ ಒಬ್ಬ 'ಬೋಲ್ಡ್ ಅಂಡ್ ಬ್ಯೂಟಿಫುಲ್' ಲೇಡಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬದುಕು ನಿಮ್ಮದು, ನಿರ್ಧಾರವೂ ನಿಮ್ಮದೇ ಎನ್ನುವ ನಿತ್ಯಾ ಮೆನನ್ ಅವರ ಈ ವೈಚಾರಿಕತೆಗೆ ನಿಮ್ಮ ಅಭಿಪ್ರಾಯವೇನು? ಭಿನ್ನ ಅಭಿಪ್ರಾಯಕ್ಕೂ ಬೆಲೆ ಇದೆ, ತಿಳಿಸಿ..
09:44 AM (IST) Apr 27
ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ನಾಲ್ವರು ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
09:01 AM (IST) Apr 27
08:49 AM (IST) Apr 27
08:38 AM (IST) Apr 27
ಧ್ರುವ ಸರ್ಜಾ ಅವರು ತೂಗುದೀಪ ಕುಟುಂಬದೊಂದಿಗಿನ ಸಂಬಂಧದ ಬಿರುಕಿನ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧ ಹಾಳಾಗಿಲ್ಲ, ಇಂತಹ ಸುಳ್ಳು ಸುದ್ದಿಗಳಿಂದ ನೋವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ವಿಷಯಗಳು ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡಲು ನಿರಾಕರಿಸಿದ್ದಾರೆ.
08:24 AM (IST) Apr 27
08:10 AM (IST) Apr 27
SSLC ಫಲಿತಾಂಶದಲ್ಲಿ ಕಡಿಮೆ ಅಂಕ ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಅವರಿಗಾಗಿ ಐಟಿಐ ಸೇರಿದಂತೆ ಹಲವಾರು ತರಬೇತಿ ಸಂಸ್ಥೆಗಳು ಉದ್ಯೋಗಾವಕಾಶದ ಬಾಗಿಲು ತೆರೆದಿವೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಬಹುದು.
07:59 AM (IST) Apr 27
ಗಜೇಂದ್ರಗಡ ತಾಲೂಕಿನ ವಿದ್ಯಾರ್ಥಿಗಳು SSLCಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದರೂ, ಉನ್ನತ ವ್ಯಾಸಂಗಕ್ಕೆ ಸ್ಥಳೀಯವಾಗಿ ಉತ್ತಮ ಕಾಲೇಜುಗಳಿಲ್ಲ. ಈ ಕಾರಣದಿಂದ ಪ್ರವೀಣಕುಮಾರ ಸೊಬಗಿನರಂತಹ ಪ್ರತಿಭೆಗಳು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಪಾಲಕರಿಗೆ ಆರ್ಥಿಕ ಹೊರೆಯಾಗಿದೆ.
07:14 AM (IST) Apr 27
06:50 AM (IST) Apr 27
06:40 AM (IST) Apr 27
06:31 AM (IST) Apr 27
ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಅಹಿಂದ ಸಂಘಟನೆಯು ರಾಜಕೀಯ ಲಾಭಕ್ಕಾಗಿ ಅಲ್ಲ, ಜನಜಾಗೃತಿಗಾಗಿ ಎಂದರು. ಇದು ಅಹಿಂದ ವರ್ಗದ ಎರಡನೇ ಹಂತದ ಹೋರಾಟವಾಗಿದ್ದು, ತಮ್ಮದೇ ಸರ್ಕಾರದಲ್ಲಿರುವ ಕೆಲವರು ಭರವಸೆ ಈಡೇರಿಸಲು ಬಿಡುತ್ತಿಲ್ಲ ಎಂದು ಹೇಳಿದರು.
06:05 AM (IST) Apr 27
05:59 AM (IST) Apr 27
ಅವ್ಯವಹಾರ, ಅಧರ್ಮ, ಅಪನಂಬಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮೂವರು ಟ್ರಸ್ಟಿಗಳನ್ನು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಈ ಕಠಿಣ ಕ್ರಮ ಕೈಗೊಂಡಿದ್ದು, ಸಂಘವೇ ಟ್ರಸ್ಟ್‌ಗಿಂತ ಸುಪ್ರೀಂ ಎಂದು ಪ್ರತಿಪಾದಿಸಿದೆ.
05:52 AM (IST) Apr 27
05:44 AM (IST) Apr 27
ಮಾಧುರಿ ಆರ್., 'ಗೃಹಲಕ್ಷ್ಮಿ ಯೋಜನೆ'ಯ ಹಣದಿಂದ ಟ್ಯೂಷನ್ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಶ್ಲಾಘಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುತ್ತಿವೆ ಎಂದು ಹೇಳಿದ್ದಾರೆ.
05:35 AM (IST) Apr 27
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪೊನ್ನಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಿ.ಸಿ.ರೋಡ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ವೈದ್ಯರ ಸಹಾಯದಿಂದ ಬೋಗಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.