ಮಂಡ್ಯ: ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ರೈತರೊಬ್ಬರ ಹಳ್ಳಿಕಾರ್ ಎತ್ತುಗಳು ಬರೋಬರಿ 9.01 ಲಕ್ಷಕ್ಕೆ ಮಾರಾಟವಾಗಿ ಗಮನ ಸೆಳೆದಿದೆ. ಗ್ರಾಮದ ಯುವ ರೈತ ಮನು ಅವರು ನಾಗಮಂಗಲದ ಹೂವಿನಹಳ್ಳಿಯ ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಅವರಿಗೆ 9.01 ಲಕ್ಷ ರು.ಗೆ ಒಂದು ಜೊತೆ ಹಳ್ಳಿಕಾರ್ ಎತ್ತುಗಳನ್ನು ಮಾರಾಟ ಮಾಡಿದ್ದಾರೆ.
ಮನು ಕಳೆದ ಐದು ತಿಂಗಳ ಹಿಂದೆ ಕನಕಪುರದ ಹಾರೋಹಳ್ಳಿ ತಾಲೂಕಿನ ಸೋಮನಹಳ್ಳಿ ಶ್ರೀನಿವಾಸ್ ಅವರಿಂದ 5.90 ಲಕ್ಷ ರು.ಗೆ ಖರೀದಿಸಿದ್ದರು. ಹಳ್ಳಿಕಾರ್ ರಾಸುಗಳ ಸಾಕಾಣಿಕೆಯನ್ನು ರೂಢಿಸಿಕೊಂಡಿದ್ದ ಮನು ಅವರು ಎತ್ತುಗಳನ್ನು ಹೂವಿನಹಳ್ಳಿ ಚಂದ್ರಣ್ಣರಿಗೆ 9.01 ಲಕ್ಷ ರು.ಗೆ ಮಾರಾಟ ಮಾಡಿದ್ದಾರೆ.
10:41 PM (IST) Oct 26
ಪ್ರಚೋದನಕಾರಿ ಭಾಷಣ, ವಿಚಾರಣೆಗೆ ಹಾಜರಾಗಲು ಕಲ್ಕಡ್ಕ ಪ್ರಭಾಕರ ಭಟ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪೊಲೀಸರು 31ಕ್ಕೆ ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.
09:59 PM (IST) Oct 26
ಕಿತ್ತೂರು ಉತ್ಸವದಲ್ಲಿ ಗಾಯಕ ಹಾಗೂ ಬಿಗ್‌ಬಾಸ್ ವಿನ್ನರ್ ಹನುಮಂತ್ ಅವರಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಿತ ವಿಡಿಯೋ ವೈರಲ್ ಆಗಿದೆ. ಸಮಯಾವಕಾಶ ಮೀರಿದರೂ ಹನುಮಂತ್ ಹಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
09:55 PM (IST) Oct 26
ತಾವರೆಕೆರೆ ಬಳಿ 300 ಎಕರೆಯಲ್ಲಿ ಡೇಟಾ ಸೆಂಟರ್ ನಿರ್ಮಾಣ, ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ, ಹೊಸಕೋಟೆ -ಕೋಲಾರ ಕೈಗಾರಿಕಾ ವಲಯದಲ್ಲಿ ಈ ಡೇಟಾ ಪಾರ್ಕ್ ತಲೆ ಎತ್ತಲಿದೆ. ಇದಕ್ಕಾಗಿ 1,000 ಏಕರೆ ಪ್ರದೇಶ ಕೈವಶ ಮಾಡಲು ತಯಾರಿ ನಡೆದಿದೆ.
09:34 PM (IST) Oct 26
ಆನೆ ಬೇಕು ಅಂತಾ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು, ಆದ್ರೆ ಹೊಸೂರು ಜನ ದಾರಿ ಮಾಡಿಕೊಡಲೇ ಇಲ್ಲ, ಆನೆ ಮರಿಯನ್ನು ಆಟ್ಟಾಡಿಸಿಕೊಂಡು ಹೋದ ಅತ್ಯಂತ ನೀಚ ಘಟನೆ ನಡೆದಿದೆ. ಸ್ಥಳೀಯರು ಇದಕ್ಕೆ ಸಾಥ್ ನೀಡುವುದು ಮತ್ತೊಂದು ದುರಂತ.
08:54 PM (IST) Oct 26
ಕಾರವಾರ ತಾಲೂಕಿನ ಗುಡ್ಡೆಹಳ್ಳಿಯ ಅರಣ್ಯ ಪ್ರದೇಶದಲ್ಲಿ, ಪ್ರಪಂಚದ ಅತಿದೊಡ್ಡ ಪತಂಗವಾದ “ಅಟ್ಲಾಸ್ ಮೋತ್” ಪತ್ತೆಯಾಗಿದೆ. ಈ ಪತಂಗವು ತನ್ನ ದೈತ್ಯಾಕಾರ, ಬಾಯಿಯಿಲ್ಲದ ವಿಶಿಷ್ಟ ಜೀವನಕ್ರಮ ಮತ್ತು ಅಲ್ಪಾವಧಿಯ ಜೀವನಚಕ್ರದಿಂದಾಗಿ ರೋಚಕವಾಗಿದೆ.
08:51 PM (IST) Oct 26
ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು ಮಾಡಲಾಗಿದೆ. ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪಂಚಾಯಿತಿ ಸದಸ್ಯನಿಗೆ ಚಿಕಿತ್ಸೆ ಮುಂದುವರಿದೆ.
08:11 PM (IST) Oct 26
ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಜಾರಕಿಹೊಳಿ ಸಹೋದರರ ಬೆಂಬಲಿತ ಪ್ಯಾನೆಲ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದೆ.
08:03 PM (IST) Oct 26
ಬೆಂಗಳೂರಿನ ತಿಲಕನಗರದಲ್ಲಿ ಸಲ್ಮಾ ಎಂಬ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಲ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು, ಆಕೆ ಬೇರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಾಳೆಂಬ ಅನುಮಾನದಿಂದ ಕೊಲೆ ಮಾಡಿ, ಶವವನ್ನು ಆಟೋದಲ್ಲಿ ಸಾಗಿಸಿರುವುದು ತನಿಖೆಯಿಂದ ದೃಢಪಟ್ಟಿದೆ.
07:31 PM (IST) Oct 26
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಕಾವ್ಯಾಳ ಮಾತಿನಂತೆ ಮೀಸೆ ತೆಗೆಸಿಕೊಂಡಿದ್ದಾರೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್, ಗಿಲ್ಲಿಯನ್ನು ಟ್ರೋಲ್ ಮಾಡಿದ ಫೋಟೋಗಳನ್ನು ತೋರಿಸಿ ತಮಾಷೆ ಮಾಡಿದ್ದಲ್ಲದೆ, ಸ್ವಂತ ನಿರ್ಧಾರ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.
07:00 PM (IST) Oct 26
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ, ಬೆಂಗಳೂರಿನ ಗಾಂಧಿನಗರದಲ್ಲಿ ಕಾಂಗ್ರೆಸ್ 'ವೋಟ್ ಚೋರಿ' ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಿತು. ಈ ಅಭಿಯಾನದ ಮೂಲಕ ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ.
06:44 PM (IST) Oct 26
06:42 PM (IST) Oct 26
male partner: ತನ್ನ ಆರು ವರ್ಷದ ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ತನ್ನ ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದಂತಹ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳ ಜೊತೆ ತನ್ನ ಸಲಿಂಗಿ ಸಂಗಾತಿ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ.
06:21 PM (IST) Oct 26
ಸೌದಿಯಲ್ಲಿ ಗುತ್ತಿಗೆ ಅವಧಿ ಮುಗಿದು ಜೈಲುಪಾಲಾಗಿ, ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಂಧ್ರಪ್ರದೇಶದ ವ್ಯಕ್ತಿಗೆ ಮಲಯಾಳಿ ನರ್ಸ್ ಮತ್ತು ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿವೆ. ಮಾನವೀಯ ನೆಲೆಯಲ್ಲಿ, ನರ್ಸ್ ಮೋನಿಷಾ ಸದಾಶಿವಂ ಅವರು ರೋಗಿಯೊಂದಿಗೆ ಬಂದು ಕುಟುಂಬಕ್ಕೆ ಒಪ್ಪಿಸಿದ್ದಾರೆ.
05:41 PM (IST) Oct 26
ನ.1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಿವೆ. ಈ ಸಂದರ್ಭದಲ್ಲಿ, ಮಲೆಯಾಳ ಭಾಷಾ ಹೇರಿಕೆ ವಿರೋಧ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸೇರಿದಂತೆ 18 ಪ್ರಮುಖ ಬೇಡಿಕೆಯನ್ನು ಕೇರಳ ಸಿಎಂಗೆ ಸಲ್ಲಿಸಲಾಗುವುದು.
05:11 PM (IST) Oct 26
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದೆ. ಕಾವ್ಯಾ ಮಾತಿಗೆ ಕ್ಲೀನ್ ಶೇವ್ ಮಾಡಿಸಿಕೊಂಡ ಗಿಲ್ಲಿಯನ್ನು, ದೀಪಾವಳಿ ದಿನ ಕಾವ್ಯಾಳನ್ನೇ ನೋಡುತ್ತಿದ್ದ ವಿಚಾರವಾಗಿ ಸುದೀಪ್ ತಮಾಷೆ ಮಾಡಿ ಕಾಲೆಳೆದಿದ್ದಾರೆ.
04:55 PM (IST) Oct 26
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಜಗಳಗಳು, ಕಾಮಿಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇದನ್ನು ರೀಲ್ಸ್ ಮಾಡುತ್ತಿದ್ದಾರೆ, ಡ್ಯಾನ್ಸ್ ಮಾಡುತ್ತಿದ್ದಾರೆ.
04:49 PM (IST) Oct 26
ಆಳ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ತೂಫಾನಿಗೆ ಸಿಲುಕಿದ್ದ ಗೋವಾದ “ಐಎಫ್‌ಬಿ ಸಂತ ಆಂಟನಿ” ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ. ಮೀನುಗಾರರನ್ನು ರಕ್ಷಿಸಿದ ನಂತರ ಹಾನಿಗೊಳಗಾದ ಬೋಟ್‌ನ್ನು ಹೊನ್ನಾವರ ಬಂದರಿಗೆ ಎಳೆದು ತರಲಾಯಿತು.
04:42 PM (IST) Oct 26
ಹೈಕೋರ್ಟ್ ಸ್ಥಳಾಂತರಕ್ಕೆ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ, ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಘೋಷಿಸಿದರು.
03:50 PM (IST) Oct 26
03:42 PM (IST) Oct 26
Donald Trump on Pakistan-Afghanistan conflict: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ- ಅಫ್ಘಾನಿಸ್ತಾನ ಸಂಘರ್ಷ ಶೀಘ್ರದಲ್ಲೇ ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮಲೇಷ್ಯಾದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತವು ಈಗಾಗಲೇ 8 ಯುದ್ಧ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ.
03:26 PM (IST) Oct 26
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರೊಂದಿಗೆ ಶನಿವಾರ ನ್ಯಾಯಮಿತ್ರ ಸಹಕಾರಿ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಬೆಳ್ಳಿ ಮಹೋತ್ಸವವು ಸ್ಥಿರತೆ, ಬಾಂಧವ್ಯ, ಬದ್ಧತೆ ಮತ್ತು ಸಾಧನೆಯ ಪ್ರತೀಕ" ಎಂದು ಹೇಳಿದರು
03:11 PM (IST) Oct 26
Bangalore techies driving cabs ಬೆಂಗಳೂರಿನಲ್ಲಿ ಅನೇಕ ಟೆಕ್ಕಿಗಳು ಹಗಲಿನ ಉದ್ಯೋಗದ ನಂತರ ರಾತ್ರಿಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂಟಿತನ ಮತ್ತು ಏಕತಾನತೆಯಿಂದ ಹೊರಬರಲು, ಹೊಸ ಜನರನ್ನು ಭೇಟಿಯಾಗಲು ಹಾಗೂ ಹೆಚ್ಚುವರಿ ಆದಾಯ ಗಳಿಸಲು ಅವರು ಈ ಮಾರ್ಗವನ್ನು ಕಂಡುಕೊಂಡಿದ್ದಾರೆ.
03:10 PM (IST) Oct 26
Amruthadhaare Tv Serial Epiosde: ಆಕಾಶ್ - ಮಿಂಚು ಕೋಳಿ ಜಗಳ, ಗೌತಮ್ - ಭೂಮಿ ಒಂದಾಗೋಕೆ ನಾಂದಿ ಹಾಡ್ತಿದೆ! ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಚಿಂತೆ ಶುರುವಾಗಿದೆ. ಹಾಗಾದರೆ ಮುಂದೆ ಏನಾಗುವುದು?
02:43 PM (IST) Oct 26
02:32 PM (IST) Oct 26
Salman Khan Balochistan controversy: ಸೌದಿ ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸಲ್ಮಾನ್ ಖಾನ್, ಬಲೂಚಿಸ್ತಾನವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯಿಂದ ಕೆರಳಿದ ಪಾಕಿಸ್ತಾನದ ಶಹಬಾಜ್ ಸರ್ಕಾರ, ಸಲ್ಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ.
02:26 PM (IST) Oct 26
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ. 26 ರಿಂದ ಜಾರಿಗೆ ಬರುವ ಚಳಿಗಾಲದ ಹೊಸ ವಿಮಾನಯಾನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೆಹಲಿಗೆ ಹೆಚ್ಚುವರಿ ದೈನಂದಿನ ವಿಮಾನ, ತಿರುವನಂತಪುರಂಗೆ ಹೊಸ ಸಂಚಾರ ಮತ್ತು ದಮಾಮ್, ದೋಹಾ, ಕುವೈತ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇರಿವೆ.
02:20 PM (IST) Oct 26
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯರ ದೀಪಾವಳಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯಕಾರಿ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇವರಿಗೆ ದೀಪಾವಳಿಗೆ ಸಾರ್ವತ್ರಿಕ ರಜೆ ಬೇಕಂತೆ ಇದೇನು ಭಾರತವೇ ಎಂದೂ ಪ್ರಶ್ನಿಸಿದ್ದಾರೆ. ಜೊತೆಗೆ, ದೀಪಾವಳಿಗೆ ಹಾಕುವ ಲೈಟಿಂಗ್ಸ್ ಕ್ರಿಸ್‌ಮಸ್‌ಗೆ ಏಕೆ ಹಾಕೊಲ್ಲ ಎಂದಿದ್ದಾರೆ.
02:12 PM (IST) Oct 26
01:59 PM (IST) Oct 26
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಇದೀಗ ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಉದ್ಯಮಿ ಮೋಹನ್ ದಾಸ್ ಪೈ ಅವರಂತಹ ಪ್ರಮುಖರು, ಡಿಕೆಶಿ ಅವರ 'ನಾಗರಿಕರೊಂದಿಗೆ ನಡಿಗೆ' ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ.
01:55 PM (IST) Oct 26
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಳೇ ಪ್ರದೇಶದಲ್ಲಿ, ಕಾಳಿ ನದಿಯ ತೀರದಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ಬೇಲಿಯನ್ನು ಬೃಹತ್ ಮೊಸಳೆಯೊಂದು ದಾಟಿ ಬಂದಿದೆ. ಬಟ್ಟೆ ಒಗೆಯುವ ಸ್ಥಳದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ವಾಪಸ್ ನದಿಗೆ ತೆರಳಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
01:36 PM (IST) Oct 26
Bigg Boss Kannada Season 12: ಕಿಚ್ಚ ಸುದೀಪ್ ಅವರು ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಯಾರ ಮೇಲೆ ಏನು ಅಭಿಪ್ರಾಯ ಇದೆ ಎಂದು ತಲೆ ಮೇಲೆ ಹೊಡೆದಂತೆ ಹೇಳಿ ಎಂದಿದ್ದರು. ಅದರಂತೆ ಸ್ಪರ್ಧಿಗಳು ಪರಸ್ಪರ ಆರೋಪ ಮಾಡಿದ್ದಾರೆ. ಈ ಬಾರಿ ಮಹಿಳಾ ಮಣಿಗಳ ಮಧ್ಯೆ ಜಗಳ ಶುರುವಾಗಿದೆ.
01:27 PM (IST) Oct 26
ಬೆಂಗಳೂರಿನ ಮೂಲಭೂತ ಸೌಕರ್ಯ ಸಮಸ್ಯೆಗಳ ಕುರಿತು ಉದ್ಯಮಿಗಳ ಆಕ್ಷೇಪದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್‌ದಾಸ್ ಪೈ ಸೇರಿ ಪ್ರಮುಖರೊಂದಿಗೆ ಸಭೆ ನಡೆಸಿದರು. ರಸ್ತೆ ಗುಂಡಿ, ಕಸ ವಿಲೇವಾರಿ, ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಕ್ರಿಯಾ ಯೋಜನೆ ರೂಪಿಸಲಾಯಿತು.
01:25 PM (IST) Oct 26
Naa Ninna Bidalaare serial: 'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ರಿಷಿಕಾ, ಶೂಟಿಂಗ್ ಬಿಡುವಿನಲ್ಲಿ ಸಹ-ಕಲಾವಿದರಿಗೆ "ಹಸುಗಳಿರೋ ಜಾಗದಲ್ಲಿ ಭೂಕಂಪವಾದ್ರೆ ಏನಾಗುತ್ತೆ?" ಎಂದು ತಮಾಷೆಯ ಒಗಟು ಕೇಳಿದ್ದಾರೆ.. ಈ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
01:23 PM (IST) Oct 26
ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ನಡೆದ 19 ದಿನಗಳ ಬಳಿಕ ಪೊಲೀಸರು ಪ್ರಮುಖ ಸೂತ್ರಧಾರಿಗಳಾದ ರವಿ ಹಾಗೂ ಗೌಳಿ ಗಂಗಾಧರ ಅವರನ್ನು ಬಂಧಿಸಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಗೆ ಸಂಚು ರೂಪಿಸಿದ್ದರು
01:00 PM (IST) Oct 26
Bigg Boss Rakshita Shetty New Home: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿದ್ದು, ಅನೇಕರ ಫೇವರಿಟ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ ಎಂದರೆ ನಂಬ್ತೀರಾ? ಇವರ ಹೊಸ ಮನೆಯ ಫೋಟೋಗಳಿವು!
12:51 PM (IST) Oct 26
Woman dies on her birthday: ಬೆಂಗಳೂರಿನ ವಿಜಯನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು 58 ವರ್ಷದ ಮಾಲಾ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮರುದಿನವೇ ಅವರ ಹುಟ್ಟುಹಬ್ಬವಿದ್ದು, ಸಂಭ್ರಮಿಸಬೇಕಿದ್ದ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.
12:28 PM (IST) Oct 26
12:19 PM (IST) Oct 26
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಪತ್ನಿ ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಪ್ರತೀಕಾರಕ್ಕೆ ಸಿದ್ಧನಾಗಿದ್ದಾನೆ. ಆದರೆ, ಅನಿರೀಕ್ಷಿತವಾಗಿ ಕಾಣಿಸಿಕೊಂಡ ಸುಂದರಿಯೊಬ್ಬಳು ಜಯಂತ್‌ನನ್ನು ಕಟ್ಟಿಹಾಕಿ ಟಾರ್ಚರ್ ನೀಡುತ್ತಾಳೆ. ಯಾರೀಕೆ?
12:03 PM (IST) Oct 26
11:55 AM (IST) Oct 26