ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಜಗಳಗಳು, ಕಾಮಿಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇದನ್ನು ರೀಲ್ಸ್ ಮಾಡುತ್ತಿದ್ದಾರೆ, ಡ್ಯಾನ್ಸ್ ಮಾಡುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದೊರೆ 'ಬಿಗ್‌ಬಾಸ್ ಕನ್ನಡ'ದ ಪ್ರಸ್ತುತ 12ನೇ ಸೀಸನ್ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಹೊಸ ಟ್ರೆಂಡ್ ಸೃಷ್ಟಿಸಿದೆ. ದೊಡ್ಮನೆಯೊಳಗಿನ ಸ್ಪರ್ಧಿಗಳ ಜಗಳಗಳು, ಸೆನ್ಸೇಶನಲ್ ಮಾತುಗಳು, ಹಾಸ್ಯ ಸಂಭಾಷಣೆ ಈಗ ನೆಟ್ಟಿಗರ ಪಾಲಿಗೆ 'ವೈರಲ್ ಕಂಟೆಂಟ್' ಆಗಿ ಮಾರ್ಪಟ್ಟಿವೆ. ಅದರಲ್ಲೂ ಈ ಬಾರಿಯ ಕೆಲವು ಸ್ಪರ್ಧಿಗಳ ಮಾತುಗಳು, ನಡೆಗಳು ಟಿವಿಯಲ್ಲಿ ಲಕ್ಷಾಂತರ ವೀಕ್ಷಕರನ್ನು ತಲುಪಿದ ಬಳಿಕ, ಅವೀಗ ರ‍್ಯಾಪ್ ಸಾಂಗ್ ಆಗಿವೆ, ರೀಲ್ಸ್ ಆಗಿವೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಈ ಕಂಟೆಂಟ್ ಇಟ್ಟುಕೊಂಡು ರೀಲ್ಸ್ ಮಾಡುತ್ತಿದ್ದಾರೆ.
ರಕ್ಷಿತಾ ಶೆಟ್ಟಿ ಮಾತು
ಯುಟ್ಯೂಬರ್ ರಕ್ಷಿತಾ ಶೆಟ್ಟಿ ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತಾಡೋಕೆ ಬರೋದಿಲ್ಲ. ಇಂಗ್ಲಿಷ್, ತುಳು, ಕನ್ನಡ ಎಲ್ಲವನ್ನು ಸೇರಿಸಿ ಮಾತನಾಡುತ್ತಾರೆ. ಇದು ಕೆಲವರಿಗೆ ಅರ್ಥ ಆಗೋದಿಲ್ಲ, ಇನ್ನೂ ಕೆಲ ಮಾತುಗಳು ನಗೆಪಾಟಿಲಿಗೆ ಗುರಿಯಾಗಿ ಟ್ರೋಲ್ ಆಗುತ್ತವೆ. ಕಿಚ್ಚ ಸುದೀಪ್ ಜೊತೆ ರಕ್ಷಿತಾ ಆಡಿದ ಮಾತು ಕೂಡ ವೈರಲ್ ಆಗಿವೆ. ರಕ್ಷಿತಾ ಶೆಟ್ಟಿ ಅವರು ಒಮ್ಮೊಮ್ಮೆ ಸರಿಯಾಗಿ ಠಕ್ಕರ್ ಕೊಡುವಂತೆ ಮಾತನಾಡುತ್ತಾರೆ.
ಗಿಲ್ಲಿ ನಟನ ಕಾಮಿಡಿ ಕಿಲಾಡಿ ಮ್ಯಾಜಿಕ್
ಬಿಗ್ ಬಾಸ್ ಮನೆಯಲ್ಲಿದ್ದವರು, ಹೊರಗಡೆ ಇರುವವರು ಸ್ವಲ್ಪನಾದರೂ ನಗುತ್ತಿದ್ದಾರೆ ಎಂದರೆ ಅದಕ್ಕೆ 'ಗಿಲ್ಲಿ' ಖ್ಯಾತಿಯ ನಟ ಕಾರಣ. ಮಂಡ್ಯದ ಭಾಷೆ ಜೊತೆಯಲ್ಲಿ ಅವರು ಸೀರಿಯಸ್ ಸಂದರ್ಭದಲ್ಲೂ ಕೂಡ ಕಾಮಿಡಿ ಮಾಡುತ್ತಾರೆ. ಅಷ್ಟೇ ಅಲ್ಲದೆ ತಪ್ಪು ಮಾಡಿದಾಗ ತಪ್ಪು ಎಂದು ಕೂಡ ಹೇಳಿದ್ದುಂಟು. ಇವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಸೃಷ್ಟಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಬಾಲ್ಯದಲ್ಲಿ ಹೇಳುತ್ತಿದ್ದ ಚಿಕ್ಕ ಪದ್ಯಗಳನ್ನು ದೊಡ್ಮನೆಯಲ್ಲಿ ಹೇಳಿದ್ದರು. ಉದಾಹರಣೆಗೆ ಚಿಕ್ಕವ್ವ ಚಿಕ್ಕವ್ವ ದೋಸೆ ಕೊಡು ಎಂದು. ಜಗಳದ ಮಧ್ಯೆ ಗಿಲ್ಲಿ ಇದನ್ನು ಹಾಡಿದ್ದರು. ಇದೀಗ ಭಾರೀ ವೈರಲ್ ಆಗ್ತಿದೆ. ಇವೆಲ್ಲವೂ ಟ್ಯೂನ್, ರಿಧಮ್ ಸಮೇತ ಹಾಡಾಗಿದ್ದು, ಇದಕ್ಕೆ ಕೆಲವರು ಡ್ಯಾನ್ಸ್ ಮಾಡಿದ್ದಾರೆ. ಅಂದಹಾಗೆ ಜಗಳಗಳು ಕೂಡ ಹಾಡಾಗುತ್ತಿವೆ, ಇವೀಗ ವೈರಲ್ ಆಗುತ್ತಿವೆ.
ಅಂದಹಾಗೆ ಈ ವಾರ ಎಲಿಮಿನೇಶನ್ ಇರೋದಿಲ್ಲ. ಆರ್‌ಜೆ ಅಮಿತ್, ಕರಿಬಸಪ್ಪ, ಸತೀಶ್ ಕ್ಯಾಡಬಮ್ಸ್, ಮಂಜುಭಾಷಿಣಿ, ಅಶ್ವಿನಿ ಎಸ್ ಎನ್ ಅವರು ಮನೆಯಿಂದ ಔಟ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯ ಈ ಜಗಳವೇ ಈಗ ನಂಬರ್ 1 ಟ್ರೆಂಡಿಂಗ್! ಇಡೀ ಇಂಟರ್ನೆಟ್ ಸೌಂಡ್ ಮಾಡ್ತಿದೆ ಈ ಒಂದು ಸೀನ್!
