- Home
- Entertainment
- TV Talk
- Bigg Boss ಮನೆಗೆ ಬರೋಕೂ ಮುನ್ನ ಮುಂಬೈನಲ್ಲಿ ಮನೆ ಖರೀದಿಸಿರೋ 24 ವರ್ಷದ Rakshita Shetty; ಫೋಟೋಗಳಿವು
Bigg Boss ಮನೆಗೆ ಬರೋಕೂ ಮುನ್ನ ಮುಂಬೈನಲ್ಲಿ ಮನೆ ಖರೀದಿಸಿರೋ 24 ವರ್ಷದ Rakshita Shetty; ಫೋಟೋಗಳಿವು
Bigg Boss Rakshita Shetty New Home: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿದ್ದು, ಅನೇಕರ ಫೇವರಿಟ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ ಎಂದರೆ ನಂಬ್ತೀರಾ? ಇವರ ಹೊಸ ಮನೆಯ ಫೋಟೋಗಳಿವು!

ಮಂಗಳೂರಿನಲ್ಲಿ ಮನೆ ಮಾಡುವ ಆಸೆ ಬೇರೆ
ಮಂಗಳೂರಿನಲ್ಲಿ ಮನೆ ಮಾಡಬೇಕು ಎಂದು ರಕ್ಷಿತಾ ಶೆಟ್ಟಿ ಆಸೆ ಇಟ್ಟುಕೊಂಡಿದ್ದರು. ಆದರೆ ದೇವರ ಯೋಚನೆ ಬೇರೆ ಇತ್ತು ಎಂದು ಕಾಣುತ್ತದೆ, ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಮನೆ ಮಾಡಿದ್ದರು. ಈಗಾಗಲೇ ಗೃಹ ಪ್ರವೇಶ ಮಾಡಿ, ಅವರು ದೊಡ್ಮನೆ ಪ್ರವೇಶ ಮಾಡಿದ್ದಾರೆ.
ತಂದೆ-ತಾಯಿ ಏನ್ ಮಾಡ್ತಾರೆ?
ರಕ್ಷಿತಾ ಹಾಗೂ ಅವರ ಕುಟುಂಬವು ಮುಂಬೈನಲ್ಲಿ ನೆಲೆಸಿದೆ. ರಕ್ಷಿತಾ ತಂದೆ ಪಾನ್ ಶಾಪ್ ನಡೆಸುತ್ತಾರೆ. ತಾಯಿ ಹೋಮ್ ಮೇಕರ್ ಎನ್ನಲಾಗಿದೆ. ರಕ್ಷಿತಾ ಅವರಿಗೆ ತಂಗಿ ಇದ್ದಾರಂತೆ.
ಮಂಗಳೂರಿನಲ್ಲಿ ಅಜ್ಜಿ ಮನೆ
ಮುಂಬೈನಲ್ಲಿ ಹುಟ್ಟಿ ಬೆಳೆದ ರಕ್ಷಿತಾ ಶೆಟ್ಟಿ, ಅವರು ಅಜ್ಜಿ ಮನೆ ಎಂದು ಮಂಗಳೂರಿಗೆ ಬರುತ್ತಾರೆ. ಕೊರೊನಾ ಟೈಮ್‌ನಲ್ಲಿ ಅಜ್ಜಿ ಮನೆಗೆ ಬಂದ ರಕ್ಷಿತಾ ಶೆಟ್ಟಿ ಅವರು ಇಲ್ಲಿಯೇ ಒಂದಿಷ್ಟು ವಿಡಿಯೋಗಳನ್ನು ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದರು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಅಪಾರ್ಟ್‌ಮೆಂಟ್ ಖರೀದಿ
ರಕ್ಷಿತಾ ಶೆಟ್ಟಿಗೆ ಈಗ 24 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮನೆ ಖರೀದಿ ಮಾಡಿರೋದು ಸಣ್ಣ ವಿಷಯವಲ್ಲ. ಅಂದಹಾಗೆ ಮುಂಬೈನಲ್ಲಿ ಅವರು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ಚಿಕ್ಕದು ಎಂದು ಅವರು ಹೇಳಿಕೊಂಡಿದ್ದಾರೆ.
ವೀಕ್ಷಕರಿಗೆ ಇಷ್ಟವಾಗ್ತಿರೋ ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ನ್ಯಾಯ, ಧರ್ಮ ಎಂಬುವುದರ ಜೊತೆಗೆ ಸಖತ್ ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದಾರೆ. ಇದು ವೀಕ್ಷಕರಿಗೆ ಇಷ್ಟ ಆಗಿದೆ. ಮುಂದಿನ ದಿನಗಳಲ್ಲಿ ಇವರು ಹೇಗೆ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಒಂದಿಷ್ಟು ಜನಪ್ರಿಯತೆ
ಬಿಗ್ ಬಾಸ್ ಮೂಲಕ ರಕ್ಷಿತಾ ಶೆಟ್ಟಿ ಅವರು ಒಂದಿಷ್ಟು ಜನಪ್ರಿಯತೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಚಿತ್ರರಂಗದಲ್ಲಿ ಮುಂದುವರೆಯಲಿದ್ದಾರೆ ಎಂದು ಕಾದು ನೋಡಬೇಕಿದೆ.