- Home
- Entertainment
- TV Talk
- Amruthadhaare Serial: ಗೌತಮ್ ಬಂಡವಾಳ ಬಯಲು ಮಾಡ್ತಿರೋ ದತ್ತುಪುತ್ರಿ; ಆ ಟೆಸ್ಟ್ ಬೇಡ ಎಂದ ವೀಕ್ಷಕರು
Amruthadhaare Serial: ಗೌತಮ್ ಬಂಡವಾಳ ಬಯಲು ಮಾಡ್ತಿರೋ ದತ್ತುಪುತ್ರಿ; ಆ ಟೆಸ್ಟ್ ಬೇಡ ಎಂದ ವೀಕ್ಷಕರು
Amruthadhaare Tv Serial Epiosde: ಆಕಾಶ್ - ಮಿಂಚು ಕೋಳಿ ಜಗಳ, ಗೌತಮ್ - ಭೂಮಿ ಒಂದಾಗೋಕೆ ನಾಂದಿ ಹಾಡ್ತಿದೆ! ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಚಿಂತೆ ಶುರುವಾಗಿದೆ. ಹಾಗಾದರೆ ಮುಂದೆ ಏನಾಗುವುದು?

ಭೂಮಿಕಾ-ಗೌತಮ್ ದೂರವಾಗಿ ಐದು ವರ್ಷ
ಒಂದೇ ವಠಾರದಲ್ಲಿ ಗೌತಮ್ ತನ್ನ ದತ್ತುಪುತ್ರಿಯ ಜೊತೆಗಿದ್ದಾನೆ, ಅತ್ತ ಭೂಮಿಕಾ ಮಗ ಆಕಾಶ್ ಜೊತೆ ಇದ್ದಾಳೆ. ಭೂಮಿಕಾ-ಗೌತಮ್ ದೂರವಾಗಿ ಐದು ವರ್ಷಗಳಾಯ್ತು. ಶಕುಂತಲಾ ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕೆ ಭೂಮಿಕಾ, ತನ್ನ ಗಂಡನಿಂದ ದೂರವಾಗಿದ್ದಾಳೆ.
ಮಿಂಚುಗೆ ಸಿಕ್ಕಾಪಟ್ಟೆ ಬೇಸರ
ಈಗ ಗೌತಮ್ ದತ್ತುಪುತ್ರಿ ಮಿಂಚು, ಭೂಮಿಕಾ ಮಗ ಆಕಾಶ್ ನೆರೆಹೊರೆಯವರು. ಇವರಿಬ್ಬರು ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಆಕಾಶ್, ತನ್ನ ಮನೆಗೆ ಬಂದು ತಿನ್ನೋದು ಮಿಂಚುಗೆ ಇಷ್ಟವೇ ಇಲ್ಲ. ಇನ್ನೊಂದು ಕಡೆ ಮಿಂಚುಗೆ ಕೊಬ್ಬು ಅಂತ ಆಕಾಶ್ ಅಂದುಕೊಂಡಿದ್ದಾನೆ.
ಮಗನನ್ನು ಕಂಡ್ರೆ ಖುಷಿ
ತನ್ನ ಮನೆಗೆ ಮಗ ಬರೋದು, ಊಟ-ತಿಂಡಿ ಮಾಡೋದು ಗೌತಮ್‌ಗೆ ತುಂಬ ಖುಷಿ ಕೊಡುತ್ತಿದೆ. ಇನ್ನೊಂದು ಕಡೆ ಗೌತಮ್ ದತ್ತು ಮಗಳು ತನ್ನ ಮನೆಗೆ ಬರಲಿ, ಊಟ ತಿಂಡಿ ಮಾಡಲಿ ಎಂದು ಭೂಮಿ ಕೂಡ ಬಯಸುತ್ತಿದ್ದಾಳೆ. ಇದರಿಂದ ಇವರಿಬ್ಬರು ಒಂದಾಗಬಹುದು ಎಂದು ಹೇಳಲಾಗುತ್ತಿದೆ.
ಆಕಾಶ್ ನನ್ನ ಮಗ ಎಂದು ಗೌತಮ್ ಹೇಳಿಲ್ಲ
ಮಿಂಚು ಕೇಳುವ ಪ್ರಶ್ನೆಗಳಿಗೆ ಗೌತಮ್‌ಗೆ ಉತ್ತರವೇ ಕೊಡಲಾಗುತ್ತಿಲ್ಲ. ಭೂಮಿಕಾ ನಿಮಗೆ ಪರಿಚಯ ಇದ್ದಾರಾ? ಆಕಾಶ್ ಯಾಕೆ ಹಾಗೆ ಬಿಹೇವ್ ಮಾಡ್ತಾನೆ? ಹೀಗೆ ಅವಳು ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾಳೆ. “ನನಗೆ ಮದುವೆಯಾಗಿದೆ, ಭೂಮಿ ನನ್ನ ಹೆಂಡ್ತಿ, ಆಕಾಶ್ ನನ್ನ ಮಗ” ಅಂತ ಗೌತಮ್ ಹೇಳುವ ಹಾಗಿಲ್ಲ.
DNA ಟೆಸ್ಟ್ ಬೇಡ
DNA ಟೆಸ್ಟ್ ಬೇಡ, ಇವ್ರೆ ನಿಮ್ಮ ಮಕ್ಕಳು ಅಂತ ನಾವು ಫ್ಯಾನ್ಸ್ ಸರ್ಟಿಫಿಕೇಟ್ ಕೊಡ್ತೀವಿ, ಅಂದಹಾಗೆ ಎರಡು ಮಕ್ಕಳು ಗೌತಮ್ ಥರ ಇದ್ದಾರೆ, ಭೂಮಿ ಥರ ಒಬ್ಬರೂ ಇಲ್ಲ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.