- Home
- Entertainment
- TV Talk
- ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?
ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?
'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ, ಸುಬ್ಬು ಕಂಪನಿಯಲ್ಲಿ ಮದನ್ ಮಾಡಿದ ಕೋಟ್ಯಾಂತರ ರೂಪಾಯಿ ವಂಚನೆಯನ್ನು ವೀರೇಂದ್ರನ ಮುಂದೆ ಬಯಲು ಮಾಡುತ್ತಾನೆ. ಇದರಿಂದ ಕೋಪಗೊಂಡ ವೀರೇಂದ್ರ, ಮಗನನ್ನು ಸಮರ್ಥಿಸಿಕೊಳ್ಳಲು ಬಂದ ಅಕ್ಕ ವಿಜಯಾಂಬಿಕೆ ವಿರುದ್ಧವೇ ಗುಡುಗಿ ಎಲ್ಲರಿಗೂ ಆಘಾತ ನೀಡುತ್ತಾನೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್
ಸಮಯ ಬದಲಾದ್ರೂ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಕಟ್ಟಾ ಅಭಿಮಾನಿಗಳು ತಪ್ಪದೇ ಪ್ರತಿಯೊಂದು ಸಂಚಿಕೆಯನ್ನು ಮಿಸ್ ಮಾಡದೇ ನೋಡುತ್ತಿದ್ದಾರೆ. ಇಷ್ಟು ದಿನ ಕಾಯ್ತಿದ್ದ ದೃಶ್ಯದ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.
ಅಕ್ಕ ವಿಜಯಾಂಬಿಕೆ
ವೀರೇಂದ್ರನಿಗೆ ಅಕ್ಕ ವಿಜಯಾಂಬಿಕೆ ಅಂದ್ರೆ ದೇವರು. ಅಕ್ಕ ಹೇಳಿದ್ದಕ್ಕೆ ತಲೆಯಾಡಿಸುವ ವೀರು ಅಕ್ಕನ ವಿರುದ್ಧವೇ ಗುಡುಗಿದ್ದಾನೆ. ಕಂಪನಿಯಲ್ಲಿ ಮದನ್ ಮಾಡಿದ ಕಳ್ಳಾಟವನ್ನು ಸುಬ್ಬು ಪತ್ತೆ ಮಾಡಿದ್ದಾನೆ. ತನ್ನ ಕಂಪನಿ ನಷ್ಟದಲ್ಲಿರೋದ್ದಕ್ಕೆ ಕಾರಣವಾಗಿರುವ ಮದನ್‌ಗೆ ವೀರು ಕ್ಲಾಸ್ ತೆಗೆದುಕೊಂಡಿದ್ದಾನೆ.
ಸತ್ಯ ಹೇಳಿದ ಸುಬ್ಬು
ಕಂಪನಿ ನಷ್ಟದಲ್ಲಿದ್ದು, ಯಾವ ಲೆಕ್ಕವೂ ಟ್ಯಾಲಿ ಆಗುತ್ತಿಲ್ಲ. ನೀವೇನೋ ಮದನ್ ಅವರನ್ನು ಕಂಪನಿಯ ಸಿಇಓ ಮಾಡಿದ್ರಿ. ಮದನ್ ಅವರು ಟ್ಯಾಕ್ಸ್ ಸಹ ಕಟ್ಟಿಲ್ಲ. ಮೂರ್ನಾಲ್ಕು ನೋಟಿಸ್ ಬಂದಿದ್ರೂ ಅದನ್ನು ಚೆಕ್ ಮಾಡಿಲ್ಲ. ಇಲ್ಲಿರೋ ಲೆಕ್ಕಕ್ಕೂ ನಿಮಗೂ ನೀಡಿರುವ ಲೆಕ್ಕವೇ ಬೇರೆಯಾಗಿದೆ.
ಒಂದರಿಂದ ಒಂದೂವರೆ ಕೋಟಿಯಷ್ಟು ನಷ್ಟವಾಗಿದ್ದು, ಕಂಪನಿ ಅಕೌಂಟ್‌ನಿಂದ ಲಕ್ಷ ಲಕ್ಷ ಹಣ ಡ್ರಾ ಆಗಿದೆ. ಕೆಲಸಗಾರರಿಗೂ ಸರಿಯಾದ ಸಂಬಳ ನೀಡಿಲ್ಲ. ಕಸ್ಟಮರ್ಸ್ ಮೇಲ್ ಗಳಿಗೂ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ದಾಖಲಾಗಿದೆ ಎಂದು ಎಲ್ಲಾ ವಿಷಯವನ್ನು ವೀರೇಂದ್ರನಿಗೆ ಸುಬ್ಬು ತಿಳಿಸಿದ್ದಾನೆ.
ಮದನ್ ಮೇಲೆ ಪೈಲ್ ಎಸೆದ ವೀರು
ಸತ್ಯ ತಿಳಿಯುತ್ತಲೇ ಕೋಪಗೊಂಡ ವೀರೇಂದ್ರ, ಫೈಲ್ ತೆಗೆದುಕೊಂಡು ಮದನ್ ಮೇಲೆ ಎಸೆದಿದ್ದಾನೆ. ಏನಿದು ಎಲ್ಲಾ? ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾನೆ. ಈ ವೇಳೆಗೆ ಮಗ ಮದನ್ ರಕ್ಷಣೆಗೆ ವಿಜಯಾಂಬಿಕಾ ದೌಡಾಯಿಸಿದ್ದಾಳೆ. ಕಂಪನಿ ನಷ್ಟದಲ್ಲಿದ್ದು, ಎಲ್ಲಾ ವಿಷಯ ಮಚ್ಚಿಟ್ಟು ನನಗೆ ಮೋಸ ಮಾಡಿದ್ದಾನೆ ಎಂದು ಅಕ್ಕ ವಿಜಯಾಂಬಿಕೆಗೆ ವೀರೇಂದ್ರ ಹೇಳಿದ್ದಾನೆ.
ಇದನ್ನೂ ಓದಿ: ಶ್ರಾವಣಿ ಸುಬ್ರಹ್ಮಣ್ಯ ಮಧ್ಯೆ ರೊಮ್ಯಾನ್ಸ್ ಶುರುವಾಯ್ತು … ವೀಕ್ಷಕರ ಎದೆಯಲ್ಲಿ ಕಚಗುಳಿ ಇಟ್ಟಂಗಾಯ್ತು
ಗುಡುಗಿದ ವೀರೇಂದ್ರ
ಮದನ್ ಒಳ್ಳೆಯವನು, ಹಾಗೆಲ್ಲಾ ಮಾಡಲ್ಲ. ನಾವು ಕುಳಿತು ಮಾತನಾಡೋಣ. ಮದನ್ ನನ್ನ ರಕ್ತ. ಆತ ಎಂದಿಗೂ ನಿನಗೆ ಮೋಸ ಮಾಡಲ್ಲ. ನೀನು ಯಾರದ್ದೋ ಮಾತು ಕೇಳಿಕೊಂಡು ಮಾತನಾಡುತ್ತಿದ್ದೀಯಾ ಎಂದು ವಿಜಯಾಂಬಿಕಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ವೀರು, ಅಕ್ಕಾ ಸುಮ್ನಿರು ಎಂದು ಗುಡುಗಿದ್ದಾನೆ. ತನ್ನ ವಿರುದ್ಧವೇ ಸೋದರ ವೀರು ಮಾತನಾಡಿದ್ದನ್ನು ಕೇಳಿ ವಿಜಯಾಂಬಿಕಾ ಶಾಕ್ ಆಗಿದ್ದಾಳೆ.\
ಇದನ್ನೂ ಓದಿ: ಈ ಶ್ರಾವಣಿ ಹಿಂಗ್ಯಾಕೆ? ಫಸ್ಟ್‌ನೈಟ್‌ನಲ್ಲಿ ಹೇಳಿದ್ದು ಮರೆತು ಹೋಯ್ತಾ? ಮಹಾ ರಸಿಕನಾದ ಸುಬ್ಬು