MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa ಸೈಕೋ ಜಯಂತ್​ನ ಕಟ್ಟಿ ಹಾಕಿ ಟಾರ್ಚರ್​ ಕೊಡ್ತಿದ್ದಾಳೆ ಈ ಸುಂದರಿ! ಯಾರಿವಳು?

Lakshmi Nivasa ಸೈಕೋ ಜಯಂತ್​ನ ಕಟ್ಟಿ ಹಾಕಿ ಟಾರ್ಚರ್​ ಕೊಡ್ತಿದ್ದಾಳೆ ಈ ಸುಂದರಿ! ಯಾರಿವಳು?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಪತ್ನಿ ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಪ್ರತೀಕಾರಕ್ಕೆ ಸಿದ್ಧನಾಗಿದ್ದಾನೆ. ಆದರೆ, ಅನಿರೀಕ್ಷಿತವಾಗಿ ಕಾಣಿಸಿಕೊಂಡ ಸುಂದರಿಯೊಬ್ಬಳು ಜಯಂತ್‌ನನ್ನು ಕಟ್ಟಿಹಾಕಿ ಟಾರ್ಚರ್ ನೀಡುತ್ತಾಳೆ. ಯಾರೀಕೆ?

1 Min read
Suchethana D
Published : Oct 26 2025, 12:19 PM IST
Share this Photo Gallery
  • FB
  • TW
  • Linkdin
  • Whatsapp
17
ಸತ್ಯ ತಿಳಿದ ಜಯಂತ್​
Image Credit : Instagram

ಸತ್ಯ ತಿಳಿದ ಜಯಂತ್​

ಲಕ್ಷ್ಮೀ ನಿವಾಸ ಸೀರಿಯಲ್​ (Lakshmi Nivasa Serial)ನಲ್ಲಿ ಸದ್ಯ ಜಯಂತ್​ಗೆ ಜಾಹ್ನವಿ ಬದುಕಿದ್ದು, ತನ್ನನ್ನು ಆಟ ಆಡಿಸ್ತಿದ್ದಾಳೆ ಎನ್ನುವುದು ತಿಳಿದಿದೆ. ಪತ್ನಿ ಮತ್ತು ಆಕೆಗೆ ಆಶ್ರಯ ಕೊಟ್ಟಿರೋ ವಿಶ್ವನ ಮೇಲೆ ಹಗೆ ತೀರಿಸಿಕೊಳ್ಳಲು ಕಾಯ್ತಿರೋ ಜಯಂತ್​, ಪತ್ನಿಯ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ವಿಶ್ವನನ್ನು ಮಾತ್ರ ಕರೆದಿದ್ದಾನೆ.

27
ವಿಶ್ವನಿಗೆ ಸತ್ಯ ಗೊತ್ತಿಲ್ಲ
Image Credit : Instagram

ವಿಶ್ವನಿಗೆ ಸತ್ಯ ಗೊತ್ತಿಲ್ಲ

ಅತ್ತ, ವಿಶ್ವನಿಗಾಗಲೀ, ಜಾಹ್ನವಿಗಾಗಲೀ ಜಯಂತ್​ಗೆ ಸತ್ಯ ತಿಳಿದಿರುವ ವಿಷಯ ಗೊತ್ತಿಲ್ಲ. ವಿಶ್ವ ಏನಾದ್ರೂ ಜಯಂತ್​ ಮನೆಗೆ ಹೋದರೆ ಆತನ ಕಥೆ ಮುಗಿದಂತೆಯೇ. ಅದಕ್ಕಾಗಿ ಮುಂದೇನಾಗುತ್ತದೆ ಎನ್ನುವ ಆತಂಕದಲ್ಲಿದ್ದಾರೆ ವೀಕ್ಷಕರು.

Related Articles

Related image1
Bigg Boss: ಗಿಲ್ಲಿಗೆ ಅಶ್ವಿನಿ ಗೌಡ ಓಪನ್​ ಚಾಲೆಂಜ್​! ಉಲ್ಟಾ ಚಾಲೆಂಜ್​ ಹಾಕಿದ ನೆಟ್ಟಿಗರು: ಗೆಲ್ಲೋರು ಯಾರು?
Related image2
ಸ್ನೇಹಿತೆಯ ಖಾಸಗಿ ವಿಡಿಯೋ ಕದ್ದು 2 ಕೋಟಿಗೆ ಬ್ಲ್ಯಾಕ್​ಮೇಲ್​: 'ಬ್ಯೂಟಿ ಕ್ವೀನ್'​ ಕನ್ನಡತಿಯ ಖತರ್ನಾಕ್​ ಕೃತ್ಯ! FIR ದಾಖಲು
37
ಜಯಂತ್​ನನ್ನು ಕಟ್ಟಿಹಾಕಿದ ಸುಂದರಿ
Image Credit : Instagram

ಜಯಂತ್​ನನ್ನು ಕಟ್ಟಿಹಾಕಿದ ಸುಂದರಿ

ಈ ಸೈಕೋ ಜಯಂತ್​ನ ಕಾಟ ತಳೆಯಲು ಆಗದೇ ಆತನಿಗೆ ಸರಿಯಾದ ಬುದ್ಧಿ ಕಲಿಸಬೇಕಲ್ಲ ಎಂದು ವೀಕ್ಷಕರು ಅಂದುಕೊಳ್ತಿರುವಾಗಲೇ ಒಬ್ಬಳು ಬ್ಯೂಟಿಯ ಎಂಟ್ರಿಯಾಗಿದೆ. ಜಯಂತ್​ನನ್ನು ಕಟ್ಟಿಹಾಕಿ ಆಕೆ ಟಾರ್ಚರ್​ ಕೊಡುತ್ತಿದ್ದಾಳೆ.

47
ಜಯಂತ್​ಗೆ ಟಾರ್ಚರ್​
Image Credit : Instagram

ಜಯಂತ್​ಗೆ ಟಾರ್ಚರ್​

ಜಾಹ್ನವಿಗೆ ಪ್ರೀತಿಯ ಹೆಸರಿನಲ್ಲಿ ಜಯಂತ್​ ಹೇಗೆಲ್ಲಾ ಟಾರ್ಚರ್​ ಕೊಟ್ಟನೋ ಅದೇ ರೀತಿಯಲ್ಲಿ, ಈ ಸುಂದರಿ ಕೂಡ ಟಾರ್ಚರ್​ ಕೊಡುತ್ತಿದ್ದಾಳೆ. ಚಿನ್ನುಮರಿ ಚಿನ್ನುಮರಿ ಎಂದು ನಿದ್ದೆ ಮಾತ್ರೆ ಕೊಟ್ಟು ಆಕೆಯನ್ನು ಕರೆದುಕೊಂಡು ಹೋಗಿದ್ಯಲ್ಲಾ, ಅವಳಿಗೆ ಹೇಗೆ ಅನ್ನಿಸಿರಬೇಡ ಎಂದೆಲ್ಲಾ ಹೇಳುವ ಮೂಲಕ ಆತನಿಗೆ ತಪ್ಪಿನ ಅರಿವು ಮಾಡಿಸುತ್ತಿದ್ದಾಳೆ.

57
ಸುಸ್ತಾದ ಜಯಂತ್​
Image Credit : Instagram

ಸುಸ್ತಾದ ಜಯಂತ್​

ಅವಳು ಯಾರೆಂದು ತಿಳಿಯದೇ ಜಯಂತ್​ ಸುಸ್ತಾಗಿ ಹೋಗಿದ್ದಾನೆ. ಅಸಲಿಗೆ ಇದು ಲಕ್ಷ್ಮೀ ನಿವಾಸ ಸೀರಿಯಲ್​ ಸ್ಟೋರಿ ಆದರೂ, ಇದು ಸೀರಿಯಲ್​ ಭಾಗವಲ್ಲ. ಬದಲಿಗೆ ಮಹಾನಟಿ (Mahanati) ರಿಯಾಲಿಟಿ ಷೋನ ಸೆಮಿಫೈನಲ್​ ಸಂಚಿಕೆ.

67
ಮಹಾನಟಿಯ ಮಾನ್ಯ
Image Credit : Instagram

ಮಹಾನಟಿಯ ಮಾನ್ಯ

ಇದರಲ್ಲಿ ಭಾಗವಹಿಸ್ತಿರೋ ನಟಿಯರು, ವಿಭಿನ್ನ ಸೀರಿಯಲ್​ಗಳ ನಟ-ನಟಿಯರ ಜೊತೆಯಲ್ಲಿ ಅದೇ ಸೀರಿಯಲ್​ ಕಥೆಯನ್ನೇ ಇಟ್ಟುಕೊಂಡು ನಟಿಸುತ್ತಿದ್ದಾರೆ. ನೋಡುಗರಿಗೆ ಇದು ಸೀರಿಯಲ್​ ಭಾಗ ಎನ್ನಿಸುವುದು ಉಂಟು. ಅದೇ ರೀತಿ ಲಕ್ಷ್ಮೀ ನಿವಾಸ ಸೈಕೋ ಜಯಂತ್​ನನ್ನು ಕಟ್ಟಿ ಹಾಕಿರುವುದು ಮಹಾನಟಿಯ ಮಾನ್ಯ ರಮೇಶ್​ (Mahanati Manya Ramesh)

77
ನೆಟ್ಟಿಗರು ಏನಂದ್ರು?
Image Credit : Instagram

ನೆಟ್ಟಿಗರು ಏನಂದ್ರು?

ಸೈಕೋ ಜಯಂತ್​ಗೆ ಸೀರಿಯಲ್​ನಲ್ಲಿಯೂ ಇದೇ ರೀತಿ ಆಗಬೇಕು ಎಂದು ಕೆಲವರು ಹೇಳುತ್ತಿದ್ದರೆ,, ಮತ್ತೆ ಕೆಲವರು ಜಾಹ್ನವಿ ಈ ರೀತಿ ಆಟ ಆಡಿಸ್ತಾ ಇರೋದು ತಪ್ಪು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಜಯಂತ್​ ಕೈಗೆ ಜಾಹ್ನವಿ ಸಿಕ್ಕರೆ ತುಂಬಾ ಸಮಸ್ಯೆ ಎನ್ನುತ್ತಿದ್ದರೆ, ಜಯಂತ್​ ಪರ ಇರೋರು ಆದಷ್ಟು ಬೇಗ ದಂಪತಿ ಒಂದಾಗಲಿ ಎನ್ನುತ್ತಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಲಕ್ಷ್ಮೀ ನಿವಾಸ ಧಾರಾವಾಹಿ
ರಿಯಾಲಿಟಿ ಶೋ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved