ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು ಮಾಡಲಾಗಿದೆ. ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪಂಚಾಯಿತಿ ಸದಸ್ಯನಿಗೆ ಚಿಕಿತ್ಸೆ ಮುಂದುವರಿದೆ.
ನೆಲಮಂಗಲ (ಅ.26) ಬೆಂಗಳೂರಿನ ಹೊರವಲಯದಲ್ಲಿ ಗುಂಡಿನ ದಾಳಿಯಾಗಿದೆ. ನೆಲಮಂಗಲ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನೆಲಮಂಗಲದ ಇಸ್ಲಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯರ ಸಲೀಂ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸಲಿಂ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಸಲೀಂನನ್ನು ನೆಲಮಂಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಲೀಂ ಮನೆ ಮುಂದೆ ನಡೆದ ಘಟನೆ
ಇಬ್ಬರು ಅಪರಿಚಿತರು ಸಲೀಂ ಮನೆ ಮುಂದೆ ಆಗಮಿಸಿ ಈ ಕೃತ್ಯ ಎಸಗಿದ್ದಾರೆ. ಅಪರಿಚಿತರು ಸಲೀಂ ಜೊತೆ ಮಾತುಕತೆಗೆ ಆಗಮಿಸಿದ್ದಾರೆ. ಮಾತನಾಡುವ ವೇಳೆ ಅಪರಿಚಿತರು ಏಕಾಏಕಿ ಸಲೀಂ ಮೇಲೆ ದಾಳಿ ನಡೆಸಿದ್ದಾರೆ. ಆತುರದಲ್ಲಿ ಅಪರಿಚಿತರು ಇಟ್ಟ ಗುರಿ ಸಲೀಂ ಕೈಗೆ ತಾಗಿದೆ. ಸಲೀಂ ಕೈಗೆ ಗುಂಡು ಹೊಕ್ಕಿದೆ. ಸಲೀಂ ಕುಸಿದು ಬಿದ್ದರೆ, ಇತ್ತ ಅಪರಿಚಿತ ದಾಳಿಕೋರರು ತಕ್ಷಣವೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಅಸ್ಪತ್ರೆ ಮುಂದೆ ಜಾಮಾಯಿಸಿದ ಬೆಂಬಲಿಗರು
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಲೀಂ ಮೇಲೆ ದಾಳಿ ಮಾಹಿತಿ ಸಿಗುತ್ತಿದ್ದಂತೆ ಬೆಂಬಲಿಗರು ಜಮಾಯಿಸಿದ್ದಾರೆ. ಇದೀಗ ಆಸ್ಪತ್ರೆ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಇತ್ತ ಸಲೀಂ ಕುಟುಂಬಸ್ಥರು ಆಸ್ಪತ್ರೆಯಲ್ಲಿದ್ದಾರೆ. ಸಲೀಂ ಆಪ್ತರು ಆಸ್ಪತ್ರೆಯಲ್ಲಿದ್ದು, ಮಾಹಿತಿ
ಅಪರಿಚಿತರ ಹುಡುಕಾಟದಲ್ಲಿ ಪೊಲೀಸ್
ನೆಲಮಂಗಲ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಎಸ್ಕೇಪ್ ಆಗಿರುವ ಅಪರಿಚಿತರ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಪರಿಚಿತರ ಸುಳಿವು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರ ತಂಡ, ಸಲೀಂ ಬಳಿಯಿಂದ ಮಾಹಿತಿ ಪಡೆದುಕೊಂಡಿದೆ.
